Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುದ್ದಿನ ನಾಯಿ ಕೊನೆ ದಿನಗಳ ಕಳೆಯುತ್ತಿದೆಯೇ? ತಿಳಿಯೋದು ಹೇಗೆ?
ನಾಯಿಗಳು ಮನುಷ್ಯರ ಅತ್ಯಂತ ಪ್ರೀತಿಯ ಸ್ನೇಹಿತ. ಹಾಗೆ ನಿಷ್ಕಲ್ಮಶ ಪ್ರೀತಿ ನೀಡುವ ಜೀವಿ. ಹೀಗಾಗಿ ನಾಯಿ ಇಂದು ಮನೆಯ ಸದಸ್ಯನಂತೆ ಬದಲಾಗಿದೆ. ನಾಯಿಗಳು ಈಗ ಮನೆ ಸದಸ್ಯರಂತೆ ಎಲ್ಲಾ ಸೌಲಭ್ಯ ಪಡೆಯುತ್ತದೆ. ಹಾಗೆ ಮಾಲೀಕರ ರಕ್ಷಣೆಯಾಗಿ ಯಾವ ಕೆಲಸವನ್ನಾದ್ರು ಮಾಡಲು ಮುಂದಾಗುವ ಜೀವಿ. ಹಾಗೆ ಸ್ನೇಹಿತನಂತೆ ಸದಾ ಬೆನ್ನ ಹಿಂದೆ ನಿಲ್ಲುವ ಪ್ರಮಾಣಿಕ ಪ್ರಾಣಿ ಎನ್ನಬಹುದು.
ಇತ್ತೀಚಿಗೆ ಮನೆಗಳಲ್ಲಿ ಅದರಲ್ಲೂ ವಿದೇಶಿ ತಳಿಯ ನಾಯಿಗಳ ಸಾಕುವುದು ಅವುಗಳನ್ನು ಮನೆ ಮಕ್ಕಳಂತೆ ಸಲಹುವುದು ನೋಡಬಹುದು. ಅದರಲ್ಲೂ ನಗರ ಪ್ರದೇಶದಲ್ಲಿನ ನಾಯಿಗಳನ್ನು ಸಾಕುವುದು ಈಗ ಪ್ರತಿಷ್ಠೆ ಎನ್ನುವಂತೆ ಬದಲಾಗಿದೆ. ಹಾಗೆ ನಾಯಿಗಳಿಂದ ಜನರ ಮಾನಸಿಕ ಆರೋಗ್ಯದಲ್ಲಿನ ಸುಧಾರಣೆಗಳ ನೋಡಬಹುದು. ಹಾಗೆ ಅವುಗಳ ಪಾಲನೆಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು, ಆಹಾರ, ಚಿಕಿತ್ಸೆಗೆ ಶ್ರಮ ವಹಿಸುವುದು ನೋಡಬಹುದು. ಹೀಗಾಗಿ ನಾಯಿಗಳು ಈಗ ಮುದ್ದಿನ ಜೀವಿಗಳು.

ಈಗ ಸಾಕಿದ ನಾಯಿಯನ್ನು ಕಳೆದುಕೊಳ್ಳುವುದು ಅಂದರೆ ಮನೆಯ ಸದಸ್ಯರನ್ನು ಕಳೆದುಕೊಂಡಂತಾಗುತ್ತದೆ. ಹೀಗಾಗಿ ಮುದ್ದಿನ ನಾಯಿ ಕಳೆದುಕೊಂಡರೆ ಕೆಲವರು ಅತ್ಯಂತ ದುಃಖ ಪಡುತ್ತಾರೆ. ಹಾಗೆ ಶಾಕ್‌ನಿಂದ ಹೊರಬರಲು ಹಲವು ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ನಿಮ್ಮ ಸಾಕು ನಾಯಿ ವಯಸ್ಸಾದ ಬಳಿಕ ಅವುಗಳ ಕುರಿತಾಗಿ ನಿಮ್ಮಲ್ಲಿ ಚಿಂತೆ ಹೆಚ್ಚಾಗುವುದು ಸಹ ನೋಡಬಹುದು.
ನಾಯಿಗಳು ತಮ್ಮ ಕೊನೆಯ ದಿನಗಳ ಕಳೆಯುವುದನ್ನು ನೋಡುವುದು ಬಹಳ ಕಷ್ಟವಾಗುತ್ತದೆ. ಎಲ್ಲಾ ಸಮಯದಲ್ಲೂ ಆಟದಲ್ಲಿ ತೊಡಗಿರುತ್ತಿದ್ದ ಮುದ್ದಿನ ನಾಯಿಯು ಕೊನೆಯ ದಿನಗಳ ಸಮೀಪಿಸಿದಾಗ ಏಕಾಏಕಿ ವರ್ತನೆ ಬದಲಾಯಿಸುತ್ತವೆ. ಹಾಗಾದ್ರೆ ನಿಮ್ಮ ಮುದ್ದಿನ ಸಾಕು ನಾಯಿ ಕೊನೆಯ ದಿನ ಕಳೆಯುತ್ತಿದೆ ಎಂಬುದನ್ನು ತಿಳಿಯೋದು ಹೇಗೆ? ಆ ದಿನದಲ್ಲಿ ನಾಯಿಯನ್ನು ಹೇಗೆ ಆರೈಕೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ಊಟ ಮಾಡದೆ ಇರುವುದು
ನಿಮ್ಮ ನಾಯಿ ವಯಸ್ಸಾದ ಬಳಿಕ ಕೊನೆಯ ದಿನದಲ್ಲಿ ಊಟ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ನಾಯಿಗಳ ಜಠರ ಪ್ರಕ್ರಿಯೆಯು ನಾಯಿಯ ಕೊನೆಯ ದಿನದಲ್ಲಿ ಕೆಲಸ ಮಾಡುವುದನ್ನೇ ನಿಲ್ಲಿಸಬಹುದು. ಹೀಗಾಗಿ ನಾಯಿ ಸರಿಯಾಗಿ ಊಟ, ತಿಂಡಿ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಆದ್ರೆ ನಾಯಿ ಊಟ ತಿಂಡಿ ಮಾಡುತ್ತಿಲ್ಲ ಎಂದಾದರೆ ಅದು ಕೊನೆ ಗಳಿಗೆ ಎಂದಲ್ಲ. ಆದರೆ ಸುಮಾರು 20ರಿಂದ 25 ದಿನಗಳ ಮೊದಲು ನಾಯಿಯ ಜೀರ್ಣಕ್ರಿಯೆಯಲ್ಲಿನ ಬದಲಾವಣೆಯು ಕೊನೆಯ ದಿನ ಎಣಿಸುತ್ತಿರುವ ಲಕ್ಷಣವಾಗಬಹುದು.
ಏಕಾಏಕಿ ಚಟುವಟಿಕೆ ನಿಲ್ಲಿಸುವುದು
ಅಷ್ಟು ದಿನಗಳಿಂದ ಹಾರಾಡಿಕೊಂಡು, ಆಟವಾಡಿಕೊಂಡಿದ್ದ ನಾಯಿಯು ಏಕಾಏಕಿ ತನ್ನ ಚಟುವಟಿಕೆ ನಿಲ್ಲಿಸಿ ಬಿಡುತ್ತೆ. ಹಾಗೆ ಎಲ್ಲಾ ವಿಚಾರದಲ್ಲು ನಿರಾಸಕ್ತಿ ತೋರಿಸಲಿದೆ. ಹೆಚ್ಚು ಓಡಾಟ ಮಾಡದೆ ಮಲಗಿದಲ್ಲಿಯೇ ಮಲಗಿ ಬಿಡುತ್ತವೆ. ಹಾಗೆ ಕಷ್ಟಪಟ್ಟು ಏಳುವುದು, ಓಡಾಡಲು ಕಷ್ಟಪಡುವುದು. ನಿತ್ರಾಣಗೊಂಡಂತೆ ಮಲಗಿ ನಿದ್ರಿಸುವುದು ಮಾಡಬಹುದು. ಸ್ನಾಯುಗಳು ದುರ್ಬಲವಾಗುವುದರಿಂದ ಅವು ಬಹಳ ಸಮಯ ಮಲಗಿರುತ್ತವೆ. ನೀವು ನೀರು ಆಹಾರ ನೀಡಿದಾಗಲು ಮೇಲೆ ಏಳದೆ ಇರಬಹುದು. ಅಥವಾ ಮಲಗಿದಲ್ಲೇ ಅದನ್ನು ತಿನ್ನಲು ಮುಂದಾಗುವುದು ಅವುಗಳ ಕೊನೆಯ ದಿನದ ಲಕ್ಷಣವಾಗಿದೆ.
ಉಸಿರಾಟ ಸಮಸ್ಯೆ
ಕೊನೆಯ ದಿನಗಳ ಎಣಿಸುತ್ತಿರುವ ಬಹುತೇಕ ನಾಯಿಗಳಲ್ಲಿ ಉಸಿರಾಟ ಸಮಸ್ಯೆ ನೋಡಬಹುದು. ಅವು ಬಹಳ ನಡೆದಾಡಿದಾಗ ಎದುಸಿರು ಬಿಡುವುದು, ಹಾಗೆ ಉಸಿರಾಟ ಕ್ರಿಯೆಯಲ್ಲಿ ಅಸ್ವಸ್ಥತೆ ನೋಡಬಹುದು. ವಯಸ್ಸಾದ ನಾಯಿಗಳಲ್ಲಿ ಮಾರಕ ಕಾಯಿಲೆಗಳು, ಹೃದಯ ಕಾಯಿಲೆ ಅಥವಾ ಅಂಗಾಂಗ ವೈಫಲ್ಯ ಹೊಂದುವುದು ಸಾಮಾನ್ಯ ಲಕ್ಷಣವಾಗಿದೆ.
ಅಸಾಮಾನ್ಯ ನಡವಳಿಕೆ ಅಥವಾ ಗೊಂದಲ
ನಾಯಿಗಳು ವಯಸ್ಸಾದಂತೆ ಅಥವಾ ಅವುಗಳ ಜೀವನದ ಅಂತ್ಯವನ್ನು ಸಮೀಪಿಸುತ್ತಿದ್ದಂತೆ, ಗೊಂದಲ ಅಥವಾ ಅಸಾಮಾನ್ಯ ನಡವಳಿಕೆಯು ಹೆಚ್ಚು ಸ್ಪಷ್ಟವಾಗಬಹುದು. ಹಲವು ಬಾರಿ ಅವು ಮನೆಯ ದಾರಿ ಮರೆತು ಬೇರೆ ಕಡೆ ಹೋಗುವುದು ರಾತ್ರೋರಾತ್ರಿ ಮತ್ತೊಂದು ಪ್ರದೇಶಕ್ಕೆ ತೆರಳುವುದು, ಯಾವ ಕಣ್ಣಿಗೂ ಕಾಣಿಸದಂತೆ ಮರೆಯಾದ ಜಾಗದಲ್ಲಿ ಇರುವುದು ಇಂತಹ ಅಪಸಾಮಾನ್ಯ ಪ್ರಕ್ರಿಯೆ ಕಾಣಿಸುವುದು ಅವುಗಳ ಅಂತ್ಯದ ಲಕ್ಷಣವಾಗಿದೆ.



Click it and Unblock the Notifications









