Latest Updates
-
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ!
ಜೂನ್ ತಿಂಗಳಿಗೆ ಜೂನ್ ಎಂದು ಹೆಸರು ಹೇಗೆ ಬಂತು ಗೊತ್ತಾ? ಇಲ್ಲಿದೆ ಅಚ್ಚರಿ ಮಾಹಿತಿ
ಜೂನ್ ತಿಂಗಳು ಆರಂಭವಾಗಿದೆ. ದೇಶದ ದಕ್ಷಿಣ ಭಾಗದಲ್ಲಿ ಮಳೆಯಾಗುತ್ತಿದ್ದರೆ ಉತ್ತರ ಭಾಗದಲ್ಲಿ ಭಾರೀ ತಾಪಮಾನ ಏರಿಕೆ ಜನರ ಹೃರಾಣಾಗಿಸಿದೆ. ಜೂನ್‌ನ ಆರಂಭದಲ್ಲೇ ಹೀಟ್ ವೇವ್ ಜನರ ಜೀವ ಹಿಂಡುತ್ತಿದೆ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಜೂನ್ ತಿಂಗಳು ಅಂದರೆ ಅದೊಂದು ಹೊಸತನದ ತಿಂಗಳು.
ಜೂನ್‌ನಿಂದಲೇ ಶಾಲಾ-ಕಾಲೇಜುಗಳು ಆರಂಭಗೊಂಡರೆ ಬಹುಪಾಲು ಮಳೆಗಾಲ ಆರಂಭವಾಗುತ್ತದೆ. ಮಳೆಗಾಲ ಆರಂಭವಾದರೆ ಹೊಸ ಕಳೆ ಬರುತ್ತದೆ. ಹೀಗಾಗಿ ಜೂನ್ ತಿಂಗಳು ವಿಶೇಷ ಎನಿಸುತ್ತದೆ. ಇನ್ನು ಈ ಜೂನ್ ತಿಂಗಳ ಕುರಿತ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.

ಅದೇನೆಂದರೆ ಈ ಜೂನ್ ತಿಂಗಳಿಗೆ ಜೂನ್ ಎಂದು ಕರೆಯುವುದು ಏಕೆ ಎಂಬುದು ನಿಮಗೆ ಗೊತ್ತಾ? ಹೌದು ಈ ಜೂನ್ ತಿಂಗಳಿಗೆ ಒಂದು ಇತಿಹಾಸವಿದೆ. ಮೊದಲು ಜೂನ್ ಎಂಬ ಹೆಸರು ಪ್ರಾಚೀನ ರೋಮನ್ ಕ್ಯಾಲೆಂಡರ್‌ನಲ್ಲಿ ಗುರುತಿಸಬಹುದು. ರೋಮನ್ ಕ್ಯಾಲೆಂಡರ್ನಲ್ಲಿ, ಜೂನ್ ಮೂಲತಃ ನಾಲ್ಕನೇ ತಿಂಗಳಾಗಿದ್ದು, ರೋಮನ್ ದೇವರುಗಳ ರಾಣಿ ಮತ್ತು ಮದುವೆಯ ಪೋಷಕ ಮತ್ತು ಮಹಿಳೆಯರ ಯೋಗಕ್ಷೇಮದ ಪೋಷಕ' ಜುನೋ' ದೇವತೆಯ ಹೆಸರು ಎಂದು ಉಲ್ಲೇಖವಿದೆ.
ರೋಮನ್ ಕ್ಯಾಲೆಂಡರ್ ಅನ್ನು ಬಹುತೇಕ ಕ್ಯಾಲೆಂಡರ್‌ಗಳು ಅನುಸರಿಸುತ್ತವೆ. ಅಲ್ಲಿ 4ನೇ ತಿಂಗಳಾಗಿದ್ದ ಜೂನ್ ಬಳಿಕ 6ನೇ ತಿಂಗಳಾಗಿದೆ. ಆದರೆ ಹಲವು ಕಡೆ ಜೂನ್ ಬೇಸಿಗೆ ಕಾಲದ ಸೂಚಕವಂತೆ. ಜೂನ್ ಸೂರ್ಯನಿಗೆ ಸಂಬಂಧಿಸಿದಂತೆ ಭೂಮಿಯ ಸ್ಥಾನಕ್ಕೆ ಲಿಂಕ್ ಮಾಡಬಹುದು. ಜೂನ್‌ನಲ್ಲಿ, ಉತ್ತರ ಗೋಳಾರ್ಧವು ಬೇಸಿಗೆಯ ಅಯನ ಸಂಕ್ರಾಂತಿಯನ್ನು ಅನುಭವಿಸುತ್ತದೆ.
ಇದು ವರ್ಷದ ದೀರ್ಘವಾದ ದಿನ ಮತ್ತು ಕಡಿಮೆ ರಾತ್ರಿಯನ್ನು ಜೂನ್‌ನಲ್ಲಿ ನಾವು ಕಾಣಬಹುದಾಗಿದೆ. ಭೂಮಿ ಹೆಚ್ಚು ಸೂರ್ಯನ ಕಡೆಗೆ ವಾಲುವುದರಿಂದ ಈ ವಿದ್ಯಮಾನವನ್ನು ನಾವು ನೋಡಬಹುದು. ಇದರಿಂದಾಗಿ ಸೂರ್ಯನ ಕಿರಣಗಳು ಉತ್ತರ ಗೋಳಾರ್ಧವನ್ನು ಹೆಚ್ಚು ನೇರವಾಗಿ ಹೊಡೆಯುತ್ತವೆ, ಇದರ ಪರಿಣಾಮವಾಗಿ ತಾಪಮಾನ ಜೂನ್‌ನಲ್ಲಿ ಏರಿಕೆಯಾಗಿರುತ್ತದೆ.
ಉತ್ತರ ಗೋಳಾರ್ಧದಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಭಾರತಕ್ಕೆ, ಜೂನ್ ಆರಂಭವು ಬೇಸಿಗೆಯ ಆರಂಭ ಮತ್ತು ಶಾಖದ ಕ್ರಮೇಣ ತೀವ್ರತೆಯನ್ನು ಸೂಚಿಸುತ್ತದೆ. ಹೀಗಾಗಿ ನಾವೀಗ ಉತ್ತರ ಭಾರತದಲ್ಲಿ ಬಿಸಿ ಗಾಳಿಯ ಅನುಭವಿಸುತ್ತಿದ್ದೇವೆ.
ಜೂನ್‌ನಲ್ಲಿ ಭಾರತವನ್ನು ಆವರಿಸುವ ಬಿಸಿ ಗಾಳಿಯು ಅಂತರ್ಜಲ ಕುಸಿತ, ಮಳೆಯಾಗದಿರುವು, ಅರಣ್ಯನಾಶ, ನಗರೀಕರಣ, ಹವಾಮಾನ ಬದಲಾವಣೆ ಸೇರಿ ಹಲವು ಕಾರಣಗಳಿಂದ ಸಂಭವಿಸುತ್ತಿದೆ. ಜೂನ್ ಮೊದಲ ವಾರ ಉತ್ತರ ಭಾರತದಲ್ಲಿ ಬಿಸಿಗಾಳಿ ದಾಳಿ ಇಟ್ಟಿದೆ. ಇದು ಜೂನ್ ತಿಂಗಳ ಆರಂಭಕ್ಕೆ ಕಾರಣವಾಗಿರುವ ಅಂಶವಾಗಿದೆ. ಜೂನ್ ಎಂಬುದು ರೋಮನ್ ಕಾಲದಲ್ಲಿ ಹುಟ್ಟಿಕೊಂಡ ಪದವಾಗಿದೆ. ಇದಕ್ಕೂ ಬೇಸಿಗೆ ಶಾಖಕ್ಕೂ ನೇರ ಸಂಬಂಧವೂ ಇದೆ. ಇನ್ನು ಇದೇ ರೋಮನ್ ಕ್ಯಾಲೆಂಡರ್‌ನಲ್ಲಿ ಮೊದಲ ಬಾರಿಗೆ ಅಧಿಕ ವರ್ಷ ಸಹ ಆರಂಭಗೊಂಡಿತು. ಫೆಬ್ರವರಿಯಲ್ಲಿ 29ನೇ ದಿನ ಬರಲು ಆರಂಭವಾಗಿದ್ದು ಸಹ ಇದೇ ರೋಮನ್ ಕ್ಯಾಲೆಂಡರ್ ಮೂಲಕವೇ.
ಸೂರ್ಯನ ಸುತ್ತ ಭೂಮಿಯ ತಿರುಗುವಿಕೆಯು ಸರಿಸುಮಾರು 365.25 ದಿನಗಳು ಎಂದು ಅಂದಾಜಿಸಲಾಗಿದೆ, ಆದ್ದರಿಂದ ಈ ಕೊರತೆಯನ್ನು ಸರಿದೂಗಿಸಲು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹೆಚ್ಚುವರಿ ದಿನವನ್ನು ಸೇರಿಸಲಾಗುತ್ತದೆ. ಇದು ರೋಮನ್ನರು ಮೊದಲು ಸೇರಿಸಿದರು ಎಂಬ ಉಲ್ಲೇಖವಿದೆ.
ಹೀಗಾಗಿ ಈ ರೋಮನ್ ಕ್ಯಾಲೆಂಡರ್ ವಿಶೇಷವಾಗಿ ತಿಂಗಳುಗಳ ಹೆಸರುಗಳ ನೀಡಿತ್ತು, ಅದರ ಒಂದೊಂದು ಹೆಸರಿಗೂ ಒಂದೊಂದು ಅರ್ಥವಿದೆ. ಈಗ ಜೂನ್ ಎಂದರೆ ದೇವರ ಹೆಸರು ಎಂಬ ಉಲ್ಲೇಖವಿದೆ. ರೋಮನ್ ದೇವರುಗಳ ರಾಣಿ ಎಂದು ಕರೆಯಲ್ಪಡುತ್ತಿದ್ದ ಜುನೋ ಹೆಸರನ್ನು ಅವರು ತಿಂಗಳಿಗೆ ಇಟ್ಟುಕೊಂಡಿದ್ದರು ಎನ್ನಲಾಗಿದೆ.



Click it and Unblock the Notifications