Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ ಹೋಳಿಯನ್ನೂ ಹೀಗೂ ಆಚರಿಸುತ್ತಾರೆ..! ಯಾವೆಲ್ಲಾ ರೀತಿ ಆಚರಿಸುತ್ತಾರೆ ಗೊತ್ತಾ?
ಹಿಂದೂಗಳ ಮತ್ತೊಂದು ಪವಿತ್ರ ಹಬ್ಬವಾದ ಹೋಳಿ ಇನ್ನೇನು ಹತ್ತಿರವಾಗುತ್ತಿದೆ, ಇದೇ ತಿಂಗಳ 25ರಂದು ಹೋಳಿ ಹುಣ್ಣಿಮೆಯಂದು ದೇಶದ ಎಲ್ಲಾ ಕಡೆಗಳಲ್ಲೂ ಹೋಳಿ ಆಚರಿಸಲಾಗುತ್ತಿದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದ ಹಲವು ಭಾಗದಲ್ಲೂ ಆಚರಿಸಲಾಗುತ್ತದೆ. ಹೋಳಿ ಅಂದರೆ ಅದು ಬಣ್ಣಗಳ ಹಬ್ಬ. ಅಲ್ಲಿ ಬಣ್ಣಗಳಲ್ಲಿದೆ ಇದ್ದರೆ ಅದು ಹೋಳಿ ಅನಿಸಿಕೊಳ್ಳುವುದಿಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಆಚರಿಸಲಾಗುತ್ತಿದೆ. ಹಿಂದೂಗಳ ಹಬ್ಬವಾದ ಹೋಳಿ ಹಬ್ಬವನ್ನು ವಿಶ್ವದ ನಾನಾ ಭಾಗದಲ್ಲೂ ಆಚರಿಸಲಾಗುತ್ತದೆ. ಈ ವರ್ಷ ಹೋಳಿ ಹಬ್ಬವು ಮಾರ್ಚ್ 25ರಂದು ಬಂದಿದೆ. ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ.

ಆದರೆ ಭಾರತದ ಹಲವು ಕಡೆಗಳಲ್ಲಿ ಹಲವು ರೀತಿಯಲ್ಲಿ ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾದರೆ ದೇಶದ ಯಾವ ಭಾಗದಲ್ಲಿ ಈ ಹಬ್ಬವನ್ನು ಯಾವ ರೀತಿ ಆಚರಿಸುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ಪ್ರದೇಶದ ಲಾತ್ಮಾರ್ ಹೋಳಿ
ಉತ್ತರ ಭಾರತದಲ್ಲಿ, ವಿಶೇಷವಾಗಿ ಹರಿಯಾಣ ಮತ್ತು ದೆಹಲಿ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಬಣ್ಣಗಳ ಎರಚುವ ಜೊತೆಗೆ ದೀಪ ಹಚ್ಚಿ ಸಂಭ್ರಮಿಸುತ್ತಾರೆ. ಅಲ್ಲದೆ ಈ ಹಬ್ಬವನ್ನು ವಿಜಯದ ಸಂಕೇತವಾಗಿ ಹಾಗೂ ಚಳಿಗಾಲ ಮುಗಿದು ವಸಂತಕಾಲದ ಆಗಮನದ ಸಂಕೇತವಾಗಿಯೂ ಆಚರಿಸುತ್ತಾರೆ.
ಆಂಧ್ರಪ್ರದೇಶದ ಮೆದೂರು ಹೋಳಿ
ದಕ್ಷಿಣ ಭಾರತದ ರಾಜ್ಯದಲ್ಲೂ ಹೋಳಿಗೆ ವಿಶೇಷ ರೀತಿಯ ಸ್ಥಾನ ಮಾನವಿದೆ. ಆಂಧ್ರಪ್ರದೇಶದಲ್ಲಿ ಮೆದುರು ಹೋಳಿ ಎಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಾಂಪ್ರದಾಯಿಕ ನೃತ್ಯ, ಹಾಡು ಸೇರಿ ಪರಸ್ಪರ ಬಣ್ಣಗಳ ಎರಚಿಕೊಂಡು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಮೆರವಣಿಗೆ ಸಾಗುತ್ತದೆ. ಇಲ್ಲಿ ವಿಶೇಷವಾಗಿ ಶ್ರೀಕೃಷ್ಣನಿಗೆ ಈ ಹಬ್ಬವನ್ನು ಅರ್ಪಿಸಲಾಗುತ್ತದೆ.
ಉತ್ತರಾಖಂಡದ ಕುಮಾವೋನಿ ಹೋಳಿ
ಕುಮಾವೂನ್ ಸುತ್ತಮುತ್ತಲಿನ ಉತ್ತರಾಖಂಡ ಪ್ರದೇಶದ ಹಲವಾರು ಸ್ಥಳಗಳಲ್ಲಿ ಕುಮಾವೋನಿ ಹೋಳಿಯನ್ನು ಆಚರಿಸಲಾಗುತ್ತದೆ. ಆದರೆ ಈ ಹಬ್ಬವೂ ಬಣ್ಣಗಳ ಎರಚುವುದಕ್ಕೆ ಸೀಮಿತವಾಗಿರದೆ ಇಲ್ಲಿ ರೈತರ ಆಚರಣೆಯಾಗಿ ರೂಪುಗೊಂಡಿದೆ. ಈ ದಿನದಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಲು ಮುಂದಾಗುತ್ತಾರೆ. ಈ ಸಂಪ್ರದಾಯಕ್ಕೆ ಚೀರ್ ಎಂದು ಅವರು ಕರೆಯುತ್ತಾರೆ. ಈ ದಿನ ಬಿತ್ತನೆ ಮಾಡಿದರೆ ಫಸಲು ಚೆನ್ನಾಗಿ ಬರಲಿದೆ ಎಂಬುದು ಅವರ ನಂಬಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ರಂಗ ಪಂಚಮಿ
ಮಹಾರಾಷ್ಟ್ರದಲ್ಲಿ ಹೋಳಿಯನ್ನು 'ರಂಗ ಪಂಚಮಿ' ಎಂದು ಆಚರಿಸಲಾಗುತ್ತದೆ. ಈ ದಿನ, ಜನರು ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಖಾರದ ತಿಂಡಿಗಳ ಸವಿಯುತ್ತಾರೆ. ಬೀದಿ ಬೀದಿಯಲ್ಲಿ ಮೆರವಣಿಗೆ ಏರ್ಪಡುತ್ತದೆ.
ಕೇರಳದ ಮಂಜಲ್ ಕುಳಿ
ಕೊಂಕಣಿ ಮತ್ತು ಕುಡುಂಬಿ ಸಮುದಾಯಗಳು ಆಚರಿಸುವ ಈ ಶಾಂತಿಯುತ ಹಬ್ಬದಲ್ಲಿ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ಜಾನಪದ ಹಾಡುಗಳು ಮತ್ತು ಬಣ್ಣದ ಓಕುಳಿಯಲ್ಲಿ ಮಿಂದೇಳುತ್ತಾರೆ. ಹೆಚ್ಚಾಗಿ ಅರಶಿನ ಬಣ್ಣದಿಂದ ಈ ಹಬ್ಬ ಆಚರಿಸುತ್ತಾರೆ.
ಉದಯಪುರದಲ್ಲಿ ರಾಯಲ್ ಹೋಳಿ
ಹೆಸರೇ ಸೂಚಿಸುವಂತೆ, ಉದಯಪುರವು ಅದ್ಭುತವಾದ ಹೋಳಿ ಆಚರಣೆಗೆ ಹೆಸರುವಾಸಿಯಾಗಿದೆ. ಅಲ್ಲಿನ ಮೇವಾರ್ ರಾಜಮನೆತನವು ಸಾಂಪ್ರದಾಯಿಕ ಆಚರಣೆಯಾಗಿ ಇದನ್ನು ಮುಂದುವರೆಸಿಕೊಂಡು ಬಂದಿದೆ. ಹೋಳಿಯ ಹಿಂದಿನ ದಿನದಂದು ದೀಪೋತ್ಸವ ಆಚರಣೆ, ಹೋಲಿಕಾ ಪ್ರತಿಕೃತಿ ದಹನ ನಡೆಯುತ್ತದೆ. ಇಲ್ಲಿ ವಿಜೃಂಭನೆಯಿಂದ ಮೆರವಣಿಗೆ ನಡೆಯುತ್ತದೆ.
ಬಂಗಾಳದಲ್ಲಿ ಬಸಂತ್ ಉತ್ಸವ ಮತ್ತು ಡೋಲ್ ಜಾತ್ರೆ
ಬಂಗಾಳದಲ್ಲಿ ಹೋಳಿಯನ್ನು ಬಸಂತ್ ಉತ್ಸವ ಎಂದು ಕರೆಯಲಾಗಿದೆ. ಇಲ್ಲಿ ಡೋಲಿನ ಜಾತ್ರೆ ಏರ್ಪಡುತ್ತದೆ. ರಾಧೆ ಮತ್ತಿ ಕೃಷ್ಣನ ವಿಗ್ರಹಗಳ ಮೆರವಣಿಗೆ ಸಾಗುತ್ತದೆ. ದಾರಿಯುದ್ಧಕ್ಕೂ ಹೋಳಿ ನೀರು ಚೆಲ್ಲಲಾಗುತ್ತದೆ. ಎಲ್ಲರು ಬಣ್ಣದಲ್ಲಿ ಮಿಂದೇಳುತ್ತಾರೆ.



Click it and Unblock the Notifications