Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿನ್ನದ ಹುಡುಗಿಯ ಲೆಕ್ಕಾಚಾರ ತಪ್ಪಿದಾದರು ಹೇಗೆ? ಎರಡೇ ದಿನದಲ್ಲಿ 2 ಕೆಜಿ ಹೆಚ್ಚಾಗಿತ್ತು!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಭರವಸೆಯೊಂದು ನೋವಿನೊಂದಿಗೆ ಅಂತ್ಯಗೊಂಡಿದೆ. ಕುಸ್ತಿಯಲ್ಲಿ ವಿನೇಶ್ ಪೋಗತ್ 100 ಗ್ರಾಮ ತೂಕ ಹೆಚ್ಚಳದಿಂದ ಅನರ್ಹಗೊಂಡಿದ್ದಾರೆ. ಈ ಸುದ್ದಿ ಭಾರತೀಯರಲ್ಲಿ ತೀವ್ರ ನಿರಾಸೆ ಹಾಗೂ ಆಕ್ರೋಶಕ್ಕೂ ಕಾರಣವಾಗಿದೆ. ಕೇವಲ 100 ಗ್ರಾಮ ತೂಕ ಹೆಚ್ಚಳದಿಂದ ಚಿನ್ನದ ಪದಕದ ಹೋರಾಟದಿಂದ ಮಾತ್ರವಲ್ಲ, ಕಂಚಿಗೂ ಅನರ್ಹರಾಗಿದ್ದಾರೆ.

ಹಲವು ಸವಾಲು, ಅವಮಾನ, ಟೀಕೆಗಳನ್ನು ಮೆಟ್ಟಿನಿಂತು ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗತ್ ನಿರ್ಗಮನ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಕುಸ್ತಿ ವಿಭಾಗದ ಆರಂಭಿಕ ಸುತ್ತಿನಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ವಿನೇಶ್ ಪೋಗತ್‌ಗೆ ತೂಕದ ಸಮಸ್ಯೆ ಎದುರಾಗಿಲ್ಲ. ಆದರೆ ಸಮಿಫೈನಲ್ ಪಂದ್ಯದ ಬಳಿಕ ಆಘಾತವೇ ಎದುರಾಗಿದೆ. ಕಾರಣ ಪ್ರಾಥಮಿಕ ಸುತ್ತಿನ ಪಂದ್ಯಕ್ಕೂ ಮುನ್ನ ವಿನೇಶ್ ಪೋಗತ್ ತೂಕ 49.9 ಕೆಜಿ ಇತ್ತು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ತೂಕ 52.7 ಕೆಜಿಗೆ ಹೆಚ್ಚಳವಾಗಿತ್ತು. ಒಂದೇ ರಾತ್ರಿಯಲ್ಲಿ 2.7 ಕೆಜಿ ತೂಕ ಇಳಿಸಿಕೊಳ್ಳುವ ಅತೀ ದೊಡ್ಡ ಸವಾಲು ಪೋಗತ್‌ಗೆ ಎದುರಾಗಿತ್ತು.
ಕುಸ್ತಿಪಟುಗಳಿಗೆ ಎರಡು ಬಾರಿ ತೂಕ ಪರೀಕ್ಷೆ ಮಾಡಲಾಗುತ್ತದೆ. ಮೊದಲ ಸುತ್ತು ಆರಂಭಕ್ಕೂ ಮುನ್ನ, ಅಂದರೆ ನಿಗದಿತ ತೂಕದ ಕುಸ್ತಿ ಪಂದ್ಯ ಆರಂಭಕ್ಕೂ ಮುನ್ನ ಪಾಲ್ಗೊಳ್ಳುವ ಎಲ್ಲಾ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ 10 ಗ್ರಾಮ್ ಹೆಚ್ಚಾದರೂ ಅನರ್ಹರಾಗುತ್ತಾರೆ. ಉದಾಹರಣೆಗೆ 50 ಕೆಜಿ ವಿಭಾಗದ ಕುಸ್ತಿಯಲ್ಲಿ ಪಾಲ್ಗೊಳ್ಳುವ ಕುಸ್ತಿಪಟುಗಳು 50 ಕೆಜಿ ಒಳಗಿರಬೇಕು. 50 ಕೆಜಿಗಿಂತ ಗ್ರಾಂ ಹೆಚ್ಚಿದರೂ ಅನರ್ಹರಾಗುತ್ತಾರೆ. ಈ ಮೊದಲ ಸುತ್ತಿನ ಪರೀಕ್ಷೆ ವೇಳೆ ವಿನೇಶ್ ಪೋಗತ್ 49.9 ಕೆಜಿ ತೂಕ ಹೊಂದಿದ್ದರು.
ಎರಡನೇ ತೂಕ ಪರೀಕ್ಷೆ ಫೈನಲ್ ಪಂದ್ಯಕ್ಕೂ ಮುನ್ನ. ಫೈನಲ್ ಸುತ್ತಿಗೆ ಅರ್ಹರಾಗಿರುವ ಕುಸ್ತಿಪಟುಗಳು ಪಂದ್ಯದ ಬೆಳಗ್ಗೆ ರೆಫ್ರಿ ಬಳಿ ತೂಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೆಫ್ರಿ ಮುಂದೆ ಮಾಡಿದ ತೂಕ ಪರೀಕ್ಷೆಯಲ್ಲಿ ವಿನೇಶ್ ಪೋಗತ್ 50.1 ಕೆಜಿ ಇತ್ತು. 100 ಗ್ರಾಂ ಹೆಚ್ಚಳದ ಕಾರಣ ಪೋಗತ್ ಅನರ್ಹರಾಗಿದ್ದರು.
ಫೈನಲ್ ಪಂದ್ಯಕ್ಕೂ ಹಿಂದಿನ ರಾತ್ರಿ ವಿನೇಶ್ ಪೋಗತ್ ತೂಕ ಪರೀಕ್ಷೆ ಮಾಡಿದ್ದರೆ. ಈ ವೇಳೆ 52.7 ಕೆಜಿಗೆ ಏರಿಕೆಯಾಗಿತ್ತು. 2 ದಿನದಲ್ಲಿ 2 ಕೆಜಿ ಹೆಚ್ಚಳವಾಗಿದ್ದರು. 2.7 ಕೆಜಿ ಇಳಿಕೆಗೆ ವಿನೇಶ್ ಪೋಗತ್ ಹಾಗೂ ಕೋಚ್ ರಾತ್ರಿಯಿಡಿ ಕಸರತ್ತು ನಡೆಸಿದ್ದರು. ನೀರು ಕುಡಿಯದೆ, ಆಹಾರ ಸೇವಿಸದೆ ವ್ಯಾಯಾಮ ಮಾಡಿದ್ದರು. ಇಷ್ಟೇ ಅಲ್ಲ ಬಿಸಿ ನೀರಿನ ಟಬ್‌ನಲ್ಲಿ ಇರಿಸಿ ತೂಕ ಇಳಿಕೆಗೆ ಎಲ್ಲಾ ಪ್ರಯತ್ನ ಮಾಡಲಾಗಿತ್ತು. ಇದು ಅತ್ಯಂತ ಅಪಾಯಾಕಾರಿ ಕೂಡ ಹೌದು. ನೀರು, ಆಹಾರ ಸೇವಿಸದೆ ದೇಹ ದಂಡಿಸುವುದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು. ಆದರೆ ಅರ್ಹತೆಗಾಗಿ ಇವೆಲ್ಲವನ್ನು ಮಾಡಲೇಬೇಕಿತ್ತು. ಈ ಎಲ್ಲಾ ಪ್ರಕ್ರಿಯೆ ಮುಗಿಸಿ ಬೆಳಗ್ಗೆ ರೆಫ್ರಿ ಮುಂದಿನ ತೂಕ ಪರೀಕ್ಷೆಯಲ್ಲಿ ವಿನೇಶ್ ತೂಕ 100 ಗ್ರಾಂ ಹೆಚ್ಚಾಗಿತ್ತು.
ವಿನೇಶ್ ಪೂಗತ್ 53 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇದಕ್ಕಾಗಿ ಪ್ಯಾರಿಸ್ ಪ್ರಯಾಣಕ್ಕೂ ಮುನ್ನ ಒಂದು ಭಾರಿ ಕಸರತ್ತು ನಡೆಸಿ ತೂಕ ಇಳಿಸಿಕೊಂಡಿದ್ದರು. ಇದು ಕುಸ್ತಿ ಸೇರಿದಂತೆ ಇತರ ತೂಕ ವಿಭಾಗದ ಸ್ಪರ್ಧೆಗಳಲ್ಲಿ ಸಾಮಾನ್ಯ. ಕಾರಣ ಹೆಚ್ಚಿನ ತೂಕದ ಕ್ರೀಡಾಪಟುಗಳು ತೂಕ ಇಳಿಸಿಕೊಂಡು ಹೋರಾಟ ಮಾಡುವುದು ಹೊಸದೇನಲ್ಲ. ಇಲ್ಲಿ 2 ದಿನದ ಹಿಂದೆ 49.9 ಕೆಜಿ ಇದ್ದ ವಿನೇಶ್ ಪೋಗತ್, ಫೈನಲ್ ಪಂದ್ಯಕ್ಕೂ ಮುನ್ನ 2 ಕೆಜಿ ತೂಕ ಹೆಚ್ಚಳವಾಗಿದ್ದು ಹೇಗೆ? ಈ ಪ್ರಶ್ನೆ ಕೂಡ ಚರ್ಚೆಯಾಗುತ್ತಿದೆ.
ಪ್ರಮುಖವಾಗಿ ಸ್ಪರ್ಧೆಗೂ ಮುನ್ನ ನೀರು, ಆಹಾರ ನಿಯಮಿತ ಪ್ರಮಾಣದಲ್ಲಿ ತೆಗೆದುಕೊಂಡು ದೇಹ ದಂಡಿಸುತ್ತಾರೆ. ಆದರೆ ಪಂದ್ಯಕ್ಕೂ ಮೊದಲು ಕುಸ್ತಿಪಟುಗಳು ಪ್ರೊಟಿನ್, ಎಲೆಕ್ಟ್ರೊಲೈಟ್, ಕಾರ್ಬೋಹೈಡ್ರೆಟ್‌ಗಳನ್ನು ಸೇರಿದಂತೆ ನಿಮಯಕ್ಕೆ ಒಳಪಟ್ಟಿರುವ ಪೋಷಕಾಂಶಗಳನ್ನು ಸೇವಿಸುತ್ತಾರೆ. ಇದರಿಂದ ಪಂದ್ಯದಲ್ಲಿ ಹೋರಾಡುವ ಶಕ್ತಿ ಹಾಗೂ ಸಾಮರ್ಥ್ಯ ಹೆಚ್ಚಲಿದೆ. ಆದರೆ ಹಲವು ದಿನಗಳಿಂದ ನಿಯಮದ ಆಹಾರ ಸೇವಿಸಿ ತೂಕ ಇಳಿಸಿಕೊಂಡಿರುವ ಕುಸ್ತಿಪಟುಗಳು ಈ ಪೋಷಕಾಂಶಗಳನ್ನು ಸೇವಿಸಿದ ಬೆನ್ನಲ್ಲೇ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ. ವಿನೇಶ್ ಪೋಗತ್ ವಿಚಾರದಲ್ಲೂ ಇದೇ ಆಗಿದೆ. ಹೀಗಾಗಿ ಪ್ರಾಥಮಿಕು ಸುತ್ತಿನಲ್ಲಿ ನಿಯಮಿತ ತೂಕವಿದ್ದ ಪೋಗತ್ ಚೂಕ ಫೈನಲ್ ಪಂದ್ಯಕ್ಕೂ ಮುನ್ನ ಹೆಚ್ಚಳವಾಗಿತ್ತು.
ಅರ್ಹತೆಗಾಗಿ ಒಂದು ರಾತ್ರಿಯಲ್ಲಿ ದಿಢೀರ್ ತೂಕ ಇಳಿಸುವ ಈ ರೀತಿಯ ಅಪಾಯಕಾರಿ ಕಸರತ್ತಿನಿಂದ ಹಲವು ಕ್ರೀಡಾಪಟಗಳು ಗಂಭೀರ ಪರಿಣಾಮ ಎದುರಿಸಿದ್ದಾರೆ. 2018ರಲ್ಲಿ ಜಮೈಕಾ ಮೂಲದ ಅಮೆರಿಕನ್ ಮಾರ್ಷಲ್ ಆರ್ಟಿಸ್ಟ್ ಹಾಗೂ ಕಿಕ್ ಬಾಕ್ಸರ್ ಈ ರೀತಿ ತೂಕ ಇಳಿಸುವ ಕಸರತ್ತು ನಡೆಸಿ ಲಘು ಹೃದಯಾಘಾತಕ್ಕೆ ತುತ್ತಾಗಿದ್ದರು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದರು. 2015ರಲ್ಲಿ ಒನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡ ಚೀನಾದ ಬಾಕ್ಸರ್ ಯಾಂಗ್ ಜಿಯಾನ್ ಬಿಂಗ್ ಇದೇ ರೀತಿ ರಾತ್ರಿ ಇಡಿ ತೂಕ ಇಳಿಸುವ ಕಸರತ್ತು ನಡೆಸಿ ಡಿಹೈಡ್ರೇಶನ್‌ನಿಂದ ಮೃತಪಟ್ಟಿದ್ದರು.



Click it and Unblock the Notifications