Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಲಾನ್ ಮಸ್ಕ್, ಅಂಬಾನಿ ರಾಶಿ ಯಾವುದು ಗೊತ್ತಾ? ಅವರ ಅದೃಷ್ಟ ಬದಲಾಗೋಕೆ ಇದು ಕೂಡ ಕಾರಣ!
ವ್ಯಕ್ತಿಯೊಬ್ಬ ಯಶಸ್ವಿ ಉದ್ಯಮಿ ಅಥವಾ ವ್ಯಾಪಾರಿ ಆಗಬೇಕು ಅಂದರೆ ಆತನ ಬಳಿಕ ಹಣವಿರಬೇಕು ಎಂಬುದು ಸಾಮಾನ್ಯ ಉತ್ತರ. ಆದ್ರೆ ಹಣವಿದ್ದ ಮಾತ್ರಕ್ಕೆ ಎಲ್ಲರೂ ಯಶಸ್ವಿ ಉದ್ಯಮಿಗಳಾಗಿದ್ದಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಹಣವಿದ್ದ ಮಾತ್ರಕ್ಕೆ ಅವರು ಶ್ರೀಮಂತರು ಎನಿಸಿಕೊಳ್ಳಬಹುದು, ಆದ್ರೆ ಯಶಸ್ವಿ ಉದ್ಯಮಿ ಎಂದು ಕರೆಯಬೇಕಾದರೆ ಹಲವು ಕಾರಣಗಳ ಪಟ್ಟಿ ಮಾಡಬೇಕಾಗುತ್ತದೆ.
ಆದ್ರೆ ಉದ್ಯಮಿಗಳಿಗೆ ವ್ಯವಹಾರ ಜ್ಞಾನದ ಜೊತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕು ಎನ್ನಲಾಗುತ್ತದೆ. ಕೋಟಿ ಕೋಟಿ ಹಣ ಹೂಡಿ ಆರಂಭಿಸುವ ಉದ್ಯಮ ಕೂಡ ನಷ್ಟದಲ್ಲಿ ಸಿಲುಕುವುದು ನಾವು ನೋಡಬಹುದು. ಹಾಗೆ ಸುಲಭವಾಗಿ ಕಡಿಮೆ ಬಂಡವಾಳ ಹಾಕಿ ಆರಂಭಿಸಿದ ಉದ್ಯಮ ಬಳಿಕ ಸಾವಿರಾರು ಕೋಟಿ ಆದಾಯ ಮಾಡುವಂತಹ ಬೃಹತ್ ಕಂಪನಿಯಾಗಿ ಬೆಳೆಯುವುದು ಕೂಡ ನಾವು ನೋಡಬಹುದು.

ಅದರಲ್ಲೂ ನೀವು ಮುಖೇಶ್ ಅಂಬಾನಿ, ಎಲಾನ್ ಮಸ್ಕ್, ಜೆಫ್ ಬೆಜೋಸ್‌ನಂತಹ ಶ್ರೀಮಂತ ಉದ್ಯಮಿಗಳ ರಾಶಿ ಯಾವುದು? ಅವರ ರಾಶಿಯಲ್ಲಿ ಏನಿದೆ? ಅವರ ಅದೃಷ್ಟದ ಕಾರಣದಿಂದಾಗಿ ಇಂದು ವಿಶ್ವದ ದಿಗ್ಗಜ ಉದ್ಯಮಿಗಳಾಗಿ ಬದಲಾಗಿರುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಎಲಾನ್ ಮಸ್ಕ್
ಸ್ಪೇಸ್ ಎಕ್ಸ್, ಟೆಸ್ಲಾ ಸೇರಿ ಸಾವಿರಾರೂ ಕೋಟಿ ರೂಪಾಯಿ ಆಸ್ತಿಯ ಒಡೆಯ ಎಲಾನ್ ಮಸ್ಕ್ ನಿಮಗೆಲ್ಲಾ ಚಿರಪರಿಚಿತ. ಆತ ವಿಶ್ವದ ನಂಬರ್ ಒನ್ ಶ್ರೀಮಂತ. ಎಲಾನ್ ಮಸ್ಕ್ ರಾಶಿ ಕರ್ಕಾಟಕ ರಾಶಿಯಾಗಿದೆ. ಈ ರಾಶಿಯವರಲ್ಲಿ ಮುಂದಾಲೋಚನೆ, ಅಂತಃಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಲಿದೆ. ಹೀಗಾಗಿ ಎಲಾನ್ ಮಸ್ಕ್ ಇಂದು ಹಣದ ಜೊತೆಗೆ ಅದಷೃವೂ ಆತನ ಕೈ ಹಿಡಿದಿದೆ.
ಜೆಫ್ ಬೆಜೋಸ್
ಜೆಫ್ ಬೆಜೋಸ್, ಅಮೇಜಾನ್ ಸಂಸ್ಥಾಪಕ. ಆತ ಒಂದು ಕಾಲದ ವಿಶ್ವದ ಶ್ರೀಮಂತ ವ್ಯಕ್ತಿ ಕೂಡ ಆಗಿದ್ದ. ಈಗ ಅಗ್ರ 10 ಜನರ ಪಟ್ಟಿಯಲ್ಲಿ ಇದ್ದಾರೆ. ಇವರು ಮಕರ ರಾಶಿಯಲ್ಲಿ ಜನಿಸಿದ್ದವರಾಗಿದ್ದು, ಅತಿಯಾದ ಆತ್ಮವಿಶ್ವಾಸ, ಧೈರ್ಯದ ನಿರ್ಧಾರಗಳಿಂದ ಅವರ ಕೆಲಸ ಕಾರ್ಯಗಳಲ್ಲಿ ಯಶಸ್ಸು ನೋಡಿರುತ್ತಾರೆ. ದೃಢವಾದ ನಿಶ್ಚಯಗಳು ಅವರ ಬಲವಾಗಿರುತ್ತೆ.
ಬರ್ನಾರ್ಡ್ ಅರ್ನಾಲ್ಟ್
ಫ್ಯಾಷನ್ ಲೋಕದ ದಿಗ್ಗಜ ಈ ಬರ್ನಾರ್ಡ್ ಅರ್ನಾಲ್ಟ್ ಆತನ ಇಡೀ ಕುಟುಂಬ ಈ ಉದ್ಯಮದಲ್ಲಿದೆ. ಸಾವಿರಾರು ಕೋಟಿ ಒಡೆಯರಾಗಿರುವ ಆತ ಮೀನ ರಾಶಿಯಲ್ಲಿ ಜನಿಸಿದ್ದಾರೆ. ಸಹಾನುಭೂತಿ, ಬುದ್ದಿವಂತಿಕೆ ಅವರ ಪ್ರಮುಖ ಅಸ್ತ್ರವಾಗಿರುತ್ತೆ. ಈ ರಾಶಿಯವರಲ್ಲಿನ ಮತ್ತೊಂದು ಗುಣವೆಂದರೆ ತಮ್ಮ ಸುತ್ತಲಿನ ಪರಿಸರವನ್ನು ಕೂಡ ತಮ್ಮತ್ತ ಸೆಳೆಯುವ ಶಕ್ತಿ ಹೊಂದಿರುವುದು.
ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ವೃಶ್ಚಿಕ ರಾಶಿಯ ವ್ಯಕ್ತಿ. ಆರ್ಥಿಕ ಪರಿಸ್ಥಿತಿಗಳು ಈ ರಾಶಿಯವರಲ್ಲಿ ಯಾವಾಗಲು ಉನ್ನತ ಹಂತದಲ್ಲಿರುತ್ತದೆ. ಒಂದು ಕೆಲಸದ ಮೇಲಿನ ಶ್ರದ್ಧೆ ಹಾಗೂ ಗುರಿ ಮೇಲಿನ ದೃಢ ಸಂಕಲ್ಪ ಈ ರಾಶಿಯವರ ಬಲವಾಗಿದೆ.
ಮಾರ್ಕ್ ಜುಕರ್‌ಬರ್ಗ್
ಫೇಸ್‌ಬುಕ್‌ನಿಂದ ಫೇಮಸ್ ಆಗಿದ್ದ ಆತ ಈಗ ಮೆಟಾ ಎಂಬ ದೊಡ್ಡ ಉದ್ಯಮ ಕಟ್ಟಿದ್ದಾನೆ. ಜುಕರ್‌ಬರ್ಗ್ ಜನಿಸಿದ್ದು ವೃಷಭ ರಾಶಿಯಲ್ಲಿ. ಶ್ರದ್ಧೆ ಹಾಗೂ ತಾಳ್ಮೆಯಂತಹ ಅವರ ಮನೋಭಾವವು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಮುಖೇಶ್ ಅಂಬಾನಿ
ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಪ್ರಮುಖರಾದ ಮುಖೇಶ್ ಅಂಬಾನಿ ಸಾವಿರಾರು ಕೋಟಿ ಆಸ್ತಿ ಹೊಂದಿದ್ದಾರೆ. ಹಾಗೆ ಅವರು ಮೇಷ ರಾಶಿಯಲ್ಲಿ ಜನಿಸಿದವರು. ದೃಢ ನಿಶ್ಚಯ, ಕೆಲಸದ ಮೇಲಿನ ಶ್ರದ್ಧೆ ಅವರಿಗಿರುವ ಅದೃಷ್ಟ ದುಪ್ಪಟ್ಟಾಗಿಸುತ್ತದೆ. ಕೈ ಹಿಡಿದ ಕಾರ್ಯ ಮತ್ತೆಂದು ನಿಲ್ಲಿಸದೆ ಮುಂದುವರೆಸುವ ಅವರ ಕೆಲಸವು ಯಶಸ್ಸಿನತ್ತ ಕರೆದೊಯ್ಯಲಿದೆ.



Click it and Unblock the Notifications
