Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫೋಗಟ್ ತೂಕ ಹೆಚ್ಚಳವಾಗಿದ್ದು ಹೇಗೆ? ತೂಕ ಇಳಿಸಲು ಆಕೆ ಮಾಡಿದ ಸಾಹಸವೇನು ಗೊತ್ತಾ?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಬೇಟೆಗಿಳಿದಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ಗೆ ಆಘಾತ ಎದುರಾಗಿದ್ದು, ಒಲಿಂಪಿಕ್‌ನಿಂದ ಅನರ್ಹತೆಗೆ ಒಳಗಾಗಿದ್ದಾರೆ. 50 ಕೆಜಿ ವಿಭಾಗದಲ್ಲಿ ಇಂದು ಫೈನಲ್ ಪಂದ್ಯ ಎದುರಿಸಬೇಕಿದ್ದ ಅವರು ತೂಕ ಹೆಚ್ಚಳದ ಕಾರಣದಿಂದಾಗಿ ಅನರ್ಹತೆಗೆ ಒಳಗಾಗಿದ್ದಾರೆ. ಕೇವಲ 100 ಗ್ರಾಮ್ ತೂಕ ಹೆಚ್ಚಳದ ಕಾರಣಕ್ಕೆ ಅವರು ಅನರ್ಹರಾಗಿರುವುದಾಗಿ ವರದಿಯಾಗಿದೆ.
ಇಂದು ಬೆಳಗ್ಗೆ ಆಕೆಯ ಸ್ಪರ್ಧೆಗೂ ಮುನ್ನ ತೀರ್ಪುಗಾರರು ತೂಕ ಪರಿಶೀಲನೆ ವೇಳೆ 100 ಗ್ರಾಮ್ ಹೆಚ್ಚಳವಾಗಿದ್ದರಿಂದ ಆಕೆಯನ್ನ ಅನರ್ಹಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಂಡಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ.

ಈ ಮೂಲಕ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಫೈನಲ್ ಪಂದ್ಯ ನಡೆಯದೆ ಆಕೆ ಚಿನ್ನ ಗೆದ್ದಿದ್ದಾಳೆ. ಫೋಗಟ್ ತಡರಾತ್ರಿ ಬರೋಬ್ಬರಿ 2 ಕೆ.ಜಿ ಇಳಿಸಬೇಕಾದ ಅನಿವಾರ್ಯತೆಗೆ ಸಿಲುಕ್ಕಿದ್ದರು, ಹೀಗಾಗಿ ಅವರು ರಾತ್ರಿ ಇಡೀ ನಿದ್ರೆ ಸಹ ಮಾಡಿರಲಿಲ್ಲವಂತೆ. ಆದರೆ ಬೆಳಗ್ಗೆ ಪರಿಶೀಲನೆ ವೇಳೆ 100 ಗ್ರಾಮ್ ಹೆಚ್ಚಾಗಿದ್ದ ಕಾರಣ ಆಕೆಯ ಕನಸು ಭಗ್ನಗೊಂಡಿದೆ.
ಮಂಗಳವಾರದ ತನ್ನ ಪಂದ್ಯದ ನಂತರ ಫೋಗಟ್ 2 ಕೆ.ಜಿ ತೂಕ ಹೆಚ್ಚಳವಾಗಿದ್ದರಂತೆ. ಆದರೆ ಮಾರನೆ ದಿನ ಪಂದ್ಯವಿದ್ದ ಕಾರಣ ಇಡೀ ರಾತ್ರಿ ತೂಕ ಇಳಿಸಲು ಕಸರತ್ತು ನಡೆಸಿದ್ದಾರೆ. ಆಕೆ ಇಡೀ ರಾತ್ರಿ ಸೈಕ್ಲಿಂಗ್, ಸ್ಕಿಪ್ಪಿಂಗ್ ಮಾಡಿರುವುದು ಸೇರಿ ಊಟ ಬಿಟ್ಟಿದ್ದರಂತೆ. ಆದ್ರೆ ಬೆಳಗ್ಗೆ ಪಂದ್ಯಕ್ಕೂ ಮುನ್ನ ಪರಿಶೀಲಿಸಿದಾಗ ಆಕೆ ನಿಗಧಿಗಿಂತ 100 ಗ್ರಾಮ್ ಹೆಚ್ಚು ತೂಕ ಇರುವುದು ಕಂಡುಬಂದಿದೆ.
ಬಾಕ್ಸಿಂಗ್, ಮಿಶ್ರ ಸಮರ ಕಲೆಗಳು, ಕುಸ್ತಿ, ಕಿಕ್ ಬಾಕ್ಸಿಂಗ್, ಜೂಡೋ, ಟೇಕ್ವಾಂಡೋ, ಬ್ರೆಜಿಲಿಯನ್ ಜಿಯು-ಜಿಟ್ಸು, ಮೌಯಿ ಥಾಯ್, ಕರಾಟೆ ಮತ್ತು ಸ್ಯಾಂಬೊ ಇವೆಲ್ಲವೂ ನಿರ್ಧಿಷ್ಟ ತೂಕ ವಿಭಾಗದ ಕ್ರೀಡೆಯಾಗಿವೆ. ಪಂದ್ಯಗಳು ನಡೆಯುವ ಮುನ್ನ ಸ್ಪರ್ಧಿಗಳ ತೂಕ ಪರಿಶೀಲಿಸಲಾಗುತ್ತದೆ. ಒಂದು ವೇಳೆ ನಿಗಧಿತ ತೂಕಕ್ಕಿಂತ ಕಡಿಮೆ ಇದ್ದರೆ ಮತ್ತು ಹೆಚ್ಚಾಗಿದ್ದರೆ ಆ ಸ್ಪರ್ಧಿಗೆ ಕ್ರೀಡೆಯಲ್ಲಿ ಭಾಗಿವಹಿಸುವ ಅವಕಾಶ ಸಿಗುವುದಿಲ್ಲ.
ಕ್ರೀಡೆಯ ಜಾಗತಿಕ ಆಡಳಿತ ಮಂಡಳಿಯಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್‌ನ ನಿಯಮಗಳ ಪ್ರಕಾರ, ಕುಸ್ತಿಪಟುಗಳನ್ನು ಅವರ ಪಂದ್ಯಗಳ ಬೆಳಿಗ್ಗೆ ತೂಕ ಮಾಡಲಾಗುತ್ತದೆ. ಸ್ಪರ್ಧೆಯ ಮೊದಲ ಬೆಳಿಗ್ಗೆ, ಕುಸ್ತಿಪಟುಗಳು ತಮ್ಮ ತೂಕದ ವಿಭಾಗವನ್ನು ಪೂರೈಸಲು 30 ನಿಮಿಷಗಳ ಸಮಯ ಹೊಂದಿರುತ್ತಾರೆ. ಪದಕ ಸುತ್ತಿನ ದಿನದಂದು, ಕ್ರೀಡಾಪಟುಗಳು ತಮ್ಮ ತೂಕ ಸರಿದೂಗಿಸಿಕೊಳ್ಳಲು 15 ನಿಮಿಷಗಳ ಕಾಲ ಸಮಯ ಹೊಂದಿರುತ್ತಾರೆ.
ಕುಸ್ತಿಪಟುಗಳು ಸಹ ಎಷ್ಟು ಬಾರಿ ಆದರು ತಮ್ಮ ತೂಕ ಪರೀಕ್ಷಿಸಿಕೊಳ್ಳಬಹುದು. ಈ ಪಂದ್ಯಾವಳಿಗೂ ಮುನ್ನ ಅವರು ತಮ್ಮ ತೂಕವನ್ನು ನಿರ್ಧಿಷ್ಟ ನಿಯಮಕ್ಕೆ ಸರಿದೂಗಿಸಲು ಸ್ಪ್ರಿಂಟಿಂಗ್, ಸೈಕ್ಲಿಂಗ್ ಮತ್ತು ಸ್ಕಿಪ್ಪಿಂಗ್ ಹಗ್ಗದಂತಹ ಕಾರ್ಡಿಯೋ ವರ್ಕೌಟ್‌ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಫೋಗಟ್ ತೂಕ ಹೆಚ್ಚಳಕ್ಕೆ ಕಾರಣವೇನು?
ಫೋಗಟ್ ಅವರು ಮಂಗಳವಾರ ತೂಕದ ನಂತರ ಸೇವಿಸಿದ ಅಲ್ಪ ಪ್ರಮಾಣದ ಆಹಾರವು ಇಂದು ಕೆಲವು ಗ್ರಾಂಗಳಷ್ಟು ಅಧಿಕ ತೂಕವನ್ನು ಹೊಂದಿರುವುದಕ್ಕೆ ಕಾರಣವಾಗಿದೆ. ಫೋಗಟ್ ಈ ಹಿಂದೆ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅವರು 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲು ಮುಂದಾಗಿ ತೂಕ ಇಳಿಸಿಕೊಂಡಿದ್ದರು.
ತೂಕ ಇಳಿಸಲು ಕೂದಲು ಕಟ್, ರಕ್ತ ಹೊರಕ್ಕೆ..?
ಫೋಗಟ್ ನಿಗದಿಗಿಂತ ಹೆಚ್ಚು ತೂಕ ಹೊಂದಿದ್ದ ಕಾರಣ ಈ ತೂಕ ತಕ್ಷಣಕ್ಕೆ ಇಳಸಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಆಕೆಯ ಕೂದಲು ಕತ್ತರಿಸಿ, ರಕ್ತ ಸಹ ತೆಗೆಯಲಾಗಿತ್ತು ಎಂದು ವರದಿಗಳಾಗಿವೆ. ಇಷ್ಟೆಲ್ಲಾ ಪರಿಶ್ರಮದ ಬಳಿಕವೂ ಆಕೆ ನಿರ್ಧಿಷ್ಟ ನಿಯಮದಂತೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.



Click it and Unblock the Notifications

