Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
31 ವರ್ಷದ ಮಹಿಳೆಗೆ 24 ಮಂದಿ ಮಕ್ಕಳು..! ವೈರಲ್ ಮಹಿಳೆ ಹಿಂದಿನ ಕಥೆ ಏನು?
ಸಾಮಾಜಿಕ ಜಾಲತಾಣವನ್ನ ಜನ ಈಗ ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನ ನೀವು ನೋಡಿರುತ್ತೀರಿ. ಒಬ್ಬರಿಗಿಂತ ಮತ್ತೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳ ಹಾಕುವುದು, ಫೇಮಸ್ ಆಗಲು ಎಂತಹ ಕಸರತ್ತು, ಸಾಹಸಕ್ಕೂ ಕೈ ಹಾಕುವುದನ್ನ ನಾವು ನೋಡಿರುತ್ತೇವೆ. ಆದ್ರೆ ಇತ್ತೀಚಿಗೆ ಕಳೆದೊಂದು ವಾರದ ಹಿಂದೆ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಸ್‌ನಂತೆ ಹರಡುತ್ತಿದ್ದು, ಭಾರೀ ವೈರಲ್ ಆಗಿದೆ.
ಆಕೆ ತನಗೆ 24 ಮಂದಿ ಮಕ್ಕಳಿದ್ದಾರೆ, ಆದ್ರೆ ನನಗೆ 31 ವರ್ಷ ಎಂದು ಹೇಳಿರುವ ವಿಡಿಯೋ ಇದಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅತ್ಯಂತ ಚಿಕ್ಕ ವಯಸ್ಸಿನ ಈ ಮಹಿಳೆಗೆ 24 ಮಂದಿ ಮಕ್ಕಳು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಮೊದಲು ಒಂದಿಷ್ಟು ಯೂಟ್ಯೂಬ್ ಚಾನಲ್ ಮಂದಿ ಆಕೆಯ ಮಾತನಾಡಿಸಿದಾಗ ಆಕೆ ಹಾಗೆ ಹೇಳಿಕೊಂಡಿದ್ದಾಳೆ.

ಆಕೆ ತನಗೆ 16 ಮಂದಿ ಗಂಡು ಮಕ್ಕಳು 8 ಹೆಣ್ಣು ಮಕ್ಕಳಿದ್ದಾರೆ. ನಾವಿಬ್ಬರು ನಮಗೆ 2 ಡಜನ್ ಮಕ್ಕಳು ಎಂದು ಹೇಳುತ್ತಿದ್ದಾಳೆ, ಪತಿ ಡ್ರೈವಿಂಗ್ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿ ನೀಡುವ ರೇಷನ್‌ನಿಂದ ಜೀವನ ನಡೆಸುತ್ತೇವೆ ಎಂದೆಲ್ಲಾ ಹೇಳಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.
ಬಳಿಕ ಒದೊಂದು ಚಾನಲ್‌ನವರು ಆಕೆಯನ್ನು ಸಂದರ್ಶಿಸಲು ಮುಂದಾಗಿದ್ದಾರೆ. ಅವರ ಬಳಿಯೂ ಆಕೆ ಇದನ್ನೇ ಹೇಳಿದ್ದಾಳೆ. ಆದರೆ ಕೆಲವೊಮ್ಮೆ ತಡವರಿಸಿದ್ದಾಳೆ. ನನಗೆ 24 ಮಕ್ಕಳಿದ್ದಾರೆ ಅದರಲ್ಲಿ ಹಲವರು ಅವಳಿಗಳು, ದೊಡ್ಡವನಿಗೆ 18 ವರ್ಷ 2 ವರ್ಷದ ಕಿರಿಯ ಮಗಳಿದ್ದಾಳೆ ಎಂದೆಲ್ಲಾ ಆಕೆ ಹೇಳಿಕೊಂಡಿದ್ದಾಳೆ.
ಆದ್ರೆ ಹೇಗೆ ಲೆಕ್ಕ ಮಾಡಿದರು ಆಕೆಯ ವಯಸ್ಸಿಗೂ ಆಕೆ ಮದುವೆಯಾದ ದಿನಾಂಕಕ್ಕೂ ಮಕ್ಕಳ ವಯಸ್ಸಿಗೂ ಸಂಬಂಧವೇ ಇಲ್ಲ. ಹೀಗಾಗಿ ಮತ್ತಷ್ಟು ಕುತೂಹಲದಿಂದ ಹಲವು ಮಾಧ್ಯಮಗಳು ಆಕೆಯ ಚರಿತ್ರೆ ತೆಗೆಯಬೇಕು ಎಂದು ಸಂದರ್ಶನಕ್ಕೆ ಮುಂದಾಗಿದ್ದಾರೆ. ಈ ವೇಳೆ ಮಕ್ಕಳ ಹೆಸರು ಹೇಳುವಂತೆ ಕೇಳಿದರೆ ಆಕೆ ಸಂಖ್ಯೆಗಳ ಹೇಳಿದ್ದಾಳೆ. ನಾನು ಹೆಸರು ಇಟ್ಟಿದ್ದರೂ ಯಾರನ್ನೂ ಹೆಸರು ಹಿಡಿದು ಕರೆಯುವುದಿಲ್ಲ ಅವರಿಗೆ 1, 2, 3, 4 ಎಂದು ಕರೆಯುತ್ತೇನೆ ಎಂದಿದ್ದಾಳೆ.
ಹಾಗೆ ಮಕ್ಕಳನ್ನು ಕರೆದು ತನ್ನಿ ಎಂದರೆ ಈಗ ಅವರು ನನ್ನ ಜೊತೆಗಿಲ್ಲ. ಸಂಬಂಧಿಕರ ಮನೆಯಲ್ಲಿದ್ದಾರೆ ಸಧ್ಯಕ್ಕೆ ನನ್ನ ಬಳಿ ಇರುವುದು ಇಬ್ಬರು ಮಾತ್ರ ಎಂದು ಉತ್ತರಿಸುತ್ತಾಳೆ. ಆದ್ರೆ ಆಕೆಯ ಪಡಿತರ ಚೀಟಿ ಗಮನಿಸಿದರೆ ಅಲ್ಲಿಯೂ ಆಕೆಗೆ ಇಬ್ಬರು ಮಕ್ಕಳಿರುವ 4 ಜನ ಸದಸ್ಯರ ಕುಟುಂಬ ಎಂದು ನಮೂದಿಸಲಾಗಿದೆ.
ಆಕೆ ಹೇಳಿದ್ದರ ಹಿಂದಿರುವ ಸತ್ಯವೇನು?
ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾಗಿರುವ ಖುಷ್ಬೂ ಪಾಠಕ್ ಎಂಬಾಕೆ ಈ ರೀತಿಯ ಕಟ್ಟು ಕಥೆ ಕಟ್ಟಿದ್ದಾಳೆ. ಆಕೆಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಷ್ಟೇ ಇದ್ದಾರೆ. ಆದರೆ ಆನ್‌ಲೈನ್‌ನಲ್ಲಿ ಮನರಂಜನಾ ವಿಡಿಯೋ ಮಾಡುವಾಗ 24 ಮಕ್ಕಳಿರುವುದಾಗಿ ಹೇಳಿರುವುದು ಕಂಡುಬಂದಿದೆ. ಆದರೆ ಆ ವಿಡಿಯೋ ವೈರಲ್ ಆಗಿದ್ದರಿಂದ ಮತ್ತೆ ಮತ್ತೆ ಅದನ್ನೇ ಆಕೆ ಎಲ್ಲರ ಬಳಿಯೂ ಹೇಳಿಕೊಂಡಿದ್ದಾಳೆ. ಇದರಿಂದ ಆದಕೆ ಫೇಮಸ್ ಸಹ ಆಗಿದ್ದಾಳೆ.
ಆಕೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಉದ್ದೇಶದಿಂದ ಈ ರೀತಿ ಸುಳ್ಳು ಹೇಳಿರುವುದು ತಿಳಿದುಬಂದಿದೆ. ಆದ್ರೆ ಈ ವಿಚಾರ ಅರಿಯದ ಮಂದಿ ಆಕೆ ಹೇಳಿದ್ದೆಲ್ಲವು ಸತ್ಯ ಎಂದು ನಂಬಿದ್ದಾರೆ. 23 ವರ್ಷದ ದಾಂಪತ್ಯ ಜೀವನದಲ್ಲಿ ಆಕೆ 24 ಮಕ್ಕಳ ಹೆರಲು ಸಾಧ್ಯವಾಗಿದೆ ಎಂದು ನಂಬಿದ್ದಾರೆ. ಆದ್ರೆ ಇಂತಹ ಪ್ರಕರಣಗಳು ಲಕ್ಷದಲ್ಲಿ ಒಂದು ಎನ್ನಬಹುದು. ಆದ್ರೆ ಹಲವರನ್ನು ಆಕೆ ತನ್ನ ಹೇಳಿಕೆಯಿಂದ ಮೂರ್ಖರನ್ನಾಗಿ ಮಾಡಿದ್ದು ಮಾತ್ರ ವಿಪರ್ಯಾಸ.



Click it and Unblock the Notifications
