Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಗಗನಯಾತ್ರಿಗಳು ಮೂತ್ರವನ್ನೇ ನೀರಾಗಿ ಬಳಸುತ್ತಾರೆ! ಅವರ ಜೀವನ ಹೇಗಿರುತ್ತೆ ಬಾಹ್ಯಾಕಾಶದಲ್ಲಿ
ಬಾಹ್ಯಾಕಾಶದಿಂದ ಬರೋಬರಿ 9 ತಿಂಗಳ ಬಳಿಕ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಎಷ್ಟೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ನಾವು ಕೂಡ ಆಕೆಯಂತೆ ಗಗನಯಾತ್ರಿಯಾಗಬೇಕೆಂಬ ಕನಸು ಹಲವಾರು ಹೆಣ್ಮಕ್ಕಳಲ್ಲಿ ಮೂಡಿದೆ. ಕಲ್ಪನಾ ಚಾವ್ಲಾರ ಸಾಧನೆಯನ್ನು ಕೇಳಿ ಬೆಳೆದ ನಮಗೆಲ್ಲ ಸುನೀತಾ ವಿಲಿಯಮ್ಸ್ ಸಾಧನೆ ಮತ್ತಷ್ಟು ಸ್ಪೂರ್ತಿ ತುಂಬುವಂತಿದೆ. 8 ದಿನಗಳವರೆಗೆ ಬಾಹ್ಯಾಕಾಶದಲ್ಲಿ ಇದ್ದು ಬರಲು ಹೋಗಿದ್ದ ಗಗನಯಾತ್ರಿಗಳ ಬದುಕಿನಲ್ಲಿ ನಂತರ ನಡೆದಿದ್ದು ನಾಸ ಕೂಡ ಊಹಿಸಿರದ ಘಟನೆಗಳು.

ಅವರು ಹೋಗಿದ್ದ ಬಾಹ್ಯಾಕಾಶ ಸಂಸ್ಥೆ ಭೂಮಿಗೆ ಬರುವ ಸಂಪರ್ಕ ಕಡೆದುಕೊಂಡಿತು, ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಕೋರ್ ಬಾಹ್ಯಾಕಾಶದಲ್ಲಿಯೇ ಬಾಕಿಯುಳಿದರು. ಅವರು ಇಂದು ಬರಬಹುದು -ನಾಳೆ ಮರಳಬಹುದು ಎಂಬ ಊಹೆಗಳೆಲ್ಲಾ ತಪ್ಪಿತು. ಇನ್ನು ಅವರು ಭೂಮಿಗೆ ಬರುಳುತ್ತಾರಾ ಎಂಬ ಸಂಶಯ ಕೂಡ ಮೂಡಿಸಿತು, ಏಕೆಂದರೆ ಅವರು ಭೂಮಿಯಿಂದ 8 ದಿನಗಳ ಮಟ್ಟಿಗೆಯೆಂದು ಬಾಹ್ಯಾಕಾಶಕ್ಕೆ ಹೋದವರು ತಿಂಗಳುಗಳು ಕಳೆದರೂ ಮರಳಲು ಸಾಧ್ಯವಾಗಿರಲಿಲ್ಲ. ಒಂದಲ್ಲ ಎರಡಲ್ಲ ಬರೋಬರಿ 9 ತಿಂಗಳುಗಳ ಬಳಿಕ ಭೂಮಿಗೆ ಮರಳಿದ್ದಾರೆ. ಇಷ್ಟು ದಿನಗಳ ಬಾಹ್ಯಾಕಾಶದಲ್ಲಿ ಯಾವುದೇ ಆತಂಕ ಬೀಳದೆ ನಾವು ಮರಳುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮೆಲ್ಲರಿಗೂ ಒಂದು ದೊಡ್ಡ ಸ್ಪೂರ್ತಿಯಾಗಬೇಕಾಗಿದೆ.
ಬಾಹ್ಯಾಕಾಶದಲ್ಲಿ ಜೀವಿಸುವುದು ಅಂದರೆ ಅಷ್ಟು ಸುಲಭವಲ್ಲ!
ಗಗನಯಾತ್ರಿಗಳು ಆಹಾರಕ್ಕೆ ಏನು ಮಾಡುತ್ತಾರೆ, ನೀರು ಹೇಗೆ ಸೇವಿಸುತ್ತಾರೆ ಎಂಬೆಲ್ಲಾ ಪ್ರಶ್ನೆಗಳು ಸಾಮಾನ್ಯ ಮನುಷ್ಯರಿಗೆ ಕಾಡುವುದು. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಜೀವನ ಮಾಡುತ್ತಾರೆ ಎಂಬುವುದರ ಬಗ್ಗೆ ಕೆಲವೊಂದು ಸ್ವಾರಸ್ಯಕರ ವಿಷಯಗಳ ಬಗ್ಗೆ ನೋಡೋಣ:
ಅಲ್ಲಿ ವಸ್ತುಗಳು, ಮನುಷ್ಯರು ತೇಲುತ್ತಾರೆ
ಭೂಮಿಯಲ್ಲಿ ಇರುವಂತೆ ಗುರುತ್ವಾಕರ್ಷಣೆ ಇರುವುದಿಲ್ಲ, ಈ ಕಾರಣಕ್ಕೆ ಕಾಲ ಮೇಲೆ ನಿಲ್ಲಲು ಸಾಧ್ಯವಾಗಲ್ಲ, ತೇಲಿಕೊಂಡೇ ಸಂಶೋಧನೆಗಳನ್ನು ಮಾಡುತ್ತಾರೆ. ಗಗನಯಾತ್ರಿಗಳು ಮನುಷ್ಯರು ತಾನೇ? ಅವರಿಗೆ ನಮ್ಮಂತೆ ಹಸಿವು, ಬಾಯಾರಿಕೆ ಹೇಗೆ ನೀಗಿಸಿಕೊಳ್ಳುತ್ತಾರೆ ಎಂದು ನೋಡುವುದಾದರೆ ಅವರ ಜೀವನದ ಬಗ್ಗೆ ಇನ್ನಷ್ಟು ಸೋಜಿಗ ಅನಿಸುವುದು.
ಬಾಹ್ಯಾಕಾಶದಲ್ಲಿ ನೀರು ಬಳಸುವ ವಿಧಾನವೇ ಭಿನ್ನವಾಗಿರುತ್ತದೆ
ಬಾಹ್ಯಾಕಾಶ ನೌಕೆಯಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ, ಆದರೆ ನಾವು ಅಂದುಕೊಂಡಂತೆ ನೀರು ಟ್ಯಾಪ್‌ಗಳಲ್ಲಿ, ಸಿಂಕ್‌ಗಳಲ್ಲಿ ಹರಿದು ಬರಲ್ಲ, ಬಾಟಲಿಗಳಲ್ಲಿ ನೀರು ಕುಡಿಯಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನೀರು ಕೂಡ ತೇಲುತ್ತದೆ, ನಾವು ಬಾಟಲಿನಲ್ಲಿ ನೀರು ಕುಡಿಯಲು ಯತ್ನಿಸಿದರೆ ಆ ನೀರು ಮೂಗಿನೊಳಗಡೆ ಹೋಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ಹಾಗಾಗಿ ಚಿಕ್ಕ-ಚಿಕ್ಕ ಪ್ಲಾಸ್ಟಿಕ್ ರೀತಿಯ ಬ್ಯಾಗ್‌ಗಳಲ್ಲಿ ತುಂಬಲಾಗುವುದು. ಅದರಲ್ಲೊಂದು ಪೈಪ್ ಇರುತ್ತದೆ, ಆ ಪೈಪ್ ಮೂಲಕ ಕುಡಿಯಲು ಸಾಧ್ಯವಿಲ್ಲ ಅದನ್ನು ಮೆಲ್ಲನೆ ಪ್ರೆಸ್ ಮಾಡಿದರೆ ಒಂದು ಹನಿ ನೀರು ಹೊರಬಂದು ಗಾಳಿಯಲ್ಲಿ ತೇಲುತ್ತಿರುತ್ತದೆ, ರಬಕ್ ಅಂತ ಬಾಯ್ತೆರೆದು ಅದನ್ನು ತಿನ್ನಬೇಕು, ಹೌದು ನಿಮಗೆ ಕುಡಿಯಲು ಸಾಧ್ಯವಾಗಲ್ಲ, ತಿನ್ನುವ ರೀತಿ ನೀರು ಕುಡಿಯಬೇಕು.
ಆಹಾರ ವ್ಯವಸ್ಥೆ?
ಈಗ ಅನೇಕ ವೆರೈಟಿ ಆಹಾರವನ್ನು ತೆಗೆದುಕೊಂಡು ಹೋಗುತ್ತಾರೆ. ಸುನೀತಾ ವಿಲಿಯಮ್ಸ್ ಸಮೋಸಾ ಕೂಡ ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗುತ್ತದೆ.
ಬಾಹ್ಯಾಕಶ ನೌಕೆಯಲ್ಲಿ ಟಾಯ್ಲೆಟ್ ವ್ಯವಸ್ಥೆ ಹೇಗಿರುತ್ತದೆ?
ಅದರಲ್ಲಿ ಮೂತ್ರ ವಿಸರ್ಜನೆಗೆ ಪ್ರತ್ಯೇಕ ವ್ಯವಸ್ಥೆ, ಟಾಯ್ಲೆಟ್ ವ್ಯಾಕ್ಯೂಮ್ ರೀತಿಯ ವ್ಯವಸ್ಥೆ ಇರುತ್ತದೆ. ಮೂತ್ರ ಫಿಲ್ಟರ್ ಆಗಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ವ್ಯವಸ್ಥೆಯೂ ಇರುತ್ತದೆ.
ಹಲ್ಲುಜ್ಜಿ ಪೇಸ್ಟ್ ಉಗುಳುವುದಿಲ್ಲ, ಹಾಗೇ ನುಂಗಿ ಬಿಡುತ್ತಾರೆ
ಗಗನಯಾತ್ರಿ ತಾವು ಹೇಗೆ ಹಲ್ಲುಜ್ಜುತ್ತೇವೆ ಎಂದು ಮಾಡಿರುವ ವೀಡಿಯೋದಲ್ಲಿ ಒಂದು ಹನಿ ನೀರನ್ನು ಬ್ರೆಷ್‌ಗೆ ಹಾಕಿ, ಅದರಲ್ಲಿ ಪೇಸ್ಟ್ ಹಾಕಿ ಉಜ್ಜಿ, ಆ ಪೇಸ್ಟ್ ಬಿಸಾಡಲ್ಲ, ಅದನ್ನು ಹಾಗೇ ನುಂಗುತ್ತಾರೆ.
ಗಗನಯಾತ್ರಿ ಬದುಕು ನಾವುಂದುಕೊಂಡಂತೆ ಅಷ್ಟು ಸುಲಭವಲ್ಲ, ಡಾಕಿಂಗ್ ಮಾಡುವಾಗ ಒಂದು ಚಿಕ್ಕ ಸ್ಲಿಪ್ ಆದರೂ ಮತ್ತೆ ಅವರನ್ನು ಹುಡುಕಲೂ ಸಾಧ್ಯವಿಲ್ಲವಂತೆ. ಇಷ್ಟು ದೀರ್ಘ ಸಮಯದವರೆಗೆ ಬಾಹ್ಯಾಕಾಶದಲ್ಲಿ ಬದುಕಿ ಬಂದ ಆ ಗಗನಯಾತ್ರಿಗಳ ಆತ್ಮವಿಶ್ವಾಸದಲ್ಲಿ ಶೇ. 1ರಷ್ಟು ನಮ್ಮ ಬದುಕಿನಲ್ಲಿ ಬಂದರೆ ಸಾಕು ನಾವು ಬಯಸಿದ ಗುರಿ ಮುಟ್ಟಬಹುದು ಏನಂತೀರಿ?



Click it and Unblock the Notifications