Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
ಏಪ್ರಿಲ್ 1ನೇ ತಾರೀಖು ಅಂದ್ರೆ ನೆನಪಾಗೋದು ಮೂರ್ಖರ ದಿನ. ಚಿಕ್ಕವರಿಂದ ಹಿಡಿದು ಹಿರಿಯರು ಸಹ ಏಪ್ರಿಲ್ ಫೂಲ್ ದಿನದಂದು ಯಾರನ್ನಾದರು ಮೂರ್ಖರನ್ನಾಗಿ ಮಾಡಿ ತಮಾಷೆ ಮಾಡುತ್ತಾರೆ. ನಾವು ಸಹ ಚಿಕ್ಕವರಿದ್ದಾಗ ಇಂತಹ ಕುಚೇಷ್ಟೇಗಳ ಮೂಲಕ ಏಪ್ರಿಲ್ ಫೂಲ್ ದಿನ ಆಚರಿಸಿದ್ದು ನೆನಪಿಸಿಕೊಳ್ಳಬಹುದು.
ಇನ್ನು ಏಪ್ರಿಲ್ ಫೂಲ್ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಂಭವವೂ ಇದೆ. ಕೆಲವೊಂದು ಬಾರಿ ಬೇರೆಯವರನ್ನು ಮೂರ್ಖರನ್ನಾಗಿ ಮಾಡುವ ಭರದಲ್ಲಿ ಅವರ ಜೀವಕ್ಕೂ ಹಾನಿಯಾಗುವ ಅಪಾಯವಿರುತ್ತದೆ. ಆದ್ರೆ ಈ ಏಪ್ರಿಲ್ ಫೂಲ್ ಹುಟ್ಟಿಕೊಂಡಿದ್ದು ಎಲ್ಲಿ? ಯಾಕಾಗಿ ಮೂರ್ಖರ ದಿನ ಆಚರಿಸುತ್ತಾರೆ.? ಇದರ ಹಿಂದಿರುವ ಇತಿಹಾಸವೇನು ಎಂಬುದನ್ನು ನಾವಿಂದು ತಿಳಿಯೋಣ.

ಪ್ರತಿ ವರ್ಷ ಏಪ್ರಿಲ್ 1 ರಂದು ಮೂರ್ಖರಿಗೂ ಒಂದು ದಿನ ಎಂದು ಆಚರಿಸಲಾಗಿದೆ. ಆದರೆ ಈ ದಿನ ಕೆಲವು ಕಂಪನಿಗಳಿಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಹಾಗೂ ಮಾರ್ಕೆಟಿಂಗ್ ಮಾಡಲು ಈ ದಿನವನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತವೆ.
ಇನ್ನು ಏಪ್ರಿಲ್ ಫೂಲ್ ಯಾವಾಗ ಹುಟ್ಟಿಕೊಂಡಿತು ಎಂದು ಹುಡುಕಾಡಲು ನಿಂತರೆ ಕಾಲ ನಮ್ಮನ್ನು 15ರ ಶತಮಾನಕ್ಕೆ ಕರೆದೊಯ್ಯುತ್ತದೆ. ಅದು ರೌಸಿಲೋನ್ ಮತ್ತು ಫ್ರಾನ್ಸ್ ಜೂಲಿಯನ್ ಕ್ಯಾಲೆಂಡರ್‌ನ ಯುಗವಾಗಿದೆ. ಇಲ್ಲಿ ಫ್ರಾನ್ಸ್ ಜೂಲಿಯನ್ ಕ್ಯಾಲೆಂಡರ್ ಅಂತ್ಯಗೊಂಡು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಳ್ಳಲು ಮುಂದಾದಾಗ ಏಪ್ರಿಲ್ 1 ರಿಂದ ಆರಂಭವಾಗುತ್ತಿದ್ದ ಹೊಸ ವರ್ಷ ಮುಂದೆ ಜನವರಿ 1ಕ್ಕೆ ಬದಲಾಯಿತು.
ಇಷ್ಟು ವರ್ಷ ಏಪ್ರಿಲ್ ನಮಗೆ ಹೊಸ ವರ್ಷ ಎಂದು ನಂಬಿದ್ದ ಅವರನ್ನು ಮೂರ್ಖರು ಎಂದು ಕರೆದರು. ಹೀಗಾಗಿ ಅಲ್ಲಿಂದ ಏಪ್ರಿಲ್ 1 ಮೂರ್ಖರ ದಿನವನ್ನಾಗಿ ಆಚರಿಸಲಾಯಿತು ಎಂದು ಇತಿಹಾಸಕಾರರ ಉಲ್ಲೇಖವಿದೆ.
ಮತ್ತೊಂದು ಸಿದ್ಧಾಂತದ ಪ್ರಕಾರ, ಜೆಫ್ರಿ ಚೌಸರ್ ಅವರ 14ನೇ ಶತಮಾನದ ದಿ ಕ್ಯಾಂಟರ್ಬರಿ ಟೇಲ್ಸ್ ಎಂಬ ಕಥನ ಸಂಕಲದ ಸುತ್ತ ಸುತ್ತುತ್ತದೆ. ಈ ಕಥೆಗಳಲ್ಲಿ ಒಂದು ಕಡೆ ನರಿ ಮತ್ತು ಹುಂಜದ ಕಥೆ ಬರುತ್ತದೆ. ಈ ಕಥೆ ಮಧ್ಯದಲ್ಲಿ ಒಂದು ವಿರಾಮ ಬರುತ್ತದೆ. ಇಲ್ಲಿ ದಿನಾಂಕವನ್ನು ಅವರು ಉಲ್ಲೇಖಿಸುವಾಗ ಈ ಘಟನಾವಳಿಯೂ ಮಾರ್ಚ್ 32ರಂದು ಸಂಭವಿಸಿತು ಅಥವಾ 'Syn March bigan thritty dayes and two' ಎಂದು ಉಲ್ಲೇಖಿಸಿದ್ದಾರೆ. ಇದರ ಅರ್ಥ ಆ ದಿನ ಏಪ್ರಿಲ್ 1 ಎಂದು ನಂಬಲಾಗಿದೆ.
ಆದರೆ ಈ ದಿನಾಂಕದ ಉಲ್ಲೇಕವನ್ನು ಹಲವರು ಮುದ್ರಣದಲ್ಲಿ ಆಗಿರುವ ದೋಷ ಎಂದು ಸಹ ಹೇಳುತ್ತಾರೆ. ಆದರೆ ಏಪ್ರಿಲ್ ಫೂಲ್ ಕುರಿತು ಮೊದಲ ಬಾರಿಗೆ ಉಲ್ಲೇಖವಿರುವ ಪುಸ್ತಕವೆಂದರೆ ಅದು ಜೆಫ್ರಿ ಚೌಸರ್ ಅವರ ದಿ ಕ್ಯಾಂಟರ್ಬರಿ ಟೇಲ್ಸ್ ಪುಸ್ತಕವಾಗಿದೆ. ಈ ನರಿ ಮತ್ತು ಹುಂಜದ ಮೂರ್ಖತನದ ಕಥೆಯಲ್ಲಿ ಮೂರ್ಖರ ದಿನ ಎಂದು ಉಲ್ಲೇಖ ಸಿಗುತ್ತದೆ.
ಈ ಕಥೆಯಲ್ಲಿ ನರಿಯ ಮೋಸದ ಜಾಲಕ್ಕೆ ಕೋಳಿಯೊಂದು ಹೇಗೆ ಬಿತ್ತು ಎಂದು ವಿವರಿಸುತ್ತಾರೆ ಕವಿ. ಒಂದೂರಲ್ಲಿ ಕೋಳಿ ಒಳ್ಳೆಯ ಕಂಠದಿಂದ ಕೂಗುತ್ತಿತ್ತು ನಿತ್ಯ ಸೂರ್ಯೋದಕ್ಕೆ ಅದರ ಕೂಗು ಸಂಗೀತದಂತೆ ಕೇಳುತ್ತಿತ್ತು. ಆದರೆ ಆ ಕಾಡಿನಲ್ಲಿ ಒಂದು ನರಿಯೂ ಇತ್ತು. ಆ ನರಿ ಕೋಳಿಯನ್ನು ಹಿಡಿದು ತಿನ್ನಲು ಮುಂದಾಗಿ ಅದರ ಹತ್ತಿರ ಬಂದಿತ್ತು. ಆದ್ರೆ ನರಿ ನೋಡಿ ಹೆದರಿದ ಕೋಳಿ ಭಯಪಟ್ಟಿತ್ತು. ಆದ್ರೆ ನರಿ ನನ್ನ ನೋಡಿ ಭಯಪಡಬೇಡ ನಾನು ನಿನ್ನ ಸಂಗೀತ ಕೇಳಲು ಬಂದಿದ್ದೇನೆ ಎಂದಿತು. ಈ ಮಾತು ನಂಬಿ ನರಿಯೊಂದಿಗೆ ಕೋಳಿ ಸ್ನೇಹ ಬೆಳೆಸಿತು.
ಹೀಗೆ ನರಿ ಕಾಡಿನಲ್ಲಿ ನನ್ನ ಸ್ನೇಹಿತರು ನಿನ್ನ ಸಂಗೀತ ಕೇಳಬೇಕೆಂದಿದ್ದಾರೆ. ಅವರ ಬಳಿ ಹಾಡು ಎಂದು ಕೋಳಿಯನ್ನು ಬಾಚಿಕೊಂಡು ಓಡತೊಡಗಿತು. ಆದರೆ ಕಥೆಯಲ್ಲಿ ಮುಂದೆ ಕೋಳಿ ಜೀವ ಉಳಿಸಿಕೊಳ್ಳುತ್ತದೆ. ಈ ಕಥೆಯಲ್ಲಿ ಮೂರ್ಖರ ದಿನ ಎಂಬ ಉಲ್ಲೇಖವಿದ್ದು, ಇಲ್ಲಿಂದ ಏಪ್ರಿಲ್ ಫೂಲ್ಸ್ ಡೇ ಆರಂಭವಾಯಿತು ಎಂದು ನಂಬಲಾಗಿದೆ.
ಮತ್ತೊಂದು ಕಥೆಯ ಪ್ರಕಾರ, ರೋಮನ್ ಸಾಮ್ರಾಜ್ಯದಲ್ಲಿ ಕಾನ್ಸ್ಟಂಟೈನ್ ಎಂಬ ರಾಜನಿದ್ದ, ಅವನ ಸಾಮ್ರಾಜ್ಯದಲ್ಲಿ ಮೂರ್ಖರೇ ತುಂಬಿದ್ದರು, ಅವರೆಲ್ಲಾ ಸೇರಿ ನಿನ್ನ ಆಡಳಿತ ತುಂಬಾನೇ ಚೆನ್ನಾಗಿದೆ ಎಂದು ನಂಬಿಸಿದ್ದರು. ಆ ಖುಷಿಯಲ್ಲಿ ಅವನು ಅವರಲ್ಲಿ ಒಬ್ಬನಿಗೆ ಆಡಳಿತ ನಡೆಸಲು ಅನುಮತಿ ನೀಡಿದ, ಅವನು ಏನೂ ಮಾಡದೆ ಆ ದಿನ ಕಳೆದ ಅಂದಿನಿಂದ ಮೂರ್ಖರ ದಿನ ಆಚರಣೆಗೆ ಬಂತು ಎಂಬ ಕತೆಯಿದೆ.
ಇಂದಿಗೂ ಇದು ನಿಗೂಢ
ಆದರೆ ಏಪ್ರಿಲ್ ಫೂಲ್ಸ್ ಡೆ ಎಲ್ಲಿ ಹುಟ್ಟಿಕೊಂಡಿತು ಎಂಬುದು ಇಂದಿಗೂ ನಿಗೂಢವಾಗಿಯೇ ಇದೆ. ಆದರೆ 18ನೇ ಶತಮಾನದಲ್ಲಿ ಯೂರೋಪ್ ಹಾಗೂ ಬ್ರಿಟನ್‌ನಲ್ಲಿ ಇದು ವ್ಯಾಪಕವಾಗಿ ಹಬ್ಬಿತ್ತು.



Click it and Unblock the Notifications