Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಮನುಷ್ಯರಿಗೆ ಮಾತ್ರ ಸ್ವಿಮ್ಮಿಂಗ್ ಪೂಲ್ ಸಾಕಾ? ಮಂಗಳಗಳ ಸ್ವಿಮ್ಮಿಂಗ್ ಪೂಲ್ ಪಾರ್ಟಿ: ವೈರಲ್ ವೀಡಿಯೋ
ಉರಿ ಬಿಸಿಲು , ಆಹಾ ಎಷ್ಟೊಂದು ನೀರಿದೆ ಇಲ್ಲಿ, ಬನ್ನಿ ಬನ್ನಿ ಆಟ ಆಡೋಣ ಎಂದು ಎಲ್ಲಾ ಮಂಗಗಳು ಬಂದು ಸ್ವಿಮ್ಮಿಂಗ್ ಪೂಲ್‌ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಇದನ್ನು ಸಾಮಾಜಿಕ ತಾಣ Xನಲ್ಲಿ ಶೇರ್ ಮಾಡಿದ್ದು ವಿಡಿಯೋ ನೋಡಿದವರು ಮಂಗಗಳ ಖುಷಿ ನೋಡಿ ಖುಷಿ ಪಡುತ್ತಿದ್ದಾರೆ.
ಉರಿ ಬಿಸಿಲು, ಕೆಲವು ಕಡೆ ಉಷ್ಣಾಂಶ 47ಡಿಗ್ರಿC ದಾಟಿದೆ, ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರಿಗೆ ಒಳಗಡೆ ಹೊರಗಡೆ ಓಡಾಡುವುದಕ್ಕೇ ತುಂಬಾ ಕಷ್ಟವಾಗುವುದು. ಈ ಬಿಸಿಲಿನಲ್ಲಿ ಮನುಷ್ಯರಿಗಿಂತ ಹೆಚ್ಚು ಒದ್ದಾಡುತ್ತಿರುವುದು ಪ್ರಾಣಿಗಳು.

ಮನುಷ್ಯನಾದರೆ ಫ್ಯಾನ್, ಎಸಿ ಅಂತ ಬಿಸಿಲಿನಿಂದ ರಕ್ಷಣೆ ಪಡೆಯುತ್ತಾರೆ, ಆದರೆ ಪ್ರಾಣಿಗಳು ಕುಡಿಯೋಕೆ ನೀರು ಇಲ್ಲದೆ ಪರದಾಡುತ್ತಿವೆ. ಅವುಗಳಿಗೆ ಸ್ವಲ್ಪ ನೀರು ಕಂಡರೆ ಸಾಕು ಕುಣಿದು ಕುಪ್ಪಿಳಿಸುವಷ್ಟು ಖುಷಿಯಾಗುತ್ತದೆ ಅವುಗಳಿಗೆ. ಈ ಮಂಗಗಳಿಗೆ ಕೂಡ ಸ್ವಿಮ್ಮಿಂಗ್ ಪೂಲ್ ನೋಡಿ ಆಹಾ ಕೊನೆಗೂ ನೀರಿರುವ ಕೊಳ ಸಿಕ್ಕಿದೆ ಎಂದು ಜಂಪ್ ಮಾಡಿವೆ. ನಗರದಲ್ಲಿ ಆದರೆ ನೈಸರ್ಗಿಕ ಕೊಳಗಳು ಸಿಗುವುದು ಕಷ್ಟ, ಹಾಗಾಗಿ ಸ್ವಿಮ್ಮಿಂಗ್ ಪೂಲ್ ನೋಡಿ ಖುಷಿಯಾಗಿದ್ದಾರೆ.
ಖುಷಿಯಿಂದ ಈಜಾಡುತ್ತಿವೆ
ಮಂಗಳಗಳು ಸ್ವಿಮ್ಮಿಂಗ್ ಫೂಲ್ ನಲ್ಲಿ ಖುಷಿಯಿಂದ ಈಜಾಡುತ್ತಿವೆ, ಈ ಬಿಸಿಲಿನಲ್ಲಿ ಈ ರೀತಿ ಮೈ ತಂಪಾಗಿಸುತ್ತಿದೆ. ಅವುಗಳಿಗೆ ಏನು ಗೊತ್ತು ಅದು ಸ್ವಿಮ್ಮಿಂಗ್ ಪೂಲ್ ಅಂತ, ನೀರು ಕಂಡಾಗ ಸ್ವರ್ಗ ಸಿಕ್ಕಂತೆ ಖುಷಿಯಾಗಿದೆ, ಖುಷಿಯಿಂದ ಈಜಾಡುತ್ತಿವೆ. ಮನುಷ್ಯರಿಗೆ ಮಾತ್ರ ಈ ಸುಖ ಸಾಕಾ? ನಮಗೂ ಇರಲಿ ಎಂದು ಖುಷಿಯಿಂದ ಈಜಾಡುತ್ತಿವೆ.
#Monkeys are back #swimming at #Raheja #Borivali
— Mumbai March (@MumbaiMarch) May 1, 2024
Enjoying the #MumbaiHeat @baxirahul @mumbaimatterz @RoadsOfMumbai pic.twitter.com/CG7vNFaT1f
ನಾಯಿಯು ಮಳೆಗೆ ಕುಣಿದು ಕುಪ್ಪಳಿಸುವ ವೀಡಿಯೋ ವೈರಲ್ ಆಗಿತ್ತು
ಈ ಬಿಸಿಲಿಗೆ ಪ್ರಾಣಿಗಳಿಗೆ ಸಾಕಾಗಿ ಹೋಗಿವೆ, ಬಿರು ಬಿಸಿಲಿನ ನಡುವೆ ಮಳೆ ಬಂದಾಗ ನಾಯಿಯೊಂದು ಖುಷಿಯಿಂದ ಕುಪ್ಪಳಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು.ಆ ವೀಡಿಯೋ ನೋಡಿದಾಗ ತಿಳಿಯುತ್ತೆ ಅವುಗಳಿಗೆ ಈ ಬಿಸಿಲಿನ ತಾಪ ಎಷ್ಟೊಂದು ಬಸವಳಿದೆ ಎಂದು. ಜನರೆಲ್ಲಾ ಒಂದು ಮಳೆ ಬರಲಿ ಎಂದು ಕಾಯುತ್ತಿದ್ದರು, ಮಳೆ ಬಂದಾಗ ಫೋಟೋ, ವೀಡಿಯೋ ತೆಗೆದು ಸ್ಟೇಟಸ್‌ನಲ್ಲಿ ಹಾಕಿ ಜನ ಸಂಭ್ರಮಿಸಿದರೆ ಈ ನಾಯಿ ಮಳೆಯನ್ನು ತುಂಬಾನೇ ಚೆನ್ನಾಗಿ ಸ್ವಾಗತಿಸದೆ, ಸಾಮಾನ್ಯವಾಗಿ ನಾಯಿಗಳು ಮಳೆ ನೆನೆಯುವುದಿಲ್ಲ, ಮಳೆ ಬಂದ ತಕ್ಷಣ ಮಳೆ ಬೀಳದೆ ಇರುವ ಕಡೆ ಹೋಗಿ ನಿಲ್ಲುತ್ತದೆ, ಅದರೆ ಈ ನಾಯಿ ಖುಷಿಯಿಂದ ಕುಪ್ಪಳಿಸುತ್ತಿದೆ ಎಂದ ಮೇಲೆ ಪಾಪ ಎಷ್ಟೊಂದು ಖುಷಿಯಾಗಿರಬೇಡ.
ಮೂಷಿಕ ಕೂಡ ಖುಷಿಯಿಂದ ಕುಪ್ಪಳಿಸುತ್ತಿರುವ ದೃಶ್ಯ ಗಮನ ಸೆಳೆದಿತ್ತು
ನಾಯಿಯಂತೆಯೇ ಮೂಷಿಕ ಕೂಡ ಮಳೆ ಬಂದಾಗ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ಇಂಥ ದೃಶ್ಯಗಳು ಕಂಡು ಬರುವವುದು ತುಂಬಾನೇ ಅಪರೂಪ, ಆದರೆ ಈ ಬಾರಿಯ ಬಿಸಿಲು ಎಲ್ಲಾ ಪ್ರಾಣಿಗಳನ್ನೂ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಎಲ್ಲರು ಮಳೆಗಾಗಿ ಅಷ್ಟೊಂದು ಕಾತುರದಿಂದ ಕಾಯುತ್ತಿದ್ದಾರೆ.
ಉರಿ ಬಿಸಿಲಿನಲ್ಲಿ ಪ್ರಾಣಿಗಳ ಮೇಲಿಯೂ ಇರಲಿ ಕನಿಕರ
ಪ್ರಾಣಿ-ಪಕ್ಷಿಗಳು ಕುಡಿಯುವುದಕ್ಕೆ ನೀರೂ ಇಲ್ಲದೆ ಸಾಯುತ್ತಿವೆ, ಆದ್ದರಿಂದ ಅವುಗಳ ಮೇಲೆ ಮನುಷ್ಯ ಕನಿಕರ ತೋರಿಸಬೇಕು. ಮನೆಯ ಬಳಿ ಪಕ್ಷಿಗಳು ಬಂದು ಕುಡಿಯಲು ನೀರು ಇಡಿ. ಇನ್ನು ಮನೆಯಲ್ಲಿರುವ ಪ್ರಾಣಿಗಳನ್ನು ತಂಪಾದ ಕಡೆ ಕಟ್ಟಿ, ಬೀದಿ ಪ್ರಾಣಿಗಳ ಮೇಲೂ ಇರಲಿ ಕನಿಕರ.
ಈ ಬಿಸಿಲಿನಲ್ಲಿ ಮುಖ್ಯವಾಗಿ ಬೇಕಾಗಿರುವುದು ನೀರು ಆದ್ದರಿಂದ ಪ್ರಾಣಿಗಳಿಗೆ ನಿರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.



Click it and Unblock the Notifications
