Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹೋಮೋ ಸೇಪಿಯನ್ಸ್ ಭೂಮಿ ಮೇಲೆ ಉಳಿದಿರುವ ಏಕೈಕ ಮಾನವ ಪ್ರಭೇದ..!
ಭೂಮಿ ರೂಪುಗೊಂಡು ಕೋಟ್ಯಾನು ಕೋಟಿ ವರ್ಷಗಳ ಬಳಿಕ ಭೂಮಿ ಮೇಲೆ ಜೀವಿಗಳು ಹುಟ್ಟಿರುವುದನ್ನು ನಾವು ತಿಳಿದುಕೊಂಡಿದ್ದೇವೆ. ಭೂಮಿ ಮೇಲೆ ಮಾನವ ಕಾಲಿಡುವ ಮುನ್ನ ಹಲವು ಜೀವಿಗಳು ಬದುಕಿ ನಶಿಸಿದ್ದವು, ಹಾಗೆ ಮಾನವ ಕೂಡ ಏಕಾಏಕಿ ಭೂಮಿ ಮೇಲೆ ಹುಟ್ಟಿದ್ದಲ್ಲ, ಚಾರ್ಲ್ಸ್ ಡಾರ್ವಿನ್‌ನ ವಿಕಾಸದ ಸಿದ್ದಾಂತದಲ್ಲಿ ಮಾನವನ ಹುಟ್ಟು ಹೇಗಾಯಿತು ಎಂಬುದನ್ನು ವಿವರಿಸಿದ್ದಾನೆ.
ಹಾಗೆ ಭೂಮಿ ಮೇಲೆ ನಾವು ಹುಟ್ಟುವ ಮೊದಲೇ ಅದೆಷ್ಟೋ ಜೀವಿಗಳು ಬದುಕಿ, ನಶಿಸಿ ಹೋಗಿವೆ. ಹಾಗೆ ಮಾನವನ ಬೆಳವಣಿಗೆ ಕೂಡ ಒಂದೇ ರಾತ್ರಿಯಲ್ಲಿ ನಡೆದಿದ್ದಲ್ಲ. ಹಾಗೆ ಮಾನವರಲ್ಲೂ ಹಲವು ಪ್ರಕಾರಗಳು ಭೂಮಿ ಮೇಲೆ ಜೀವಿಸಿದ್ದವು. ಆದ್ರೆ ಭೂಮಿ ಮೇಲೆ ಬದುಕಿರುವ ಹಾಗೆ ಏಕೈಕ ಮಾನವ ಜಾತಿ ಅಂದರೆ ಅದು ಹೋಮೋ ಸೇಪಿಯನ್ಸ್ ಅಂತೆ.

ಹಲವು ಪ್ರಾಣಿಗಳು ರೂಪಾಂತರಗೊಂಡಿವೆ. ಅಳಿವು ಇತಿಹಾಸ ಸೇರಿವೆ, ಹಾಗೆ ಕೆಲವು ಅಳಿವಿನ ಅಂಚಿನಲ್ಲಿವೆ. ಆದ್ರೆ ಮಾನವರು ಮಾತ್ರವೇ ಈ ಭೂಮಿ ಮೇಲೆ ಕೋಟಿ ಕೋಟಿ ವರ್ಷಗಳು ಕಳೆದರು ಹಾಗೆಯೇ ಅಭಿವೃದ್ಧಿ ಹೊಂದಿದ್ದಾರೆ. ಭೂಮಿ ಮೇಲೆ ಬದುಕುಳಿದಿರುವ ಅತ್ಯಂತ ಹಳೆಯ ಪ್ರಾಣಿ ಎಂದೆನಿಸಿದ್ದಾರೆ.
ಸುಮಾರು 6 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಮಂಗಗಳಂತಹ ಜೀವಿಗಳು ಎರಡು ಕಾಲುಗಳ ಬಳಸಿ ನಡೆಯಲು ಆರಂಭಿಸಿದಾಗ ಮಾನವನ ಇತಿಹಾಸ ಆರಂಭಗೊಳ್ಳುತ್ತದೆ. ಇದೇ ಜೀವಿಗಳು ಮುಂದೆ ಹಲವು ವಂಶಸ್ಥರಿಗೆ ಕಾರಣವಾಗಿತ್ತು. ನಾವಿಂದು ಈ ಎರಡು ಕಾಲಿನ ಮೇಲೆ ನಡೆಯಲು ಆರಂಭಿಸಿದ ಪ್ರಾಣಿಯ ವಂಶಸ್ಥರಾಗಿದ್ದೇವೆ.
ಆದ್ರೆ ನಮ್ಮ ಪೂರ್ವಜನರಲ್ಲಿ ಹಲವರು ವಿನಾಶ ಹೊಂದಿರು. ಮೊದಲು ಹೋಮೋ ಎರ್ಗಾಸ್ಟರ್ ಕೂಡ ಒಂದು ಜಾತಿಯಾಗಿದೆ. ಇವರು ಬೇಟೆಯಾಡಿ ಆಹಾರ ಪಡೆಯುವುದನ್ನು ಕಲಿತ್ತಿದ್ದರು. ಟರ್ಕಿಯಿಂದ ಚೀನಾವರೆಗೂ ಇವರು ಹಬ್ಬಿದ್ದರು. ಹಾಗೆ ಇವರು ಆಹಾರ ಸಂಗ್ರಹಿಸಿ ಬೇಕಾದಾಗ ಬಳಸುತ್ತಿದ್ದರು. ಇವರು 1,20,000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಬಂದಿದ್ದರು. ಆದ್ರೆ ಅವರ ವಂಶ ಮುಂದುವರೆಯದೆ ನಶಿಸಿ ಹೋಗಿತ್ತು.
ಹಲವು ಮಾನವ ಜಾತಿಯೂ ನೈಸರ್ಗಿಕ ವಿಕೋಪದಿಂದಾಗಿಯೇ ನಶಿಸಿತು ಎಂದು ನಂಬಲಾಗಿದೆ. ಆದ್ರೆ ಹೋಮೋಫ ಸೇಪಿಯನ್ಸ್ ಭೂಮಿ ಮೇಲೆ ಬದುಕುಳಿದರು. ಆದರೆ ಏಷ್ಯಾ ಖಂಡದಲ್ಲಿ ಉಂಟಾದ ಬೃಹತ್ ಜ್ವಾಲಾಮುಖಿಯು ಹಲವು ಪ್ರಾಣಿಗಳ, ಮಾನವ ಜಾತಿಯ ಅಂತ್ಯಕ್ಕೆ ಕಾರಣವಾಗಿತ್ತು ಎಂದು ನಂಬಲಾಗಿದೆ.
ಈ ಜ್ವಾಲಾಮುಖಿ ಸ್ಫೋಟದ ನಂತರದ 40,000 ವರ್ಷಗಳಲ್ಲಿ ಹೋಮೋ ಎರೆಕ್ಟಸ್ ಕ್ರಮೇಣ ಕಣ್ಮರೆಯಾದರು, ಹೋಮೋ ಸೇಪಿಯನ್ಸ್‌ಗಿಂತ ದೈಹಿಕವಾಗಿ ಬಲಶಾಲಿ ಮತ್ತು ಹೆಚ್ಚು ದೃಢವಾಗಿದ್ದರೂ ಕೂಡ ನೈಸರ್ಗಿಕವಾಗಿ ಅವರು ನಾಶವಾದರು. ಆದ್ರೆ ಹೋಮೋ ಸೇಫಿಯನ್ಸ್ ದೊಡ್ಡ ಗಾತ್ರದ ಮೆದುಳು ಹೊಂದಿದ್ದರು. ಬದಲಾಗುತ್ತಿರುವ ಪರಿಸರಕ್ಕೆ ಅನುಗುಣವಾಗಿ ಅವರು ತಮ್ಮ ಪರಿಸರವನ್ನು ಬದಲಾಯಿಸಿದರು. ಚಳಿಗಾಲದಲ್ಲಿ ದಪ್ಪನೆಯ ಬಟ್ಟೆ, ಬೆಂಕಿ ಕಂಡುಹಿಡಿದರು. ಬೇಸಿಗೆಯಲ್ಲಿ ತಂಪಗಿರುವಂತೆ ನೋಡಿಕೊಂಡರು, ಮಳೆಯಿಂದ ಪಾರಾಗಲು ಆಶ್ರಯ ಪಡೆದರು. ಹಾಗೆ ಜ್ವಾಲಾಮುಖಿ, ಕಾಡ್ಗಿಚ್ಚಿನ ಸಮಯದಲ್ಲಿ ಆ ಜಾಗ ತೊರೆದು ಬೇರೆಡೆಗೆ ವಲಸೆ ಹೋಗಲು ಆರಂಭಿಸಿದರು.
ಸದ್ಯ ಈಗ ಭೂಮಿ ಮೇಲೆ ಬದುಕಿರುವ ಅತ್ಯಂತ ಹಳೆಯ ಜೀವಿ ಅಂದರೆ ಹೋಮೋ ಸೇಪಿಯನ್ಸ್ ಅಂದರೆ ನಾವು. ನಮಗಿಂತ ಹಳೆಯ ಜೀವಿ ಈ ಭೂಮಿ ಮೇಲೆ ಇಲ್ಲವಂತೆ. ಇದ್ದರೂ ಆ ಜೀವಿಗಳಲ್ಲಿ ರೂಪಾಂತರವಾಗಿದೆ. ಹಾಗೆ ಅಳಿವಿನ ಅಂಚಿಗೆ ಬಂದು ತಲುಪಿವೆ. ಆದ್ರೆ ಮಾನವ ಮಾತ್ರ ಇಂದಿಗೂ ತನ್ನ ಜನಸಂಖ್ಯೆ ವಿಸ್ತರಿಸುತ್ತಲೇ ಇದ್ದಾನೆ.
ಅಳಿದು ಹೋದ ಮಾನವ ಪ್ರಭೇದಗಳು
1. ಹೋಮೋ ಎರೆಕ್ಟಸ್ (1.8 ಮಿಲಿಯನ್ - 70,000 ವರ್ಷಗಳ ಹಿಂದೆ)
2. ಹೋಮೋ ಹೈಡೆಲ್ಬರ್ಜೆನ್ಸಿಸ್ (600,000 - 300,000 ವರ್ಷಗಳ ಹಿಂದೆ)
3. ಹೋಮೋ ನಿಯಾಂಡರ್ತಲೆನ್ಸಿಸ್ (200,000 - 30,000 ವರ್ಷಗಳ ಹಿಂದೆ)
4. ಹೋಮೋ ಫ್ಲೋರೆಸಿಯೆನ್ಸಿಸ್ (100,000 - 60,000 ವರ್ಷಗಳ ಹಿಂದೆ)
5. ಹೋಮೋ ನಲೇಡಿ (236,000 - 335,000 ವರ್ಷಗಳ ಹಿಂದೆ)
6. ಹೋಮೋ ಲುಜೋನೆನ್ಸಿಸ್ (50,000 - 67,000 ವರ್ಷಗಳ ಹಿಂದೆ)
7. ಹೋಮೋ ರೋಡೆಸಿಯೆನ್ಸಿಸ್ (125,000 - 100,000 ವರ್ಷಗಳ ಹಿಂದೆ)
8. ಹೋಮೋ ಸೆಪ್ರಾನೆನ್ಸಿಸ್ (450,000 - 350,000 ವರ್ಷಗಳ ಹಿಂದೆ)
9. ಹೋಮೋ ಪೂರ್ವವರ್ತಿ (1.2 ಮಿಲಿಯನ್ - 800,000 ವರ್ಷಗಳ ಹಿಂದೆ)
10. ಹೋಮೋ ಹ್ಯಾಬಿಲಿಸ್ (2.8 ಮಿಲಿಯನ್ - 1.4 ಮಿಲಿಯನ್ ವರ್ಷಗಳ ಹಿಂದೆ)



Click it and Unblock the Notifications