2026ರ ಹಿಂದೂ ಕ್ಯಾಲೆಂಡರ್; ಯಾವ ದಿನ ಶುಭ ಮುಹೂರ್ತ, ಹಬ್ಬಗಳ ಸಮಯ, ಗ್ರಹಣ ಇತರೆ ಸಂಪೂರ್ಣ ಮಾಹಿತಿ!

2025 ಮುಗಿಯುವ ಹಂತ ತಲುಪಿದ್ದೇವೆ. 2026ನೇ ವರ್ಷವನ್ನು ಸ್ವಾಗತಿಸಲು ಸಿದ್ದವಾಗುತ್ತಿದ್ದೇವೆ. 2025ರಲ್ಲಿ ಹತ್ತಾರು ಹಬ್ಬಗಳು ರಜೆಗಳು ಹಾಗೆ ಗ್ರಹಣಗಳ ಕುರಿತಾಗಿ ವಿವರಿಸಲಾಗಿತ್ತು. 4 ಗ್ರಹಣಗಳ ಪೈಕಿ 2 ಗ್ರಹಣಗಳು ಭಾರತದಲ್ಲಿ ಗೋಚರವಾಗಿದ್ದವು. ಹಾಗೆ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬ ಮುಗಿಯುತ್ತಿದ್ದಂತೆ ಹೊಸ ವರ್ಷ ಆರಂಭವಾಗಲಿದೆ.

ಇನ್ನು ಮುಂಬರುವ 2026ನೇ ವರ್ಷದಲ್ಲೂ ಕೂಡ ಹಲವು ಹಬ್ಬಗಳು ರಜೆಗಳು, ಶುಭ ಮುಹೂರ್ತಗಳು, ಗ್ರಹಣಗಳು, ರಾಶಿ ಬದಲಾವಣೆಗಳಂತಹ ವಿಚಾರಗಳ ನೋಡಬಹುದು. ಹಾಗೆ 2026ರ ಈ ವರ್ಷವು ಹಿಂದೂಗಳ ಪಾಲಿಗೆ ಬಹು ಮುಖ್ಯವಾಗಿರಲಿದೆ. ಸಾಮಾನ್ಯವಾಗಿ ಹಿಂದೂಗಳು ಯುಗಾದಿಯಂದು ಹೊಸ ವರ್ಷ ಎಂಬುದಾಗಿಯೂ ಪರಿಗಣಿಸುವುದು ನೋಡಬಹುದು.

Hindu Calendar 2026 Auspicious Time

ನಾವಿಂದು 2026ರಲ್ಲಿ ಬರುವಂತಹ ಹಬ್ಬಗಳ ಪಟ್ಟಿ, ಪ್ರಮುಖ ದಿನಾಂಕಗಳು, ರಜಾ ದಿನಗಳು, ಶುಭ ಮುಹೂರ್ತಗಳ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ. 2026ರಲ್ಲಿ ನಾವು ನೆನಪಿಡಬೇಕಾದ ಪ್ರಮುಖ ದಿನಗಳು ಯಾವುದು ಎಂಬುದನ್ನು ಒಂದೊಂದೇ ತಿಂಗಳುಗಳ ಮೂಲಕ ತಿಳಿದುಕೊಳ್ಳೋಣ.

ಜನವರಿ

ಜನವರಿಯಲ್ಲಿ ಹಿಂದುಗಳ ಪಾಲಿಗೆ ಪ್ರಮುಖ ಹಬ್ಬಗಳಿವೆ. ವರ್ಷದ ಮೊದಲ ತಿಂಗಳು ಯಾವಾಗಲು ಶುಭವಾಗಿರಬೇಕು ಎಂಬ ನಂಬಿಕೆಗಳಿವೆ. ಹಾಗಾದ್ರೆ ಈ ತಿಂಗಳಲ್ಲಿ ಯಾವ ದಿನ ಶುಭ ಮುಹೂರ್ತಗಳ ಹೊಂದಿದೆ ಎಂಬುದನ್ನು ತಿಳಿಯೋಣ.

1 ಗುರುವಾರ- ಪ್ರದೋಷ್‌ ವ್ರತ (ಶುಕ್ಲ)
3 ಶನಿವಾರ- ಪೌಷಾ ಪೂರ್ಣಿಮೆ ವ್ರತ
6 ಮಂಗಳವಾರ- ಸಂಕಷ್ಟ ಚತುರ್ಥಿ
14 ಬುಧವಾರ- ಶಟ್ಟಿಲಾ ಏಕಾದಶಿ, ಪೊಂಗಲ್, ಉತ್ತರಾಯಣ, ಮಕರ ಸಂಕ್ರಾಂತಿ
16 ಶುಕ್ರವಾರ- ಪ್ರದೋಷ್‌ ವ್ರತ (ಕೃಷ್ಣ), ಮಾಸಿಕ ಶಿವರಾತ್ರಿ
18 ಭಾನುವಾರ- ಮಾಘ ಅಮಾವಾಸ್ಯೆ
23 ಶುಕ್ರವಾರ - ಬಸಂತ ಪಂಚಮಿ, ಸರಸ್ವತಿ ಪೂಜೆ
29 ಗುರುವಾರ - ಜಯ ಏಕಾದಶಿ
30 ಶುಕ್ರವಾರ - ಪ್ರದೋಷ್‌ ವ್ರತ (ಶುಕ್ಲ)

  • ಹುಣ್ಣಿಮೆ- 3 ಜನವರಿ
  • ಅಮಾವಾಸ್ಯೆ - 18 ಜನವರಿ
  • ಹಬ್ಬ
  • ಮಕರ ಸಂಕ್ರಾಂತಿ- ಈ ದಿನ ಶಬರಿಮಲೆಯಲ್ಲಿ ಜ್ಯೋತಿ ಕಾಣಿಸುವ ವಿಶೇಷ ದಿನವಾಗಿದೆ.

ಫೆಬ್ರವರಿ

ವರ್ಷದ 2ನೇ ತಿಂಗಳಿನಲ್ಲಿಯೂ ಹಲವು ಪ್ರಮುಖ ದಿನಗಳನ್ನು ನೋಡಬಹುದು.

1 ಭಾನುವಾರ- ಮಾಘ ಪೂರ್ಣಮೆ ವ್ರತ
5 ಗುರುವಾರ - ಸಂಕಷ್ಟ ಚತುರ್ಥಿ
13 ಶುಕ್ರವಾರ- ವಿಜಯ ಏಕಾದಶಿ, ಕುಂಭ ಸಂಕ್ರಾಂತಿ
14 ಶನಿವಾರ - ಪ್ರದೋಷ್‌ ವ್ರತ (ಕೃಷ್ಣ)
15 ಭಾನುವಾರ- ಮಹಾಶಿವರಾತ್ರಿ, ಮಾಸಿಕ ಶಿವರಾತ್ರಿ
17 ಮಂಗಳವಾರ - ಫಲ್ಗುಣ ಅಮಾವಾಸ್ಯೆ
27 ಶುಕ್ರವಾರ- ಆಮಲಕಿ ಏಕಾದಶಿ
28 ಶನಿವಾರ- ಪ್ರದೋಷ್‌ ವ್ರತ (ಶುಕ್ಲ)

  • ಹುಣ್ಣಿಮೆ- 1 ಫೆಬ್ರವರಿ
  • ಅಮಾವಾಸ್ಯೆ - 17 ಫೆಬ್ರವರಿ
  • ಸೂರ್ಯ ಗ್ರಹಣ- 17 ಫೆಬ್ರವರಿ

ಮಾರ್ಚ್

2026ನೇ ವರ್ಷದ 3ನೇ ತಿಂಗಳಾದ ಮಾರ್ಚ್‌ನಲ್ಲಿ ಕೂಡ ಹಲವು ದಿನಗಳನ್ನು ವಿಶೇಷ ಎಂದು ಪರಿಗಣಿಸಲಾಗಿದೆ.

3 ಮಂಗಳವಾರ -ಕಾಮ ದಹನ, ಫಲ್ಗುಣ ಪೂರ್ಣಿಮೆ ವ್ರತ
4 ಬುಧವಾರ-ಹೋಳಿ
6 ಶುಕ್ರವಾರ -ಸಂಕಷ್ಟ ಚತುರ್ಥಿ
16 ಸೋಮವಾರ- ಪ್ರದೋಷ್‌ ವ್ರತ (ಕೃಷ್ಣ)
17 ಮಂಗಳವಾರ- ಮಾಸಿಕ ಶಿವರಾತ್ರಿ
19 ಗುರುವಾರ- ಚೈತ್ರ ನವರಾತ್ರಿ, ಯುಗಾದಿ
26 ಗುರುವಾರ -ರಾಮ ನವಮಿ
27 ಶುಕ್ರವಾರ -ಚೈತ್ರ ನವರಾತ್ರಿ ಪಾರಾಯಣ
29 ಭಾನುವಾರ -ಕಾಮ ಏಕಾದಶಿ
30 ಸೋಮವಾರ-ಪ್ರದೋಷ್ ವ್ರತ (ಶುಕ್ಲ)

  • ಹುಣ್ಣಿಮೆ- 3 ಮಾರ್ಚ್
  • ಅಮಾವಾಸ್ಯೆ - 19 ಮಾರ್ಚ್

ಹಬ್ಬ
ಮಾರ್ಚ್‌ 4ರ ಬುಧವಾರದಂದು ಹೋಳಿ ಹಬ್ಬ ಆಚರಿಸಲಾಗುತ್ತದೆ. ಬಣ್ಣಗಳ ಹಬ್ಬ ಎಂದು ಸಹ ಕರೆಯಲಾಗಿದೆ. ಹಾಗೆ 26ರಂದು ರಾಮನವಮಿ ಆಚರಿಸಲಾಗುತ್ತದೆ. ಹಾಗೆ ಯುಗಾದಿ ಕೂಡ ಈ ತಿಂಗಳು ಆಚರಿಸಲಾಗುತ್ತದೆ

ಏಪ್ರಿಲ್

2 ಗುರುವಾರ- ಹನುಮ ಜಯಂತಿ, ಚೈತ್ರ ಪೂರ್ಣಿಮಾ
5 ಭಾನುವಾರ - ಸಂಕಷ್ಟ ಚತುರ್ಥಿ
13 ಸೋಮವಾರ- ವರುಧಿನಿ ಏಕಾದಶಿ
14 ಮಂಗಳವಾರ - ಮೇಷ ಸಂಕ್ರಾಂತಿ
15 ಬುಧವಾರ - ಮಾಸಿಕ ಶಿವರಾತ್ರಿ, ಪ್ರದೋಷ್‌ ವ್ರತ (ಕೃಷ್ಣ)
17 ಶುಕ್ರವಾರ - ವೈಶಾಖ ಅಮಾವಾಸ್ಯೆ
19 ಭಾನುವಾರ - ಅಕ್ಷಯ ತೃತೀಯ
27 ಸೋಮವಾರ- ಮೋಹಿನಿ ಏಕಾದಶಿ
28 ಮಂಗಳವಾರ - ಪ್ರದೋಷ್‌ ವ್ರತ (ಶುಕ್ಲ)

  • ಹುಣ್ಣಿಮೆ- 2 ಏಪ್ರಿಲ್
  • ಅಮಾವಾಸ್ಯೆ - 17 ಏಪ್ರಿಲ್

ಹಬ್ಬಗಳು

ತಿಂಗಳ ಆರಂಭದಲ್ಲಿ ಹನುಮ ಜಯಂತಿ ಹಾಗೆ ಅಕ್ಷಯ ತೃತಿಯ ಆಚರಿಸಲಾಗುತ್ತದೆ.

ಮೇ

1 ಶುಕ್ರವಾರ - ವೈಶಾಖ ಪೂರ್ಣಿಮಾ ವ್ರತ/ ಬುದ್ದ ಪೂರ್ಣಿಮೆ
5 ಮಂಗಳವಾರ- ಸಂಕಷ್ಟ ಚತುರ್ಥಿ
13 ಬುಧವಾರ - ಅಪಾರ ಏಕಾದಶಿ
14 ಗುರುವಾರ -ಪ್ರದೋಷ್‌ ವ್ರತ (ಕೃಷ್ಣ)
15 ಶುಕ್ರವಾರ - ಮಾಸಿಕ ಶಿವರಾತ್ರಿ, ವೃಷಭ ಸಂಕ್ರಾಂತಿ
16 ಶನಿವಾರ - ಜ್ಯೇಷ್ಠ ಅಮಾವಾಸ್ಯೆ/ ಶನಿ ಜಯಂತಿ
27 ಬುಧವಾರ - ಪದ್ಮಿನಿ ಏಕಾದಶಿ
28 ಗುರುವಾರ - ಪ್ರದೋಷ್‌ ವ್ರತ (ಶುಕ್ಲ)
31 ಭಾನುವಾರ - ಪೂರ್ಣಿಮೆ ವ್ರತ

  • ಹುಣ್ಣಿಮೆ- 1 ಮೇ
  • ಅಮಾವಾಸ್ಯೆ - 16 ಮೇ
  • ಹುಣ್ಣಿಮೆ- 31 ಮೇ

ಜೂನ್

3 ಬುಧವಾರ -ಸಂಕಷ್ಟ ಚತುರ್ಥಿ
11 ಗುರುವಾರ - ಪರಮ ಏಕಾದಶಿ
12 ಶುಕ್ರವಾರ - ಪ್ರದೋಷ್‌ ವ್ರತ (ಕೃಷ್ಣ)
13 ಶನಿವಾರ- ಮಾಸಿಕ ಶಿವರಾತ್ರಿ
15 ಸೋಮವಾರ- ಅಮಾವಾಸ್ಯೆ, ಮಿಥುನ ಸಂಕ್ರಾಂತಿ
25 ಗುರುವಾರ- ನಿರ್ಜಲ ಏಕಾದಶಿ
27 ಶನಿವಾರ- ಪ್ರದೋಷ್‌ ವ್ರತ (ಶುಕ್ಲ)
29 ಸೋಮವಾರ - ಜ್ಯೇಷ್ಠ ಪೂರ್ಣಿಮಾ ವ್ರತ

  • ಹುಣ್ಣಿಮೆ- 30 ಜೂನ್
  • ಅಮಾವಾಸ್ಯೆ - 15 ಜೂನ್

ಜುಲೈ

3 ಶುಕ್ರವಾರ - ಸಂಕಷ್ಟ ಚತುರ್ಥಿ
10 ಶುಕ್ರವಾರ - ಯೋಗಿನಿ ಏಕಾದಶಿ
12 ಭಾನುವಾರ - ಮಾಸಿಕ ಶಿವರಾತ್ರಿ, ಪ್ರದೋಷ್‌ ವ್ರತ (ಕೃಷ್ಣ)
14 ಮಂಗಳವಾರ - ಆಷಾಢ ಅಮಾವಾಸ್ಯೆ
16 ಗುರುವಾರ- ಜಗನ್ನಾಥ ರಥ ಯಾತ್ರ, ಕರ್ಕ ಸಂಕ್ರಾಂತಿ
25 ಶನಿವಾರ - ದೇವಶಯನಿ ಏಕಾದಶಿ, ಆಷಾಢ ಏಕಾದಶಿ
26 ಭಾನುವಾರ- ಪ್ರದೋಷ್‌ ವ್ರತ (ಶುಕ್ಲ)
29 ಬುಧವಾರ - ಗುರು ಪೂರ್ಣಿಮೆ, ಆಷಾಢ ಪೂರ್ಣಿಮೆ ವ್ರತ

  • ಹುಣ್ಣಿಮೆ- 29 ಜುಲೈ
  • ಅಮಾವಾಸ್ಯೆ - 14 ಜುಲೈ

ಆಗಸ್ಟ್

2 ಭಾನುವಾರ - ಸಂಕಷ್ಟ ಚತುರ್ಥಿ
9 ಭಾನುವಾರ - ಕಾಮಿಕ ಏಕಾದಶಿ
10 ಸೋಮವಾರ- ಪ್ರದೋಷ್‌ ವ್ರತ (ಕೃಷ್ಣ)
11 ಮಂಗಳವಾರ- ಮಾಸಿಕ ಶಿವರಾತ್ರಿ
12 ಬುಧವಾರ - ಶ್ರಾವಣ ಅಮಾವಾಸ್ಯೆ
15 ಶನಿವಾರ- ಹರಿಯಾಲಿ ತೀಜ್‌
17 ಸೋಮವಾರ - ನಾಗ್‌ ಪಂಚಮಿ, ಸಿಂಹ ಸಂಕ್ರಾಂತಿ
23 ಭಾನುವಾರ - ಶ್ರಾವಣ ಪುತ್ರದ ಏಕಾದಶಿ
25 ಮಂಗಳವಾರ - ಪ್ರದೋಷ್‌ ವ್ರತ (ಶುಕ್ಲ)
26 ಬುಧವಾರ - ಓಣಂ?ತಿರುಓಣಂ
28 ಶುಕ್ರವಾರ - ರಕ್ಷಾ ಬಂಧನ, ಶ್ರಾವಣ ಪೂರ್ಣಿಮೆ ವ್ರತ
31 ಸೋಮವಾರ- ಸಂಕಷ್ಟ ಚತುರ್ಥಿ, ಕಜರಿ ತೀಜ್‌

ಹಬ್ಬಗಳು

ನಾಗರ ಪಂಚಮಿ, ರಾಖಿ ಹಬ್ಬ,

  • ಹುಣ್ಣಿಮೆ- 28 ಆಗಸ್ಟ್
  • ಅಮಾವಾಸ್ಯೆ - 12 ಆಗಸ್ಟ್
  • ಗ್ರಹಣ- ಆಗಸ್ಟ್ 12 ಸೂರ್ಯ ಗ್ರಹಣ
  • ಆಗಸ್ಟ್ 28 ಚಂದ್ರ ಗ್ರಹಣ

ಸೆಪ್ಟೆಂಬರ್

4 ಶುಕ್ರವಾರ -ಕೃಷ್ಣ ಜನ್ಮಾಷ್ಠಮಿ
7 ಸೋಮವಾರ - ಅಜಾ ಏಕಾದಶಿ
8 ಮಂಗಳವಾರ - ಪ್ರದೋಷ್‌ ವ್ರತ (ಕೃಷ್ಣ)
9 ಬುಧವಾರ- ಮಾಸಿಕ ಶಿವರಾತ್ರಿ
11 ಶುಕ್ರವಾರ - ಭಾದ್ರಪದ ಅಮಾವಾಸ್ಯೆ
14 ಸೋಮವಾರ- ಗಣೇಶ ಚತುರ್ಥಿ, ಹರ್ತಾಲಿಕಾ ತೀಜ್‌
17 ಗುರುವಾರ - ಕನ್ಯಾ ಸಂಕ್ರಾಂತಿ
22 ಮಂಗಳವಾರ- ಪರಿವರ್ತಿನಿ ಏಕಾದಶಿ
24 ಗುರುವಾರ - ಪ್ರದೋಷ್‌ ವ್ರತ (ಶುಕ್ಲ)
25 ಶುಕ್ರವಾರ - ಅನಂತ ಚತುರ್ದಶಿ
26 ಶನಿವಾರ- ಭಾದ್ರಪದ ಪೂರ್ಣಿಮಾ ವ್ರತ್
29 ಮಂಗಳವಾರ - ಸಂಕಷ್ಟ ಚತುರ್ಥಿ

ಹಬ್ಬಗಳು

ಕೃಷ್ಣ ಜನ್ಮಾಷ್ಠಮಿ, ಗೌರಿ ಗಣೇಶ ಹಬ್ಬ, ಗಣೇಶನ ವಿಸರ್ಜನೆ, ಪಿತೃ ಪಕ್ಷ.

  • ಹುಣ್ಣಿಮೆ- 26 ಸೆಪ್ಟೆಂಬರ್
  • ಅಮಾವಾಸ್ಯೆ - 11 ಸೆಪ್ಟೆಂಬರ್

ಅಕ್ಟೋಬರ್

6 ಮಂಗಳವಾರ - ಇಂದಿರಾ ಏಕಾದಶಿ
8 ಗುರುವಾರ -ಮಾಸಿಕ ಶಿವರಾತ್ರಿ, ಪ್ರದೋಷ್‌ ವ್ರತ (ಕೃಷ್ಣ)
10 ಶನಿವಾರ- ಅಶ್ವಿನಿ ಅಮಾವಾಸ್ಯೆ
11 ಭಾನುವಾರ- ಶರದ್‌ ನವರಾತ್ರಿ,
16 ಶುಕ್ರವಾರ - ಕಲ್ಪಾರಂಭ
17 ಶನಿವಾರ - ನವಪತ್ರಿಕಾ ಪೂಜೆ, ತುಲಾ ಸಂಕ್ರಾಂತಿ
19 ಸೋಮವಾರ - ದುರ್ಗಾ ಮಹಾ ನವಮಿ ಪೂಜೆ, ದುರ್ಗಾ ಪೂಜೆ ಅಷ್ಟಮಿ ಪೂಜೆ
20 ಮಂಗಳವಾರ- ದಸರಾ, ಶರದ್‌ ನವರಾತ್ರಿ ಪಾರಾಯಣ
21 ಬುಧವಾರ - ದುರ್ಗಾ ವಿಸರ್ಜನೆ
22 ಗುರುವಾರ ಪಾಪಾಂಕುಶಾ ಏಕಾದಶಿ
23 ಶುಕ್ರವಾರ - ಪ್ರದೋಷ್‌ ವ್ರತ (ಶುಕ್ಲ)
26 ಸೋಮವಾರ - ಅಶ್ವಿನಿ ಪೂರ್ಣಿಮಾ ವ್ರತ
29 ಗುರುವಾರ- ಸಂಕಷ್ಟ ಚತುರ್ಥಿ, ಕರ್ವಾ ಚೌತ್‌

ಹಬ್ಬಗಳು

ದಸರಾ, ವಿಜಯದಶಮಿ, ದುರ್ಗಾಷ್ಟಮಿ

  • ಹುಣ್ಣಿಮೆ- 26 ಅಕ್ಟೋಬರ್
  • ಅಮಾವಾಸ್ಯೆ - 10 ಅಕ್ಟೋಬರ್

ನವೆಂಬರ್

5 ಗುರುವಾರ- ರಾಮ ಏಕಾದಶಿ
6 ಶುಕ್ರವಾರ- ಪ್ರದೋಷ್‌ ವ್ರತ (ಕೃಷ್ಣ)
7 ಶನಿವಾರ- ಮಾಸಿಕ ಶಿವರಾತ್ರಿ
8 ಭಾನುವಾರ - ದೀಪಾವಳಿ, ನರಕ ಚತುರ್ದಶಿ
9 ಸೋಮವಾರ - ಕಾರ್ತಿಕ ಅಮಾವಾಸ್ಯೆ
10 ಮಂಗಳವಾರ- ಗೋವರ್ಧನ ಪೂಜೆ
11 ಬುಧವಾರ - ಭಾಯಿ ದೂಜ್
15 ಭಾನುವಾರ- ಛಾತ್‌ ಪೂಜೆ
16 ಸೋಮವಾರ - ವೃಶ್ಚಿಕ ಸಂಕ್ರಾಂತಿ
20 ಶುಕ್ರವಾರ - ದೇವುತ್ತಾನ ಏಕಾದಶಿ
22 ಭಾನುವಾರ - ಪ್ರದೋಷ್‌ ವ್ರತ (ಶುಕ್ಲ)
24 ಮಂಗಳವಾರ- ಕಾರ್ತಿಕ ಪೂರ್ಣಿಮೆ ವ್ರತ
27 ಶುಕ್ರವಾರ - ಸಂಕಷ್ಟ ಚತುರ್ಥಿ

ಹಬ್ಬಗಳು

ದೀಪಾವಳಿ, ಲಕ್ಷ್ಮಿ ಪೂಜೆ

  • ಹುಣ್ಣಿಮೆ- 24 ನವೆಂಬರ್
  • ಅಮಾವಾಸ್ಯೆ - 09 ನವೆಂಬರ್

ಡಿಸೆಂಬರ್

4 ಶುಕ್ರವಾರ- ಉತ್ಪನ್ನ ಏಕಾದಶಿ
6 ಭಾನುವಾರ - ಪ್ರದೋಷ್‌ ವ್ರತ (ಕೃಷ್ಣ)
7 ಸೋಮವಾರ - ಮಾಸಿಕ ಶಿವರಾತ್ರಿ
8 ಮಂಗಳವಾರ - ಮಾರ್ಗಶಿರಾ ಅಮಾವಾಸ್ಯೆ
16 ಬುಧವಾರ - ಧನು ಸಂಕ್ರಾಂತಿ
20 ಭಾನುವಾರ - ಮೋಕ್ಷ ಏಕಾದಶಿ
21 ಸೋಮವಾರ - ಪ್ರದೋಷ್‌ ವ್ರತ (ಶುಕ್ಲ)
23 ಬುಧವಾರ- ಮಾರ್ಗಶಿರಾ ಪೂರ್ಣಿಮೆ ವ್ರತ
26 ಶನಿವಾರ - ಸಂಕಷ್ಟ ಚತುರ್ಥಿ

  • ಹುಣ್ಣಿಮೆ- 23 ನವೆಂಬರ್
  • ಅಮಾವಾಸ್ಯೆ - 08 ನವೆಂಬರ್

English summary

Hindu Calendar 2026; Auspicious Time, Festival Dates, Eclipse And Other Complete Information!

The upcoming year 2026 will also witness many festivals, holidays, auspicious times, eclipses, zodiac changes, etc. Thus, this year 2026 will be very important for Hindus.
X
Desktop Bottom Promotion