Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೊತ್ತೊಮ್ಮೆ ಅಧಿಕಾರದತ್ತ ಟ್ರಂಪ್..! ಡೊನಾಲ್ಡ್ ಟ್ರಂಪ್ ಆಸ್ತಿ ಎಷ್ಟಿದೆ ಗೊತ್ತಾ?
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಡೊನಾಲ್ಡ್ ಟ್ರಂಪ್ ಬಹುತೇಕ ಮತ್ತೆ ಅಧ್ಯಕ್ಷಗಿರಿಗೆ ಆಯ್ಕೆಯಾಗುವುದು ಖಚಿತವಾಗಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ಇತ್ತ ಕಮಲಾ ಹ್ಯಾರಿಸ್ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಭರ್ಜರಿ ವಿಜಯ ಸಾಧಿಸಿದ್ದಾರೆ. ರಿಪಬ್ಲಿಕನ್ ಪಕ್ಷವು ಬಹುಮತಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ದಾಟಿದೆ. ಹೀಗಾಗಿ 2ನೇ ಬಾರಿ ಟ್ರಂಪ್ ಅಧ್ಯಕ್ಷ ಹುದ್ದೆಗೇರುವುದು ಖಚಿತವಾಗಿದೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಎಷ್ಟು ಆಸ್ತಿ ಹೊಂದಿದ್ದಾರೆ ಗೊತ್ತಾ?

ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷ ಪಟ್ಟಕ್ಕೆ ಏರಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಯಾಕಂದ್ರೆ ಡೊನಾಲ್ಡ್ ಟ್ರಂಪ್ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ, ಅವರು ಹಲವು ರೀತಿಯ ವ್ಯವಹಾರದಲ್ಲಿ ತೊಡಗಿದ್ದವರು, ಅದರಲ್ಲೂ ರಿಯಲ್ ಎಸ್ಟೇಟ್‌ನಲ್ಲಿ ಅವರು ಹೆಸರಾಗಿದ್ದರು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪ್ರಕಾರ ಟ್ರಂಪ್ ಅವರ ಒಟ್ಟು ಆಸ್ತಿ ಮೌಲ್ಯ 7.7 ಬಿಲಿಯನ್ ಡಾಲರ್ ಆಗಿದೆ.
ಇನ್ನು ನಿವ್ವಳ ಆಸ್ತಿ 6.6 ಬಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿಗೆ ಹೋಲಿಸಿದರೆ ಬರೋಬ್ಬರಿ 55 ಸಾವಿರ ಕೋಟಿ ರೂಪಾಯಿ ಆಗುತ್ತದೆ. ಅವರ ತಂದೆ ಕೂಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು, ಟ್ರಂಪ್ ರಿಯಲ್ ಎಸ್ಟೇಟ್‌ನಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಬಳಿಕ ಚುನಾವಣೆಯಲ್ಲೂ ಗೆದ್ದು ಅಮೆರಿಕದ ಅಧ್ಯಕ್ಷರಾದರು. ಈಗ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತವಾಗುತ್ತಿದೆ.
ಎಷ್ಟಿದೆ ಟ್ರಂಪ್ ಪ್ರಾಪರ್ಟಿ..!
ಡೊನಾಲ್ಡ್ ಟ್ರಂಪ್ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಬಹುದು. ಮೆನ್‌ಹಟನ್‌ನಲ್ಲಿರುವ ಟ್ರಂಪ್ ಅವರ್ ಅತ್ಯಾಧುನಿಕ ಸವಲತ್ತು ಹೊಂದಿರುವ ಕಟ್ಟಡವಾಗಿದೆ. ಹಾಗೆ ಹಲವು ಹೋಟೆಲ್‌ಗಳು, ವಸತಿಗಳು, ಗಾಲ್ಫ್ ಕೋರ್ಸ್‌ಗಳು, ವಿಲ್ಲಾಗಳು ಕೂಡ ಅವರ ಹೆಸರಿನಲ್ಲಿವೆ. ಟ್ರೂತ್ ಸೋಷಿಯಲ್ ಎಂಬ ಸೋಷಿಯಲ್ ಮೀಡಿಯಾದ ಮಾಲೀಕರು ಕೂಡ ಇವರೇ ಆಗಿದ್ದಾರೆ. ಟ್ರಂಪ್ ಡಿಜಿಟಲ್ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿಗೆ ಅವರು 1 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಡೊನಾಲ್ಡ್ ಟ್ರಂಪ್ 2016 ರಲ್ಲಿ ಮೊದಲ ಬಾರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದಾಗ ತಮ್ಮ ಆಸ್ತಿ ಘೋಷಣೆ ಮಾಡಿದ್ದರು. ಅಚ್ಚರಿ ಅಂದರೆ ಅವರು ಅಧ್ಯಕ್ಷರಾದ ಬಳಿಕ ಅವರ ಆಸ್ತಿಯಲ್ಲಿ ಕುಸಿತ ಕಂಡುಬಂದಿತ್ತು. 4.5 ಬಿಲಿಯನ್ ಡಾಲರ್ ಇದ್ದ ಅವರ ಆಸ್ತಿ ಬಳಿಕ 2.1 ಬಿಲಿಯನ್‌ಗೆ ಇಳಿಕೆಯಾಗಿತ್ತು. ಆದ್ರೆ 2022ರಲ್ಲಿ ಅವರ ಆಸ್ತಿ 3 ಬಿಲಿಯನ್ ಡಾಲರ್‌ಗೆ ತಲುಪಿತು. ಹಾಗೆ 2024ರ ಹೊತ್ತಿಗೆ ಈಗ 7.7 ಬಿಲಿಯನ್ ಡಾಲರ್‌ಗೆ ಬಂದು ತಲುಪಿದೆ.
ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ ಡೊನಾಲ್ಡ್ ಟ್ರಂಪ್ ಅವರ ನಿವ್ವಳ ಮೌಲ್ಯದಲ್ಲಿ ಅತಿದೊಡ್ಡ ಪಾಲನ್ನು ಹೊಂದಿದೆ. ನವೆಂಬರ್ 5ರಂದು ಅವರ ಆಸ್ತಿಯ ಮೌಲ್ಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಟ್ರಂಪ್ ಮೀಡಿಯಾ ಷೇರುಗಳ ಮೌಲ್ಯ ಶೇ 15ರಷ್ಟು ಏರಿಕೆ ಕಂಡು ಅವರ ಆಸ್ತಿ ಭಾರಿ ಜಿಗಿತವಾಗಿದೆ.
ಟ್ರಂಪ್ ಆಸ್ತಿ ಪಟ್ಟಿಯಲ್ಲಿ ಅವರ ಪಿತ್ರಾರ್ಜಿತ ಆಸ್ತಿ ಕೂಡ ಸೇರುತ್ತದೆ. ತಂದೆಯಿಂದ ಅವರು ವ್ಯವಹಾರ ವಹಿಸಿಕೊಳ್ಳುವಾಗ ಬರೋಬ್ಬರಿ 413 ಮಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದರು. ಆದರೆ ವರ್ಷದಲ್ಲಿಯೇ ಈ ಮೌಲ್ಯ ದುಪ್ಪಟ್ಟಾಗಿತ್ತು.



Click it and Unblock the Notifications
