Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಹಸು..! ₹40 ಕೋಟಿಗೆ ಹರಾಜು..!
ಜಾನುವಾರುಗಳಿಗೆ ಲಕ್ಷ ಲಕ್ಷ ಬೆಲೆ ಕಟ್ಟಿ ಖರೀದಿಸುವುದನ್ನು ನಾವು ಕೇಳಿದ್ದೇವೆ. ನಮ್ಮ ಹತ್ತಿರದ ಜಾತ್ರೆಯಲ್ಲೂ ಜಾನುವಾರುಗಳನ್ನು ಲಕ್ಷ ಲಕ್ಷ ನೀಡಿ ಖರೀದಿಸುತ್ತಾರೆ. ಈ ಜಾನುವಾರುಗಳು ಸಹ ನೋಡಲು ಹಾಗೆ ಇರುತ್ತವೆ. ಗಾತ್ರದಲ್ಲಿ ದೊಡ್ಡದಾಗಿ, ಕಟ್ಟುಮಸ್ತಾದ ದೇಹ ಹೊಂದಿರುತ್ತವೆ.
ಇದೀಗ ವಿಶ್ವದ ಅತ್ಯಂತ ದುಬಾರಿ ಹಸುವೊಂದು ದುಬಾರಿ ಬೆಲೆ ಹರಾಜಾಗುವ ಮೂಲಕ ದಾಖಲೆ ಬರೆದಿದೆ. ಬರೋಬ್ಬರಿ 40 ಕೋಟಿ ರೂಪಾಯಿಗೆ ಈ ಹಸು ಮಾರಾಟವಾಗಿ ದಾಖಲೆ ಬರೆದಿದೆ. ಬ್ರೆಜಿಲ್‌ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ವಯಾಟಿನಾ-19 ಎಂಬ ತಳಿಯ ಹಸುವೊಂದು ಈ ದಾಖಲೆ ಬೆಲೆಗೆ ಮಾರಾಟವಾಗಿದೆ.

ಶುದ್ಧ ತಳಿಯ ನೆಲ್ಲೂರು ಹಸು, ಬ್ರೆಜಿಲ್‌ನಲ್ಲಿ USD 4.8 ಮಿಲಿಯನ್‌ಗೆ ಅಂದರೆ ಭಾರತೀಯ ರೂಪಾಯಿಯಲ್ಲಿ ₹40 ಕೋಟಿಗೆ ಮಾರಾಟವಾಯಿತು, ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಹಸು ಎಂಬ ದಾಖಲೆಯನ್ನು ಸ್ಥಾಪಿಸಿತು. ಈ ಮಾರಾಟವು ಜಾನುವಾರು ಹರಾಜು ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.
ಭಾರತೀಯ ತಳಿ
ನೆಲ್ಲೂರು ತಳಿ ಅಥವಾ ಇದನ್ನು ವಯಾಟಿನಾ-19 ಎಂದು ಕರೆಯಲಾಗುತ್ತದೆ. ಈ ತಳಿ ಬ್ರೆಜಿಲ್‌ನಲ್ಲಿ ತುಂಬಾನೆ ಫೇಮಸ್ ಆಗಿದೆ. ಆದರೆ ಇದು ಭಾರತದ ತಳಿಯಾಗಿದ್ದು, ಈ ತಳಿಗೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನು ಇಡಲಾಗಿದೆ, ಇದು ಅವರ ಮೂಲ ಪ್ರದೇಶವನ್ನು ಪ್ರತಿಬಿಂಬಿಸುತ್ತದೆ.
ಈ ತಳಿಗಳನ್ನು ಮೊದಲ ಬಾರಿಗೆ ಸುಮಾರು 1868ರಲ್ಲಿ ಹಡಗಿನ ಮೂಲಕ ಬ್ರೆಜಿಲ್‌ಗೆ ಕೊಂಡೊಯ್ಯಲಾಗಿತ್ತು ಎಂದು ಅಂದಾಜಿಸಲಾಗಿದೆ. ಅಲ್ಲಿ ಇದೊಂದು ಪ್ರಮುಖ ತಳಿಯಾಗಿ ಹಾಲು, ಹೈನುಗಾರಿಕೆಯಲ್ಲಿ ಗುರುತಿಸಿಕೊಂಡಿದೆ. ಈಗ ಬ್ರೆಜಿಲ್‌ನ ಸಾವೊ ಪಾಲೊದಲ್ಲಿನ ಅರಂಡು ಎಂಬಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.
ನೆಲ್ಲೂರು ಹಸುಗಳು ಈಗಾಗಲೇ ಬ್ರೆಜಿಲ್‌ನಲ್ಲಿ ಪ್ರಾಬಲ್ಯ ಹೊಂದಿದ್ದು, ದೇಶದ ಒಟ್ಟು ಹಸುಗಳ ಜನಸಂಖ್ಯೆಯ 80 ಪ್ರತಿಶತವನ್ನು ಹೊಂದಿದೆ. ಕಳಪೆ ಮೇವಿನ ಮೇಲೂ ಬೆಳೆಯುವ ತಳಿಯ ಸಾಮರ್ಥ್ಯ ಮತ್ತು ಅದರ ಸುಲಭ ತಳಿ ಗುಣಲಕ್ಷಣಗಳು ಬ್ರೆಜಿಲಿಯನ್ ಸಾಕಣೆದಾರರಿಗೆ ಇದು ಒಂದು ಪ್ರಮುಖ ಆಯ್ಕೆಯಾಗಿದೆ.
ಮೊದಲ ಜೋಡಿ ಒಂಗೋಲ್ ಜಾನುವಾರುಗಳು 1868 ರಲ್ಲಿ ಬ್ರೆಜಿಲ್‌ಗೆ ಹಡಗಿನ ಮೂಲಕ ಆಗಮಿಸಿದ್ದ ಬಳಿಕ 1960 ರ ದಶಕದಲ್ಲಿ ನೂರಕ್ಕೂ ಹೆಚ್ಚು ಹಸುಗಳನ್ನು ಆಮದು ಮಾಡಿಕೊಂಡಿತ್ತು. ಈ ವೇಳೆಗೆ ಬ್ರೆಜಿಲ್‌ನಲ್ಲಿ ಈ ಹಸುಗಳ ಸಂಖ್ಯೆ ಏರಿಕೆ ಕಂಡಿತ್ತು. ಅಲ್ಲಿ ಈ ತಳಿಗಳ ಸಂತಾನೋತ್ಪತ್ತಿ ಪ್ರಮಾಣವೂ ಏರಿಕೆಯಾಗಿತ್ತು. ಬಳಿಕ ಇವು ಬ್ರೆಜಿಲ್‌ನ ಸ್ಥಳೀಯ ಜಾನುವಾರುಗಳಾಗಿ ಬೆಳವಣಿಗೆ ಸಾಧಿಸಿದವು.
ವೈಜ್ಞಾನಿಕವಾಗಿ ಬಾಸ್ ಇಂಡಿಕಸ್ ಎಂದು ಕರೆಯಲ್ಪಡುವ ನೆಲ್ಲೂರ್ ತಳಿಯು ಬಿಸಿ ವಾತಾವರಣಕ್ಕೆ ಹೊಂದಿಕೊಳ್ಳುವಿಕೆ, ರೋಗ ನಿರೋಧಕತೆ ಮತ್ತು ಮಾಂಸದ ಗುಣಮಟ್ಟದಂತಹ ಉತ್ತಮ ಗುಣಗಳನ್ನು ಹೊಂದಿದೆ. ಈ ಜಾನುವಾರುಗಳು ತಮ್ಮ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ, ಉಷ್ಣವಲಯದ ಪ್ರದೇಶಗಳಲ್ಲಿಯೂ ಯಾವ ಅನಾರೋಗ್ಯಕ್ಕೂ ಒಳಗಾಗದೆ ಬದುಕುವ ಬಲ ಹೊಂದಿವೆ.
2022 ರಲ್ಲಿ ಸುಮಾರು 800,000 ಡಾಲರ್‌ಗಳಿಗೆ ಅಂದರೆ ಸುಮಾರು 6 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು, ಅದು ಅಂದಿನ ಸಮಯದಲ್ಲಿ ದೊಡ್ಡ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದಿದೆ.



Click it and Unblock the Notifications
