Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿವಾರ ಶನಿದೇವರ ಸಂತುಷ್ಟಗೊಳಿಸುವುದು ಹೇಗೆ.? ಇಲ್ಲಿದೆ ಮಂತ್ರಗಳು..!
ಶನಿವಾರವನ್ನು ವಿಶೇಷವಾಗಿ ಶನಿ ದೇವರಿಗೆ ಮೀಸಲಾಗಿಟ್ಟಿದ್ದು ಈ ದಿನ ಶನಿ ದೋಷ ನಿವಾರಣೆಗೆ ಬೇಕಾದ ಪೂಜೆಗಳನ್ನು ವ್ರತಗಳನ್ನು ಕೈಗೊಳ್ಳಲಾಗುತ್ತದೆ. ಮಾನವ ಜನ್ಮದಲ್ಲಿ ಶನಿಯು ವಿಪರೀತವಾಗಿ ಮಾನವರನ್ನು ಕಾಡುತ್ತಾರೆ, ಕಷ್ಟಗಳ ಪರಿಚಯವನ್ನು ಅವರಿಗೆ ಮಾಡಿಸುತ್ತಾರೆ, ದುಃಖವನ್ನು ನುಂಗಿಕೊಳ್ಳುವ ಶಕ್ತಿಯನ್ನು ನೀಡುತ್ತಾರೆ. ಹುಲು ಮಾನವರಾದ ನಾವು ಮಾತ್ರವಲ್ಲದೆ ದೇವಾಧಿ ದೇವತೆಗಳೂ ಕೂಡ ಶನಿಯ ಉಪಟಳವನ್ನು ಅನುಭವಿಸಿದ್ದಾರೆ. ರಾಜಾಧಿರಾಜರೂ ಕೂಡ ಶನಿಗೆ ಶಿರಬಾಗಿದ್ದಾರೆ.
ಇಂತಿಪ್ಪ ಶನಿಯ ದೋಷವನ್ನು ಕಡಿಮೆಗೊಳಿಸಿ ಅವರ ಅನುಗ್ರಹವನ್ನು ಪಡೆದುಕೊಳ್ಳಲು ನೀವು ವಿಶೇಷ ಪೂಜೆ ಮತ್ತು ವ್ರತಗಳನ್ನು ಕೈಗೊಳ್ಳಬೇಕಾಗುತ್ತದೆ. ಎಳ್ಳಿನ ಎಣ್ಣೆ ಎಂದರೆ ಶನಿ ದೇವರಿಗೆ ಹೆಚ್ಚು ಪ್ರಿಯವಾಗಿದ್ದು ಇದರಿಂದ ಉರಿಸಿದ ದೀಪವನ್ನು ಶನಿ ವಿಗ್ರಹದ ಮುಂದೆ ಇರಿಸಿ ನೀವು ಅವರನ್ನು ಪ್ರಾರ್ಥಿಸಬಹುದು, ಇಲ್ಲದಿದ್ದರೆ ಹನುಮನ ಗುಡಿಗೆ ಹೋಗಿ ಹನುಮನನ್ನ ಪ್ರಾರ್ಥಿಸಿದರೂ ಕೂಡ ಶನಿ ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದು.

ಶನಿಯು ಕಷ್ಟವನ್ನು ನೀಡಿ ತನ್ನ ಇರುವಿಕೆಯನ್ನು ಮಾನವರಿಗೆ ಮಾಡಿಸುತ್ತಾರೆ. ಅವರಲ್ಲಿ ಶಕ್ತಿ, ಸ್ಥೈರ್ಯ ಕುಂದದಂತೆ ಕಾಪಾಡುತ್ತಾರೆ. ಅದಾಗ್ಯೂ ಅವರನ್ನು ಒಲಿಸಿಕೊಳ್ಳುವುದೂ ಕೂಡ ನಮ್ಮ ಜೀವನದಲ್ಲಿ ಅತ್ಯಗತ್ಯವಾಗಿರುವುದರಿಂದ ಕೆಲವೊಂದು ಪರಿಹಾರಗಳನ್ನು ಕಂಡುಕೊಂಡು ಶನಿಯ ಕೃಪೆಗೆ ಒಳಗಾಗಬಹುದು. ಸೂರ್ಯ ಮತ್ತು ಛಾಯಾ ದಂಪತಿಗಳ ಪುತ್ರನಾಗಿರುವ ಶನಿ ಹುಟ್ಟಿನಿಂದಲೇ ತಂದೆಯ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ.
ಹೀಗೆ ಅವರು ಕೂಡ ನಮ್ಮಂತೆಯೇ ನೋವಿನ ಜೀವನವನ್ನು ಉಂಡವರಾಗಿದ್ದಾರೆ. ಭಕ್ತರನ್ನು ಕಾಪಾಡುವ ಶನಿ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ. ಇಂದಿನ ಲೇಖನದಲ್ಲಿ ಶನಿ ದೇವರನ್ನು ಸಂಪ್ರೀತಗೊಳಿಸುವ ಪೂಜೆ ವ್ರತಗಳೇನು ಎಂಬುದನ್ನು ಕುರಿತು ಮತ್ತಷ್ಟು ತಿಳಿದುಕೊಳ್ಳೋಣ.
ಶನಿವಾರದ ವ್ರತ
ಶನಿವಾರ ವ್ರತ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದ್ದು ಉಳಿದ ವ್ರತಗಳಿಗಿಂತ ಹೆಚ್ಚು ಮಹತ್ವಪೂರ್ಣವಾದುದು. ತಮ್ಮ ಜಾತಕದಲ್ಲಿ ದುರ್ಬಲ ಶನಿ ಇರುವವರು ಈ ದಿನ ಉಪವಾಸವನ್ನು ಕೈಗೊಳ್ಳುವುದರಿಂದ ಶನಿ ದೇವರ ಅನುಗ್ರಹಕ್ಕೆ ಒಳಗಾಗಬಹುದು. ಅಂತೆಯೇ ತಮ್ಮ ದೋಷಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.
ಶನಿವಾರ ಶನಿ ಪೂಜೆ ಮಾಡುವುದು ಹೇಗೆ
ಯಾವುದೇ ತಿಂಗಳಿನ ಶುಕ್ಷ ಪಕ್ಷದಂದು ಬರುವ ಪ್ರಥಂ ಶನಿವಾರದಂದು ಈ ವೃತವನ್ನು ಕೈಗೊಳ್ಳಬೇಕು. 11 ಅಥವಾ 51 ವಾರಗಳಂದು ಈ ವೃತವನ್ನು ಮಾಡಬೇಕು. ನಂತರ ಉದ್ಯಾಪನವನ್ನು ಮಾಡಿ ವ್ರತವನ್ನು ಸಂಪನ್ನ ಗೊಳಿಸಬೇಕು.
ಶನಿ ದೇವರಿಗೆ ಪೂಜೆ ಮಾಡುವುದು ಹೇಗೆ
ಶನಿವಾರ ವ್ರತ ಕೈಗೊಳ್ಳುವವರು ಈ ದಿನ ಸೂರ್ಯೋದಯಕ್ಕೂ ಕನಿಷ್ಠ ಒಂದು ಗಂಟೆ ಮೊದಲೇ ಎದ್ದು ಪ್ರಾತಃ ವಿಧಿಗಳನ್ನು ಪೂರೈಸಿ ಸ್ನಾನ ಮಾಡಿದ ಬಳಿಕ ಕೇವಲ ಕಪ್ಪು ವಸ್ತ್ರಗಳನ್ನು ಮಾತ್ರ ಧರಿಸಬೇಕು. ಮೈ ಮೇಲೆ ಇತರ ಬಣ್ಣದ ಒಂದು ನೂಲು ಸಹಾ ಇರಬಾರದು. ಮನೆಯಲ್ಲಿ ದೇವರ ಪಟದ ಮುಂದೆ ಇರುವ ಹಣತೆಯಲ್ಲಿ ಇಡಿಯ ದಿನ ಎಳ್ಳೆಣ್ಣೆ ಹಾಕಿ ಇಡಿಯ ದಿನ ಆರದಂತೆ ನೋಡಿಕೊಳ್ಳಬೇಕು. ಬಳಿಕ ಕಬ್ಬಿಣದಿಂದ ಮಾಡಿದ ಶನಿದೇವರ ವಿಗ್ರಹವನ್ನು ಪೂಜೆಸಬೇಕು. ಒಂದು ವೇಳೆ ನಿಮ್ಮ ಪ್ರಯತ್ನಕ್ಕೂ ಮೀರಿ ಶನಿದೇವರ ಕಬ್ಬಿಣದ ಮೂರ್ತಿ ಲಭ್ಯವಾಗದೇ ಇದ್ದರೆ ಶನಿದೇವರ ಪಟವನ್ನು ಪೂಜಿಸಬಹುದು. ಪೂಜೆಯ ಸಮಯದಲ್ಲಿ ಕಪ್ಪು ಹೂವು, ಕಪ್ಪೆಳ್ಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಶನಿ ದೇವರಿಗೆ ಬೇಯಿಸಿದ ಅನ್ನದೊಂದಿಗೆ ಸಮರ್ಪಿಸಬೇಕು. ಶನಿ ದೇವರ ಮಂತ್ರವನ್ನು ಪಠಿಸಿ ಮತ್ತು ಶನಿ ದೇವರ ವ್ರತ ಕಥೆಯನ್ನು ಓದಿ ಪೂಜೆಯನ್ನು ಸಂಪೂರ್ಣಗೊಳಿಸಬೇಕು.
ಶನಿ ದೇವನ ಮಂತ್ರಗಳು
'ಓಂ ಶನಿದೇವಾಯ ನಮಃ'
ಓಂ ಪ್ರಾಂ ಪ್ರೀಂ ಪ್ರಂ ಸಹ ಶನೈಶ್ಚರಾಯ ನಮಃ
ಓಂ ಶನಿಶ್ಚರಾಯ ನಮಃ:
ಶನಿವಾರದಂದು ಶನಿದೇವನನ್ನು ಆರಾಧಿಸುವಾಗ ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವ ಮೂಲಕ ಶನಿದೇವನ ಅನುಗ್ರಹವನ್ನು ಪಡೆಯುತ್ತಾನೆ. ಶನಿವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕಪ್ಪು ಬಟ್ಟೆ ಧರಿಸಿ. ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ದಾನ ಮಾಡಿ. ಇದರ ನಂತರ ಈ ಮಂತ್ರವನ್ನು ಜಪಿಸಿ. ಈ ಮಂತ್ರವನ್ನು ಪಠಿಸುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ.
ಶನಿ ಗಾಯತ್ರಿ ಮಂತ್ರ
ಔಂ ಕೃಷ್ಣಾಂಗಾಯ ವಿದ್ಯಾಮ್ಹೇ ರವಿಪುತ್ರಾಯ ಧೀಮಹಿ ತನ್ನಃ ಸೌರಿಃ ಪ್ರಚೋದಯಾತ್
ಓಂ ಕೃಷ್ಣಾಂಗಾಯ ವಿದ್ಮಹೇ ರವಿಪುತ್ರಯ ಧೀಮಹಿ ತನ್ನಃ ಸೌರಿ: ಪ್ರಚೋದಯಾತ್



Click it and Unblock the Notifications