Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆ..! ಹವಾಮಾನ ಇಲಾಖೆ ಮುನ್ಸೂಚನೆ.!
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕಳೆದೊಂದು ವಾರದಿಂದ ಮಳೆ ಚುರುಕು ಪಡೆದಿದೆ. ರಾಜ್ಯದ ನಾನಾ ಭಾಗದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ರೈತರ ಮುಖದಲ್ಲಿ ನಗು ಮೂಡಿದ್ದರೆ ಇಷ್ಟು ದಿನ ಬಿಸಿಲಿನಿಂದ ಕಂಗೆಟ್ಟಿದ್ದ ಮಂದಿ ತಂಪಾದ ವಾತಾವರಣದಿಂದ ಸಂತಸಗೊಂಡಿದ್ದಾರೆ.
ಮೇ ಕೊನೆಯ ವಾರದಲ್ಲಿ ಮಳೆ ಮತ್ತಷ್ಟು ಚುರುಕಾಗುವ ಸಂಭವವಂತು ಇದೆ. ಇನ್ನು ರಾಜ್ಯ ಮಾತ್ರವಲ್ಲ ದೇಶದಲ್ಲೂ ಮಳೆ ಆರ್ಭಟ ಹೆಚ್ಚಾಗಿದೆ. ಮುಂಬೈನಲ್ಲಿ ಮಳೆ ಅಬ್ಬರಿಸಿದರೆ, ಗುಜರಾತ್, ರಾಜಸ್ಥಾನ್, ಮಹಾರಾಷ್ಟ್ರದ ಹಲವು ಭಾಗದಲ್ಲಿ ಮಳೆಯಾಗುತ್ತಿದೆ.

ರಾಜ್ಯದಲ್ಲೂ ಉತ್ತಮ ಮಳೆಯಾಗಿದೆ. ಈ ಬಾರಿ ಮುಂಗಾರು ಅವಧಿ ಮುನ್ನವೇ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ರೈತರಲ್ಲಿ ಹರ್ಷ ತಂದಿದೆ. ಇನ್ನು ಈ ವರ್ಷ ಜೂನ್ ಮೊದಲ ವಾರದಿಂದಲೇ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಜೂನ್ ನಿಂದ ಭಾರತದಲ್ಲಿ ಮುಂಗಾರು ಸುರಿಸುವ ಮೋಡಗಳು ಆಗಮಿಸುತ್ತವೆ. ಆದರೆ ಈ ಭಾರಿ ಅವಧಿಗೂ ಮೊದಲೇ ದೇಶದಲ್ಲಿ ಮುಂಗಾರು ಆಗಮಿಸಲಿದೆ ಎಂದು ತಿಳಿಸಿದೆ. ಈಗಾಗಲೇ ಐಎಂಡಿಯು ಈ ವರ್ಷ ದೇಶದಲ್ಲಿ ವಾಡಿಕೆಯಷ್ಟು (106%) ಮಳೆ ಆಗಲಿದೆ ಎಂದು ತಿಂಗಳ ಹಿಂದೆಯೇ ತಿಳಿಸಿತ್ತು.
ಈಗಾಗಲೇ ಮುಂಗಾರು ಮಳೆ ಆರಂಭವಾಗಲು ಬೇಕಾಗುವ ಎಲ್ಲಾ ಪೂರಕ ವಾತಾವರಣ ನಿರ್ಮಾಣಗೊಂಡಿದ್ದು, ಇದು ಮಾನ್ಸೂನ್ ಮಳೆ ಆರಂಭಕ್ಕೆ ದಾರಿ ಮಾಡಿಕೊಡಲಿದೆ. ಹೀಗಾಗಿ ಈ ಬಾರಿ ಅತ್ಯುತ್ತಮ ಮಳೆಯಾಗುವುದು ಖಚಿತ ಎನ್ನಲಾಗಿದೆ.
ಇನ್ನೊಂದು ವಾರ ಭಾರೀ ಮಳೆ
ರಾಜ್ಯದಲ್ಲಿ ಈಗಾಗಲೇ ಸಂಜೆ ವೇಳೆ ಭಾರೀ ಮಳೆಯಾಗುತ್ತಿದೆ. ಈ ಮಳೆ ಇನ್ನೂ ಒಂದು ವಾರದ ವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಕಡೆಗಳಲ್ಲಿ ಮಳೆಯಾಗಲಿದೆ. ಅಲ್ಲದೇ ರಾಜ್ಯದಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಾಮರಾಜನಗರ, ಹಾಸನ, ಕೊಡಗು,ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಹೆಚ್ಚು ಮಳೆಯಾಗಲಿದೆ. ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಮಂಡ್ಯ, ದಾವಣಗೆರೆ, ತುಮಕೂರಿನಲ್ಲಿ ಕೂಡ ಎರಡು ದಿನಗಳ ಬಳಿಕ ಮಳೆ ಜೋರಾಗಲಿದೆ. ಇನ್ನೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು ಮಳೆಯಾಗಿದೆ, ಮಂಡ್ಯ, ನಿಪ್ಪಾಣಿ, ನಂಜನಗೂಡು, ಚನ್ನಪಟ್ಟಣ, ರಾಮನಗರ, ಹೆಸರಘಟ್ಟ, ಮಾಗಡಿ, ಕೃಷ್ಣರಾಜಪೇಟೆ, ಮದ್ದೂರು, ತಿಪಟೂರು, ಹುಣಸೂರು, ಅಜ್ಜಂಪುರ, ಸಕಲೇಶಪುರ, ಬೇಗೂರು, ಹಾರಂಗಿಯಲ್ಲೂ ಮಳೆಯಾಗಿದೆ. ಮಳೆಯ ಜೊತೆಗೆ ಗುಡುಗು ಮಿಂಚು ಮತ್ತು ಗಂಟೆಗೆ 40 ರಿಂದ 50 ಕಿ.ಮೀ. ವೇಗದ ಗಾಳಿಯೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ನೀಡಿದೆ.
ಸದ್ಯ ಈ ಮಳೆಯಿಂದಾಗಿ ಹಲವು ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆಯಲು ಕಾರಣವಾಗಿದೆ. ಅದರಲ್ಲೂ ಕೆಲವು ಕಡೆ ನೀರಿಲ್ಲದೆ ಕಂಗೆಟ್ಟಿದ್ದ ಜನರು ಆರಂಭಿಕ ಮಳೆಯಿಂದಾಗಿ ಸಂತಸಗೊಂಡಿದ್ದಾರೆ. ಜೊತೆಗೆ ಈಗ ಈ ಮಳೆ ಮುಂದಿನ ಒದು ವಾರ ಮುಂದುವರೆಯುವ ಮುನ್ಸೂಚನೆಯೂ ಸಿಕ್ಕಿದ್ದು, ತಾಪಮಾನ ತಣ್ಣಗಾಗುವ ನಿರೀಕ್ಷೆ ಇದೆ.
ಹೀಗಾಗಿ ಹಿಂಗಾರಿನಲ್ಲಿ ಆರಂಭವಾಗಬೇಕಿದ್ದ ಕೃಷಿ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಈಗ ಭಿತ್ತನೆ ಬೀಜ, ಭೂಮಿ ಹದ ಮಾಡುವ ಕಡೆ ರೈತರು ಗಮನ ಹರಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಳೆ ಸಹ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



Click it and Unblock the Notifications

