ಬೆಂಗಳೂರು ಮಳೆಯ ದೃಶ್ಯಗಳು: ಕೆರೆಯಂತಾದ ರಸ್ತೆ, ಫಾಲ್ಸ್ ಆದ ಮೆಟ್ರೋಲೈನ್, ಓ ದೇವರೆ ಎಂಥ ಪರಿಸ್ಥಿತಿ

ಈ ವರ್ಷ ಮಳೆಯಿಂದಾಗಿ ಬಹುತೇಕ ನಗರಗಳಲ್ಲಿ ತೊಂದರೆ ಉಂಟಾಗಿತ್ತು, ರಸ್ತೆಗಳು ಜಲಾವೃತವಾಗಿತ್ತು, ಆದರೆ ಈ ವರ್ಷ ಬೆಂಗಳೂರಿನ ಕೆಲವು ಕಡೆ ಮಳೆಯಿಂದಾಗಿ ತೊಂದರೆಯಾಗಿತ್ತು, ಆದರೆ ಈಗ ಸುರಿಯುತ್ತಿರುವ ಮಳೆ ಬೆಂಗಳೂರು ರಸ್ತೆಯನ್ನು ಕೊಳವಾಗಿ ಮಾರ್ಪಡಿಸಿದೆ, ಮಳೆಯಿಂದಾಗಿ ಅಸ್ತವ್ಯಸ್ಥವಾಗಿದೆ.

Heavy rainfall in Bengaluru

ಬೆಳಗ್ಗೆ 3 ಗಂಟೆಯಿಂದ ಸುರಿಯುತ್ತಿರುವ ಮಳೆ ವಿಶ್ರಾಂತಿ ತೆಗೆದುಕೊಳ್ಳುವ ಸೂಚನೆಯಿಲ್ಲ, ನಿರಂತರ ಮಳೆಯಿಂದಾಗಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನೀರು ತುಂಬಿ ಜನರ ಓಡಾಟಕ್ಕೆ ತೊಂದರೆಯಾಗಿದೆ, ಹಲವು ಮನೆಗಳಿಗೆ ಮಳೆನೀರು ನುfಗ್ಇ ಜನರು ಪರದಾಡುತ್ತಿದ್ದಾರೆ, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ, ಒಟ್ಟಿನಲ್ಲಿ ಮಳೆಯಿಂದಾಗಿ ಬೆಂಗಳೂರಿಗರು ಹೈರಾಣಾಗಿದ್ದಾರೆ. ಮೊದಲೇ ಟ್ರಾಫಿಕ್ ಜಾಮ್‌ಗೆ ಬೆಂಗಳೂರು ಫೇಮಸ್, ಇಂದಂತೂ ಹೇಳುವುದೇ ಬೇಡ...

ಬೆಂಗಳೂರು ಮಳೆಯ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹಾಕಿದ್ದು ಆ ವೀಡಿಯೋಗಳನ್ನು ನೋಡುವಾಗ ಮಳೆಯಿಂದಾಗಿ ಎಷ್ಟೊಂದು ತೊಂದರೆಯಾಗಿದೆ ಎಂಬುವುದನ್ನು ನೋಡಬಹುದು:

ಇದು ಮಾನ್ಯತಾ ಟೆಕ್‌ಪಾರ್ಕ್‌ ಬಳಿ ಕಂಡು ಬಂದ ದೃಶ್ಯ, ಮಳೆ ಈರೀತಿ ಸುರಿಯುತ್ತಿದ್ದರೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕೆರೆಯಂತಾದ ರಸ್ತೆ
ಅಂಡರ್‌ಪಾಸ್‌ನಲ್ಲಿ, ರಸ್ತೆಯಲ್ಲಿ ಯಾವ ರೀತಿ ನೀರು ತುಂಬಿಕೊಂಡಿದೆ ನೋಡಿ, ಗಾಡಿಯನ್ನು ಇಂಥ ರಸ್ತೆಯಲ್ಲಿ ಕೊಂಡೊಯ್ಯವುದು ಪ್ರಾಣಕ್ಕೆ ಕೂಡ ಅಪಾಯಕಾರಿ.

ಶಾಲಾ ಮಕ್ಕಳಿಗೆ ರಜೆನೀಡಲಾಗಿದೆ, ಉದ್ಯೋಗಿಗಳಿಗೆ ವರ್ಕ್‌ಫ್ರಂ ಹೋಂ ನೀಡಲಾಗಿದೆ
ನಿರಂತರ ಮಳೆಯಿಂದಾಗಿ ಜನರಿಗೆ ಓಡಾಟಕ್ಕೆ ಕಷ್ಟವಾಗುತ್ತಿದೆ, ಕ್ಯಾಬ್‌, ಆಟೋಗಳು ಬುಕ್‌ ಮಾಡಿದರೆ ಬರ್ತಾ ಇಲ್ಲ. ಶಾಲಾ ಮಕ್ಕಳಿಗೆ ಮಳೆಯ ಕಾರಣದಿಂದ ರಜೆ ಘೋಷಣೆ ಮಾಡಲಾಗಿದೆ, ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ನೀಡಲಾಗಿದೆ.

ನದಿಯಂತೆ ರಸ್ತೆಯಲ್ಲಿ ಹರಿಯುತ್ತಿರುವ ನೀರು
ಮಳೆ ನೀರು ರಸ್ತೆಯಲ್ಲಲಿ ತುಂಬಿ ಹರಿಯುತ್ತಿರುವುದನ್ನು ನೋಡುವಾಗ ನಗರದ ಮಧ್ಯ ನದಿಯೇ ಹರಿದು ಹೋಗುವಂತಿದೆ, ಪ್ರಕೃತಿ ಮುಂದೆ ಮಾನವ ಹುಲು ಸಮಾನ ಎಂಬುವುದನ್ನು ಪ್ರಕೃತಿ ಆಗಾಗ ಸಾಬೀತು ಮಾಡುತ್ತಲೇ ಇದೆ.

ಮೆಟ್ರೋ ಟ್ರ್ಯಾಕ್‌ನಿಂದ ಫಾಲ್ಸ್ ರೀತಿಯಲ್ಲಿ ಬೀಳುತ್ತಿರುವ ಮಳೆ

ಈ ದೃಶ್ಯ ನೋಡಿ ಮೆಟ್ರೋಲೈನ್‌ನಿಂದ ನೀರು ಫಾಲ್ಸ್ ರೀತಿ ಹರಿಯುತ್ತಿದೆ.

ಒಮ್ಮೆ ಮನೆ ಸೇರಿದರೆ ಸಾಕು ಎಂಬಂತಾಗಿದೆ ವಾಹನ ಸವಾರರ ಪರಿಸ್ಥಿತಿ
ಯಾವುದೋ ಕಾರಣಕ್ಕೆ ಮನೆಯಿಂದ ಗಾಡಿ ತಗೊಂಡು ಹೋದವರಿಗೆ ಒಮ್ಮೆ ಮನೆಗೆ ತಲುಪಿದರೆ ಸಾಕು ಎಂಬಂತಾಗಿದೆ. ಟ್ರಾಫಿಕ್‌ ಜಾಮ್‌ನಿಂದ ಗಂಟೆಗಟ್ಟಲೆ ನೀರು ತುಂಬಿದ ರಸ್ತೆಯಲ್ಲಿ ನಿಲ್ಲಬೇಕು, ಅಲ್ಲದೆ ಇಂಥ ರಸ್ತೆಯಲ್ಲಿ ಚಲಿಸುವುದು ಅಪಾಯಕಾರಿ ಕೂಡ, ಅಂಡರ್‌ಪಾಸ್‌ ಮೂಲಕ ಸಂಚಾರ ಮಾಡದಿರುವುದೇ ಒಳ್ಳೆಯದು. ಏಕಾಏಕಿ ನೀರು ಹೆಚ್ಚಾದರೆ ಪ್ರಾಣಕ್ಕೆ ಅಪಾಯ ಉಂಟು ಮಾಡಬಹುದು.

X
Desktop Bottom Promotion