Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಯಿಯೊಂದು ತನ್ನ ಜೊತೆಗಿರುವ ನಾಯಿಯನ್ನು ಬದುಕಿದ ರೀತಿ ಅದ್ಭುತ: ಸೋ ಕ್ಯೂಟ್ ಅಂತಿದ್ದಾರೆ ನೆಟ್ಟಿಗರು
ಈಗೀಗ ಕೆಲವೊಂದು ಘಟನೆಗಳನ್ನು ನೋಡುವಾಗ ಛೇ ಮನುಷ್ಯ ಮೃಗನಂತಾಗುತ್ತಿದ್ದಾನಲ್ಲ ಎಂದನಿಸುವುದು. ಅದೇ ಮೃಗಗಳಲ್ಲಿ ಮಾನವೀಯತೆ ಗುಣ ನೋಡುವಾಗ ಅವುಗಳಿಂದ ಕಲಿಯುವುದು ನಮಗೆ ಬೇಕಾಷ್ಟಿದೆ ಎಂದನಿಸದೆ ಇರಲ್ಲ, ನಾಯಿಯೊಂದು ತನ್ನ ಜೊತೆ ನಾಯಿಯನ್ನು ರಕ್ಷಿಸಿದ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ಈ ವೀಡಿಯೋ ನೋಡಿದವರು ಮನಸಾರೆ ಮೆಚ್ಚಿಕೊಳ್ಳುತ್ತಿದ್ದಾರೆ, ಇಂಥ ಅದ್ಭುತ ದೃಶ್ಯ ಕಣ್ತುಂಬುಕೊಳ್ಳುವಾಗ ಒಂದು ಕ್ಷಣ ನಮ್ಮಲ್ಲಿರುವ ಮಾನಸಿಕ ಒತ್ತಡ ಕೂಡ ದೂರಾಗುವುದು ಅಷ್ಟೊಂದು ಸೊಗಸಾಗಿದೆ ಈ ವೀಡಿಯೋ..

ವೀಡಿಯೋ ನೋಡಿದರೆ ಅದೊಂದು ಬ್ರಿಡ್ಜ್ ರೀತಿ ಕಾಣುತ್ತದೆ, ಅದರಲ್ಲಿ ಎರಡು ನಾಯಿಗಳು ಆಟ ಆಡುತ್ತಾ ಹೋಗ್ತಾ ಇರುತ್ತದೆ, ಅಲ್ಲೊಂದು ಚಿಕ್ಕ ಗುಂಡಿ ಇರುತ್ತದೆ, ಚರಂಡಿ ಪಕ್ಕ ಇರುತ್ತದೆ ಅಲ್ವಾ ಹಾಗೆ, ಅದರ ಮುಚ್ಚಳ ಸ್ವಲ್ಪ ಓಪನ್ ಆಗಿರುತ್ತದೆ, ಅದರ ಮೇಲೆ ಕಾಲಿಟ್ಟ ನಾಯಿ ಅದರೊಳಗೆ ಬಿದ್ದು ಬಿಡುತ್ತದೆ, ಜೊತೆಗಿರುವ ನಾಯಿಗೆ ಅದನ್ನು ರಕ್ಷಣೆ ಮಾಡಬೇಕೆಂಬ ತವಕ ಆದರೆ ಹೇಗೆ ಗೊತ್ತಾಗ್ತಾ ಇಲ್ಲ, ಆಚೆ-ಓಚೆ ಬೊಗಳುತ್ತಾ ಓಡಾಡುತ್ತದೆ, ಅಸಹಾಯಕ ಸ್ಥಿತಿಯಿಂದ ಕೂಗುತ್ತದೆ, ಅಷ್ಟೊತ್ತಿಗೆ ಅಲ್ಲೊಬ್ಬರು ಬರ್ತಾ ಇರುತ್ತದೆ, ನಾಯಿಗೆ ಒಂದು ಭರವಸೆ ಮೂಡುತ್ತದೆ.
ಆ ಮನುಷ್ಯನ ಬಳಿಗೆ ನಾಯಿ ಓಡುತ್ತದೆ, ಆದರೆ ಅವರಿಗೆ ಅದು ಏಕೆ ಹಾಗೆ ಆ ರೀತಿ ವರ್ತಿಸುತ್ತಿದೆ ಎಂದು ಅರ್ಥವಾಗಲ್ಲ, ಸುಮ್ಮನೆ ಮುಂದೆ ಹೋಗುತ್ತಾರೆ, ಆದರೆ ನಾಯಿ ಬಿಡಲ್ಲ ಅವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತದೆ, ಆವಾಗ ಅವರಿಗೂ ಏನೋ ಆಗಿದೆ ಎಂದು ಗೊತ್ತಾಗುತ್ತದೆ, ನಾಯಿ ಅವರನ್ನು ಆ ಗುಂಡಿ ಬಳಿ ಕರೆದುಕೊಂಡು ಬರುತ್ತದೆ, ಅವರು ನೋಡ್ತಾರೆ ಅಲ್ಲೊಂದು ನಾಯಿ ಬಿದ್ದಿರುತ್ತದೆ, ಆವಾಗ ಅವರಿಗೆ ಪರಿಸ್ಥಿತಿ ಅರ್ಥವಾಗುತ್ತೆ, ಆ ನಾಯಿಯನ್ನು ರಕ್ಷಣೆ ಮಾಡುತ್ತಾರೆ. ನಂತರ ಆ ಎರಡು ನಾಯಿಗಳು ಆ ಮನುಷ್ಯನಿಗೆ ಥ್ಯಾಂಕ್ಸ್ ಅವುಗಳದ್ದೇ ಭಾಷೆಯಲ್ಲಿ ಹೇಳುವ ರೀತಿ ಇದೆಯೆಲ್ಲಾ ತುಂಬಾನೇ ಸೊಗಸಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ನಿಮಗೂ ಖುಷಿಯಾಗಿರಬಹುದು ಅಲ್ವಾ?
Dog seeks help from a random person to rescue his brother.
— 𝕐o̴g̴ (@Yoda4ever) June 30, 2023
They were happy and grateful for the help. Thank you, hooman...🙏❤️ pic.twitter.com/v0FHIIgZXd



Click it and Unblock the Notifications