Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ತಲೆಯಲ್ಲಿ ಹೇನು ಕಂಡಿದ್ದಕ್ಕೆ ಎಮರ್ಜೆನ್ಸಿ ಲ್ಯಾಂಡ್ ಅದ ಫ್ಲೈಟ್? ಹೇನು ಅಷ್ಟೊಂದು ಡೇಂಜರಾ?
ತಾಂತ್ರಿಕ ದೋಷದಿಂದ ಅಥವಾ ಫ್ಲೈಟ್‌ನಲ್ಲಿದ್ದ ಪ್ರಯಾಣಿಕರಲ್ಲಿ ಯಾರಿಗಾದರೂ ಹುಷಾರು ತಪ್ಪಿದರೆ ಫ್ಲೈಟ್ ಎಮರ್ಜೆನ್ಸಿ ಲ್ಯಾಂಡ್ ಆಗುವುದನ್ನು ನೋಡುತ್ತೇವೆ, ಆದರೆ ತಲೆಯಲ್ಲಿ ಹೇನು ಇದ್ದಿದ್ದಕ್ಕೆ ಫ್ಲೈಟ್ ಎಮರ್ಜೆನ್ಸಿ ಲ್ಯಾಂಡ್ ಆಗಿದೆ ಗೊತ್ತಾ? ಏನು ಹೇನು ಇದ್ದಿದ್ದಕ್ಕೆ ಪ್ಲೈಟ್ ಎಮರ್ಜೆನ್ಸಿ ಲ್ಯಾಂಡ್ ಆಯ್ತಾ? ಎಂದು ನಿಮಗೆ ನಗು ಬರಬಹುದು, ಆದರೆ ಇದು, ಇದೇ ವರ್ಷ ಜೂನ್‌ನಲ್ಲಿ ಕೂಡ ನಡೆದಿದೆ.

ಅಮೆರಿಕದ ಏರ್‌ಲೈನ್ಸ್ ಪ್ಲೈಟ್ ಈ ರೀತಿ ಎಮರ್ಜೆನ್ಸಿ ಲ್ಯಾಂಡ್ ಆಗಿದೆ
ಲಾಸ್ ಏಂಜಲೀಸ್‌ನಿಂದ ಹೊರಟ ಏರ್‌ಲೈನ್ಸ್ ಪ್ರಯಾಣಿಕರ ತಲೆಯಲ್ಲಿ ಹೇನು ಇದ್ದಿದ್ದಕ್ಕೆ ಫೀನಿಕ್ಸ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡ್ ಅಗಿದ್ದು, ಇದನ್ನು ಟಿಕ್‌ಟಾಕ್ ಯೂಸರ್ ಈ ವೀಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ ವ್ಯೂವ್ಸ್ ಕೂಡ ಪಡೆದಿತ್ತು.
ಮಹಿಳೆಯೊಬ್ಬರ ತಲೆಯಲ್ಲಿ ಹೇನು ಇರುವ ಕಾರಣಕ್ಕೆ ಎಮರ್ಜೆನ್ಸಿ ಲ್ಯಾಂಟ್ ಆದ ಪ್ಲೈಟ್ 12 ಗಂಟೆ ಗಂಟೆ ಅಲ್ಲಿಯೇ ಇತ್ತು, ಇದರಿಂದಾಗಿ ಪ್ರಯಾಣಿಕರು ಪರಿದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು ಎಂದು ಆ ಟಿಕ್‌ಟಾಕ್ ಬಳಕೆದಾರ ಹೇಳಿದ್ದಾರೆ.
ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆದಾಗ ಪ್ರಯಾಣಿಕರಿಗೆ ಏಕೆ ಲ್ಯಾಂಡ್ ಅಯ್ತು ಎಂಬ ಗೊಂದಲ, ಅಷ್ಟರಲ್ಲಿ ಆ ಮಹಿಳೆಯ ಬಳಿ ಬಂದ ಕೆಲ ಏರ್‌ಲೈನ್ಸ್ ಸಿಬ್ಬಂದಿ ಕೂಡಲೇ ಆ ಮಹಿಳೆಯನ್ನು ತಮ್ಮ ಜೊತೆ ಕೊಂಡೊಯ್ಯುವಾಗ ಉಳಿದವರಿಗೆ ಏಕೆ ಆಕೆಯನ್ನು ಆ ರೀತಿ ಕರೆದುಕೊಂಡು ಹೋದರು ಎಂದು ಗೊಂದಲವಾಗಿತ್ತಂತೆ, ಪಾಪ ಆ ಮಹಿಳೆ ಎಷ್ಟು ಗಾಬರಿಯಾಗಿರಬೇಡ. ಪ್ರಯಾಣಿಕರಿಗೆ ಏನು ಮಾಡಬೇಕು? ಈ ಫ್ಲೈಟ್ ಯಾವಾಗ ಟೇಕ್ ಆಪ್ ಆಗುತ್ತೆ ಎಂದು ತಿಳಿಯದೆ ಗೊಂದಲದಲ್ಲಿದ್ದರು. ನಂತರ ತಿಳಿದು ಬಂದ ವಿಷಯವೆಂದರೆ ತಲೆಯಲ್ಲಿ ಹೆನು ಇದ್ದಿದ್ದಕ್ಕೆ ಈ ರೀತಿ ಎಮರ್ಜೆನ್ಸಿ ಲ್ಯಾಂಡ್ ಆಯ್ತು, ಆದರೆ ಏರ್‌ಲೈನ್ಸ್ ಸಿಬ್ಬಂದಿಯವರು ಕಾರಣ ಕೊಟ್ಟಿದ್ದು ಮಾತ್ರ ಹೀಗೆ" On June 15, American Airlines flight 2201 with service from Los Angeles (LAX) to New York (JFK) diverted to Phoenix (PHX) due to the medical needs of a customer."
ವೈದ್ಯಕೀಯ ಕಾರಣಕ್ಕೆ ಫ್ಲೈಟ್ ಅನ್ನು ತುರ್ತಾಗಿ ಇಳಿಸಲಾಯ್ತು ಎಂದು ಕಾರಣ ನೀಡಿದರು. ಅಲ್ಲಾ ತಲೆಯಲ್ಲಿ ಹೇನು ಕಂಡು ಈ ರೀತಿ ಎಮರ್ಜೆನ್ಸಿ ಲ್ಯಾಂಡ್ ಮಾಡಿದರು ಅಂದರೆ ಫ್ಲೈಟ್‌ನಲ್ಲಿ ಹೋಗುವಾಗ ಹೇನು ನಿರ್ಲಕ್ಷ್ಯ ಮಾಡುವಂಥ ವಿಷಯ ಅಲ್ವೇ ಅಲ್ಲ.
ಇನ್ನು ಹೇನು ಫ್ಲೈಟ್ ಸೀಟ್‌ನಿಂದ ಕೂಡ ಹರಡಬಹುದು
ಪ್ರಯಾಣಿಕರ ತಲೆಯಲ್ಲಿ ಹೇನು ಇದ್ದರೆ ಅದು ಸೀಟ್ ಮೂಲಕ ಮತ್ತೊಬ್ಬರ ತಲೆಗೆ ಕೂಡ ಹತ್ತಬಹುದು, ಹೇನು ಒಂದು ಮಗುವಿನ ತಲೆಯಲ್ಲಿ ಇದ್ದರೆ ಅದರ ಜೊತೆ ಆಟವಾಡುವ ಮಕ್ಕಳ ತಲೆಯಲ್ಲಿಯೂ ಕಂಡು ಬರುವುದು, ಆದ್ದರಿಂದ ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಕಾಟ ಹೆಚ್ಚಿರುತ್ತದೆ.
ಹೇನು ಕಂಡು ತಕ್ಷಣ ಪ್ರಾಣಾಪಾಯ ಉಂಟಾಗುವಷ್ಟು ಅಪಾಯಕಾರಿಯಲ್ಲ
ಹೇನು ತಲೆಯಲ್ಲಿದ್ದರೆ ತಲೆ ತುಂಬಾ ತುರಿಸುವುದು, ಬೇರೆಯವರು ಮುಂದೆ ತಲೆ ತುರಿಸುವುದು ಕೂಡ ಮುಜುಗರದ ಸಂಗತಿ, ಕೆಲವರಿಗೆ ತಲೆಯಲ್ಲಿ ಕಜ್ಜಿ ಕೂಡ ಅಗಬಹುದು, ಅದರೆ ಬೇರೆ ಏನೂ ಸಮಸ್ಯೆ ಇರಲ್ಲ.



Click it and Unblock the Notifications
