ರಿಲಯನ್ಸ್‌ನಲ್ಲಿ ಅತೀ ಹೆಚ್ಚು ವೇತನ ಪಡೆಯುವ ಉದ್ಯೋಗಿ ಈತ..!

ಮುಖೇಶ್ ಅಂಬಾನಿ, ವಿಶ್ವದ ಶ್ರೀಮಂತ ಉದ್ಯಮಿ. ಏಷ್ಯಾದ ಶ್ರೀಮಂತ ವ್ಯಕ್ತಿಯೂ ಆಗಿದ್ದಾರೆ, 9,79,580 ಕೋಟಿ ರೂ. ಮುಖೇಶ್ ಅಂಬಾನಿ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಸಾಮ್ರಾಜ್ಯವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಮಹೋತ್ಸವ ಇಡೀ ವಿಶ್ವದ ಗಮನ ಸೆಳೆದಿದೆ. ಜೊತೆಗೆ ಅವರ ಬಳಿ ಇರುವ ಐಷಾರಾಮಿ ವಸ್ತುಗಳ ಮಾಹಿತಿ ತಿಳಿದು ಜನರು ಶಾಕ್ ಆಗುತ್ತಾರೆ.

ಅವರು ಧರಿಸುವ ಚಪ್ಪಲಿಯಿಂದ ಹಿಡಿದು ವಾಚ್, ಮೊಬೈಲ್, ಕಾರುಗಳು ಸುದ್ದಿಯಾಗುತ್ತವೆ. ಅವರ ಬಳಿ ವಿಶ್ವದ ದುಬಾರಿ ಕಾರುಗಳಿಂದ ಹಿಡಿದು ಭದ್ರತಾ ದೃಷ್ಟಿಯಿಂದ ಈ ಕಾರುಗಳು ಹೈ ಕ್ಲಾಸ್ ಆಗಿವೆ. ಮುಖೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಏಷ್ಯಾದ ಶ್ರೀಮಂತ ಉದ್ಯಮಿ ಎಂಬ ಕೀರ್ತಿ ಪಡೆದಿದ್ದಾರೆ. ಮುಖೇಶ್ ಅಂಬಾನಿಯವರ ದಿವಂಗತ ತಂದೆ ಧೀರೂಭಾಯಿ ಅಂಬಾನಿ 1966 ರಲ್ಲಿ ಸ್ಥಾಪಿಸಿದ ರಿಲಯನ್ಸ್ ಸಣ್ಣ ಜವಳಿ ತಯಾರಕರಾಗಿ ಪ್ರಾರಂಭವಾಯಿತು.

He Is The Highest Paid Employee In Reliance

ಮುಖೇಶ್ ಅಂಬಾನಿ ಎಷ್ಟೊಂದು ಆಸ್ತಿ ಸಂಪಾದನೆ ಮಾಡುತ್ತಿದ್ದರೂ ಕಳೆದ ಕೋವಿಡ್‌ನಲ್ಲಿ ತಮ್ಮ ವೇತನವನ್ನು ಪಡೆಯದಿರಲು ನಿರ್ಧರಿಸಿದ್ದರು. ಅಂಬಾನಿ ಸತತ ನಾಲ್ಕನೇ ವರ್ಷವೂ ಯಾವುದೇ ವೇತನ ಪಡೆದುಕೊಳ್ಳುತ್ತಿಲ್ಲ. ಮುಖೇಶ್ ಅಂಬಾನಿಯವರು ಏಪ್ರಿಲ್ 2008 ರಿಂದ ಮಾರ್ಚ್ 2020ರ ತನಕ ವಾರ್ಷಿಕ ವೇತನವಾಗಿ 15 ಕೋಟಿ. ರೂ ಪಡೆದುಕೊಳ್ಳುತ್ತಿದ್ದರು.

ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿತೇ ಅತ್ಯಂತ ಹೆಚ್ಚು ಸಂಬಳ ಪಡೆಯುತ್ತಿದ್ದ ಹಿಟಲ್ ಮೆಸ್ವಾನಿ ಬಗ್ಗೆ ಕೇಳಿದ್ದೀರಾ? ಮುಖೇಶ್ ಅಂಬಾನಿ ಕಂಪನಿಯಲ್ಲೇ ಅತೀ ಹೆಚ್ಚು ವೇತನ ಪಡೆಯುತ್ತಿದ್ದ ಏಕೈಕ ಉದ್ಯೋಗಿ ಆತ.

ಹಿತಾಲ್ ಮೆಸ್ವಾನಿ ಯಾರು?

ಹಿತಾಲ್ ಮೆಸ್ವಾನಿ ಮುಖೇಶ್ ಅಂಬಾನಿ ಅವರ ಸೋದರಳಿಯ ಮತ್ತು ರಸಿಕ್ಲಾಲ್ ಮೆಸ್ವಾನಿ ಮತ್ತು ತ್ರಿಲೋಚನಾ ಬೆನ್ ಅವರ ಮಗ. ತ್ರಿಲೋಚನಾ ಬೆನ್ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಹಿರಿಯ ಸಹೋದರಿ. ಹಿಟಲ್ ಮೆಸ್ವಾನಿ 1990 ರಲ್ಲಿ ರಿಲಯನ್ಸ್‌ಗೆ ಸೇರಿದರು ಮತ್ತು 1995 ರಿಂದ ರಿಲಯನ್ಸ್ ಮಂಡಳಿಯ ಭಾಗವಾಗಿದ್ದಾರೆ.

ಹಿಟಲ್ ಮೆಸ್ವಾನಿ ಅವರ ಶಿಕ್ಷಣ ಮತ್ತು ವೃತ್ತಿಜೀವನ

ಹಿತಾಲ್ ಮೆಸ್ವಾನಿ ಅವರು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್‌ನೊಂದಿಗೆ ಪದವಿ ಪಡೆದರು. ಹೆಚ್ಚುವರಿಯಾಗಿ, ಅವರು ವಾರ್ಟನ್ ಬಿಸಿನೆಸ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡದಿದ್ದಾರೆ.

ಹಿತಾಲ್ ಮೆಸ್ವಾನಿ ವೇತನವೆಷ್ಟು?

ಹಿತಾಲ್ ಮೆಸ್ವಾನಿ ಅವರ ವೇತನವು 24 ಕೋಟಿ ರೂ. ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತೀ ಹೆಚ್ಚು ವೇತನ ಪಡೆಯುತ್ತಿದ್ದವರಲ್ಲಿ ಒಬ್ಬರಾಗಿದ್ದಾರೆ. ಹಿಟಲ್ ಮೆಸ್ವಾನಿ ರಿಲಯನ್ಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿ ಮಾತ್ರವಲ್ಲದೆ ಅದರ ಯಶಸ್ಸಿನ ಕಥೆಯಲ್ಲಿ ಪ್ರಮುಖ ವ್ಯಕ್ತಿಯಾಗಿಯೂ ನಿಂತಿದ್ದಾರೆ.

ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದವರು ರಿಲಯನ್ಸ್ ಶೇಕಡಾ 50.33 ರಷ್ಟು ಷೇರುಗಳನ್ನು ಹೊಂದಿದ್ದಾರೆ, ಇದು ಪ್ರತಿ ಷೇರಿಗೆ 10 ರೂಪಾಯಿಗಳ ಡಿವಿಡೆಂಡ್ ಆಧಾರದ ಮೇಲೆ 2023-24 ಹಣಕಾಸು ವರ್ಷದಲ್ಲಿ 3,322.7 ಕೋಟಿ ಲಾಭಾಂಶವನ್ನು ಗಳಿಸುತ್ತಿದ್ದಾರೆ. ಆಗಸ್ಟ್ 28, 2023 ರವರೆಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಅಂಬಾನಿ ಅವರ ಪತ್ನಿ ನೀತಾ ಅವರು ಸಿಟ್ಟಿಂಗ್ ಶುಲ್ಕವಾಗಿ 2 ಲಕ್ಷ ರೂ. ಮತ್ತು ಕಮಿಷನ್ ರೂಪದಲ್ಲಿ 97 ಲಕ್ಷ ರೂ . ಗಳಿಸಿದ್ದಾರೆ.

English summary

He Is The Highest Paid Employee In Reliance..!

Have you heard about Hital Meswani who was the highest paid in Reliance Industries Limited? He was the highest paid employee in Mukesh Ambani's company.
Story first published: Sunday, August 11, 2024, 10:33 [IST]
X
Desktop Bottom Promotion