Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬಾಳೆ ಎಲೆಯ ತಟ್ಟೆ ನೋಡಿದ್ದೀರಾ? ಈ ಐಡಿಯಾ ಇಷ್ಟೊಂದು ಸುಲಭ..!
ವೇಗವಾಗಿ ಬೆಳೆಯುತ್ತಿರುವ ಜಗತ್ತಲ್ಲಿ ಎಲ್ಲವೂ ಆಧುನಿಕರಣಗೊಳ್ಳುತ್ತಿದೆ. ಈಗ ಪ್ರತಿಯೊಂದು ವಸ್ತುಗಳು ಮಾರುಕಟ್ಟೆಗೆ ಬಂದುಬಟ್ಟಿವೆ. ಅಂದರೆ ಮೊದಲೆಲ್ಲ ನಾವೇ ಬೆಳೆಯುತ್ತಿದ್ದ ವಸ್ತುಗಳು, ತಯಾರಿಸಿಕೊಳ್ಳುತ್ತಿದ್ದ ವಸ್ತುಗಳು ಈಗ ಮಾರುಕಟ್ಟೆಯಲ್ಲಿ ನಾವೇ ಖರೀದಿಸುವ ಸ್ಥಿತಿಗೆ ಬಂದಿದ್ದೇವೆ. ಅದರಲ್ಲಿ ಈ ಬಾಳೆ ಎಲೆ, ಕಬ್ಬು, ಬಾಳೆಗಿಡ ಹೀಗೆ ಹತ್ತಾರು ವಸ್ತು ಈ ಪಟ್ಟಿಗೆ ಸೇರುತ್ತೆ.
ಹಬ್ಬ ಹರಿದಿನಗಳಲ್ಲಿ, ಶುಭ ಕಾರ್ಯಕ್ಕೆ ಇಂತಹ ಹತ್ತಾರು ವಸ್ತುಗಳನ್ನ ನಾವೀಗ ಮಾರುಕಟ್ಟೆಯಿಂದ ಖರೀದಿಸುತ್ತಿದ್ದೇವೆ. ಮೊದಲೆಲ್ಲ ಇಂತಹ ವಸ್ತು ನಮ್ಮ ನಿಮ್ಮ ಮನೆಯಲ್ಲೆ ಸಿಗುತ್ತಿದ್ದವು. ಈಗ ವೈರಲ್ ಆಗುತ್ತಿರು ವಿಡಿಯೋ ಒಂದರಲ್ಲಿ ಬಾಳೆ ಎಲೆಯ ತಟ್ಟೆಯೊಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ನಾವು ಅಡಿಗೆ ಮರದ ಎಲೆಯ ತಟ್ಟೆ ನೋಡಿದ್ದೆವು. ಆದ್ರೆ ಇದು ಬಾಳೆ ಎಲೆಯ ತಟ್ಟೆಯಾಗಿದೆ.

ಇಲ್ಲೊಂದು ವಿಡಿಯೋದಲ್ಲಿ ಯುವಕ ಹೇಗೆ ಬಾಳೆ ಎಲೆಯ ತಟ್ಟೆ ರೆಡಿ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಲಾಗುತ್ತದೆ. ಯುವಕನೊಬ್ಬ ಥಟ್ ಅಂತ ಬಾಳೆ ಎಲೆಯ ತಟ್ಟೆಯನ್ನ ರೆಡಿ ಮಾಡುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಆದರೆ ಈ ತಟ್ಟೆಗೂ ನಾವು ಸವಿಯು ಬಾಲೆ ಎಲೆಗೂ ಯಾವ ವ್ಯತ್ಯಾಸವೂ ಇಲ್ಲ ಬದಲಿಗೆ ಈ ಬಾಳೆ ಎಲೆ ವೃತ್ತಾಕಾರವಾಗಿರುತ್ತೆ ಅಷ್ಟೆ.
ಇನ್ಸ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಮೊದಲು ಬಾಳೆ ಎಲೆಗಳ ಒಟ್ಟಿಗೆ ಒಂದು ತಟ್ಟೆ ಇಟ್ಟು ಕತ್ತರಿಸಿ ಅದನ್ನು ತಟ್ಟೆ ಆಕಾರದಲ್ಲಿ ಇಡುತ್ತಿರುವುದು ನೋಡಬಹುದು. ನಿಮಿಷದಲ್ಲಿ ಬಾಳೆ ಎಲೆ ತಟ್ಟೆ ರೆಡಿಯಾಗಿರುತ್ತದೆ. ಈ ವಿಡಿಯೋ ನೋಡಿದ ಮಂದಿ ಮೆಚ್ಚುಗೆ ಹೊರಹಾಕಿದ್ದಾರೆ. ಮತ್ತೆ ಕೆಲವರು ಒಂದೊಂದು ಸುಲಭದ ಬ್ಯುಸಿನೆಸ್ ಐಡಿಯಾ ಎನ್ನುತ್ತಿದ್ದಾರೆ.
ನಿಮಗೆಲ್ಲಾ ತಿಳಿದಿರುವಂತೆ ಅಡಿಗೆ ಹಾಳೆಯ ತಟ್ಟೆ ಬಹಳ ಫೇಮಸ್ ಆಗಿತ್ತು, ಊಟ, ತಿಂಡಿ, ಪ್ರಸಾದ ಹೀಗೆ ಹಲವು ಕಡೆಗಳಲ್ಲೀ ಈ ತಟ್ಟೆಗಳು ಬಳಕೆಯಾಗುತ್ತಿದ್ದವು, ಪರಿಸರ ಸ್ನೇಹಿಯಾಗಿದ್ದರಿಂದ ಬಹುಬೇಗ ಮಾರುಕಟ್ಟೆ ಪ್ರವೇಶಿಸಿತ್ತು. ಈಗ ಒಂದು ಹಾಳೆ ತಟ್ಟೆಯ ಬೆಲೆ 5 ರೂಪಾಯಿವರೆಗೂ ಇದೆ. ಬಳಿಕ ಇದೊಂದು ಉದ್ಯಮವೂ ಆಗಿದೆ. ಗುಡಿ ಕೈಗಾರಿಕೆಯಡಿ ಈ ಹಾಳೆ ತಟ್ಟೆ ಮಾಡುವವರು ಬದುಕು ಕಟ್ಟಿ ಕೊಂಡಿದ್ದಾರೆ.
ಈಗ ಈ ಬಾಳೆ ಎಲೆಯ ಈ ತಟ್ಟೆ ಸಹ ಮುಂದೊಂದು ದಿನ ಉದ್ಯಮವಾಗಿ ಬದಲಾಗಬಹುದು. ಏಕೆಂದರೆ ಬಾಳೆ ಎಲೆಗೆ ಹಿಂದಿನಿಂದಲೂ ಬಹಳ ಬೇಡಿಕೆ ಇದೆ. ನಗರ ಪ್ರದೇಶದಲ್ಲಿ ಈಗಲೂ 20 ರೂಪಾಯಿಗೆ ಒಂದು ಅಥವಾ ಎರಡು ಬಾಳೆ ಎಲೆಗಳು ಮಾರಾಟವಾಗುತ್ತಿವೆ. ಮುಂದೆ ಇದರ ಬೆಲೆಯೂ ಗಗನಕ್ಕೇರುವ ಸಾಧ್ಯತೆ ಇದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಮಾತ್ರ ವಿಧ ವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಬ್ಯುಸಿನೆಸ್ ಐಡಿಯಾಗಳು ಈಗ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಲು ಕಾರಣ ಎನ್ನುವವರಿಂದ ಹಿಡಿದು ಇದಕ್ಕಿಂತ ಒಳ್ಳೆಯ ವಿಡಿಯೋ ನಾವು ನೋಡಿಲ್ಲ ಎನ್ನುತ್ತಿದ್ದಾರೆ.
ಇನ್ನು ಈ ಬಾಳೆ ಎಲೆಯ ತಟ್ಟೆ ಬಹುಬೇಗ ಹಾಳಾಗುತ್ತೆ. ಬಹಳ ನಾಜೂಕಾಗಿ ಇದನ್ನು ಬಳಸಬೇಕಾಗುತ್ತದೆ. ಜೊತೆಗೆ ಎರಡರಿಂದ ಮೂರು ದಿನಗಳ ಕಾಲ ಇಡಬಹುದು ಅಷ್ಟೆ. ಆದರೆ ಇದಕ್ಕೆ ಸೂಕ್ತ ಸಂಶೋದನೆ ಮಾಡಿ ಈ ಬಾಳೆ ಎಲೆ ತಟ್ಟೆಯನ್ನು ಸಹ ಹೆಚ್ಚು ದಿನ ಬಳಸಲು ಬರುವಂತೆ ಮಾಡಿ ಅದರಿಂದ ಉತ್ತಮ ಉದ್ಯಮ ಕಟ್ಟಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ಮೇಲೆ ನಿಮಗೆ ಯಾವ ರೀತಿಯ ಆಲೋಚನೆ ಬರುತ್ತಿದೆ.?



Click it and Unblock the Notifications
