Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಈ ರೀತಿ ಹಾರುವ ಓತಿ ನೀವೂ ನೋಡಿದ್ದೀರಾ? ಪಶ್ಚಿಮ ಘಟ್ಟದ ವಿಶೇಷ ಸಂಪತ್ತು ಇದು..!
ನೀವು ಸಾಹಿತ್ಯ ಲೋಕದ ಕುರಿತು ಒಂದಿಷ್ಟಾದರು ಆಸಕ್ತಿ ಹೊಂದಿರುವವರಾಗಿದ್ದರೆ ನಿಮಗೆ ಹಾರುವ ಓತಿ ಎಂದ ಕೂಡಲೆ ಪೂರ್ಣ ಚಂದ್ರ ತೇಜಸ್ವಿ ಅವರ ಕರ್ವಾಲೋ ಕೃತಿ ನೆನಪಿಗೆ ಬರುತ್ತದೆ. ಸಾಹಿತ್ಯ ಪ್ರಿಯರು ಈ ಕೃತಿಯನ್ನು ಆರಾಧಿಸುವವಷ್ಟು ಅತ್ಯುತ್ತಮ ಕೃತಿ ಇದು. ನೀವು ತೇಜಸ್ವಿ ಅವರ ಅಭಿಮಾನಿಯಾಗಬೇಕಾದರೆ ಇದೊಂದು ಕೃತಿ ಓದಿದರೆ ಸಾಕು. ನೀವು ತೇಜಸ್ವಿ ಅವರ ಎಲ್ಲಾ ಕೃತಿಗಳ ಆರಾಧಿಸಲು ಆರಂಭಿಸುತ್ತೀರಿ.
ಏಕೆಂದರೆ ಈ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಹಾಗೆಯೇ ಇದೆ. ಇದರ ಜೊತೆಗೆ ಹಾರುವ ಓತಿಯ ಹುಡುಕುವ ಅವರ ಸಾಹಸಮಯ ಯಾತ್ರೆ ಕಣ್ಣಿಗೆ ಕಟ್ಟಿದಂತಿದೆ. ಈಗ್ಯಾಕೆ ಈ ಹಾರುವ ಓತಿಯ ವಿಚಾರ ಬಂದಿದೆ ಎಂದು ನಿಮಗೆ ಅಚ್ಚರಿ ಎನಿಸುತ್ತಿರಬಹುದು. ಈ ಹಾರುವ ಓತಿಯ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ.

ತೇಜಸ್ವಿ ಅವರ ಕೃತಿಯಲ್ಲಿ ಈ ಹಾರುವ ಓತಿಯನ್ನು ಅವರು ಹುಡುಕಿಕೊಂಡು ಹೋಗುತ್ತಾರೆ. ಜೊತೆಗೆ ಇವು ಬೇರೆ ಎಲ್ಲಿಂದಲೋ ಬಂದು ಇಲ್ಲಿ ನೆಲೆಸಿವೆ ಮುಂದೆ ಇವುಗಳ ಸಂತತಿ ಹೆಚ್ಚಾಗಲು ಬಹುದು ಎಂದು ಅವರೇ ಮುನ್ಸೂಚನೆಯನ್ನೂ ನೀಡಿದ್ದಾರೆ. ಅವರ ಆಸೆಯಂತೆ ಈಗ ಹಾರುವ ಓತಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.
ಈ ಚಿತ್ರದಲ್ಲಿರುವ ಓತಿಯನ್ನು ನೀವೇನಾದರೂ ನೋಡಿದ್ದೀರಾ ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗಿದ್ದು, ಎಲ್ಲರಿಗೂ ಈ ಓತಿ ಕಂಡು ಅಚ್ಚರಿಯಾಗಿದೆ. ಏಕೆಂದರೆ ಈ ರೀತಿ ಹಾರುವ ಓತಿಗಳು ಈಗಲೂ ಇವೆಯೇ ಪ್ರಶ್ನೆ ಹಲವರಲ್ಲಿ ಮೂಡಿದೆ. ಆದ್ರೆ ಈ ಓತಿಗಳು ಪಶ್ಚಿಮ ಘಟ್ಟಗಳು, ಮಲೆನಾಡು ಭಾಗದಲ್ಲಿ ಇಂದಿಗೂ ನೋಡಬಹುದು.
ಹೌದು ಮರದಿಂದ ಮರಕ್ಕೆ ಇವು ಹಾರುತ್ತವೆ. ಹೆಚ್ಚಾಗಿ ಅಡಕೆ ಹಾಗೂ ತೆಂಗಿನ ಮರದಲ್ಲಿ ಇವನ್ನು ನೋಡಬಹುದು. ಆದರೆ ಗಮಕನವಿಟ್ಟು ನೋಡಿದಾಗ ಮಾತ್ರ ಇವು ಕಾಣಿಸುತ್ತವೆ. ಸಾಮಾನ್ಯವಾಗಿ ಇವುಗಳ ಮೈ ಬಣ್ಣ ಮರದ ಬಣ್ಣವನ್ನೇ ಹೋಲುವುದುರಿಂದ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಾಣಿಸುತ್ತವೆ.
ಇವುಗಳಿಗೆ ಯಾವ ರೆಕ್ಕೆಗಳು ಇರುವುದಿಲ್ಲ
ಅಚ್ಚರಿ ವಿಚಾರ ಏನೆಂದರೆ ಹಾರುವ ಓತಿಗಳಿಗೆ ಯಾವುದೆ ರೆಕ್ಕೆಗಳಿರುವುದಿಲ್ಲ. ಬದಲಿಗೆ ಅವುಗಳ ಕಾಲಿನಿಂದ ಚರ್ಮ ರೆಕ್ಕೆಯಾಗಿ ಪರಿವರ್ತನೆಯಾಗುತ್ತದೆ. ಅದು ಹಾರಾಡುವಾಗ ಚರ್ಮವೇ ರೆಕ್ಕೆಯಂತೆ ಅರಳುತ್ತದೆ. ಹಾರಿ ಮರದ ಮೇಲೆ ಕುಳಿತಾಗ ಆ ಚರ್ಮ ಮತ್ತೆ ಸಂಕುಚಿತಗೊಳ್ಳುತ್ತದೆ. ಹೀಗಾಗಿ ಇವುಗಳಿಗೆ ರೆಕ್ಕೆಗಳಿರುವುದು ಕಾಣಿಸಿವುದಿಲ್ಲ. ಜೊತೆಗೆ ಇವು ಸಾಮಾನ್ಯ ಓತಿಗಳಂತೆಯೇ ಕಾಣುತ್ತವೆ. ಆದರೆ ಕುತ್ತಿಗೆ ಭಾಗದಲ್ಲಿ ಒಂದು ಸಣ್ಣ ಆಕೃತಿಯ ಉದ್ದದ ಚರ್ಮ ವಿರುತ್ತದೆ. ಉಸಿರಾಡುವಾಗ ಅವು ಹಿಗ್ಗುವುದನ್ನು ಸಹ ನಾವು ನೋಡಬಹುದು.
ಆದರೆ ಇಲ್ಲೊಂದು ಫೋಟೋದಲ್ಲಿ ವೈರಲ್ ಆಗಿರುವ ಓತಿ ಹಲವರಿಗೆ ಅಚ್ಚರಿ ಮೂಡಿಸಿದೆ. ಕೆಲವರು ಇದೇ ಮೊದಲ ಬಾರಿಗೆ ಈ ರೀತಿಯ ಓತಿಯನ್ನು ನೋಡಿ ಅಚ್ಚರಿಗೊಳಗಾಗಿದ್ದಾರೆ. ಇಂತಹ ಜೀವ ವೈವಿಧ್ಯವನ್ನು ರಕ್ಷಿಸಿ, ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದಿದ್ದಾರೆ.
ಇವು ಅಗಾಮಿಡೆ ಎಂಬ ಕುಟುಂಬಕ್ಕೆ ಸೇರಿರುವ ಪ್ರಾಣಿಗಳಾಗಿವೆ. ನೀವು ಕುತ್ತಿಗೆ ಬಳಿ ದೊಡ್ಡ ಗಾತ್ರದ ರೆಕ್ಕೆಗಳ ಬಿಚ್ಚಿಕೊಂಡು ದಾಳಿಮಾಡಲು ಬರುತ್ತಿದ್ದ ಓತಿಯ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು, ಇದು ಸಹ ಅಗಾಮಿಡೆ ಪ್ರಬೇದಕ್ಕೆ ಸೇರಿದ್ದ ಓತಿಯಾಗಿತ್ತು. ಇವು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು. ಇವುಗಳ ವೈಜ್ಞಾನಿಕ ಹೆಸರು ಡ್ರಾಕೋ ಡಸ್ಸುಮಿಯೆರಿ ಎಂದಾಗಿದೆ.
ಒಟ್ನಲ್ಲಿ ಈ ರೀತಿಯ ಹಾರುವ ಓತಿಯನ್ನು ನೀವು ಎಲ್ಲಾದ್ರೂ ನೋಡಿದ್ದೀರಾ? ಅಥವಾ ಈ ಬಗ್ಗೆ ನಿಮಗೆ ಗೊತ್ತಿದ್ದರೆ ಬೇರೆಯವರಿಗೂ ಶೇರ್ ಮಾಡಿ.



Click it and Unblock the Notifications
