Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವಾಕಿಂಗ್ ಹೋದವರ ಮೇಲೆ ಬಿದ್ದಿತ್ತು ಮಾಂಸದ ಮಳೆ..! ಈ ವಿಚಿತ್ರಕ್ಕೆ ಕಾರಣವಾಗಿದ್ದೇನು?
ಕೆಲವೊಮ್ಮೆ ನಿಮ್ಮ ಕಣ್ಣೆದುರು ಎಷ್ಟೊಂದು ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದನ್ನು ಕೆಲವೊಮ್ಮೆ ಊಹಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ನೀವು ಬೆಳಗ್ಗೆ ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದೀರಿ ಎಂದುಕೊಳ್ಳಿ. ಹಾಗೆ ವಾಕಿಂಗ್ ಹೋಗುವಾಗ ಏಕಾಏಕಿ ನಿಮ್ಮ ಮೇಲೆ ಮಾಂಸದ ಮಳೆಯಾದರೆ ಹೇಗಾಗುತ್ತೆ? ನೀವು ಎಷ್ಟೆಲ್ಲಾ ರೀತಿಯ ವಿಚಿತ್ರ ಮಳೆ ಬೀಳುವ ಕುರಿತು ಕೇಳಿರಬಹುದು. ಆದ್ರೆ ಎಂದಾದ್ರು ಮಾಂಸದ ಮಳೆ ನೋಡಿದ್ದೀರಾ?
ಹೌದು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದವರ ಮೇಲೆ ಮಾಂಸದ ಮಳೆ ಆದರೆ ಹೇಗಾಗುತ್ತದೆ. ಇದೇ ರೀತಿಯ ವಿಚಿತ್ರ ಘಟನೆ ಕೂಡ ನಡೆದಿತ್ತು, ಇದು ಇಡೀ ವಿಶ್ವಕ್ಕೆ ಆಘಾತ ತಂದಿತ್ತು. ಹಾಗಾದರೆ ಈ ರೀತಿ ವಿಚಿತ್ರ ಘಟನೆ ನಡೆದಿದ್ದು ಎಲ್ಲಿ, ಮಾಂಸದ ಮಳೆಗೆ ಕಾರಣವಾಗಿದ್ದು ಏನು? ಈ ಮಾಂಸದ ಮಳೆ ನಡೆಯಲು ಕಾರಣರಾಗಿದ್ದು ಯಾರು ಗೊತ್ತಾ?

ಇಂತಹ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಅಮೆರಿಕದ ಕೆಂಟುಕಿಯಲ್ಲಿ. ಕೆಂಟುಕಿ ಅಂದ ತಕ್ಷಣ ನಿಮ್ಮ ನೆನಪಿಗೆ ಕೆಎಫ್‌ಸಿ ನೆನಪಿಗೆ ಬರಬಹುದು, ಈ ದೈತ್ಯ ಸಂಸ್ಥೆ ಕೂಡ ಇದೇ ಕೆಂಟುಕಿಯಲ್ಲಿ ಹುಟ್ಟಿದ್ದು, ಇದೇ ಕೆಂಟುಕಿಯಲ್ಲಿ ಒಮ್ಮೆ ಮಾಂಸದ ಮಳೆಯಾಗಿತ್ತು.
ಅದು ಮಾರ್ಚ್ 3, 1876ರ ಬೆಳಗ್ಗೆ ಎಲ್ಲರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಿಗೆ ಹೊರಡುವ ಸಮಯದಲ್ಲಿ ಏಕಾಏಕಿ ಆಗಸದಿಂದ ಹಿಮ ಬೀಳುವಂತೆ ಮಾಂಸದ ತುಂಡುಗಳು ಬೀಳಲು ಆರಂಭಿಸಿದ್ದವು. ಇದನ್ನು ಕಂಡ ಜನರು ಮನೆಯೊಳಗೆ ಓಡಿದ್ದರು. ಹಾಗೆ ಮತ್ತೆ ಹಲವರು ಮಾಂಸಗಳು ಮೈ ಮೇಲೆ ಬೀಳುವುದರಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಅಡಗಿದರು.
ಮೇರಿ ಕ್ರೌಚ್ ಒಲಿಂಪಿಯಾ ಸ್ಪ್ರಿಂಗ್ಸ್ ನಿವಾಸಿ ಸುಮಾರು 11 ಗಂಟೆಗೆ ಮಾಂಸ ಬೀಳಲು ಪ್ರಾರಂಭಿಸಿತು ಎಂದು ಆ ಘಟನೆಯನ್ನು ವಿವರಿಸಿದ್ದರು. ಅದು ಮಧ್ಯಾಹ್ನದವರೆಗೂ ಮುಂದುವರೆದಿತ್ತು ಎಂದಿದ್ದರು. ಸುಮಾರು 100 ರಿಂದ 50 ಗಜಗಳಷ್ಟು ಪ್ರದೇಶವನ್ನು ಈ ಮಾಂಸಗಳು ಆವರಿಸಿತು. ತುಂಡುಗಳು 5 ರಿಂದ 10 ಚದರ ಸೆಂಟಿಮೀಟರ್‌ಗಳವರೆಗೆ ಗಾತ್ರದಲ್ಲಿ ಕಂಡುಬಂದಿದ್ದವು ಎಂದು ವರದಿಯಾಗಿತ್ತು.
ಈ ವಿಚಾರ ತಿಳಿದ ಮಂದಿ ಈ ಜಾಗದತ್ತ ಹರಿದು ಬಂದರು. ಮಾಂಸಗಳು ಬೀಳುವುದನ್ನು ನೋಡಲು ಹಾಗೂ ಈ ಮಾಂಸ ಬೀಳಲು ಕಾರಣವೇನು ಎಂಬುದನ್ನು ಅರಿಯಲು ಮುಂದಾದರು, ಆದರೆ ಆಗಸದಲ್ಲಿ ಮಂಜು ಕವಿದಿತ್ತು, ಆ ಮಂಜಿನ ಒಳಗಿಂದ ಮಾಂಸದ ತುಂಡು ಬೀಳುವುದು ಕಾಣಿಸುತ್ತಿತ್ತು. ಕೆಲವರು ಈ ಮಾಂಸವನ್ನು ಸವಿದು ನೋಡಿದರು. ಇದು ಮೇಕೆಯ ಮಾಂಸದ ರುಚಿ ನೀಡುತ್ತಿತ್ತು ಎಂದು ಹೇಳಿದರು.
ಆದ್ರೆ ಹಲವರು ಇದು ಮಾಂಸವಲ್ಲ. ಯಾವುದೋ ರಾಸಾಯನಿಕ ಗಾಳಿಯಲ್ಲಿ ಸೇರಿ ಮಂಜಿನ ಕಾರಣದಿಂದಾಗಿ ಈ ರೀತಿ ಮಾಂಸವಾಗಿ ಮಾರ್ಪಾಟಾಗಿದೆ ಎಂದರು. ಮತ್ತೆ ಕೆಲವರು ಇದೊಂದು ದೈವ ಪವಾಡ ಎಂದು ಕೂಗಿದರು. ಆದ್ರೆ ಇದೆಲ್ಲದರ ನಡುವೆ ಸತ್ಯಕ್ಕೆ ಹತ್ತಿರವಾದ ಒಂದು ವರದಿ ಹೊರಬಿದ್ದಿತ್ತು. ಈ ಮಾಂಸ ಬಿದ್ದ ಜಾಗಕ್ಕೆ ಸಂಶೋಧಕರ ಗುಂಪು ಆಗಮಿಸಿ ಪರಿಶೀಲನೆಯಲ್ಲಿ ತೊಡಗಿತ್ತು.
ಎಲ್.ಡಿ ಕಸ್ಟೆನ್‌ಬೈನ್ ಎಂಬ ಸಂಶೋಧಕ ಈ ಮಾಂಸ ಮಳೆಗೆ ಕಾರಣವಾದ ಅಂಶದ ಕುರಿತು ವಿವರಣೆ ನೀಡಿದರು. ಈ ಮಾಂಸದ ಮಳೆಗೆ ಕಾರಣವಾಗಿರುವುದು ರಣಹದ್ದು ಎಂದು ವಿವರಿಸಿದರು. ಈ ಮಾಂಸ ಟರ್ಕಿ ಕೋಳಿಯದ್ದು ಎಂದು ಅವರು ವಿವರಿಸಿದರು. ಸಾಮಾನ್ಯವಾಗಿ ಈ ರಣಹದ್ದುಗಳು ತಾವು ಹಾರಾಡುವ ಸಂದರ್ಭದಲ್ಲಿಯೇ ಹೆಚ್ಚುವರಿ ತೂಕ ನಿರ್ವಹಿಸಲು ತಾವು ಸವಿದ ಆಹಾರವನ್ನು ಹಾಗೆಯೇ ಬಾಯಿ ಮೂಲಕ ಹೊರಗೆ ವಾಂತಿ ಮಾಡುತ್ತವೆ. ಇಲ್ಲಿಯೂ ಕೂಡ ಆಗಿದ್ದು ಇದೆ.
ರಣ ಹದ್ದು ಸತ್ತಿರುವ ಟರ್ಕಿಯ ದೊಡ್ಡ ಸಮೂಹವನ್ನೇ ತಿಂದು ಹಾರಾಡುವಾಗ ಮಾಂಸವನ್ನು ವಾಂತಿ ಮಾಡಿಕೊಂಡಿವೆ. ಅಜೀರ್ಣವಾಗಿದ್ದ ಮಾಂಸದ ತುಂಡುಗಳು ಕೆಳಗೆ ಬಿದ್ದಿವೆ, ಮಂಜು ಮುಸುಕಿದ್ದ ಕಾರಣ ಮೇಲೆ ಹಾರಾಡುತ್ತಿದ್ದ ಈ ರಣಹದ್ದುಗಳು ಯಾರ ಕಣ್ಣಿಗೂ ಬಿದ್ದಿಲ್ಲ ಎಂದು ಅವರು ವಿವರಿಸಿದ್ದು, ಬಹುತೇಕ ಮಂದಿ ಇದನ್ನು ಸತ್ಯವೆಂದು ನಂಬಿದರು.
ಆದರೆ ಆ ಮಾಂಸ ಬೀಳಲು ನಿಖರ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಎಲ್.ಡಿ ಕಸ್ಟೆನ್‌ಬೈನ್ ವಾದ ಕೂಡ ಸಾಕ್ಷಿಯಿಲ್ಲದೆ ಹೇಳಲಾಗಿತ್ತು, ಹಾಗೆ ಇದನ್ನು ನಿರೂಪಿಸಲು ಸಹ ಸಾಧ್ಯವಾಗಿರಲಿಲ್ಲ.



Click it and Unblock the Notifications
