Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ನೀವು 5 ವರ್ಷದಿಂದ ಒಂದೇ ಮೊಬೈಲ್ ನಂಬರ್ ಬಳಸುತ್ತಿದ್ದೀರಾ? ಹಾಗಾದ್ರೆ ಇದನ್ನು ಓದಲೇಬೇಕು..!!
ಈಗ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಬಂದಿದೆ. ಮಕ್ಕಳಿಂದ ಹಿಡಿದು ಹಿರಿಯರು ಕೂಡ ಸ್ಮಾರ್ಟ್ ಫೋನ್ ಬಳಕೆ ಮಾಡುವುದು ನೋಡಬಹುದು. 2ಜಿ ಇಂದ ಹಿಡಿದು 5ಜಿ ವರೆಗೂ ನೆಟ್‌ವರ್ಕ್ ಸ್ಪೀಡ್‌ನಲ್ಲಿ ಜನರು ಮೊಬೈಲ್ ಬಳಸುತ್ತಾರೆ. ಒಂದೈದು ನಿಮಿಷ ಬೋರ್ ಎನಿಸಿದರು ಮೊಬೈಲ್ ಕೈಯಲ್ಲಿ ಹಿಡಿದು ಕುಳಿತುಬಿಡುತ್ತಾರೆ. ಹಾಗೆ ವಿಡಿಯೋ, ಗೇಮ್, ಫೋಟೋ, ಹಾಡು ಇಂತಹ ಹತ್ತಾರು ವಿಚಾರಗಳಿಗೆ ಮೊಬೈಲ್ ಬಳಸುವುದು ನೋಡಬಹುದು.
ಸದ್ಯಕ್ಕೆ ಮೊಬೈಲ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಭಾರತ ಸ್ಮಾರ್ಟ್ ಪೋನ್ ಮಾರುಕಟ್ಟೆಯ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ. ಹಾಗೆ ನೆಟ್‌ವರ್ಕ್ ವಿಚಾರದಲ್ಲೂ ಕೂಡ ಭಾರತದಲ್ಲಿ ಅಗ್ಗದ ಬೆಲೆಗೆ ಇಂಟರ್‌ನೆಟ್ ಸೇವೆ ಸಿಗುತ್ತಿದೆ. ಇನ್ನು ಇಂಟರ್‌ನೆಟ್ ನೀಡಲು ಹತ್ತಾರು ಕಂಪನಿಗಳಿವೆ. ಇತ್ತೀಚಿಗೆ ಜನರು ಹೊಸ ಮೊಬೈಲ್ ಬದಲಿಸಿದಂತೆ ಮೊಬೈಲ್ ಸಂಖ್ಯೆಗಳ ಬದಲಿಸುವುದು, ಪೋರ್ಟ್ ಮಾಡುವುದು ಇಂತಹ ಕೆಲಸಗಳಲ್ಲಿ ಹೆಚ್ಚು ತೊಡಗುವುದು ನೋಡಬಹುದು.

ಆದ್ರೆ ನೀವು ಕಳೆದ 5ರಿಂದ 10 ವರ್ಷದಲ್ಲಿ ಒಂದೇ ಮೊಬೈಲ್ ಸಂಖ್ಯೆ ಹೊಂದಿದ್ದೀರಿ ಎಂದಾದರೆ ಈ ಸುದ್ದಿ ನೀವು ಓದಲೇಬೇಕು. ಅದರಲ್ಲೂ ನೀವೇನಾದರು ಒಂದೇ ಸಿಮ್ ಕಾರ್ಡ್ ಹೊಂದಿದ್ದು ಅದು ಕೂಡ 5ಕ್ಕಿಂತ ಹೆಚ್ಚು ವರ್ಷಗಳ ಕಾಲ ಬಳಸಿದ್ದೀರಿ ಇಂದಿಗೂ ಅದೇ ನಂಬರ್ ಮೂಲಕ ದೈನಂದಿನ ವ್ಯವಹಾರಗಳ ಮಾಡುತ್ತಿದ್ದೀರಾ?
5 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ನಿಮ್ಮ ಹಳೆಯ ನಂಬರ್ ಅನ್ನೇ ಬಳಸುತ್ತಿದ್ದರೆ ನಿಮ್ಮಲ್ಲಿ ಎಲ್ಲರಂತಲ್ಲ ಕೆಲವು ವಿಶೇಷ ಗುಣಗಳಿವೆ ಎಂದು ವರ್ಗೀಕರಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆಯು ಎಷ್ಟು ವರ್ಷ ಹಳೆಯದು ಎಂಬ ಆದಾರದ ಮೇಲೆ ನೀವು ಎಂತಹ ವ್ಯಕ್ತಿತ್ವ ಹೊಂದಿದ್ದೀರಿ ಎಂಬುದನ್ನು ಕೂಡ ಗುರುತಿಸಬಹುದು. ಹಾಗಾದ್ರ ದೀರ್ಘಕಾಲ ಒಂದೇ ನಂಬರ್ ಹೊಂದಿರುವವರ ಗುಣವೇನು ನೋಡಿ.
ನೀವು ಸಾಲ ಮಾಡುವವರಲ್ಲ
ನೀವು 5 ವರ್ಷದಿಂದ ಒಂದೇ ನಂಬರ್ ಇಂದಿಗೂ ಬಳಸುತ್ತಿದ್ದರೆ ನೀವು ಸುಸ್ತಿದಾರರಲ್ಲ ಎಂಬುದನ್ನು ಹೇಳುತ್ತದೆ. ಅಂದರೆ ಸಾಲ ಮಾಡಿದ್ದರೂ ಕೂಡ ಅದನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡುವವರು ಎಂಬುದನ್ನು ವಿವರಿಸಲಿದೆ. ಹಾಗೆ ಸಾಲ ಮಾಡಿದವರೆಲ್ಲರು ತಮ್ಮ ಮೊಬೈಲ್ ಸಂಖ್ಯೆ ಬದಲಿಸುತ್ತಾರೆ ಎಂಬುದು ಕೂಡ ಅಲ್ಲ. ಈ 5 ವರ್ಷದಲ್ಲಿ ನಿಮ್ಮಿಂದ ಯಾರಿಗೂ ಮೋಸ ಮಾಡಿದ ಘಟನೆಗಳು ನಡೆದಿಲ್ಲ ಎಂದರ್ಥ.
ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿ
ನೀವು ಸಂಬಂಧಗಳಲ್ಲಿ ನಂಬಿಕೆ ಇಟ್ಟಿರುವ ಹಾಗೂ ಯಾವುದೇ ಕಾರಣಕ್ಕೂ ಯಾರ ಸಂಬಂಧವನ್ನು ಹಾಳು ಮಾಡಿಕೊಳ್ಳಲು ಇಷ್ಟಪಡದಂತಹ ವ್ಯಕ್ತಿಯಂತೆ. ಹೀಗಾಗಿ ದೀರ್ಘಕಾಲದಿಂದಲೂ ಒಂದೇ ಮೊಬೈಲ್ ನಂಬರ್ ಬಳಸಲು ನೀವು ಇಷ್ಟಪಡುತ್ತೀರಿ, ಸಂಬಂಧಗಳ ಕಾರಣದಿಂದಾಗಿಯೇ ಈ ಸಂಖ್ಯೆ ಬದಲಿಸುವ ನಿರ್ಧಾರವನ್ನು ನೀವು ಮುಂದೂಡಿರುತ್ತೀರಿ.
ನೀವು ಪ್ರಾಮಾಣಿಕರು
ಹಲವು ವರ್ಷದಿಂದ ಒಂದೇ ಮೊಬೈಲ್ ಸಂಖ್ಯೆ ನೀವು ಬಳಸುತ್ತಿದ್ದರೆ ನೀವು ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವವರಂತೆ. ನೀವು ಯಾವುದೇ ಸಮಯದಲ್ಲಿ ಯಾವುದೇ ಸಂದರ್ಭದಲ್ಲಿಯೂ ತಮ್ಮ ಪ್ರಾಮಾಣಿಕತೆ ಬಿಟ್ಟುಕೊಡುವುದಿಲ್ಲ, ಹಾಗೆ ಯಾವುದೇ ಸಮಯದಲ್ಲಿ ಮೋಸ ಮಾಡಲು ಇಚ್ಚೋಸುವುದಿಲ್ಲ. ಹೀಗಾಗಿ ನಿಮ್ಮ ಸಂಬಂಧ ಮತ್ತಷ್ಟು ಬಲವಾಗುತ್ತಲೇ ಸಾಗುತ್ತದೆ.
ನಿಮ್ಮ ಮೇಲೆ ಯಾವ ಆರೋಪಗಳಿಲ್ಲ
ನಿಮ್ಮ ಮೇಲೆ ಯಾವುದೇ ರೀತಿಯಲ್ಲೂ ದೂರುಗಳಿಲ್ಲ. ಅಂದರೆ ಸ್ನೇಹಿತರಿಂದಲಾಗಲಿ, ಕುಟುಂಬಸ್ಥರಿಂದಗಲಿ, ಅಥವಾ ಪೊಲೀಸರ ಬಳಿಯೂ ನಿಮ್ಮ ಮೇಲೆ ಯಾವುದೇ ಕೇಸ್‌ಗಳು, ದೂರುಗಳು, ಆರೋಪಗಳಿಲ್ಲ. ಒಂದು ರೀತಿಯಲ್ಲಿ ನೀವು ಪರಿಶುದ್ಧರು.



Click it and Unblock the Notifications











