Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅರ್ಧವಿರಾಮ ಟ್ಯಾಟೂ ಹಾಕಿಸಿದವರ ನೋಡಿದ್ದೀರಾ? ಇದರರ್ಥ ಗೊತ್ತಾ? ಅವರ ಮೇಲೆ ಕಣ್ಣಿಡುವುದು ಸೂಕ್ತ!!
ಯುವ ಜನಾಂಗ ಈಗ ಟ್ಯಾಟೂಗಳ ಟ್ರೆಂಡ್‌ಗೆ ಹೆಚ್ಚು ಮಾರುಹೋಗುವುದನ್ನು ನಾವು ನೋಡಿದ್ದೇವೆ. ಹುಡುಗಿಯರು, ಹುಡುಗರು ತಮ್ಮ ಮೈ ಮೇಲೆ ಇಷ್ಟದ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಕೆಲವರು ಚಿತ್ರ ವಿಚಿತ್ರವಾಗಿ ಟ್ಯಾಟೂ ಹಾಕಿಸಿಕೊಳ್ಳುವುದು ಕೂಡ ನಾವು ನೋಡಬಹುದು. ಹಾಗೆ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಬರೆದವರು ಕೂಡ ಇದ್ದಾರೆ.
ಹಾಗೆ ಮೈ ಮೇಲೆ ಹಾಕಿಸಿಕೊಂಡ ಟ್ಯಾಟೂ ಕೂಡ ಸುದ್ದಿಯಾಗಿದ್ದೂ ಇದೆ. ಅದರಲ್ಲೂ ಕ್ರಿಕೆಟರ್ ವಿರಾಟ್ ಕೊಹ್ಲಿ, ಶಿಖರ್ ಧವನ್, ನಟ, ನಟಿಯರು ಟ್ಯಾಟೂ ಹಾಕಿಸಿಕೊಂಡಾಗ ಅವರ ಅಭಿಮಾನಿಗಳು ಕೂಡ ಅದನ್ನೇ ಫಾಲೋ ಮಾಡೋದನ್ನು ನೋಡಿರುತ್ತೇವೆ. ಈಗ ಕೈ ಮೇಲೆ ಹಾಲಿನ ಮೇಲೆ ಅಷ್ಟೇ ಏಕೆ ಅಂಗಾಲಿನ ಮೇಲೂ ಟ್ಯಾಟೂ ಹಾಕಿಸಿಕೊಳ್ಳುವುದು ನೋಡಬಹುದು.

ಕೆಲವು ತಮ್ಮ ಇಷ್ಟ ಹೆಸರು, ದೇವರ ಚಿತ್ರ ಹಾಗೆ ತಮ್ಮ ಇಷ್ಟದ ಸಿಂಬಲ್‌ಗಳನ್ನು ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಯಾರು ಕೂಡ ಸುಮ್ಮನೆ ಮನಸ್ಸಿಗೆ ಬಂದದ್ದನ್ನು ಟ್ಯಾಟೂ ಹಾಕಿಸುವುದಿಲ್ಲ. ಅವರು ಹತ್ತಾರು ಬಾರಿ ಯೋಚಿಸುತ್ತಾರೆ. ಆ ಟ್ಯಾಟೂವಿನಲ್ಲಿ ಅರ್ಥ ಇರುವಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಒಮ್ಮೆ ಟ್ಯಾಟೂ ಹಾಕಿಸಿದರೆ ಅದನ್ನು ತೆಗೆಯುವುದು ಬಹಳ ಕಷ್ಟ. ಹೀಗಾಗಿ ಹತ್ತಾರು ಬಾರಿ ಆಲೋಚಿಸಿ ಟ್ಯಾಟೂ ಹಾಕಿಸುತ್ತಾರೆ.
ಆದ್ರೆ ಕೆಲವೊಂದು ಸಿಂಬಲ್‌ಗಳು, ಚಿಹ್ನೆಗಳು ಒಳಾರ್ಥಗಳ ಹೊಂದಿರುತ್ತವೆ, ನಾವಿಂದು ಸೆಮಿಕೋಲರ್ ಟ್ಯಾಟೂ ಕುರಿತಂತೆ ಅದರ ಒಳ ಅರ್ಥದ ಕುರಿತಂತೆ ತಿಳಿದುಕೊಳ್ಳೋಣ. ನೀವು ಈ ಮೇಲೆ ನೀಡಲಾಗಿರುವ ಸೆಮಿಕೋಲರ್ ಟ್ಯೂಟೂವನ್ನು ಯಾರ ಕೈ ಮೇಲಾದರು ಕಾಲಿನ ಮೇಲೆ ನೋಡಿರಬಹುದು. ಆದ್ರೆ ಇದರ ಅರ್ಥ ನಿಮಗೆ ತಿಳಿದಿರುವುದಿಲ್ಲ.
ಸೆಮಿಕೋಲನ್ ಚಿಹ್ನೆಯನ್ನು ಕನ್ನಡದಲ್ಲಿ ನಾವು ಅರ್ಧವಿರಾಮ ಎಂದು ಕರೆಯುತ್ತೇವೆ. ಇತ್ತೀಚಿಗೆ ಈ ಟ್ಯಾಟೂ ಬಹಳ ಫೇಮಸ್ ಆಗಿದೆ. ಯುವಜನತೆಯ ಕೈ ಮೇಲೆ ಈ ಅರ್ಧ ವಿರಾಮ ಚಿಹ್ನೆಯ ಟ್ಯಾಟೂ ನೀಡಬಹುದು. ನೋಡಲು ಬಹಳ ಟ್ರೆಂಡಿಯಾಗಿ ಕಾಣುತ್ತದೆ. ಆದ್ರೆ ಈ ಟ್ಯಾಟೂ ಮಾನಸಿಕ ಆರೋಗ್ಯ ಹಾಗೂ ಆತ್ಮಹತ್ಯೆ ತಡೆಗಟ್ಟುವಿಕೆಯ ಪ್ರಾಮುಖ್ಯತೆ ಹೊಂದಿದೆ ಎಂಬುದು ನಿಮಗೆ ಗೊತ್ತಾ?
ಈ ಸೆಮಿಕೋಲರ್ ಟ್ರೆಂಡ್ 2013ರಲ್ಲಿ ಆರಂಭಗೊಂಡಿತು. ಅದು ಸಾಮಾಜಿಕ ಜಾಲತಾಣದ ಒಂದು ಅಭಿಯಾನದ ಮೂಲಕ ಆರಂಭಗೊಂಡಿತು. ಈ ಟ್ಯಾಟೂವನ್ನು ಖಿನ್ನತೆ, ಆತ್ಮಹತ್ಯೆ, ವ್ಯಸನಗಳ ವಿರುದ್ಧ ಹೋರಾಟದ ಭರವಸೆ, ಪ್ರೀತಿಯ ಸಂಕೇತವಾಗಿ ಬಳಸುವ ಅಭಿಯಾನವಾಗಿ ಇದನ್ನು ಆರಂಭಿಸಲಾಯಿತು. ಏಕೆಂದರೆ ಬರಹಗಾರರು ತಮ್ಮ ವಾಕ್ಯದ ಕೊನೆಯಲ್ಲಿ ಅರ್ಧ ವಿರಾಮದ ಚಿಹ್ನೆ ಬಳಸುತ್ತಾರೆ. ಆದ್ರೆ ನಾವು ನಮ್ಮ ಜೀವನ ಅಂತ್ಯಗೊಳಿಸಲು ನಿರ್ಧರಿಸಬಾರದು ಎಂಬ ಸಂಕೇತವನ್ನು ಇದು ಸೂಚಿಸುತ್ತದೆ.
ಈ ಅರ್ಧ ವಿರಾಮದ ಟ್ಯಾಟೂವಿನಲ್ಲಿ ಇಷ್ಟೊಂದು ಗಂಭೀರ ಆಲೋಚನೆ ಕೂಡ ಅಡಗಿದೆ. ಆದ್ರೆ ಬರು ಬರುತ್ತಾ ಈ ಟ್ರೆಂಡ್ ಬದಲಾಗಿದೆ. ಹಲವರು ಖಿನ್ನತೆಗೆ ಒಳಗಾಗಿ ಜೀವನ ಗೆದ್ದು ಬಂದವರು, ಆತ್ಮಹತ್ಯೆಯ ಆಲೋಚನೆ ಮಾಡಿ ಜೀವನ ಕೊನೆಗೊಳಿಸಲು ಮುಂದಾಗಿ ನಂತರ ಅವರ ನಿರ್ಧಾರ ಬದಲಿಸಿರುವವರು ಈ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದೊಂದು ಪುನರ್‌ಜೀವನ ಎಂದು ಬಣ್ಣಿಸಲಾಗುತ್ತದೆ.
ಹೀಗಾಗಿ ಈ ಸೆಮಿಕೋಲರ್ ಟ್ಯಾಟೂ ಹಾಕಿಸಿಕೊಂಡವರು ನಿಮ್ಮ ನಡುವೆ ಇದ್ದರೆ ಅಥವಾ ಹಾಕಿಸಿಕೊಂಡವರನ್ನು ನೀವು ನೋಡಿದರೆ ಅವರನ್ನು ಎಚ್ಚರಿಕೆಯಿಂದ ಗಮನಿಸಿ ನೋಡಿ. ಏಕೆಂದರೆ ಅವರಲ್ಲಿ ಯಾವುದಾದರು ಮಾನಸಿಕ ಸಮಸ್ಯೆಯೂ ಇರಬಹುದು. ಇಲ್ಲವೆ ಇಂತಹ ಸಮಸ್ಯೆಯಿಂದ ಹೊರಬರಲು ಅವರು ಹೋರಾಡುತ್ತಿರಬಹುದು. ಕೆಲವರು ಈ ಯಾವುದೇ ಅರ್ಥ ತಿಳಿಯದೆ ಈ ಟ್ಯಾಟೂ ಹಾಕಿಸಿಕೊಂಡವರು ಕೂಡ ಇದ್ದಾರೆ.



Click it and Unblock the Notifications