Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗುವವರು ಈ ನಿಯಮಗಳನ್ನು ಪಾಲಿಸಲೇಬೇಕು
ಸ್ವಾತಂತ್ರ್ಯ ದಿನಾಚರಣೆ ಹತ್ರ ಬರ್ತಾ ಇದ್ದಂತೆ ಹರ್ ಘರ್ ತ್ರಿರಂಗಾ ಅಭಿಯಾನ ಜೋರಾಗಿದೆ. ಪ್ರಧಾನಿ ಮೋದಿಯವರು ಕರೆ ನೀಡಿರುವ ಈ ಅಭಿಯಾನಕ್ಕೆ ಜನತೆ ಕೂಡ ಕೈ ಜೋಡಿಸಿದೆ. ನಮ್ಮ ಮನೆಯ ಮೇಲೆ ತಿರಂಗಾ ಧ್ವಜ ಹಾರಾಡುವುದು ನೋಡುವುದೇ ನಮಗೆ ಆನಂದ ಅಲ್ಲವೇ, ಆದರೆ ನಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸುವಾಗ ನಾವು ಕೆಲವೊಂದು ನಿಯಮ ಪಾಲಿಸಲೇಬೇಕು. ಇಲ್ಲದಿದ್ದರೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದಂತಾಗುವುದು, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ.

ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗುವಾಗ ಈ ಬಗ್ಗೆ ಜಾಗ್ರತೆವಹಿಸಿ:
ಆಗಸ್ಟ್ 13ರಿಂದ ಆಗಸ್ಟ್ 15ರ ತನಕ ಹರ್ ಘರ್ ತಿರಂಗಾ
ಈ ಅಭಿಯಾನ ಆಗಸ್ಟ್ 15ರ ತನಕ ಇರಲಿದೆ.
ಈ ಅಭಿಯಾನದಲ್ಲಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಸಂಜೆ ಸೂರ್ಯಾಸ್ತದವರೆಗೆ ಹಾರಿಸಬೇಕು.
ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗುವುದು ಹೇಗೆ?
harghartiranga.com ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಅಪ್‌ಲೋಡ್ ಸೆಲ್ಫಿ ಕ್ಲಿಕ್ ಮಾಡಬೇಕು. ನಂತರ 'Click to Participate' or 'Next ಸೆಲೆಕ್ಟ್ ಮಾಡಬೇಕು.
ನಂತರ ಅಗ್ಯತ ಮಾಹಿತಿ ಅಂದರೆ ನಿಮ್ಮ ಹೆಸರು, ಫೋನ್ ನಂಬರ್, ರಾಜ್ಯ, ದೇಶವನ್ನು ನಮೂದಿಸಬೇಕು.
ನಂತರ ತಿರಂಗಾ ಜೊತೆಗೆ ಸೆಲ್ಫಿ ಅಪ್‌ಲೋಡ್ ಮಾಡಿ. ನಂತರ 'Generate Certificate' ಕ್ಲಿಕ್ ಮಾಡಿ.
ರಾಷ್ಟ್ರಧ್ವಜ ಹಾರಿಸುವಾಗ ಈ ನಿಯಮಗಳನ್ನು ಪಾಲಿಸಲೇಬೇಕು
2002ರ ಭಾರತದ ರಾಷ್ಟ್ರಧ್ವಜ ನಿಯಮ ಪ್ರಕಾರ
ಕೇಸರಿ ಬಣ್ಣ ಮೇಲ್ಭಾಗದಲ್ಲಿ, ಹಸಿರು ಬಣ್ಣ ಕೆಳಗಡೆ ಬರುವಂತೆ ರಾಷ್ಟ್ರಧ್ವಜವನ್ನು ಹಾರಿಸಬೇಕು. ಉಲ್ಟಾ ಹಾರಿಸಲೇಬಾರದು, ಶಿಕ್ಷಾರ್ಹ ಅಪರಾಧವಾಗಿದೆ.
ರಾಷ್ಟ್ರಧ್ವಜ ಒಳ್ಳೆಯ ಸ್ಥಿತಿಯಲ್ಲಿ ಇರಬೇಕು, ಹರಿದಿರಬಾರದು ಅಥವಾ ಯಾವುದೇ ಹಾನಿಯುಂಟಾಗಿರಬಹುದು.
ರಾಷ್ಟ್ರಧ್ವಜ ನೇರವಾಗಿ ಹಾರಾಡುವಂತಿರಬೇಕು, ಬಾಗಿದಂತಿರಬಾರದು.
ಧ್ವಜವನ್ನು ಅಲಂಕಾರಿಕವಾಗಿ ಬಳಸಬಾರದು, ಧ್ವಜವನ್ನು ಕಾಸ್ಟ್ಯೂಮ್ ಆಗಿ ಬಳಸಬಾರದು.
ಧ್ವಜವನ್ನು ಎತ್ತರದ ಜಾಗದಲ್ಲಿಡಬೇಕು. 3:2 ಅನುಪಾತದದಲ್ಲಿರುವಂತೆ ಧ್ವಜ ಹಾರಿಸಬೇಕು.
ರಾಷ್ಟ್ರಧ್ವಜ ಸಂಹಿತೆ ಪ್ರಕಾರ ರಾಷ್ಟ್ರಧ್ವಜ ಆಯಾತಾಕಾರದಲ್ಲಿಯೇ ಇರಬೇಕು.
ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭ ನೇರವಾಗಿರಬೇಕು, ಯಾವುದೇ ಭಾಗಕ್ಕೆ ವಾಲಿರಬಹುದು.
ನಾವು ಮನೆ ಮೇಲೆ ರಾಷ್ಟ್ರಧ್ವಜ ಹಾರಾಡಿಸುವಾಗ ಅದಕ್ಕೆ ಸಮನಾಗಿ ಅಥವಾ ಧ್ವಜದ ಬಲಗಡೆ ಬೇರೆ ಯಾವುದೇ ಧ್ವಜವಿರಬಾರದು.
ಇನ್ನು ರಾಷ್ಟ್ರಧ್ವಜವನ್ನು ಸಂಜೆ ಹೊತ್ತಿನ ಮೇಲೆ ಹಾಗೇಬಿಡಬಾರದು, ರಾಷ್ಟ್ರಧ್ವಜವನ್ನು ಹಾರಿಸಿದ ಮೇಲೆ ಕೆಳಗೆ ಇಳಿಸಬೇಕು.
ರಾಷ್ಟ್ರಧ್ವಜವನ್ನು ಇಳಿಸಿ ಸ್ವಚ್ಛವಾದ ಸಮತಟ್ಟಾದ ಪ್ರದೇಶ ಅಥವಾ ಟೇಬಲ್ ಮೇಲೆ ಇಡಿ ನಂತರ ಮೊದಲಿಗೆ ಕೇಸರಿ ಭಾಗವನ್ನು ಬಿಳಿಭಾಗದ ಮೇಲೆ ಮಡಚಿ, ನಂತರ ಹಸಿ ಬಣ್ಣವನ್ನು ಮಡಚಿ, ಬಳಿಕ ಅಶೋಖ ಚಕ್ರ ಸಂಪೂರ್ಣ ಕಾಣುವಂತೆ ಮಡಚಬೇಕು. (ಯೂಟ್ಯೂಬ್ ನೋಡಿ ತಿಳಿಯುತ್ತೆ)
ನಂತರ ಮಡಚಿದ ಧ್ವಜವನ್ನು ಒಂದೇ ಕೈಯಲ್ಲಿ ಎತ್ತಿಕೊಳ್ಳಬಾರದು, ಎರಡು ಕೈಯಲ್ಲಿ ಗೌರವದಿಂದ ಎತ್ತಿಕೊಂಡು ಭದ್ರವಾದ ಸ್ಥಳದಲ್ಲಿ ಇಡಬೇಕು. ಅದಕ್ಕೆ ದೂಳು, ಕೊಳೆಯಾಗದಂತೆ ಜೋಪಾನವಾಗಿ ಇಡಬೇಕು. ಇಷ್ಟಬಂದಾಗ ತೆಗೆದು ಬಳಸುವುದು, ಮಕ್ಕಳಿಗೆ ಆಡಲು ನೀಡುವುದು ಇಂಥ ತಪ್ಪು ಮಾಡದಿರಿ.
ಒಂದು ವೇಳೆ ರಾಷ್ಟ್ರಧ್ವಜ ಹಾಳಾದರೆ ಏನು ಮಾಡಬೇಕು?
ರಾಷ್ಟ್ರಧ್ವಜ ಬಳಸಲಾರದ ಸ್ಥಿತಿಯಲ್ಲಿದ್ದರೆ ಅದನ್ನು ಗೌರವಯುತವಾಗಿ ಸುಟ್ಟು ಹಾಕಬೇಕು. ಸ್ವಾತಂತ್ರ್ಯ ದಿನಾಚರಣೆಯಂದು ಬಳಸುವ ಪೇಪರ್ ಧ್ವಜವನ್ನು ಕೂಡ ಹಾಗೇ ಬಿಸಾಡಬೇಡಿ, ಅದನ್ನು ಕೂಡ ಅಷ್ಟೇ ಗೌರವಯುತವಾಗಿ ಸುಟ್ಟು ಹಾಕಿ.
ದೇವಾಲಯದಲ್ಲಿ ನಡೆಯಲಿದೆ ವಿಶೇಷ ಪೂಜೆ
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಅಗಸ್ಟ್ 14 ಮತ್ತು ಆಗಸ್ಟ್ 15ರಂದು ವಿದ್ಯುತ್ ದಿಪಾಲಂಕಾರ ಮಾಡಲಾಗುವುದು, ಆಗಸ್ಟ್ 15ರಂದು ದೇವಾಲಯದಲ್ಲಿ ನಡೆಯಲಿದೆ ವಿಶೇಷ ಪೂಜೆ ಮಾಡುವಂತೆ ಸೂಚನೆ ನೀಡಲಾಗಿದೆ.



Click it and Unblock the Notifications