Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Happy Raksha Bandhan Wishes: ರಕ್ಷಾ ಬಂಧನಕ್ಕೆ ಕಳುಹಿಸಲು ಹೃದಯಸ್ಪರ್ಶಿ ಸಂದೇಶಗಳು ಇಲ್ಲಿವೆ ನೋಡಿ
ಪ್ರತಿ ವರ್ಷದಂತೆ ಈ ವರ್ಷವೂ ಅಣ್ಣ-ತಂಗಿಯರ ಪವಿತ್ರ ಹಬ್ಬ ರಕ್ಷಾ ಬಂಧನವನ್ನು ಆಚರಣೆ ಮಾಡಲಾಗುತ್ತಿದೆ. ಶ್ರಾವಣ ಹುಣ್ಣಿಮೆಯ ದಿನದಂದು ಸಹೋದರರಿಗೆ ಸಹೋದರಿ ರಾಖಿ ಕಟ್ಟುವ ಮೂಲಕ ರಕ್ಷೆಯನ್ನು ಬೇಡುವುದಾಗಿದೆ. ಈ ವರ್ಷ ಆಗಸ್ಟ್ 09 ರಂದು ರಾಕಿ ಹಬ್ಬವನ್ನು ಆಚರಣೆ ಮಾಡಲಾಗ್ತಿದೆ. ಈ ವಿಶೇಷ ದಿನಕ್ಕೆ ನಿಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಿಗೆ ಸ್ಪೆಷಲ್ ಆಗಿ ಶುಭ ಕೋರಬಹುದು.
ನಿಮ್ಮ ಒಂದು ಶುಭ ಹಾರೈಕೆ ಸಹೋದರರಲ್ಲಿ ಸಂತೋಷ ಉಂಟು ಮಾಡಬಹುದು. ಅವರು ಎಷ್ಟೇ ದೂರ ಇದ್ದರೂ ಒಂದು ಸಂದೇಶ ಅವರಿಗೆ ಇನ್ನಿಲ್ಲದ ಸಂತಸ ತರಬಹುದು. ಹಾಗೆ ನಿಮ್ಮಿಂದ ಅವರು ಬಯಸೋದು ಕೂಡ ಇದನ್ನೇ. ಹಾಗಾದ್ರೆ ನಿಮ್ಮ ಸಹೋದರ ಸಹೋದರಿಯರಿಗೆ ಶುಭ ಕೋರಲು ನಾವಿಂದು ಶುಭ ಸಂದೇಶಗಳ ಹೊತ್ತು ತಂದಿದ್ದೇವೆ.

ಅಣ್ಣನಿಗೆ ಈ ರೀತಿ ಶುಭಾಷಯ ತಿಳಿಸಿ!
ಯಾವಾಗಲೂ ನನಗೆ ಆಧಾರಸ್ತಂಭವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ನಿನ್ನಂತಹ ಸಹೋದರನನ್ನು ಪಡೆದ ನಾನು ತುಂಬಾ ಧನ್ಯ. ರಕ್ಷಾ ಬಂಧನದ ಶುಭಾಶಯಗಳು
ರಕ್ತ ಸಂಬಂಧದಲ್ಲಿ ನೀನು ಬಹಳ ಶ್ರೇಷ್ಠ. ನನ್ನ ಎಲ್ಲಾ ಸಿಹಿ ನೆನಪಿನ ಜೊತೆಗೆ ಬೆರೆತಿರುವ ನಿನ್ನ ನೆನಪುಗಳು ಎಂದೆಂದಿಗೂ ಹೀಗೆ ಉಳಿಯಲಿ. ರಕ್ಷಾ ಬಂಧನದ ಶುಭಾಶಯಗಳು
ನನ್ನ ಒಡನಾಡಿ, ನನ್ನ ರಕ್ಷಕ ಮತ್ತು ನನ್ನೊಂದಿಗೆ ಸಮಾನವಾಗಿ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಅಣ್ಣಾ. ನೀನು ಅತ್ಯುತ್ತಮ ಸಹೋದರ. ರಕ್ಷಾ ಬಂಧನದ ಶುಭಾಶಯಗಳು!
ನನಗಾಗಿಯೇ ಹುಟ್ಟಿ ಬಂಧವರಲ್ಲಿ ನೀನೂ ಒಬ್ಬ. ಎಂದೆಂದಿಗೂ ನೀನು ನನ್ನ ಸಹೋಧರನಾಗಿಯೇ ಹುಟ್ಟಿ ಬಾ. ನೀನು ಅಣ್ಣ ಮಾತ್ರವಲ್ಲ ನನಗೊಬ್ಬ ಉತ್ತಮ ಸ್ನೇಹಿತ. ರಕ್ಷಾ ಬಂಧನದ ಶುಭಾಶಯಗಳು!
ನನ್ನ ಕಾಳೆಯುವ ನನ್ನ ಪ್ರೀತಿಯ ಸಹೋದರ, ನನ್ನ ರಕ್ಷಕ ಮತ್ತು ನನ್ನನ್ನು ಚೆನ್ನಾಗಿ ತಿಳಿದಿರುವ ಏಕೈಕ ವ್ಯಕ್ತಿಗೆ ರಕ್ಷಾ ಬಂಧನದ ಶುಭಾಶಯಗಳು.
ನನ್ನ ಹಲವು ಸಂತೋಷದಲ್ಲಿ ನೀನು ಭಾಗಿದಾರ. ನಿನ್ನ ಕಷ್ಟವೆಲ್ಲ ನನಗಿರಲಿ, ನನ್ನ ನಗು ನಿನ್ನಲ್ಲಿ ನೆಲೆಸಿರಲಿ. ರಕ್ಷಾ ಬಂಧನದ ಶುಭಾಶಯಗಳು!
ನಿಮ್ಮ ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣಾ.
ನಮ್ಮ ಈ ಪ್ರೀತಿಯ ಬಂಧವು ದಿನದಿಂದ ದಿನಕ್ಕೆ ಬಲಗೊಳ್ಳಲಿ. ರಕ್ಷಾ ಬಂಧನದ ಶುಭಾಶಯಗಳು ಅಣ್ಣಾ..
ನೀನು ಯಾವಾಗಲೂ ನನ್ನ ಆತ್ಮೀಯ ಸ್ನೇಹಿತ. ನನ್ನ ಕೈ ಹಿಡಿದು ನಡೆಸಿದ್ದೀಯ. ಈ ಇಡೀ ಜಗತ್ತಿನಲ್ಲಿ ನಿನಗಿಂತ ಉತ್ತಮ ಸಹೋದರ ಇರಲಾರ. ನೀನು ಯಾವಾಗಲೂ ಜೀವನದಲ್ಲಿ ಚೆನ್ನಾಗಿರಬೇಕೆಂದು ಹಾರೈಸುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣಾ!



Click it and Unblock the Notifications
