Happy Makar Sankranti 2026: ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ ಸುಂದರ ಶುಭಾಶಯಗಳು, ಸಂದೇಶಗಳು!

ಎಳ್ಳು ಬೆಲ್ಲದ ಸವಿಯಂತೆ ನಿಮ್ಮ ಜೀವನ ಸಿಹಿಯಾಗಿರಲಿ! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಅತ್ಯುತ್ತಮ ಶುಭಾಶಯಗಳು. ಹೌದು, ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಮಕರ ಸಂಕ್ರಾಂತಿ 2026ರ (Makar Sankranti 2026) ಮೊದಲ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವಾದ ಇದನ್ನು ಅತ್ಯಂತ ಪುಣ್ಯಪ್ರದವೆಂದು ಪರಿಗಣಿಸಲಾಗುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಈ ಸುಗ್ಗಿಯ ಹಬ್ಬವನ್ನು ಭಿನ್ನ ಹೆಸರುಗಳಿಂದ, ವಿಶಿಷ್ಟ ಸಂಪ್ರದಾಯಗಳೊಂದಿಗೆ ಆಚರಿಸುವುದು ವಿಶೇಷ.

ರೈತ ಸಮುದಾಯಕ್ಕೆ ಮಕರ ಸಂಕ್ರಾಂತಿ (Happy Makar Sankranti 2026) ಹೊಸ ಕೃಷಿ ಸುಗ್ಗಿಯ ಸಂಕೇತವಾಗಿದೆ. ಇದು ಚಳಿಗಾಲದ ಅಂತ್ಯ, ಫಲವತ್ತಾದ ಬೆಳೆಗಳ ಕೊಯ್ಲು ಮತ್ತು ಸಮೃದ್ಧಿಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಈ ಶುಭ ಸಂದರ್ಭವು ಬದುಕಿನಲ್ಲಿ ಹೊಸ ಭರವಸೆ, ಐಶ್ವರ್ಯ ಮತ್ತು ಸಂತೋಷವನ್ನು ಹೊತ್ತು ತರುತ್ತದೆ ಎಂಬ ನಂಬಿಕೆಯಿದೆ.

Happy Makar Sankranti 2026 Wishes

2026ರ ಮಕರ ಸಂಕ್ರಾಂತಿ ಬಂದಿದೆ. ಮಾಗಿಯ ಚಳಿ ಸರಿಗುತ್ತಿದೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಈ ಪವಿತ್ರ ಕಾಲ ಸಮೃದ್ಧಿಯ ಸಂಕೇತವಾಗಿದೆ. ಬೆಳೆ ಮನೆಗೆ ಬರುವ ಸಂಭ್ರಮದಲ್ಲಿ ರೈತರು ಹಸುಗಳಿಗೆ ಕಿಚ್ಚು ಹಾಯಿಸಿ, ಬಣ್ಣಬಣ್ಣದ ಗಾಳಿಪಟ ಹಾರಿಸಿ, ಎಳ್ಳು-ಬೆಲ್ಲ ಬೀರಿ ಸೌಹಾರ್ದತೆ ಹಂಚಿಕೊಳ್ಳುತ್ತಾರೆ.

ಸಂಕ್ರಾಂತಿಯ ಶುಭಾಶಯಗಳು ಎಲ್ಲೆಡೆ ಮೊಳಗುತ್ತಿದ್ದು, ಜನರು ತಮ್ಮ ಆಪ್ತರು, ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ವಿವಿಧ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಸೌಹಾರ್ದತೆಯ ಹಬ್ಬದಂದು ಪ್ರೀತಿಪಾತ್ರರಿಗೆ ಶುಭ ಕೋರುವ ಸಂದೇಶಗಳು (Happy Makar Sankranti 2026 Wishes) ಇಲ್ಲಿವೆ.

ಸುಗ್ಗಿ ಹಬ್ಬದ ಸಡಗರಕ್ಕೆ ಇಲ್ಲಿವೆ ಶುಭಾಶಯಗಳು

ಎಳ್ಳು-ಬೆಲ್ಲದ ಸವಿ ಸಂದೇಶ

"ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿ ನೆನಪುಗಳನ್ನು ಮರೆತು, ಹೊಸ ವರ್ಷದ ಹಾದಿಯಲ್ಲಿ ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು."

ಸಮೃದ್ಧಿಯ ಹಾರೈಕೆ

"ನೇಸರನು ಪಥ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ಹೊಸ ಚೈತನ್ಯ ಮೂಡಲಿ. ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ. ಈ ಸಂಕ್ರಾಂತಿ ನಿಮ್ಮ ಬಾಳಲ್ಲಿ ಸಮೃದ್ಧಿಯನ್ನು ತರಲಿ. ಸುಗ್ಗಿ ಹಬ್ಬದ ಶುಭಾಶಯಗಳು."

ಸುಖ-ಶಾಂತಿಯ ಹಾರೈಕೆ

"ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ ಮತ್ತು ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸದಾ ಪ್ರಕಾಶಿಸಲಿ. ಮಕರ ಸಂಕ್ರಾಂತಿಯ ಶುಭಾಶಯಗಳು."

ನಕಾರಾತ್ಮಕತೆ ಸುಡುವ ಸಂಕೇತ

"ಸಂಕ್ರಾಂತಿಯ ಹಬ್ಬದ ಕಿಚ್ಚು ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು ಹಾಕಲಿ. ನಿಮ್ಮ ಬಾಳಿನಲ್ಲಿ ಬರೀ ಸಂತೋಷ ಮತ್ತು ಸುಖದ ಕ್ಷಣಗಳು ಅರಳಲಿ. ಹಬ್ಬದ ಶುಭಾಶಯಗಳು."

ಕನಸುಗಳ ಹಾರಾಟ

"ಗಾಳಿಪಟಗಳು ನೀಲ ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರುವಂತೆ, ನಿಮ್ಮ ಆಸೆ ಮತ್ತು ಕನಸುಗಳು ಹೊಸ ಎತ್ತರವನ್ನು ತಲುಪಲಿ. ಈ ಮಕರ ಸಂಕ್ರಾಂತಿ ನಿಮ್ಮ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿ."

ಸಿಹಿಯಾದ ಬದುಕಿನ ಹಾರೈಕೆ

"ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು ಮತ್ತು ಕಡಲೆಯ ಸಾರದಂಥ ಹದವಾದ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬದುಕು ಹಚ್ಚಹಸಿರಾಗಿರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು."

• ಎಳ್ಳು - ಬೆಲ್ಲ ಇಲ್ಲದೆ ಸಂಕ್ರಾಂತಿ ಇಲ್ಲ. ನೀವು ಇಲ್ಲದೆ ನನ್ನ ಬಾಳಿನಲ್ಲಿ ಸಿಹಿ ಇಲ್ಲ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

• ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತನಾಡೋಣ, ಎಲ್ಲರಿಗೂ ಒಳ್ಳೆಯದ್ದನ್ನೇ ಬಯಸೋಣ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

• ಸಂಕ್ರಾಂತಿಯ ಕೃಷಿ ಸುಗ್ಗಿಯಂತೆ ನಿಮ್ಮ ಕನಸುಗಳೂ ನನಸಾಗಲಿ. ನಿಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

• ಮಕರ ಸಂಕ್ರಾಂತಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪ್ರಗತಿ, ಸಮೃದ್ಧಿ ಮತ್ತು ಯಶಸ್ಸು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಸಂಕ್ರಾಂತಿ ವಿಶೇಷತೆ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಕ್ರಾಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಜನವರಿ 14 ರಂದು ಆಚರಿಸಲಾಗುವ ಈ ಹಬ್ಬದಲ್ಲಿ, ಸೂರ್ಯನ ರಾಶಿ ಬದಲಾವಣೆಯು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತಿ ಮಹತ್ವದಾಗಿದೆ. 12 ತಿಂಗಳುಗಳ ನಂತರ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವುದರಿಂದ, ಅನೇಕ ರಾಶಿಗಳಿಗೆ ಧನಯೋಗ ಮತ್ತು ರಾಜಯೋಗಗಳು ಒದಗಿ ಬರಲಿವೆ.

ಒಟ್ಟಾರೆ, ಸಂಕ್ರಾಂತಿಯು ಜೀವನದ ಹಳೆಯ ಕಹಿಯನ್ನು ಮರೆತು, ಹೊಸ ಚೈತನ್ಯದೊಂದಿಗೆ ಮುನ್ನಡೆಯಲು ಪ್ರೇರಣೆ ನೀಡುತ್ತದೆ. ಈ ಸುಗ್ಗಿಯ ಹಬ್ಬವು ನಿಮ್ಮ ಮನೆಯಲ್ಲಿ ಹಣ, ಧಾನ್ಯ ಮತ್ತು ಸಂತೋಷದ ಸುರಿಮಳೆಯನ್ನು ಸುರಿಸಲಿ ಎಂದು ಪ್ರಾರ್ಥಿಸೋಣ.

English summary

Happy Makar Sankranti 2026 Wishes in Kannada: Best Messages, Quotes and WhatsApp Status

Happy Makar Sankranti 2026: best Wishes, Greetings, Quotes, Messages, Facebook & Whatsapp Status Messages in Kannada
Story first published: Wednesday, January 14, 2026, 4:00 [IST]
X
Desktop Bottom Promotion