Kannada Rajyotsava 2025: ನಿಮ್ಮ ಪ್ರೀತಿಪಾತ್ರರಿಗೆ ಕನ್ನಡ ರಾಜ್ಯೋತ್ಸವಕ್ಕೆ ಈ ರೀತಿ ಶುಭಾಶಯ ಕೋರಿ! ಇಲ್ಲಿವೆ ಶುಭಾಶಯಗಳು

ನವೆಂಬರ್ 1 ಕನ್ನಡಿಗರ ಪಾಲಿಗೆ ಅತ್ಯಂತ ಸಂಭ್ರಮದ ಕ್ಷಣ. ಇದು ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ. ನವೆಂಬರ್ ತಿಂಗಳೆಲ್ಲಾ ಕನ್ನಡದ ಕಂಪು ಎಲ್ಲೆಲ್ಲೂ ಅನುರಣಿಸುತ್ತದೆ. ಹೌದು, ನವೆಂಬರ್ 1 ರಂದು ಕರುನಾಡಿನ ಹೆಮ್ಮೆಯ ಹಬ್ಬ ರಾಜ್ಯೋತ್ಸವವನ್ನು (Kannada Rajyotsava 2025) ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಐತಿಹಾಸಿಕ ದಿನ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಬಹುದಾದ ಶುಭಾಶಯಗಳು (Kannada Rajyotsava Wishes) ಇಲ್ಲಿವೆ.

ಕರ್ನಾಟಕವು ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಪಾವನ ಭೂಮಿಯಾಗಿದೆ. ಕಲೆ ಮತ್ತು ಸಾಹಿತ್ಯಕ್ಕೆ ಇದು ತವರೂರು. ಕನ್ನಡ ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಉಸಿರು ಮತ್ತು ಬದುಕು. ಚದುರಿಹೋಗಿದ್ದ ಕನ್ನಡ ಭಾಷಿಗರ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರೂಪಿಸಲಾಯಿತು. 'ಕನ್ನಡದ ಕುಲಪುರೋಹಿತ' ಎಂದೇ ಖ್ಯಾತಿಗಳಿಸಿದ್ದ ಆಲೂರು ವೆಂಕಟರಾಯರು 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸಿದ್ದರು.

Kannada Rajyotsava 2025 Wishes

1950ರಲ್ಲಿ ಭಾರತ ಗಣರಾಜ್ಯವಾದ ನಂತರ, ಭಾಷೆಗಳ ಆಧಾರದ ಮೇಲೆ ವಿವಿಧ ರಾಜ್ಯಗಳು ರೂಪುಗೊಂಡವು. ಇದರ ಫಲವಾಗಿ 1956ರ ನವೆಂಬರ್ 1 ರಂದು ಮೈಸೂರು ರಾಜ್ಯ ರಚನೆಯಾಯಿತು. ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಎಂದು ಘೋಷಿಸಲಾಯಿತು. ನಂತರ, ನವೆಂಬರ್ 1, 1973 ರಂದು ಮೈಸೂರು ರಾಜ್ಯಕ್ಕೆ 'ಕರ್ನಾಟಕ' (karnataka rajyotsava) ಎಂದು ಮರುನಾಮಕರಣ ಮಾಡಲಾಯಿತು. ಈ ದಿನವು ಕರುನಾಡಿನ ಉದಯದ ಸಡಗರ, ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ.

ಕರ್ನಾಟಕ ಮಾತ್ರವಲ್ಲದೆ, ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಈ ದಿನವನ್ನು ಅತಿ ವೈಭವದಿಂದ ಆಚರಿಸಿ ತಾಯಿ ಭುವನೇಶ್ವರಿಗೆ ನಮಿಸುತ್ತಾರೆ. ಇಂತಹ ಅದ್ಭುತ ದಿನದಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಬಹುದಾದ ಕೆಲವು ಶುಭಾಶಯಗಳು ಹಾಗೂ ಸಂದೇಶಗಳು ಇಲ್ಲಿವೆ.

• ಸರ್ವರಿಗೂ 'ಕನ್ನಡ ರಾಜ್ಯೋತ್ಸವ'ದ ಶುಭಾಶಯಗಳು.

• ನಮ್ಮ ಕನ್ನಡ, ನಮ್ಮ ಹೆಮ್ಮೆ. 'ಕನ್ನಡ ರಾಜ್ಯೋತ್ಸವದ ಶುಭಾಶಯಗಳು'.

• ನವೆಂಬರ್ ಮಾಸಕ್ಕೆ ಮಾತ್ರವಲ್ಲ, ಕನ್ನಡ ರಾಜ್ಯೋತ್ಸವವನ್ನು ಸದಾ ಆಚರಿಸೋಣ. ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸೋಣ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ಕನ್ನಡಿಗನ ಮನದಲ್ಲಿ ಕನ್ನಡ ಪ್ರೇಮವಿದ್ದರೆ ಯಾವುದೇ ಭಾಷೆ ಹೇರಿಕೆಗೆ ಹೆದರಬೇಕಾಗಿಲ್ಲ. ನಮ್ಮ ಕನ್ನಡವನ್ನು ಬೆಳೆಸೋಣ ಕನ್ನಡಿಗರೇ... ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ, ಒಲವೆತ್ತಿ ತೋರುವ ದೀಪ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಬಾರಿಸು ಕನ್ನಡ ಡಿಂಡಿಮವ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ನೀ ಮೆಟ್ಟುವ ನೆಲ - ಅದೆ ಕರ್ನಾಟಕ
ನೀನೇರುವ ಮಲೆ - ಸಹ್ಯಾದ್ರಿ
ನೀ ಮುಟ್ಟುವ ಮರ - ಶ್ರೀಗಂಧದ ಮರ
ನೀ ಕುಡಿಯುವ ನೀರ್ - ಕಾವೇರಿ
ಇಂತಹ ಪವಿತ್ರ ಮಣ್ಣಲ್ಲಿ ಜನಿಸಿದ ನಾವೇ ಧನ್ಯರು.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

• ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ಇದು ನಮ್ಮೆಲ್ಲರ ಹೆಮ್ಮೆಯ ದಿನ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

• ನಮ್ಮ ರಾಜ್ಯ ರಚನೆಯಾದ ದಿನವನ್ನು ಅತ್ಯಂತ ವೈಭವದಿಂದ ಆಚರಿಸೋಣ. ಕನ್ನಡಮ್ಮನ ಸೇವೆಗೆ ಬದುಕನ್ನು ಮುಡಿಪಾಗಿಡೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ಈ ಸಂತೋಷದಾಯಕ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಎಲ್ಲರಿಗೂ ಹರಸಲಿ, ಕರುನಾಡು ಇನ್ನಷ್ಟು ಸಂಪತ್ಭರಿತವಾಗಲಿ ಎಂಬುದು ನನ್ನ ಹಾರೈಕೆ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

• ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪಾವನ ಭೂಮಿ ಕರುನಾಡು. ಈ ನೆಲದಲ್ಲಿ ಜನ್ಮವೆತ್ತಿದ ನಾವೇ ಪುಣ್ಯವಂತರು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

• ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆಯೋಣ. ಕನ್ನಡ ತಾಯಿಯ ವೈಭವದ ತೇರನ್ನೆಳೆದು ಕರುನಾಡ ದಿನವನ್ನು ಆಚರಿಸೋಣ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

• ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಉತ್ಸವವಿದು. ಕನ್ನಡಮ್ಮನ ಬಹುದೊಡ್ಡ ಹಬ್ಬವಿದು. ಬದುಕು ನೀಡಿದ ಪಾವನ ಭೂಮಿಗೆ ನನ್ನ ಶರಣು. ಸರ್ವರಿಗೂ 'ಕನ್ನಡ ರಾಜ್ಯೋತ್ಸವ'ದ ಹಾರ್ದಿಕ ಶುಭಾಶಯಗಳು.

• ಬದುಕಿನ ಪ್ರತಿಕ್ಷಣದಲ್ಲೂ ಕನ್ನಡತನವನ್ನೇ ಉಸಿರಾಡೋಣ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

• ತಾಯಿ ನುಡಿಯನ್ನು ಗೌರವಿಸೋಣ, ಹುಟ್ಟಿದ ನೆಲಕ್ಕೆ ಕೃತಜ್ಞರಾಗಿರೋಣ, ಕರುನಾಡ ಕೀರ್ತಿ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ. ಸರ್ವರಿಗೂ 'ಕನ್ನಡ ರಾಜ್ಯೋತ್ಸವ'ದ ಶುಭಾಶಯಗಳು.

English summary

Happy Kannada Rajyotsava 2025 Wishes, Messages, Images, Facebook and Whatsapp Status in Kannada

Happy Kannada Rajyotsava 2025 Wishes, Messages, Images, Facebook and Whatsapp Status in Kannada
X
Desktop Bottom Promotion