Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
International Yoga Day 2025 Wishes : ಯೋಗ ಕುರಿತು ಮಹತ್ವ ಸಾರುವ ಫೇಸ್‌ಬುಕ್, ವಾಟ್ಸಾಪ್ ಸಂದೇಶಗಳು
ಮನಸ್ಸು ಮತ್ತು ದೇಹವನ್ನು ಒಂದು ಮಾಡುವ ಸಾಧನ ಯೋಗ. ನಮ್ಮ ಭೂಮಿ ಭಾರತದಲ್ಲಿ ಜನ್ಮತಳೆದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿ ಪಡೆದು ಭಾರತಕ್ಕೆ ಕಿರೀಟದಂತಿದೆ. ಯೋಗದ ಪ್ರಭಾವ, ಅದು ಆರೋಗ್ಯದ ಮೇಲೆ ಬೀರುವ ಆಗಾಧ ಪರಿಣಾಮ ಮತ್ತು ಅದರ ಶಕ್ತಿ ಅರಿತ ವಿದೇಶಗರು ಭಾರತಕ್ಕೆ ಬಂದು ಯೋಗ ಅಭ್ಯಾಸ ಮಾಡುತ್ತಿದ್ದಾರೆ.
ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2015ರಿಂದ ಆಚರಿಸುತ್ತಿರುವ ಯೋಗ ದಿನ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹೆಚ್ಚು ಯೋಗಾಸಕ್ತರನ್ನು ಹುಟ್ಟುಹಾಕುತ್ತಿದೆ.
2025 ಅಂತಾರಾಷ್ಟ್ರೀಯ ಯೋಗ ದಿನದ ವಿಶೇಷ ಯೋಗ ಕುರಿತು ಮಹತ್ವ ಸಾರುವ ಶುಭಾಶಯಗಳು ಮತ್ತು ಫೇಸ್‌ಬುಕ್, ವಾಟ್ಸಾಪ್ ಸಂದೇಶಗಳನ್ನು ನಾವಿಲ್ಲಿ ನೀಡಿದ್ದೇವೆ.

ವಿಶ್ವಕ್ಕೆ ಹೆಮ್ಮೆ
ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿಕೊಟ್ಟಿದ್ದು ಭಾರತ. ಯೋಗ ದೇಶದ ಹೆಮ್ಮೆ, ನಮ್ಮ ಆರೋಗ್ಯಕ್ಕೆ ಸಂಜೀವಿನಿ.
ವಿಶ್ವ ಯೋಗ ದಿನದ ಶುಭಾಶಯಗಳು

ದೇಹಕ್ಕೆ ಸ್ವಾತಂತ್ರ್ಯ
ದೇಹವನ್ನು ನಿಯಂತ್ರಣದಲ್ಲಿಡಲು ಯೋಗ ಮಾಡುವುದಲ್ಲ, ಯೋಗ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಸ್ವಾತಂತ್ರ್ಯ ಸಿಗುತ್ತದೆ.
ವಿಶ್ವ ಯೋಗ ದಿನದ ಶುಭಾಶಯಗಳು

ನಿತ್ಯ ಯೋಗ
ಜೀವನದಲ್ಲಿ ಸಂತೋಷ ಮತ್ತು ಆರೋಗ್ಯದ ಜತೆಗೆ ಸ್ನೇಹಿತರಾಗಲು ಬಯಸಿದರೆ ನಿತ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ.
ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಒಂದೇ ಉತ್ತಮ ಮಾರ್ಗ
ನಮ್ಮ ದೇಹ ನಮಗೆ ಏನನ್ನು ಹೇಳುತ್ತಿದೆ ಎಂಬುದನ್ನು ತಿಳಿಯಲು ಯೋಗ ಒಂದೇ ಉತ್ತಮ ಮಾರ್ಗ.
ವಿಶ್ವ ಯೋಗ ದಿನದ ಶುಭಾಶಯಗಳು

ಯೋಗದಿಂದ ನಿಯಂತ್ರಣ
ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ದೇಹದ ಒಳಗೆ ಏನಾಗಬೇಕು ಎಂಬುದನ್ನು ಯೋಗದಿಂದ ನಿಯಂತ್ರಿಸಬಹುದು.
ವಿಶ್ವ ಯೋಗ ದಿನದ ಶುಭಾಶಯಗಳು

ಧ್ಯಾನ
ಪ್ರಾರ್ಥನೆ ಎಂದರೆ ದೇವರಿಗೆ ನಿಮ್ಮ ಬೇಡಿಕೆಯನ್ನು ಹೇಳುವುದು, ಧ್ಯಾನ ಎಂದರೆ ದೇವರು ಏನನ್ನು ಹೇಳುತ್ತಿದ್ದಾನೆ ಎಂದ ಆಲಿಸುವುದು.
ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್ ಸಂದೇಶಗಳು
ಈ ಕ್ಷಣದ ಬದುಕನ್ನು ಹಾಗೂ ವರ್ತಮಾನವನ್ನು ಪ್ರತ್ಯಕ್ಷವಾಗಿ ತೋರಿಸಲು ಯೋಗ ಅತ್ಯುತ್ತಮ ಅಸ್ತ್ರ.
ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್ ಸಂದೇಶಗಳು
ನಿಮ್ಮ ಬದುಕಿಗೆ ಮತ್ತಷ್ಟು ವರ್ಷಗಳನ್ನು ಕೂಡಿಸಲು ಮತ್ತು ನಿಮ್ಮ ಭವಿಷ್ಯಕ್ಕೆ ಸುಂದರ ಬದುಕನ್ನು ನೀಡಲು ನಿತ್ಯ ಯೋಗ ಅಭ್ಯಾಸ ಮಾಡಿ.
ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್ ಸಂದೇಶಗಳು
ನಿಮ್ಮ ದೇಹ ಹಿಂದೆ ಬದುಕಿತ್ತು, ನಿಮ್ಮ ಮನಸ್ಸು/ಮೆದುಳು ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಿದೆ. ಯೋಗ ಈ ಎರಡನ್ನು ವರ್ತಮಾನದ ಈ ಕ್ಷಣಕ್ಕೆ ತರುವ ಸಾಧನ.
ವಿಶ್ವ ಯೋಗ ದಿನದ ಶುಭಾಶಯಗಳು

ಯೋಗ ಮಹತ್ವ ಸಾರುವ ಶುಭಾಶಯಗಳು, ವಾಟ್ಸಾಪ್ ಸಂದೇಶಗಳು
ಯೋಗ ಮಾಡಿದರೆ ರೋಗ ತಡೆಯಬಹುದು. ನಿತ್ಯ ಯೋಗ ಮಾಡಿ ಆರೋಗ್ಯವಾಗಿರಿ.
ವಿಶ್ವ ಯೋಗ ದಿನದ ಶುಭಾಶಯಗಳು



Click it and Unblock the Notifications