Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
Friendship Day 2025: ಸ್ನೇಹದ ಮುಖವಾಡ! ಅಸಲಿ ಯಾರು, ನಕಲಿ ಯಾರು? ಈ 5 ಟೆಸ್ಟ್ ಮಾಡಿ!
ಸುಮ್ನೆ ನಗೋ ಫ್ರೆಂಡ್‌ಗಳ ಬಗ್ಗೆ ಹುಷಾರ್! ಅಸಲಿ ಫ್ರೆಂಡ್ ಯಾರು, ನಕಲಿ ಫ್ರೆಂಡ್ ಯಾರು? ಈ 5 ಟಿಪ್ಸ್ ತಿಳಿದುಕೊಂಡರೆ ನಿಮಗೆ ಮೋಸ ಆಗಲ್ಲ! ಹೌದು, ನಮ್ಮ ಜೀವನದಲ್ಲಿ ಸ್ನೇಹಿತರು ಅತಿ ಮುಖ್ಯ. ಅವರ ಪಾತ್ರ ಅತ್ಯಂತ ದೊಡ್ಡದು. ಕಷ್ಟದ ಸಮಯದಲ್ಲಿ ಜೊತೆ ನಿಲ್ಲುವುದು ಮಾತ್ರವಲ್ಲದೆ, ವಾಸ್ತವ ಅಥವಾ ಸತ್ಯದ ದರ್ಶನ ಮಾಡಿಸುತ್ತಾರೆ. ಅವರು ಕನ್ನಡಿ ಇದ್ದಂತೆ. ಆದರೆ, ಪ್ರತಿ ನಗು ಮೊಗದ ವ್ಯಕ್ತಿಯೂ ನಿಮ್ಮ ನಿಜವಾದ ಆಪ್ತ ಅಥವಾ ಸ್ನೇಹಿತನಾಗಿರಲು (fake friend) ಸಾಧ್ಯವಿಲ್ಲ. ಇದು ನಿಮಗೆ ತಿಳಿದಿದ್ಯಾ? ಕೆಲವರು ಮುಖವಾಡ ಧರಿಸಿ ನಿಮ್ಮ ಮುಂದೆ ಒಳ್ಳೆಯವರಂತೆ ನಟಿಸಿದರೂ, ನಿಮ್ಮ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುತ್ತಾರೆ.
ಇಂದು ಸ್ನೇಹಿತರ ದಿನ (Friendship Day 2025). ಇದು ಕೇವಲ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಹಾಕುವ ದಿನವಲ್ಲ. ಇದು ನಿಮ್ಮ ಸಂಬಂಧಗಳ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಸೂಕ್ತ ಸಮಯ. ಪ್ರತಿ ನಗುವ ಹಿಂದೆ ಸ್ನೇಹ ಅಡಗಿರಬೇಕೆಂದಿಲ್ಲ. ಜೊತೆ ನಿಂತವನು ನಿಜವಾದ ಸ್ನೇಹಿತ (true friend) ಆಗಿರಬೇಕೆಂದಿಲ್ಲ. ಅಂದರೆ, ಜೊತೆಗಿರುವ ಪ್ರತಿಯೊಬ್ಬ ವ್ಯಕ್ತಿಯೂ ನಿಮಗೆ ಹೃದಯಪೂರ್ವಕವಾಗಿ ಹತ್ತಿರವಾಗಿರುತ್ತಾನೆ ಎಂದು ಹೇಳಲಾಗುವುದಿಲ್ಲ.

ಜೀವನದಲ್ಲಿ ಅನೇಕರು ಸ್ನೇಹದ ಮುಖವಾಡ ಧರಿಸಿ ತಮ್ಮ ಸ್ವಾರ್ಥ ಸಾಧಿಸುತ್ತಾರೆ. ಆದರೆ, ಇನ್ನು ಕೆಲವರು ಯಾವುದೇ ಸದ್ದು ಮಾಡದೆ, ಯಾವುದೇ ಪ್ರಚಾರವಿಲ್ಲದೆ, ನಿಮ್ಮ ಸುಖ-ದುಃಖದಲ್ಲಿ ನೆರಳಿನಂತೆ ಜೊತೆಯಾಗಿರುತ್ತಾರೆ. ಹಾಗಾದರೆ, ನಿಮ್ಮ ಸ್ನೇಹಿತ ನಿಜವಾದವರೋ (loyalty friends) ಅಥವಾ ಕೇವಲ ತೋರಿಕೆಗೆ ಇರುವವರೋ ಎಂದು ಹೇಗೆ ಗುರುತಿಸುವುದು? ಈ ಸ್ನೇಹಿತರ ದಿನದಂದು, ಗೆಳೆತನವು ಹೃದಯದಿಂದ ಬಂದಿದೆಯೇ ಅಥವಾ ತೋರಿಕೆಗೆ ಮಾತ್ರವೇ ಎಂದು ತಿಳಿಸುವ 5 ಪ್ರಮುಖ ಅಂಶಗಳು ಇಲ್ಲಿವೆ.
1. ಸಂಕಷ್ಟದಲ್ಲಿ ಜೊತೆಗಿರುತ್ತಾರೋ ಅಥವಾ ನೆಪ ಹೇಳುತ್ತಾರೋ?
ನಿಜವಾದ ಗೆಳೆಯ ಅಥವಾ ಸ್ನೇಹಿತನು ಕಷ್ಟದ ಸಮಯದಲ್ಲಿ ನೀವೇ ಕೇಳದಿದ್ದರೂ ತಕ್ಷಣವೇ ನಿಮ್ಮೊಂದಿಗೆ ನಿಲ್ಲುತ್ತಾನೆ. ನಿಮ್ಮ ಸಂಕಷ್ಟದಲ್ಲಿ ನಿಮ್ಮ ಸ್ನೇಹಿತ ಪದೇ ಪದೆ ಕಾರ್ಯನಿರತನಾಗಿದ್ದರೆ ಅಥವಾ ಕಾಣೆಯಾಗುತ್ತಿದ್ದರೆ, ಅವರು ಕೇವಲ ಉತ್ತಮ ಸಮಯದ ಸಂಗಾತಿಯೇ ಹೊರತು ನೈಜ ಸ್ನೇಹದವರಲ್ಲ ಎಂಬುದನ್ನು ಮನಗಾಣಿ. ಅಂತಹವರು ನಿಜವಾಗಿ ನಿಮ್ಮೊಂದಿಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ.
2. ನಿಮ್ಮ ಯಶಸ್ಸನ್ನು ನೋಡಿ ಸಂತೋಷಪಡುತ್ತಾರೋ ಅಥವಾ ಅಸೂಯೆ ಪಡುತ್ತಾರೋ?
ನಿಮ್ಮ ಗೆಳೆಯ ನಿಮ್ಮ ಚಿಕ್ಕ ಗೆಲುವಿಗೂ ಮನಸಾರೆ ಅಭಿನಂದಿಸುತ್ತಾನೆಯೇ ಮತ್ತು ನಿಮ್ಮ ಯಶಸ್ಸಿನಲ್ಲಿ ಹೆಮ್ಮೆ ಪಡುತ್ತಾನೆಯೇ ಎಂದು ಯೋಚಿಸಿ. ಹೌದು ಎಂದಾದರೆ, ಅವರು ನಿಜವಾದ ಸ್ನೇಹಿತ. ಆದರೆ, ಮೆಚ್ಚುಗೆ ವ್ಯಕ್ತಪಡಿಸುವ ಸಮಯದಲ್ಲೂ ಚುಚ್ಚುಮಾತು ಆಡಿದರೆ ಅಥವಾ ವಿಷಯ ಬದಲಾಯಿಸಿದರೆ, ಏನೋ ತಪ್ಪು ಇದೆ ಅಥವಾ ಏನೋ ಸರಿ ಇಲ್ಲ ಎಂದು ಅರ್ಥಮಾಡಿಕೊಳ್ಳಿ. ಅಸೂಯೆ ಪಡುವ ಮನಸ್ಥಿತಿ ನಿಜವಾದ ಸ್ನೇಹವಲ್ಲ.
3. ನಿಮ್ಮ ಹಿಂದೆ ನಿಮ್ಮನ್ನು ಹೊಗಳುತ್ತಾರೋ ಅಥವಾ ದೂಷಿಸುತ್ತಾರೋ?
ನೈಜ ಅಥವಾ ನಿಷ್ಠಾವಂತ ಸ್ನೇಹಿತ ನಿಮ್ಮ ಅನುಪಸ್ಥಿತಿಯಲ್ಲೂ ನಿಮಗೆ ಗೌರವ ನೀಡುತ್ತಾನೆ ಮತ್ತು ನಿಮ್ಮ ಖಾಸಗಿ ವಿಷಯಗಳನ್ನು ಗೌಪ್ಯವಾಗಿಡುತ್ತಾನೆ. ಅಕಸ್ಮಾತ್, ಯಾವುದೇ ಸಮಸ್ಯೆ ಬಂದಾಗ, ಅವನು ನಿಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಆದರೆ, ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಅಪಹಾಸ್ಯ ಮಾಡುವ, ರಹಸ್ಯಗಳನ್ನು ಬಹಿರಂಗಪಡಿಸುವ ಅಥವಾ ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಸ್ನೇಹಿತ ಕೇವಲ ಹೆಸರಿಗೆ ಮಾತ್ರ.
4. ಅಗತ್ಯವಿದ್ದಾಗ ಮಾತ್ರ ನೆನಪಿಸಿಕೊಳ್ಳುತ್ತಾರೋ ಅಥವಾ ಎಲ್ಲಾ ಕ್ಷಣಗಳಲ್ಲೂ ಜೊತೆಗಿರುತ್ತಾರೋ?
ಒಬ್ಬ ಸ್ನೇಹಿತ ತನಗೆ ಏನಾದರೂ ಬೇಕಾದಾಗ ಮಾತ್ರ ಕರೆ ಮಾಡಿದರೆ ಮತ್ತು ನಿಮ್ಮ ಸುಖ-ದುಃಖದ ಸಮಯದಲ್ಲಿ ಕಾಣೆಯಾಗಿದ್ದರೆ, ಅದು ಮೇಲ್ನೋಟದ ಸ್ನೇಹ. ನಿಜವಾದ ಸ್ನೇಹಿತ ಯಾವುದೇ ಕಾರಣವಿಲ್ಲದೆ, ನಿಮ್ಮ ಕ್ಷೇಮವನ್ನು ವಿಚಾರಿಸುವವರು. ಅಂತಹವರು ನಿಮ್ಮನ್ನು ಕೇವಲ ಉಪಯೋಗಕ್ಕಾಗಿ ಬಳಸಿಕೊಳ್ಳುವುದಿಲ್ಲ.
5. ನಿಮ್ಮೊಂದಿಗೆ ಮಾತನಾಡುವಾಗ ಅಹಂ ಇಟ್ಟುಕೊಳ್ಳುವುದಿಲ್ಲ
ನಿಜವಾದ ಸ್ನೇಹಿತರ ನಡುವೆ ಅಹಂ ಅಥವಾ ಯಾವುದೇ ಔಪಚಾರಿಕತೆ ಇರುವುದಿಲ್ಲ. ಅವರು ಮನಸ್ಸಿನ ಮಾತನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ತಪ್ಪಾದಾಗ ತಿದ್ದುತ್ತಾರೆ ಮತ್ತು ಪ್ರೀತಿಯಿಂದ ವಿವರಿಸುತ್ತಾರೆ. ಆದರೆ, ತೋರಿಕೆಯ ಸ್ನೇಹಿತ ಯಾವಾಗಲೂ ತನ್ನನ್ನು ಉನ್ನತ ಎಂದು ತೋರಿಸಲು ಮತ್ತು ನಿಮ್ಮನ್ನು ಕೀಳಾಗಿ ಕಾಣಲು ಪ್ರಯತ್ನಿಸುತ್ತಾನೆ. ಅಂತಹವರು ನಿಮ್ಮ ತಪ್ಪುಗಳನ್ನು ಸಹ ಸಮರ್ಥಿಸುತ್ತಾರೆ. ಇಂತಹ ಸ್ನೇಹಿತರಿಂದ ದೂರವಿರುವುದು ಉತ್ತಮ. ಕೇವಲ ಸ್ವಾರ್ಥಕ್ಕೆ ಸ್ನೇಹಿತರಾದವರ ಬಗ್ಗೆ ಎಚ್ಚರದಿಂದಿರಿ.



Click it and Unblock the Notifications













