Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Father's Day 2025: ಬದುಕಿನ ಹೀರೋ ಅಪ್ಪ: ಪ್ರೀತಿಯ ತಂದೆಗೆ ಈ ರೀತಿ ವಿಶ್ ಮಾಡಿ
ಅಪ್ಪ ಅಂದರೆ ಆಸರೆ, ಅಪ್ಪ ಎಂದರೆ ತ್ಯಾಗ, ಅಪ್ಪ ಅಂದರೆ ಗಾಂಭೀರ್ಯ, ಅಪ್ಪ ಅಂದರೆ ಪ್ರೀತಿ! ಅಪ್ಪ ದೇವರು ಕೊಟ್ಟ ದೇವರು. ಹೀಗೆ ತಂದೆಯನ್ನು ಪದಗಳಲ್ಲಿ ವರ್ಣಿಸಲು, ಹೊಗಳಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ (Father) ಮೊದಲ ಹೀರೋ. ತಂದೆ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸ. ಪ್ರೀತಿ, ವಾತ್ಸಲ್ಯದ ಸ್ಥಾನ ಅಮ್ಮನಿಗಾದರೆ.. ಸ್ನೇಹ, ಅಕ್ಕರೆಯ ಪ್ರತಿ ರೂಪ ಅಪ್ಪ. ಈಗಾಗಲೇ ಅಮ್ಮಂದಿರ ದಿನವನ್ನು ನಾವು ಆಚರಿಸಿದ್ದೇವೆ. ಈಗ ಅಪ್ಪನ ದಿನದ (Father's Day) ಆಚರಣೆಯ ಕ್ಷಣ ಬಂದಿದೆ. ಈ ದಿನದಂದು ಅಪ್ಪನಿಗೆ ಈ ರೀತಿಯಾಗಿ ಹೃದಯ ಸ್ಪರ್ಶಿ ಶುಭಾಶಯ ತಿಳಿಸಿ.
ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಜೂನ್ 15 (ಭಾನುವಾರ) ಅಪ್ಪಂದಿರ ದಿನಾಚರಣೆ ಬಂದಿದೆ. ಇಡೀ ಕುಟುಂಬ ಮತ್ತು ಸಮಾಜದಲ್ಲಿ ತಂದೆಯು ವಹಿಸುವ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ, ತಂದೆಯನ್ನು ಪ್ರಶಂಸಿಸುವ ಸಲುವಾಗಿ ಅಪ್ಪಂದಿರ ದಿನ (Father's Day 2025) ಆಚರಿಸಲಾಗುತ್ತದೆ. 1909ರಲ್ಲಿ ಅಮೆರಿಕದಲ್ಲಿ ಅಪ್ಪಂದಿರ ದಿನವನ್ನು ಪ್ರಾರಂಭಿಸಲಾಯಿತು. ಜೂನ್ 16, 1910 ರಂದು ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಅಪ್ಪಂದಿರ ದಿನವನ್ನ ಆಚರಿಸಲಾಗುತ್ತಿದೆ. ಈಗ ಆ ಖುಷಿಯ ದಿನ ಬಂದಿದೆ. ಇದು ಅಪ್ಪನಿಗಾಗಿ ಮೀಸಲಾದ ದಿನ. ಅಪ್ಪನಿಗೆ ನಾವು ಧನ್ಯವಾದ ಹೇಳಲು ಇರುವ ದಿನ.

ಅಪ್ಪನ ದಿನದ ಹೃದಯ ಸ್ಪರ್ಶಿ ಶುಭಾಶಯಗಳು ಇಲ್ಲಿವೆ
* ದೇವರು ನನಗೆ ಕೊಟ್ಟ ಬಹುದೊಡ್ಡ ಉಡುಗೊರೆ ನನ್ನ ಅಪ್ಪ. ಹ್ಯಾಪಿ ಫಾದರ್ಸ್ ಡೇ.
* ತಂದೆಯ ದಿನಾಚರಣೆಯ ಶುಭಾಶಯಗಳು! ನಿಮ್ಮ ದಿನವು ನಗು, ಪ್ರೀತಿ ಮತ್ತು ಸುಂದರ ಕ್ಷಣಗಳಿಂದ ತುಂಬಿರಲಿ. ನನಗೆ ಅದ್ಭುತ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು.
* ಬದುಕು ನೀಡಿದ್ದೀರಿ, ಪ್ರೀತಿ ನೀಡಿದ್ದೀರಿ, ಜೀವನಕ್ಕೊಂದು ಮೌಲ್ಯ ನೀಡಿದ್ದೀರಿ. ಅಪ್ಪ.. ನೀವಿಲ್ಲದೆ ನನ್ನ ಬದುಕೇ ಇಲ್ಲ. ನಿಮಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
* ಜೀವನ, ಪ್ರೀತಿ, ದಯೆ, ಕರುಣೆ ಎಲ್ಲವನ್ನೂ ಕಲಿಸಿದ ನಿಮಗೆ ತಂದೆಯ ದಿನದ ಶುಭಾಶಯಗಳು. ನೀವು ನನ್ನ ತಂದೆಯಾಗಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಅಥವಾ ಕೃತಜ್ಞನಾಗಿದ್ದೇನೆ.
* ನಿಮ್ಮ ಈ ದಿನವು ನಿಮ್ಮಂತೆಯೇ ಅದ್ಭುತವಾಗಿರಲಿ, ಅಪ್ಪಾ! ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ನೀವು ನಿಜಕ್ಕೂ ಗ್ರೇಟ್.. ಅಪ್ಪನ ದಿನದ ಶುಭಾಶಯಗಳು
* ಅಪ್ಪ ಎಂದರೆ ಮಮತೆಯ ಆಗಸ..! ಪ್ರೀತಿಯ ಪರ್ವತ, ಸಂಕಟದಿಂದ ಪಾರು ಮಾಡುವ ನಾಯಕ, ತನ್ನ ಕುಟುಂಬಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅರಸ.. ಹ್ಯಾಪಿ ಫಾದರ್ಸ್ ಡೇ, ಅಪ್ಪಾ!
* ಅಪ್ಪಂದಿರ ದಿನದ ಶುಭಾಶಯಗಳು. ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ಮತ್ತು ನೀಡಿದ ಪ್ರೀತಿಗೆ ಧನ್ಯವಾದ. ಇಂದಿಗೂ ಎಂದಿಗೂ ನೀವೇ ನನ್ನ ಹೀರೋ.
* ಗುರುವಾಗಿ ದಾರಿ ತೋರಿದ್ದೀರಿ, ಗೆಳೆಯನಾಗಿ ಧೈರ್ಯ ತುಂಬಿದ್ದೀರಿ, ದೇವರಂತೆ ಸದಾ ನನ್ನ ಬೆಂಗಾವಲಾಗಿ ನಿಂತಿದ್ದೀರಿ.. ಅಪ್ಪಾ, ಹೇಗೆ ತೀರಿಸಲಿ ನಿಮ್ಮ ಋಣವ? ನಿಮಗಿದೋ, ಹ್ಯಾಪಿ ಫಾದರ್ಸ್ ಡೇ.
* ಅಪ್ಪ ನೀವು ರಾಕ್‌ಸ್ಟಾರ್, ನನ್ನ ಬದುಕಿನ ಸ್ಫೂರ್ತಿ. ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದ. ವಿಶ್ವ ಅಪ್ಪಂದಿನ ದಿನದ ಶುಭಾಶಯಗಳು.
* ನನ್ನ ಎಲ್ಲಾ ಖುಷಿ, ನೋವಿನಲ್ಲಿ ಜೊತೆಯಾಗಿದ್ದ, ಬದುಕಿಗೊಂದು ಅರ್ಥ ನೀಡಿದ್ದ ತಂದೆಗೆ ಅಪ್ಪನ ದಿನದ ಶುಭಾಶಯಗಳು
* ನನ್ನ ಒಳಿತಿಗಾಗಿ ಸದಾ ಹಾರೈಸುತ್ತಿರುವ, ಪ್ರತಿಕ್ಷಣವೂ ನನ್ನ ಬಗ್ಗೆಯೇ ಯೋಚಿಸುತ್ತಿರುವ ಅಪ್ಪ ನಿಮಗೆ ನನ್ನ ಧನ್ಯವಾದ... ಹ್ಯಾಪಿ ಫಾದರ್ಸ್ ಡೇ
* ನಿಮ್ಮ ಅಂತ್ಯವಿಲ್ಲದ ಪ್ರೀತಿ, ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ನೀವು ಅದ್ಭುತ ತಂದೆಯ ದಿನವನ್ನು ಹೊಂದಿದ್ದೀರಿ ಎಂದು ನನ್ನ ಭಾವನೆ. ಹ್ಯಾಪಿ ಫಾದರ್ಸ್ ಡೇ
* ಅಪ್ಪನೊಂದಿಗೆ ಕಳೆದ ಒಂದೊಂದು ಕ್ಷಣವೂ ಸುಂದರ. ನನ್ನ ಬದುಕಿನ ನಾಯಕನ ಜೀವನ ಇನ್ನಷ್ಟು ಸುಖಕರವಾಗಿರಲಿ. ಹ್ಯಾಪಿ ಫಾದರ್ಸ್ ಡೇ
* ಅಪ್ಪ, ನೀನು ನನ್ನ ಮೊದಲ ನಾಯಕ. ನನ್ನ ಶಾಶ್ವತ ಸ್ನೇಹಿತ. ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
ಅಪ್ಪಂದಿರ ದಿನದ ಉಲ್ಲೇಖಗಳು
* ಒಬ್ಬ ತಂದೆ ನೂರಕ್ಕೂ ಹೆಚ್ಚು ಶಾಲಾ ಶಿಕ್ಷಕರಿಗೆ ಸಮ. - ಜಾರ್ಜ್ ಹರ್ಬರ್ಟ್
* ಮಗುವಿನ ಜೀವನದಲ್ಲಿ ತಂದೆಯ ಶಕ್ತಿಗೆ ಸಾಟಿಯಿಲ್ಲ. -ಜಸ್ಟಿನ್ ರಿಕ್ಲೆಫ್ಸ್
* ಒಬ್ಬ ಹುಡುಗಿಯ ಮೊದಲ ನಿಜವಾದ ಪ್ರೀತಿ ಅವಳ ತಂದೆ. -ಮಾರಿಸೋಲ್ ಸ್ಯಾಂಟಿಯಾಗೊ
* ಒಬ್ಬ ತಂದೆಯ ನಗು ಮಗುವಿನ ಇಡೀ ದಿನವನ್ನು ಬೆಳಗಿಸುತ್ತದೆ. -ಸುಸಾನ್ ಗೇಲ್
* ತಂದೆಯು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಅದನ್ನು ತೋರಿಸುತ್ತಾನೆ. - ಡಿಮಿಟ್ರಿ ದಿ ಸ್ಟೋನ್‌ಹಾರ್ಟ್
* ತಂದೆ ಎಲ್ಲವನ್ನೂ ಒಟ್ಟಿಗೆ ಸೇರಿಸುವ ಮಾರ್ಗವನ್ನು ಹೊಂದಿದ್ದಾರೆ. - ಎರಿಕಾ ಕಾಸ್ಬಿ



Click it and Unblock the Notifications

