Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
Happy Eid-ul-Adha 2025: ತ್ಯಾಗ ಬಲಿದಾನದ ಬಕ್ರೀದ್: ನಿಮ್ಮ ಪ್ರೀತಿಪಾತ್ರರಿಗೆ ಈ ಹೃದಯಸ್ಪರ್ಶಿ ಸಂದೇಶ ಕಳುಹಿಸಿ
Happy Eid-ul-Adha 2025: ಬಕ್ರೀದ್.. ತ್ಯಾಗ ಬಲಿದಾನದ ಸಂಕೇತ. ಮುಸ್ಲಿಂ ಧರ್ಮೀಯರ ಬಹುದೊಡ್ಡ ಹಬ್ಬಗಳಲ್ಲಿ ಒಂದು. ಹೌದು, ಪವಿತ್ರ ಮೆಕ್ಕಾಗೆ ತೆರಳುವ ಹಜ್ ಯಾತ್ರೆಯ ಕೊನೆಯಲ್ಲಿ ಬಕ್ರೀದ್ (Bakrid) ಹಬ್ಬವನ್ನು ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ನೆಲೆಸಿರುವ ಮುಸ್ಲಿಂ ಸಮುದಾಯದವರು ಈ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾರೆ. ಈ ದಿನ ಹೊಸ ಬಟ್ಟೆ ಧರಿಸಿ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪರಸ್ಪರ ಅಪ್ಪಿಕೊಳ್ಳುತ್ತಾರೆ. ಈದ್ ಮುಬಾರಕ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈ ಮುಬಾರಕ್ ಸಂದೇಶ ಕಳುಹಿಸದಿದ್ದರೆ ಹೇಗೆ? ಈ ಹೃದಯಸ್ಪರ್ಶಿ ಶುಭಾಶಯದ ಸಂದೇಶಗಳನ್ನು ಕಳುಹಿಸಿ, ಬಕ್ರೀದ್ ಅನ್ನು ಇನ್ನಷ್ಟು ವಿಶೇಷವಾಗಿಸಿ.
ಬಕ್ರೀದ್ ಅನ್ನು ಈದ್-ಉಲ್-ಅಧಾ ಎಂದೂ ಕರೆಯಲಾಗುತ್ತದೆ. ಇಸ್ಲಾಂ ಧರ್ಮದ ಈ ಪವಿತ್ರ ಹಬ್ಬವನ್ನು ಜೂನ್ 6 ಅಥವಾ 7 ರಂದು ಆಚರಿಸಲಾಗುತ್ತದೆ. ಇದು ಮೂರು ದಿನಗಳ ಆಚರಣೆಯಾಗಿದೆ. ಈ ದಿನ ಅಲ್ಲಾಹನಿಗೆ ಭಕ್ತಿಯನ್ನು ತೋರಿಸಲು ತ್ಯಾಗ ಮಾಡಲಾಗುತ್ತದೆ. ಹಾಗೆಯೇ ಮನೆಗಳಲ್ಲಿ ರುಚಿಕರವಾದ ಭಕ್ಷ್ಯಗಳನ್ನು ಮಾಡುತ್ತಾರೆ. ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ಹಬ್ಬದೂಟ ಸವಿಯುತ್ತಾರೆ. ಈ ದಿನ ಸಂಬಂಧಿಕರು ಮತ್ತು ಸ್ನೇಹಿತರು ಬರುತ್ತಲೇ ಇರುತ್ತಾರೆ. ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿಗೆ ಶುಭಾಶಯ ತಿಳಿಸಿ.

ಬಕ್ರೀದ್ ಹಬ್ಬದ ಹೃದಯಸ್ಪರ್ಶಿ ಸಂದೇಶಗಳು
- ಬಕ್ರೀದ್ ಹಬ್ಬವು ನಿಮ್ಮ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ನೆಮ್ಮದಿ ತರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.
- ಕರುಣಾಮಯಿ ಅಲ್ಲಾಹ್ ಸದಾ ನಿಮಗೆ ಮಾರ್ಗದರ್ಶನ ನೀಡಲಿ. ನಿಮ್ಮ ಜೀವನದಲ್ಲಿ ಖುಷಿ, ಸಂತೋಷದ ಬೆಳಕು ತುಂಬಿರಲಿ. ಬಕ್ರೀದ್ ಹಬ್ಬದ ಶುಭಾಶಯಗಳು
- ನಿಮಗೂ ಹಾಗೂ ನಿಮ್ಮ ಕುಟುಂಬದವರಗೆ ಬಕ್ರೀದ್ ಹಬ್ಬದ ಶುಭಾಶಯಗಳು. ಅಲ್ಲಾಹ್ ನಿಮ್ಮ ಜೀವನ ಉತ್ತಮ ಆರೋಗ್ಯ ಮತ್ತು ಸಂತೋಷದ ಕ್ಷಣಗಳಿಂದ ತುಂಬುವಂತೆ ಹರಸಲಿ.
- ಬಕ್ರೀದ್ ಮುಬಾರಕ್. ಅಲ್ಲಾಹ್‌ನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ನಾನು ಹಾರೈಸುತ್ತೇನೆ.
- ನಿಮಗೆ ಹಾಗೂ ನಿಮ್ಮ ಕುಟುಂಬದಕ್ಕೆ ಬಕ್ರೀದ್ ಹಬ್ಬದ ಶುಭಾಶಯಗಳು. ನಿಮ್ಮ ಕನಸುಗಳು ಈಡೇರಲಿ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸದಾ ಅಲ್ಲಾಹ್‌ನ ಆಶೀರ್ವಾದ ಇರಲಿ. ಬದುಕಿನಲ್ಲಿ ಅದ್ಭುತ ಯಶಸ್ಸು ನಿಮ್ಮದಾಗಲಿ.
- ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಬಕ್ರೀದ್ ಶುಭಾಶಯಗಳು. ಈ ಪವಿತ್ರ ಕ್ಷಣ ನಿಮಗೆ ಸಮೃದ್ಧಿ, ಯಶಸ್ಸು ಮತ್ತು ಸಂತೋಷದ ಬಾಗಿಲುಗಳನ್ನು ತೆರೆಯಲಿ.
- ನಿಮಗೆ ಈದ್-ಉಲ್-ಅಧಾ ಹಬ್ಬದ ಶುಭಾಶಯಗಳು. ಅಲ್ಲಾಹ್‌ನು ಜೀವನದ ಪ್ರತಿ ಸವಾಲುಗಳನ್ನು ಗೆಲ್ಲಲು, ನಿಮಗೆ ಸಹಾಯ ಮಾಡುವ ಧೈರ್ಯ ಮತ್ತು ಶಕ್ತಿಯನ್ನು ಕರುಣಿಸಲಿ.
- ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬಕ್ರೀದ್ ಹಬ್ಬದ ಶುಭಾಶಯಗಳು. ಅಲ್ಲಾಹ್‌ನು ನಿಮ್ಮ ಪ್ರಾಮಾಣಿಕ ಪ್ರಾರ್ಥನೆ ಆಲಿಸಲಿ, ನಿಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸಲಿ. ಈದುಲ್ ಅಝ್‌ಹಾ ಮುಬಾರಕ್.
- ಈದ್-ಉಲ್-ಅಧಾ ಶುಭಾಶಯಗಳು. ಜೀವನದಲ್ಲಿ ನಿಮ್ಮ ಸುತ್ತಲೂ ಬರೀ ಸಂತೋಷ ಮಾತ್ರ ತುಂಬಿರಲಿ. ಸದಾ ಕಾಲ ಅಲ್ಲಾಹ್‌ನ ಕರುಣೆ ನಿಮ್ಮ ಮೇಲಿರಲಿ.
- ಬಕ್ರೀದ್ ಮುಬಾರಕ್. ಅಲ್ಲಾಹ್‌ನ ಬೋಧನೆಗಳು ಜೀವನದುದ್ದಕ್ಕೂ ನಿಮ್ಮ ಜೊತೆಗಿರಲಿ. ದೇವರ ಆಶೀರ್ವಾದದಿಂದ ನಿಮ್ಮ ಬದುಕು ಸುಖಮಯವಾಗಿರಲಿ.
- ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬಕ್ರೀದ್ ಹಬ್ಬದ ಶುಭಾಶಯಗಳು. ಅಲ್ಲಾಹ್‌ನ ಆಶೀರ್ವಾದದೊಂದಿಗೆ ನಿಮ್ಮ ಜೀವನ ನೆಮ್ಮದಿಯಿಂದ ಸಾಗಲಿ. ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾಗದಿರಲಿ.
- ಸಮಸ್ತ ನಾಡಿನ ಜನತೆಗೆ ಅಥವಾ ಮುಸ್ಲಿಂ ಧರ್ಮೀಯರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬ ಎಲ್ಲರ ಬಾಳಿನಲ್ಲಿ ನೆಮ್ಮದಿ ಮತ್ತು ಸಂತೋಷ ತರಲಿ.
- ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು. ಬಕ್ರೀದ್ ಹಬ್ಬ ಎಂದರೆ ತ್ಯಾಗದ ಪ್ರತೀಕ. ನಮ್ಮಲ್ಲಿರುವುದನ್ನು ಹಂಚುವುದು ಮತ್ತು ಬಡವರ, ಅಸಹಾಯಕರ ಕಾಳಜಿ ವಹಿಸುವುದು. ಈ ವರ್ಷ ನಿಮ್ಮ ಬದುಕು ಸುಖಮಯವಾಗಿ ಕೂಡಿರಲಿ.



Click it and Unblock the Notifications