ಕ್ರಿಸ್ಮಸ್ ಹಬ್ಬದ ಹೃದಯಸ್ಪರ್ಶಿ ಶುಭಾಶಯಗಳು! ವಾಟ್ಸಾಪ್ ಸ್ಟೇಟಸ್‌, ಕೋಟ್ಸ್‌ಗಳು ಇಲ್ಲಿವೆ

ನಿನ್ನ ನೆರೆಹೊರೆಯವರನ್ನು ನಿನ್ನಂತೆ ಪ್ರೀತಿಸು.. ಕ್ರಿಸ್‌ಮಸ್ (christmas) ಶುಭಾಶಯಗಳು ಹೀಗಿರಲಿ! ಹೌದು, ಪ್ರತಿ ವರ್ಷ ಡಿಸೆಂಬರ್ ತಿಂಗಳ ಚಳಿಯ ನಡುವೆ, ವಿಶ್ವದಾದ್ಯಂತ ಸಂತೋಷ ಮತ್ತು ಬೆಳಕನ್ನು ತರುವ ಹಬ್ಬವೇ ಕ್ರಿಸ್‌ಮಸ್ (Merry Christmas). ಶಾಂತಿ, ಪ್ರೀತಿ ಮತ್ತು ಕರುಣೆಯಂತಹ ಮಹಾನ್ ತತ್ವಗಳ ಅಡಿಪಾಯದಲ್ಲಿ ಆಚರಿಸುವ ಈ ಹಬ್ಬ ವಿಶೇಷವಾಗಿದೆ. ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ನಿಮ್ಮ ನೆಂಟರು, ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಹಿತೈಷಿಗಳಿಗೆ ಸುಂದರವಾದ ಕ್ರಿಸ್‌ಮಸ್ ಶುಭಾಶಯಗಳನ್ನು (christmas wishes 2025) ಹೀಗೆ ಹಂಚಿಕೊಳ್ಳಬಹುದು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಬೆತ್ಲೆಹೆಮ್‌ನ ಒಂದು ಸಣ್ಣ ಕೊಟ್ಟಿಗೆಯಲ್ಲಿ ಯೇಸುಕ್ರಿಸ್ತ ಜನಿಸಿದರು. ಲೋಕದ ಕತ್ತಲೆಯನ್ನು ದೂರ ಮಾಡಿ, ಮನುಕುಲಕ್ಕೆ ಬೆಳಕು ನೀಡುವುದು ಆ ಜನನದ ಪರಮಾರ್ಥವಾಗಿತ್ತು. ಈ ನಿಟ್ಟಿನಲ್ಲಿ, ಕ್ರಿಸ್‌ಮಸ್ ದಿನದಂದು ಪ್ರತಿ ಮನೆಯ ಮೇಲೆ ಹೊಳೆಯುವ ನಕ್ಷತ್ರವು ದೈವಿಕ ಬೆಳಕು ಮತ್ತು ದೈವತ್ವದ ಸಂಕೇತವಾಗಿದೆ. 'ನಿನ್ನ ನೆರೆಹೊರೆಯವರನ್ನು ನಿನ್ನಂತೆ ಪ್ರೀತಿಸು' ಎಂಬ ಯೇಸುಕ್ರಿಸ್ತರ ಸಂದೇಶವನ್ನು ಆಚರಿಸುವುದೇ ನಿಜವಾದ ಹಬ್ಬದ ಆಶಯವಾಗಿದೆ.

christmas wishes

ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಬಹುದಾದ ಕ್ರಿಸ್‌ಮಸ್ ಶುಭಾಶಯಗಳು

- ಕರುಣಾಮಯಿ ಯೇಸುಕ್ರಿಸ್ತನ ಆಶೀರ್ವಾದಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸದಾ ಇರಲಿ ಎಂದು ಹಾರೈಸುತ್ತಾ, ಕ್ರಿಸ್‌ಮಸ್ 2025ರ ಶುಭಾಶಯಗಳು.

- ಶಾಂತಿ, ಪ್ರೀತಿ, ಕರುಣೆ - ಇವೇ ಯೇಸುಪ್ರಭು ನಮಗೆ ನೀಡಿದ ಕೊಡುಗೆಗಳು. ಈ ಕ್ರಿಸ್‌ಮಸ್ ನಿಮ್ಮ ಮನೆಯಲ್ಲಿ ಸಂತೋಷವನ್ನು ತುಂಬಲಿ ಎಂದು ಹಾರೈಸುತ್ತೇವೆ.

- ಲೋಕ ರಕ್ಷಕನು ಜನಿಸಿದ ಈ ಪವಿತ್ರ ದಿನ ನಿಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕ್ರಿಸ್‌ಮಸ್ 2025ರ ಶುಭಾಶಯಗಳು.

- ದೇವರ ಪ್ರೀತಿಯು ನಿಮ್ಮ ಹೃದಯ ಮತ್ತು ಮನೆಯನ್ನು ಸಂಪೂರ್ಣ ಸಂತೋಷದಿಂದ ತುಂಬಿಸಲಿ. ಹ್ಯಾಪಿ ಕ್ರಿಸ್‌ಮಸ್ 2025.

- ಯೇಸುಕ್ರಿಸ್ತ ತೋರಿಸಿದ ಪ್ರೀತಿ ಮತ್ತು ಶಾಂತಿಯ ಮಾರ್ಗದಲ್ಲಿ ನಡೆದು, ಆನಂದಮಯ ಜೀವನ ನಡೆಸಲು ಹಾರೈಸುತ್ತಾ, ಕ್ರಿಸ್‌ಮಸ್ ಶುಭಾಶಯಗಳು.

- ಈ ಪವಿತ್ರ ದಿನದಂದು ನಿಮ್ಮೆಲ್ಲಾ ಪ್ರಾರ್ಥನೆಗಳು ಫಲಿಸಿ, ದೇವರ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. ಮೆರ್ರಿ ಕ್ರಿಸ್‌ಮಸ್.

- ಬೆತ್ಲೆಹೆಮ್ ತಾರೆ ನಿಮ್ಮ ಜೀವನದಲ್ಲಿ ಯಶಸ್ಸಿನ ಮಾರ್ಗವನ್ನು ತೋರಿಸಲಿ. ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

- ದೈವಿಕ ಕೃಪೆಯು ನಿಮ್ಮ ಮೇಲೆ ಸದಾ ಇರಲಿ, ನಿಮ್ಮ ಎಲ್ಲಾ ಕಷ್ಟಗಳು ಹಿಮದಂತೆ ಕರಗಿ ಹೋಗಲಿ. ಕ್ರಿಸ್‌ಮಸ್ 2025ರ ಶುಭಾಶಯಗಳು.

- ಪ್ರೀತಿ ಎಂಬ ದೀಪವನ್ನು ಬೆಳಗಿಸೋಣ, ಶಾಂತಿ ಎಂಬ ಮಾರ್ಗದಲ್ಲಿ ಸಾಗೋಣ. ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು.

- ಕಲ್ಮಷವಿಲ್ಲದ ಪ್ರೀತಿ ಮತ್ತು ಮಿತಿಯಿಲ್ಲದ ಕರುಣೆಯ ಪ್ರತೀಕ ಯೇಸುಕ್ರಿಸ್ತ. ಅವರ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. ಮೆರ್ರಿ ಕ್ರಿಸ್‌ಮಸ್.

- ಈ ಹಬ್ಬದ ಸಮಯದಲ್ಲಿ ನಿಮ್ಮ ಮನೆಯು ನಗುವಿನಿಂದ, ನಿಮ್ಮ ಮನಸ್ಸು ಸಂತೋಷದಿಂದ ತುಂಬಿರಲಿ. ಕ್ರಿಸ್‌ಮಸ್ ಶುಭಾಶಯಗಳು.

- ದೂರದಲ್ಲಿದ್ದರೂ ಮನಸುಗಳನ್ನು ಒಂದಾಗಿಸುವ ಹಬ್ಬವಿದು. ನನ್ನ ಪ್ರೀತಿಪಾತ್ರರಿಗೆ ಕ್ರಿಸ್‌ಮಸ್ 2025ರ ಹಾರ್ದಿಕ ಶುಭಾಶಯಗಳು.

- ಕೇಕಿನ ಸಿಹಿ, ನಕ್ಷತ್ರದ ಹೊಳಪು, ಸಾಂಟಾರ ಉಡುಗೊರೆಗಳು - ಇವೆಲ್ಲವೂ ನಿಮ್ಮದಾಗಲಿ. ಹ್ಯಾಪಿ ಕ್ರಿಸ್‌ಮಸ್.

- ಕ್ರಿಸ್‌ಮಸ್ ತಾತ ತರುವ ಉಡುಗೊರೆಗಳ ಜೊತೆಗೆ, ನನ್ನ ಪ್ರೀತಿಯನ್ನೂ ಸಹ ಸ್ವೀಕರಿಸಿ. ಕ್ರಿಸ್‌ಮಸ್ ಶುಭಾಶಯಗಳು.

- ನಮ್ಮ ಬಾಂಧವ್ಯವು ಕ್ರಿಸ್‌ಮಸ್ ಮರದಂತೆ ಸದಾ ಹಸಿರಾಗಿ, ಪ್ರಕಾಶಿಸಲಿ. ಮೆರ್ರಿ ಕ್ರಿಸ್‌ಮಸ್ ಮೈ ಡಿಯರ್.

- ಆಕಾಶದಲ್ಲಿ ಹೊಳೆಯುವ ನಕ್ಷತ್ರವು ನಿಮ್ಮ ಜೀವನದಲ್ಲಿ ಆನಂದದ ಧಾರೆ ಹರಿಸಲಿ. ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು.

- ಜಿಂಗಲ್ ಬೆಲ್ಸ್ ಘಂಟೆಗಳು ಮೊಳಗಲಿ, ನಿಮ್ಮ ಮನೆಯಲ್ಲಿ ಸಿರಿ-ಸಂಪತ್ತು ತುಂಬಿ ಹರಿಯಲಿ. ಹ್ಯಾಪಿ ಕ್ರಿಸ್‌ಮಸ್.

- ಬೆಳಕಿನ ಹಬ್ಬ ಕ್ರಿಸ್‌ಮಸ್ ಎಲ್ಲರಿಗೂ ಸಂತೋಷವನ್ನು ಹಂಚಲಿ. ಮೆರ್ರಿ ಕ್ರಿಸ್‌ಮಸ್ 2025.

- ಕ್ರಿಸ್‌ಮಸ್ ಟ್ರೀಯ ದೀಪಗಳು, ನಿಮ್ಮ ಕಣ್ಣಲ್ಲಿ ಹೊಳಪು, ಮರೆಯಲಾಗದ ಸಂತೋಷದ ನೆನಪು. ಹ್ಯಾಪಿ ಕ್ರಿಸ್‌ಮಸ್.

- ನನ್ನ ಉತ್ತಮ ಸ್ನೇಹಿತನಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. ಈ 2025ರ ಕ್ರಿಸ್‌ಮಸ್ ನಿಮಗೆ ಅದ್ಭುತವಾಗಿರಲಿ.

- ಕ್ರಿಸ್‌ಮಸ್ ದಿನದಂದು ತಿನ್ನುವ ಕೇಕ್ ಎಷ್ಟು ಸಿಹಿಯಾಗಿರುತ್ತದೋ, ನಮ್ಮ ಸ್ನೇಹವೂ ಅಷ್ಟೇ ಸಿಹಿಯಾಗಿರಲಿ. ಮೆರ್ರಿ ಕ್ರಿಸ್‌ಮಸ್.

- ಹೊಸ ವರ್ಷಕ್ಕೆ ಮುನ್ನ ಬರುವ ಈ ಹಬ್ಬ ನಿಮಗೆ ಶುಭ ತರಲಿ. ಹ್ಯಾಪಿ ಕ್ರಿಸ್‌ಮಸ್ ಡಾರ್ಲಿಂಗ್.

- ಕ್ರಿಸ್‌ಮಸ್ ಹಬ್ಬವು ನಮಗೆ ನೀಡುವುದು ಮತ್ತು ಹಂಚಿಕೊಳ್ಳುವ ಆನಂದವನ್ನು ನೆನಪಿಸುತ್ತದೆ.

English summary

Happy Christmas Day 2025: christmas wishes, quotes and greetings whatsapp status for friends family

Happy Christmas Day 2025: merry christmas wishes, quotes and greetings whatsapp status for friends family in Kannada
X
Desktop Bottom Promotion