Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಇದೆಂಥಾ ವಿಚಿತ್ರ..! ಉಜಾಲಾ ಲಿಕ್ವಿಡ್ ಹಾಕಿ ಕೂದಲಿಗೆ ಕಲರ್..
ಜನ ತಮ್ಮ ಕೂದಲ ಸೌಂದರ್ಯಕ್ಕೆ ಎಷ್ಟೆಲ್ಲಾ ಹಣ ಖರ್ಚು ಮಾಡುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತು ಪರ್ಸನಲ್ ಹೇರ್ ಸ್ಟೈಲಿಸ್ಟ್‌ಗಳನ್ನೇ ಇಟ್ಟುಕೊಂಡಿರುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಕೂದಲಿಗೆ ಕಲರ್ ಮಾಡಿಕೊಳ್ಳುವುದು, ಅದಕ್ಕೆ ಚಿತ್ರ ವಿಚಿತ್ರ ಕಲರ್ ಹಚ್ಚಿಕೊಳ್ಳುವ ಟ್ರೆಂಡ್ ಹೆಚ್ಚಾಗುತ್ತಲೇ ಇದೆ.
ಇದೀಗ ಯುವಕನೊಬ್ಬ ತನ್ನ ಕೂದಲಿಗೆ ಉಜಾಲಾ ಬಳಸಿ ಕಲರಿಂಗ್ ಮಾಡಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಬಟ್ಟೆ ಶುಬ್ರವಾಗಿ ಕಾಣಲು ಬಳಸುವ ಉಜಾಲಾವನ್ನು ಆತ ತನ್ನ ಕೂದಲಿಗೆ ಹಚ್ಚಿದ್ದಾಗ ಕೂದಲು ನೀಲಿ ಆಕಾರಕ್ಕೆ ತಿರುಗಿದೆ. ಇದನ್ನು ಕಂಡ ನೆಟ್ಟಿಗರು ಹೊಸ ಫ್ಯಾಷನ್‌ಗೆ ಫಿದಾ ಆಗಿದ್ದಾರೆ.

ಕೇಶ ವಿನ್ಯಾಸಕನಬ್ಬ ಯುವಕನ ಕೂದಲಿಗೆ ಬಣ್ಣ ಹಚ್ಚಲು ಉಜಾಲಾವನ್ನು ಬಳಸುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸ್ಟೈಲಿಸ್ಟ್ ರಾಹುಲ್ ಕಲಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಪ್ರಯೋಗಕ್ಕೆ ಮುಂದಾಗಿರುವುದಾಗಿ ಶ್ರೀ ಕಲಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಅಂದರೆ ಹೇರ್ ಸ್ಟೈಲಿಸ್ಟ್ ಪ್ರಕಾರ ಯುವಕನ ಬೇಡಿಕೆಯ ಮೇರೆಗೆ ಆತನ ಕೂದಲಿಗೆ ಉಜಾಲಾ ಹಾಕಲಾಗಿದೆಯಂತೆ. ಮೊದಲು ಬಿಳಿ ಬಣ್ಣದಲ್ಲಿದ್ದ ಕೂದಲು ಉಜಾಲಾ ಹಾಕಿದ ಬಳಿಕ ತಿಳಿ ನೀಲಿ ಬಣ್ಣಕ್ಕೆ ತಿರುಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಉಜಾಲಾವನ್ನು ಮುಖ್ಯವಾಗಿ ಬಟ್ಟೆ ತೊಳೆದ ಬಳಿಕ ಬಿಳಿ ಬಟ್ಟೆಯನ್ನು ಬೇರ್ಪಡಿಸಿ ಒಂದೆರೆಡು ಹನಿಗಳ ಹಾಕಿ ನೆನೆಸಿಡುತ್ತಾರೆ. ಇದರಿಂದ ಬಿಳಿ ಬಟ್ಟೆಯು ಮತ್ತಷ್ಟು ಹೊಳಪಿನಂತಾಗುತ್ತದೆ.
ಆದರೆ ಇಲ್ಲಿ ಯುವಕನ ಕೂದಲಿಗೆ ಉಜಾಲಾ ಹಾಕಿದಾಗ ಅದು ತಿಳಿನೀಲಿ ಬಣ್ಣವಾಗಿ ಆತನ ಕೂದಲಿಗೆ ಅಂಟಿಕೊಂಡಿದೆ. ಇದು ನ್ಯಾಚುರಲ್ ಕಲರ್ ಅಲ್ಲದೆ ಇರುವುದರಿಂದ ಇದನ್ನು ಯಾರಿಗೂ ಶಿಫಾರಸ್ಸು ಮಾಡಲಾಗುತ್ತಿಲ್ಲ.
ವೀಡಿಯೊವನ್ನು 7 ದಿನಗಳ ಹಿಂದೆ Instagram ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದುವರೆಗೆ 4 ಮಿಲಿಯನ್ ವೀಕ್ಷಣೆ ಪಡೆದಿದೆ. ದೊಡ್ಡ ದೊಡ್ಡ ಕಂಪನಿಗಳಾದ ಬ್ಲಿಂಕಿಟ್ ಹಾಗೂ ಸ್ವಿಗ್ಗಿ ಸಹ ಈ ಪ್ರಯೋಗಕ್ಕೆ ಮನಸೋತಿವೆ. ಆದರೆ ಯಾರು ಸಹ ಉಜಾಲಾ ಬಳಕೆಯನ್ನು ಶಿಫಾರಸ್ಸು ಮಾಡುವುದಿಲ್ಲ ಎಂದಿದ್ದಾರೆ.
ಈ ಉಜಾಲಾ ಕಂಪನಿ ಬಗ್ಗೆ ನಿಮಗೆ ಗೊತ್ತಾ?
ಉಜಾಲಾ ಲಿಕ್ವಿಡ್ ಅನ್ನು ನಾವು ಒಮ್ಮೆಯಾದರು ಬಳಸಿರುತ್ತೇವೆ. ಆದ್ರೆ ಈ ಕಂಪನಿ ಹುಟ್ಟಿಕೊಂಡಿದ್ದು ಹೇಗೆ ಎಂಬುದು ನಿಮಗೆ ಗೊತ್ತಾ? ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ರಾಮಚಂದ್ರಪ್ಪ ಎಂಬುವರು ಕೇವಲ 5 ಸಾವಿರ ರೂಪಾಯಿಯಲ್ಲಿ ಆರಂಭಿಸಿದ್ದ ಕಂಪನಿ ಇದು. ಆದ್ರೆ ನಿಮಗೆ ಗೊತ್ತಾ ಅವರು ಆರಂಭಿಸದ್ದ ಜ್ಯೋತಿ ಲ್ಯಾಬ್ಸ್ ಕಂಪನಿ ಈಗ ಬರೋಬ್ಬರಿ 1,800 ಕೋಟಿ ರೂಪಾಯಿ ಮೌಲ್ಯದ ಬೃಹತ್ ಕಂಪನಿಯಾಗಿ ಬೆಳೆದಿದೆ.
ರಾಮಚಂದ್ರನ್ ಅವರು ಸ್ನಾತಕೋತ್ತರ ಪದವಿ ಓದುವಾಗ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಈ ವೈಟ್‌ನರ್‌ಗಳ ತಯಾರಿಸಿ ಮಾರುಕಟ್ಟೆಗೆ ತರಬೇಕು ಎಂಬ ಹಠವಿತ್ತು. ಅವರು ಅಡುಗೆ ಮನೆಯಲ್ಲಿ ಹಲವು ರೀತಿಯ ವಸ್ತುಗಳ ಕುದಿಸಿ ಪ್ರಯೋಗ ಮಾಡುತ್ತಿದ್ದರು ಪ್ರತಿ ಬಾರಿ ಇದು ವಿಫಲವೇ ಆಗಿತ್ತು.
ಒಂದು ದಿನ ಅವರು ಕೆಮಿಕಲ್ ಇಂಡಸ್ಟ್ರಿ ಜರ್ನಲ್‌ಗೆ ಬಂದರು, ಅದು ಜವಳಿ ತಯಾರಕರಿಗೆ ಸಾಧ್ಯವಾದಷ್ಟು ಬಿಳಿ, ಪ್ರಕಾಶಮಾನವಾದ ಬಣ್ಣಗಳನ್ನು ಪಡೆಯಲು ಸಹಾಯ ಮಾಡಲು ನೇರಳೆ ಬಣ್ಣವನ್ನು ಬಳಸಬಹುದು ಎಂದು ಹೇಳಿದರು. ರಾಮಚಂದ್ರನ್ ಅವರು ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು.
ಬಳಿಕ ಈ ಪ್ರಯೋಗಕ್ಕೆ ಅಡುಗೆ ಮನೆ ಸಾಲುವುದಿಲ್ಲ ಎಂದು ಜ್ಯೋತಿ ಲ್ಯಾಬ್ ತೆರೆಯಲು ಮುಂದಾದರು. ರಾಮಚಂದ್ರನ್ ಯಾವಾಗಲೂ ರಿಸ್ಕ್ ಟೇಕರ್ ಆಗಿದ್ದರು. ಯಾವುದೂ ಅವನ ಆತ್ಮವನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಆಶಾವಾದಿ ದೃಷ್ಟಿಕೋನದಿಂದ ಮತ್ತು ತಮ್ಮದೇ ಆದದನ್ನು ನಿರ್ಮಿಸುವ ಬಯಕೆಯಿಂದ, ರಾಮಚಂದ್ರನ್ 1983 ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಕುಟುಂಬದ ಜಮೀನಿನಲ್ಲಿ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಿದರು, ಅವರ ಸಹೋದರನು ಅವರಿಗೆ ಸಾಲವಾಗಿ 5000 ರೂ ನೀಡಿದರು, ಅವರ ಮಗಳು ಜ್ಯೋತಿಯ ಹೆಸರಿನಲ್ಲಿ ಇದಕ್ಕೆ ಜ್ಯೋತಿ ಲ್ಯಾಬೋರೇಟರೀಸ್ ಎಂಬ ಹೆಸರನ್ನು ನೀಡಲಾಯಿತು.
ಲ್ಯಾಬ್ ಉಜಾಲಾ ಸುಪ್ರೀಮ್ ಲಿಕ್ವಿಡ್ ಫ್ಯಾಬ್ರಿಕ್ ವೈಟ್‌ನರ್‌ಗಳನ್ನು ಮಾರುಕಟ್ಟೆಗೆ ತಂದಿತು. ಆರು ಮಹಿಳೆಯರ ಗುಂಪು ಆರಂಭದಲ್ಲಿ ಉತ್ಪನ್ನವನ್ನು ಮನೆ ಮನೆಗೆ ಮಾರಾಟ ಮಾಡಿತು. ಪ್ರತಿ ಭಾರತೀಯ ಮನೆಯಲ್ಲೂ ಉಜಾಲಾ ಸುಪ್ರೀಂ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತು. ಆರಂಭದಲ್ಲಿ, ಮಾರುಕಟ್ಟೆಯು ದಕ್ಷಿಣ ಭಾರತದಲ್ಲಿ ಬೆಳೆಯಿತು ಮತ್ತು 1997 ರ ಹೊತ್ತಿಗೆ, ಉತ್ಪನ್ನವು ಭಾರತದಾದ್ಯಂತ ತಲುಪಿತು. ಇಂದು, ಉಜಾಲಾ ಲಿಕ್ವಿಡ್ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಪಾಲು ಹೊಂದಿದೆ.



Click it and Unblock the Notifications