Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬ್ಯೂಟಿ ಟ್ರಿಕ್ಸ್: ಕೂದಲು ಸೌಂದರ್ಯಕ್ಕೆ ಈ ಟ್ರಿಕ್ಸ್ ಮಾಡಬೇಡಿ..! ಏಕೆ ಗೊತ್ತಾ?
ಆನ್‌ಲೈನ್‌ನಲ್ಲಿ ನೀವು ನಿತ್ಯವು ಒಂದಲ್ಲಾ ಒಂದು ರೀತಿಯ ಬ್ಯೂಟಿ ಹ್ಯಾಕ್ ವಿಡಿಯೋಗಳನ್ನು ನೋಡಿರುತ್ತೀರಿ. ಕೆಲವೊಂದು ನಮ್ಮ ಸೌಂದರ್ಯ ಹೆಚ್ಚಿಸಲು ಸಹಾಯಕವಾದರೆ ಮತ್ತೆ ಕೆಲವರು ನಮಗೆ ಒಂದಿಷ್ಟು ಸಂಕ್ಟ ತರುವ ವಿಡಿಯೋಗಳಾಗಿರುತ್ತವೆ. ಹೆಚ್ಚಾಗಿ ಬ್ಯೂಟಿ ಹ್ಯಾಕ್ ವಿಡಿಯೋಗಳಲ್ಲಿ ಸುಲಭವಾಗಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳಲಾಗುವುದು.
ಹಾಗೆ ಈ ವಿಡಿಯೋಗಳಲ್ಲಿ ಬಿಳಿಯಾಗಿ ಕಾಣಿಸಲು ಏನು ಮಾಡಬೇಕು? ಕಲೆಗಳ ನಿವಾರಣಗೆ ಏನೆಲ್ಲಾ ಮಾಡಬೇಕು?, ಸುಲಭವಾಗಿ ಮೇಕ್ ಅಪ್ ಮಾಡಿಕೊಳ್ಳುವುದು ಹೇಗೆ?, ಮನೆಯಲ್ಲೇ ಫೇಸ್ ಪ್ಯಾಕ್ ಮಾಡಿಕೊಳ್ಳುವುದು ಸೇರಿ ಹಲವು ರೀತಿಯ ಹ್ಯಾಕ್ಸ್ ವಿಡಿಯೋ ನೋಡಬಹುದು. ಇದರಲ್ಲಿ ಕೆಲವೊಂದು ಅತ್ಯಂತ ಭಿನ್ನ ಹಾಗೂ ಸುಲಭದ ಟ್ರಿಕ್ಸ್ ಆಗಿ ಹಲವರಿಗೆ ಸಹಕಾರಿಯೂ ಆಗಬಹುದು.

ಆದ್ರೆ ನಾವಿಂದು ಇಲ್ಲೊಬ್ಬ ಯುವತಿ ತನ್ನ ಕೂದಲು ಸ್ಟ್ರೈಟ್‌ನಿಂಗ್ ಮಾಡಿಕೊಳ್ಳುವಾಗ ಇಂತಹ ಟ್ರಿಕ್ಸ್ ಬಳಸಿ ಯಡವಟ್ಟು ಮಾಡಿಕೊಂಡಿದ್ದಾಳೆ. ಕೂದಲು ಸ್ಟ್ರೈಟ್‌ನಿಂಗ್ ಮಾಡಲು ಅದಕ್ಕೆಂದು ಒಂದು ಉಪಕರಣವಿದೆ. ಆದ್ರೆ ಈ ಹ್ಯಾಕಿಂಗ್‌ನಲ್ಲಿ ಹಲವು ವಸ್ತುಗಳ ಬಳಸಿ ಹೇರ್ ಸ್ಟ್ರೈಟ್‌ನಿಂಗ್ ಮಾಡಿಕೊಳ್ಳುವ ಒಂದಿಷ್ಟು ವಿಡಿಯೋಗಳನ್ನು ಕೂಡ ನಾವು ನೋಡಿದ್ದೇವೆ.
ಆದ್ರೆ ಇಲ್ಲೊಬ್ಬಳು ಮಾಡುತ್ತಿರುವ ಟಿಪ್ಸ್ ಅನ್ನು ನೀವು ಕೂಡ ಪ್ರಯತ್ನಿಸಲು ಮುಂದಾಗಬೇಡಿ ಎಂದು ನಾವು ಶಿಫಾರಸು ಮಾಡುತ್ತೇವೆ. ಏಕೆಂದರೆ ಆಕೆ ಈ ಟ್ರಿಕ್ಸ್ ಮಾಡುವ ನೆಪದಲ್ಲಿ ತನ್ನ ಕೂದಲು ಕಳೆದುಕೊಂಡಿದ್ದಾಳೆ. ಹೌದು ಮನೆಯಲ್ಲಿ ಗ್ಯಾಸ್ ಸ್ಟವ್ ಬಳಸಿಕೊಂಡು ಕೂದಲು ಸ್ಟ್ರೈಟ್‌ನಿಂಗ್ ಮಾಡುವ ಈ ಟ್ರಿಕ್ಸ್ ಆಕೆಗೆ ಆಘಾತ ತಂದಿದೆ.
ಚಪಾತಿಯನ್ನು ಸ್ಟವ್ ಮೇಲೆ ಕಾಯಿಸಲು ಬಳಸು ಹಿಡಿಕೆಯನ್ನು ನೀವು ಸಹ ಬಳಸಿರುತ್ತೀರಿ. ಕೈ ಸುಡಬಾರದು ಎಂದು ಚಪಾತಿ, ರೊಟ್ಟಿಯನ್ನು ಹಿಡಿದುಕೊಮಡು ತಿರುಗಿಸಲು ಇದನ್ನು ಬಳಸಲಾಗುತ್ತದೆ. ಈ ಸಡಿಕೆಯ ಮೂಲಕ ಯುವತಿ ಕೂದಲು ಸ್ಟ್ರೈಟ್‌ನಿಂಗ್ ಮಾಡುವ ಐಡಿಯಾ ಮಾಡಿದ್ದಾಳೆ. ಆದ್ರೆ ಈ ಐಡಿಯಾ ಆಕೆಗೆ ಆಘಾತ ತಂದಿದೆ.
ಸ್ಟವ್ ಹತ್ತಿಸಿದ ಆಕೆ ಬೆಂಕಿಯಲ್ಲಿ ಈ ಹಿಡಿಕೆಯನ್ನು ಬಿಸಿ ಮಾಡಿದ್ದಾಳೆ. ಅನಂತರ ಕೂದಲನ್ನು ಸ್ಟ್ರೈಟ್‌ನಿಂಗ್ ಮಾಡಲು ಹಿಡಿಕೆಯನ್ನು ಕೂದಲುಗಳ ನಡುವೆ ಹಿಡಿದು ಕೆಳಗೆ ಎಳೆದಿದ್ದಾಳೆ. ಆದ್ರೆ ಈ ವೇಳೆ ಆಕೆಯ ಕೂದಲು ತುಂಡಾಗಿ ಕಿತ್ತು ಬಂದಿದೆ. ಈ ಕೂದಲಿಗೆ ಬೆಂಕಿ ಹಿಡಿದು ಸಂಪೂರ್ಣ ಸುಟ್ಟು ಹೋಗಿದೆ. ಈ ಅನಿರೀಕ್ಷಿತ ಘಟನೆಯಿಂದ ಶಾಕ್‌ಗೆ ಒಳಗಾದ ಆಕೆ ಸ್ಟವ್ ಆಫ್ ಮಾಡಿದ್ದಾಳೆ.
ಈ ವಿಡಿಯೋ ವೈರಲ್ ಆಗಿದ್ದು, ಎಲ್ಲರು ಶಾಕ್‌ಗೆ ಒಳಗಾಗಿದ್ದಾರೆ. ಆಕೆ ಕೂದಲು ಕಳೆದುಕೊಂಡು ಶಾಕ್‌ಗೆ ಒಳಗಾಗಿದ್ದಾಳೆ. ಹಾಗೆ ಸ್ವಲ್ಪದರಲ್ಲಿ ಆಕೆ ಪಾರಾಗಿದ್ದಾಳೆ. ಒಂದು ವೇಳೆ ಕೂದಲಿಗೆ ಬೆಂಕಿ ಹಿಡಿದಿದ್ದರೆ ಮತ್ತೊಂದಿಷ್ಟು ಸುಡುತ್ತಿತ್ತು. ಇಂತಹ ಅಪಾಯಕಾರಿ ಟ್ರಿಕ್ಸ್ ಯತ್ನಿಸುವ ಮುನ್ನ ನೂರು ಬಾರಿ ಯೋಚಿಸಬೇಕಿದೆ. ಹಗೆ ಆಕೆಯ ಕೂದಲಿಗೆ ಯಾವುದೇ ಸಮಸ್ಯೆ ಆಗದಿದ್ದರೆ ಈ ವಿಡಿಯೋ ನೋಡಿ ಇನ್ನೊಂದಿಷ್ಟು ಮಂದಿ ಪ್ರಯತ್ನಿಸಿ ಯಡವಟ್ಟು ಮಾಡಿಕೊಳ್ಳುತ್ತಿದ್ದರು.
ಜನವರಿ 13 ರಂದು ಅಪ್‌ಲೋಡ್ ಮಾಡಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಹಾಗೆ ಸಾವಿರಾರು ಮಂದಿ ಕಮೆಂಟ್‌ಗಳ ಮಾಡಿದ್ದಾರೆ. ಈ ರೀತಿ ಕೂದಲು ಸ್ಟ್ರೈಟ್‌ನಿಂಗ್ ಮಾಡಲು ಸಾಹಸ ಮಾಡುವ ಬದಲಾಗಿ, ಸಲೂನ್‌ನಲ್ಲಿ ಮಾಡಿಸಿಕೊಳ್ಳುವುದು ಸುರಕ್ಷಿತ ಹಾಗೆ ಯಾವ ಹಾನಿಗೂ ಒಳಗಾಗದೆ ಮಾಡಿಕೊಳ್ಳಬಹುದು ಎಂದು ಬಳಕೆದಾರರು ಸಲಹೆ ನೀಡಿದ್ದಾರೆ.



Click it and Unblock the Notifications
