Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ವಿದ್ಯುತ್ ತಂತಿ ಬಾಯಲ್ಲಿ ಕಚ್ಚಿ ಹಿಡಿದ ಭೂಪ..! ಇದು ಸಾಧ್ಯವಾಗೋದು ಹೇಗೆ?
ವಿದ್ಯುತ್ ತಗುಲಿದರೆ ಕ್ಷಣದಲ್ಲಿ ಸಾವು ಸಂಭವಿಸುತ್ತೆ ಅನ್ನೋದು ನಮಗೆ ತಿಳಿದಿದೆ. ಹೀಗಾಗಿ ವಿದ್ಯುತ್ ಕಂಬಗಳು, ತಂತಿಗಳ ಹತ್ತಿರ ಎಚ್ಚರದಿಂದ ಇರಬೇಕು. ಜೊತೆಗೆ ಎಲೆಕ್ಟ್ರಿಕಲ್ ವಸ್ತುಗಳು, ಯಂತ್ರಗಳು ಸಹ ಅಷ್ಟೇ ಅಪಾಯಕಾರಿ. ಏಕೆಂದರೆ ವಿದ್ಯುತ್ ಜೊತೆ ಆಟವಾಡುವುದು ಒಂದೇ ಹಾವಿನ ಜೊತೆ ಸರಸವೂ ಒಂದೆ ಎಂದು ಹಿರಿಯರು ಹೇಳುತ್ತಾರೆ.
ವಿದ್ಯುತ್ ತಂತಿ ಮುಟ್ಟಿದಾಗ ಏನೆಲ್ಲಾ ಆಗುತ್ತೆ ಅನ್ನೋದು ತಿಳಿದಿದೆ. ಒಂದು ಸೆಕೆಂಡ್‌ನಲ್ಲಿ ನಿಮ್ಮ ಸಾವು ಸಂಭವಿಸುತ್ತೆ. ಅದರಲ್ಲೂ ಹೈ ಟೆನ್ಷನ್ ವೈರ್ ಮುಟ್ಟಿದರೆ ನಿಮ್ಮ ದೇಹವೇ ಸುಟ್ಟು ಬೂದಿ ಮಾತ್ರ ಉಳಿಯುತ್ತದೆ. ಹೀಗಾಗಿ ವಿದ್ಯುತ್ ತಂತಿಗಳ ಹತ್ತಿರ ಎಚ್ಚರದಿಂದ ಇರಲು ಸೂಚನಾ ಫಲಕಗಳ ಹಾಕಿರುತ್ತಾರೆ.

ಆದ್ರೆ ಇಲ್ಲೊಬ್ಬ ಯುವಕ ವಿದ್ಯುತ್ ಜೊತೆಗೆ ಜೀವಿಸುತ್ತಿದ್ದಾನೆ. ನಿಮಗೆ ಈ ವಿಡಿಯೋ ನೋಡಿದ್ರೆ ಅಚ್ಚರಿಯಾಗಬಹುದು. ಏಕೆಂದರೆ ಇಲ್ಲೊಬ್ಬ ಯುವಕ ವಿದ್ಯುತ್ ತಂತಿಯನ್ನು ಬಾಯಲ್ಲಿ ಹಿಡಿದು ವಿದ್ಯುತ್‌ಗೆ ಶಾಕ್ ಕೊಟ್ಟಿದ್ದಾನೆ. ಈ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಅಚ್ಚರಿ ಜೊತೆ ನಿಗೂಢವಾಗಿ ಕಾಣುತ್ತಿದೆ.
ಆತ ಬಾಯಲ್ಲಿ ಎರಡು ವಿದ್ಯುತ್ ತಂತಿ ಕಚ್ಚಿಕೊಂಡಿದ್ದರೆ ಮತ್ತೋರ್ವ ಟೆಸ್ಟರ್ ಹಿಡಿದು ಆತನ ಕೈಗೆ ಹಿಡಿದರೆ ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದು ನೋಡಬಹುದು. ಆತನ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದು ಕಂಡುಬರುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ.
ನಂತರ, ಯುವಕನು ತನ್ನ ಬಾಯಿಯಿಂದ ತಂತಿಯನ್ನು ತೆಗೆದುಕೊಂಡು ಮೀಟರ್‌ನಿಂದ ತಂತಿಯನ್ನು ಹೊರತೆಗೆದನು. ಆದರೆ ಅಂತಹ ವಿಷಯವು ತುಂಬಾ ಅಪಾಯಕಾರಿ. ಯಾರೂ ಇದನ್ನು ಮಾಡಬಾರದು ಏಕೆಂದರೆ ಈ ರೀತಿಯ ವಿದ್ಯುತ್ ಯಾರನ್ನೂ ಬೇಕಾದರು ಕ್ಷಣದಲ್ಲಿ ಕೊಲ್ಲುತ್ತದೆ. ಸ್ವತಃ ಬಾಲಕ ತನ್ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ. ಆತನ ಹೆಸರು ರಾಜು ಮಾಲಾ, ಈ ವಿಡಿಯೋವನ್ನು @rajumala88 ಹೆಸರಿನ Instagram ಖಾತೆಯಲ್ಲಿ ಹಂಚಿಕೊಂಡಿರುವುದು ನೋಡಬಹುದು.
ಈ ವಿಡಿಯೋ ನೋಡಿದ ಬಹಳಷ್ಟು ಮಂದಿ ಶಾಕ್ ಆಗಿದ್ದಾರೆ. ಇಂತಹ ಸಾಹಸ ಕಂಡ ಜನರು ಇದು ನಿಜವೇ ಅಥವಾ ಸುಳ್ಳಾ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಇದು ಸಾಧ್ಯವೇ ಇಲ್ಲ ಎಂದು ಹಲವರು ವಾದಿಸಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರು ಇಂತಹ ಆಟಗಳನ್ನು ಆಡಬಾರದು, ಜೀವನವು ತುಂಬಾ ಅಮೂಲ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಳಿಗೆ ಹಾಕಿರುವ ಚಪ್ಪಲಿಯನ್ನು ತೆಗೆದುಕೊಂಡು ಇದೇ ರೀತಿ ಪರೀಕ್ಷಿಸಿ ಆಗ ನಾನು ಈ ಸಾಹಸ ಒಪ್ಪುತ್ತೇನೆ ಎಂದು ಬರೆದಿದ್ದಾರೆ.
ಇದು ಸಾಧ್ಯವಾಗೋದು ಹೇಗೆ?
ಈ ರೀತಿಯ ಕೇಸ್‌ನಲ್ಲಿ ಒಂದು ಈ ವಿದ್ಯುತ್ ತಂತಿಗಳು ಯಾವ ಮೂಲದಿಂದ ಬಂದಿವೆ ಎಂಬುದು ಮುಖ್ಯವಾಗುತ್ತದೆ. ಅದರಲ್ಲೀ ನ್ಯೂಟ್ರಾನ್ ಮೂಲಕ ಈ ವಿದ್ಯುತ್ ಹರಿಯುವಿಕೆ ಇದ್ದರೆ ನೀವು ಚಪ್ಪಲಿ ಧರಿಸಿದ್ದರೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ.
ಇದಲ್ಲದೆ ಈ ತಂತಿಯಲ್ಲಿ ಎಷ್ಟು ವೋಲ್ಟ್ ವಿದ್ಯುತ್ ಹರಿಯುತ್ತಿದೆ ಎನ್ನುವುದು ಸಹ ಮುಖ್ಯವಾಗುತ್ತದೆ. ಆದ್ರೆ ಈ ರೀತಿ ಯಾರು ಸಹ ಪ್ರಯತ್ನ ಮಾಡಬಾರದು ಎಂಬುದು ಎಲ್ಲರ ಕಳಕಳಿಯಾಗಿದೆ. ಸ್ವಲ್ಪವೇ ಯಡವಟ್ಟು ಆದರೂ ಜೀವಕ್ಕೆ ಹಾನಿಯಾಗುತ್ತದೆ.



Click it and Unblock the Notifications