Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ಪತ್ನಿಯನ್ನು ವಂದೇ ಭಾರತ್ ಟ್ರೈನ್ ಹತ್ತಿಸಿ ಟಾಟಾ ಹೇಳಿ ಬರೋಣ ಅಂತ ಹೋದ ಗಂಡನೂ ಟ್ರೈನ್ ಲಾಕ್
ಇಲ್ಲೊಬ್ಬರು ತಮ್ಮ ಪತ್ನಿಯನ್ನು ರೈಲ್ವೆ ಸ್ಟೇಷನ್‌ಗೆ ಬಿಡುವುದಕ್ಕೆ ಹೋಗಿದ್ದಾರೆ, ಅದು ಒಂದೇ ಭಾರತ್ ಟ್ರೈನ್, ವಡೋದರಾದಿಂದ ಮುಂಬಯಿಗೆ ತಮ್ಮ ಮಗಳನ್ನು ನೋಡಲು ಆ ತಾಯಿ ಟ್ರೈನ್‌ನಲ್ಲಿ ಹೋಗಲು ಸಿದ್ಧತೆ ಮಾಡಿದ್ದರು.
ಅವರ ಪತಿ ಲಗೇಜ್ ಇಟ್ಟು ಬರೋಣ ಅಂತ ಟ್ರೈನ್ ಒಳಗಡೆ ಹೋಗುತ್ತಾರೆ, ಅಲ್ಲಿಯೇ ಲಾಕ್ ಆಗಿ ಬಿಡುತ್ತಾರೆ. ಈ ಸ್ವಾರಸ್ಯ ಕತೆಯನ್ನು ಅವರ ಮಗಳು ಕೋಷಾ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಈ ಸುದ್ದಿ ತುಂಬಾನೇ ಗಮನ ಸೆಳೆದಿದೆ.

ಕೋಷಾ ಈ ರೀತಿ ಹೇಳಿದ್ದಾರೆ 'ನನ್ನ ತಾಯಿ ಇದೇ ಮೊದಲು ವಂದೇ ಭಾರತ್ ಟ್ರೈನ್‌ನಲ್ಲಿ ಬರುತ್ತಿದ್ದರು. ನಾನು ಮುಂಬಯಿಯಲ್ಲಿ ಇರುವುದರಿಂದ ನನ್ನನ್ನು ನೋಡುವುದಕ್ಕೆ ಬರುತ್ತಿದ್ದರು, ಅವರು ತುಂಬಾ ದಿನ ಜೊತೆಗೆ ಇರಲು ಬರುತ್ತಿರುವುದರಿಂದ ಎರಡು ದೊಡ್ಡ ಲಗೇಜ್ ಕೂಡ ಇತ್ತು.
ಅಮ್ಮ ಹೊರಡಲು ರೆಡಿಯಾದ ಅಪ್ಪ ನಿದ್ದೆಯಿಂದ ಎದ್ದು ಕಾರು ತಗೊಂಡು ಅಮನ್ನನ್ನು ರೈಲ್ವೆ ಸ್ಟೇಷನ್ ಬಿಡಲು ಬರುತ್ತಾರೆ. ಟ್ರೈನ್ ಬರುವಾಗ ಎಲ್ಲಾ ಭಾರತೀಯ ಪುರುಷರಂತೆ ನಮ್ಮಪ್ಪ ಕೂಡ ಅಮ್ಮನ ಲಗೇಜ್ ಅನ್ನು ಟ್ರೈನ್ ಒಳಗಡೆ ಕೊಂಡೊಯ್ದು ಅಮ್ಮನನ್ನು ಸೀಟ್ ಕೂರಿಸಿ ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಅಟೋಮೆಟಿಕ್ ಡೋರ್ ಬೀಪ್ ಸೌಂಡ್ ಮಾಡಿ ಲಾಕ್ ಆಯ್ತು. ಅಪ್ಪನಿಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಅಲ್ಲೇ ಇದ್ದ TC ಬಳಿ ಹೋಗುತ್ತಾರೆ, ಆವಾಗ ಟಿಸಿ ಟ್ರೈನ್ ಸ್ಪೀಡ್ ಆಗಿದೆ ಇನ್ನೇನಿದ್ದರೂ ಮುಂದಿನ ಸ್ಟೇಷನ್‌ನಲ್ಲಿ ಇಳಿಯಬೇಕಷ್ಟೇ ಎಂದು ಹೇಳಿದರು.
My mother is travelling for the first time in Vande Bharat from Vadodara to Mumbai today to visit me. As it is going to be a longer stay, she had two big bags to travel with. (1/4)
— Kosha (@imkosha) April 2, 2024
ಹೀಗೆ ಅಪ್ಪ-ಅಮ್ಮ ಇಬ್ಬರು ಇದೇ ಮೊದಲ ಬಾರಿಗೆ ವಂದೇ ಭಾರತ್ ಟ್ರೈನ್‌ನಲ್ಲಿ ಪ್ರಯಾಣಿಸಿದಂತಾಯ್ತು, ಅಮ್ಮ ಮುಂಬಯಿಗೆ ಅಪ್ಪ ಮುಂದಿನ ಸ್ಟೇಷನ್‌ಗೆ. ನೈಟ್ ಡ್ರೆಸ್‌ನಲ್ಲಿಯೇ ಸೂರತ್‌ಗೆ ಹೋಗಿ ಅಲ್ಲಿಂದ ಟಿಕೆಟ್ ಮಾಡಿ ವಡೋದರಾಗೆ ಬಂದು ಅಲ್ಲೇ ಪಾರ್ಕ್ ಮಾಡಿದ್ದ ಕಾರು ತಗೊಂಡು ಮನೆಗೆ ಹೋದರು. ಈ ಕತೆ ಈಗ ಕೇಳುವಾಗ ನಮಗೆ ತುಂಬಾನೇ ಸ್ವಾರಸ್ಯ ಅನಿಸುತ್ತೆ, ಆದರೆ ಪಾಪ ಆ ವ್ಯಕ್ತಿಗೆ ಡೋರ್ ಲಾಕ್ ಆದಾಗ ತುಂಬಾನೇ ಗಲಿಬಿಲಿಯಾಗಿರಬಹುದು.
ಎಲ್ಲಾ ಪುರುಷರು ಪತ್ನಿ ಅಥವಾ ಮಕ್ಕಳನ್ನು ಹೀಗೆ ಟ್ರೈನ್‌ನಲ್ಲಿ, ಬಸ್‌ನಲ್ಲಿ ಕಳುಹಿಸುವಾಗ ಲಗೇಜ್ ತಾವೇ ತೆಗೆದಿಡುತ್ತಾರೆ, ಅದೇ ರೀತಿ ಇಲ್ಲಿಯೂ ಇವರು ತಮ್ಮ ಪತ್ನಿಗೆ ಹೆಲ್ಪ್ ಮಾಡೋಕೆ ಹೋಗಿ ಟ್ರೈನ್‌ನಲ್ಲಿ ಸಿಕ್ಕಾಕಿಕೊಳ್ಳುವ ಪರಿಸ್ಥಿತಿ ಉಂಟಾಯ್ತು. ಆ ಟಿಸಿ ಇವರ ಕಷ್ಟ ಅರಿತು ಏನೂ ಹೇಳಲಿಲ್ಲ, ಇನ್ನು ಕೆಲವರಾದರೆ ಟಿಕೆಟ್ ಇಲ್ಲದ ಪ್ರಯಾಣ ಎಂದು ದಂಡನೂ ಹಾಕುತ್ತಿದ್ದರು. ಮತ್ತೆ ಟ್ರೈನ್ ಹೋಗುತ್ತಿದೆ ಎಂದು ಗಡಿಬಿಡಿಯಲ್ಲಿ ಹತ್ತುವುದು, ಇಳಿಯುವುದು ಮಾಡಿದಾಗ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ, ಹೀಗಾಗಿ ಟ್ರೈನ್ ಬಾಗಿಲು ಮುಚ್ಚಿತ್ತಿದೆ ಎಂದಾದರೆ ಟೆನ್ಷನ್ ಬೇಡ, ತಾಳ್ಮೆಯಿಂದ ಇರಿ, ಹೆಚ್ಚೆಂದರೆ ದಂಡ ಕಟ್ಟಬೇಕು ಅಷ್ಟೇ, ಪ್ರಾಣಕ್ಕೆ ಅಪಾಯವಿರಲ್ಲ.
ಈ ರೀತಿಯ ಘಟನೆ ತುಂಬಾ ಕಡೆ ಆಗುತ್ತಿರುತ್ತೆ, ಮೆಟ್ರೋ ಅಥವಾ ಟ್ರೈನ್‌ನಲ್ಲಿ ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ಡೋರ್ ಲಾಕ್ ಆಗಿರುವ ಅಥವಾ ಹೀಗೆ ಯಾರನ್ನಾದರೂ ಟ್ರೈನ್‌ಗೆ ಹತ್ತಿಸಲು ಹೋಗಿ ಇನ್ನೂ ಸ್ವಲ್ಪ ಮುಂದೆ ಹೋಗಿರುವ ಘಟನೆಗಳು ನಡೆಯುತ್ತಲೇ ಇರುತ್ತದೆ.
ವಂದೇ ಭಾರತ್ ಟ್ರೈನ್‌ನ ವಿಶೇಷತೆ
ವಂದೇ ಭಾರತ್ ಟ್ರೈನ್ ಅತಿ ವೇಗವಾಗಿ ಚಲಿಸುವ ಟ್ರೈನ್ ಆಗಿದೆ. ಇದರ ವೇಗ ಗಂಟೆಗೆ 180 ಕಿ.ಮೀ, ಏರೋಡೈನಾಮಿಕ್ ಡಿಸೈನ್‌ನ ಈ ಟ್ರೈನ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟ್ರೈನ್ ಆಗಿದೆ.



Click it and Unblock the Notifications