Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಮಹಿಳಾ ಬೋಗಿಯಲ್ಲಿದ್ದ ಪುರುಷರಿಗೆ ಖಾಕಿ ಏಟು.! ಈಗ ಸಮಾನತೆ ಎಲ್ಲಿದೆ ಎಂದ ನೆಟ್ಟಿಗರು..!
ಭಾರತದ ಯಾವುದೇ ಸಿಟಿಯಲ್ಲಿ ನೀವು ಮೆಟ್ರೋ ಬಳಸಿದ್ದರೆ ಅದರ ಕಷ್ಟ ನಿಮಗೆ ತಿಳಿದಿರುತ್ತೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಮೆಟ್ರೋ ಕಾರ್ ಬಿಡಿ, ಮೆಟ್ರೋ ನಿಲ್ದಾಣದಲ್ಲೂ ಕಾಲು ಇಡಲು ಜಾಗ ಇರುವುದಿಲ್ಲ. ಮೆಟ್ರೋ ಈಗ ಜನ ಸಾಮಾನ್ಯರ ನಿತ್ಯದ ಓಡಾಟದ ಹಾಗೂ ಸಂಪರ್ಕಕ್ಕೆ ಸುಲಭವಾದ ಆಯಾಮವಾಗಿ ಬದಲಾಗಿದೆ. ಹೀಗಾಗಿ ಲಕ್ಷ ಲಕ್ಷ ಮಂದಿ ಮೆಟ್ರೋ ಬಳಸುತ್ತಾರೆ.
ಇನ್ನು ದೆಹಲಿ ಮೆಟ್ರೋ ಕಥೆ ಭಿನ್ನವಾಗಿದೆ. ಅಲ್ಲಿ ನೀವು ಯಾವ ಸಮಯಕ್ಕೆ ಹೋದರು ಯಾವಾಗಲು ಜನಸಂದನಿಯಿಂದ ತುಂಬಿಕೊಂಡಿರುತ್ತದೆ. ನೀವು ನಿಲ್ಲುವುದು ಇರಲಿ ಅದರ ಒಳಗೆ ಉಸಿರಾಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಅಲ್ಲಿದೆ. ರಸ್ತೆ ಮಾರ್ಗದಲ್ಲಿ ಅತ್ಯಧಿಕ ಟ್ರಾಫಿಕ್ ಹಾಗೂ ಮಾಲಿನ್ಯ ಕಾರಣದಿಂದಾಗಿ ಬಹುತೇಕ ಮಂದಿ ಮೆಟ್ರೋವನ್ನು ಬಳಸುತ್ತಾರೆ.

ಆದ್ರೆ ಮೆಟ್ರೋದಲ್ಲಿ ಮಹಿಳೆಯರಿಗೆಂದೇ ಮೀಸಲಿಟ್ಟಿರುವ ಬೋಗಿಗಳಿವೆ. ಇದು ಎಲ್ಲಾ ನಗರದ ಮೆಟ್ರೋದಲ್ಲು ನಾವು ನೋಡಬಹುದು. ಆ ಬೋಗಿಗಳಲ್ಲಿ ಮಹಿಳೆಯರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿರುತ್ತದೆ. ಒಂದು ವೇಳೆ ಪುರುಷರು ಹತ್ತಿದರು ಅಲ್ಲಿಂದ ಬೇರೆಡೆಗೆ ಅವರು ತೆರಳಬೇಕಾಗುತ್ತದೆ. ಕೆಲವೊಂದು ಕಡೆ ದಂಡ ಸಹ ವಿಧಿಸುವ ನಿಯಮವೂ ಇದೆ.
ಈಗ ದೆಹಲಿಯಲ್ಲಿ ಈ ಮಹಿಳಾ ಬೋಗಿಗಳಲ್ಲಿ ನಿಂತು ಸಂಚರಿಸುತ್ತಿದ್ದ ಪುರುಷರಿಗೆ ಮಹಿಳಾ ಪೊಲೀಸ್ ಅಧಿಕಾರಿಯೇ ಚಳಿ ಬಿಡಿಸಿರುವ ಘಟನೆ ವರದಿಯಾಗಿದೆ. ದೆಹಲಿ ಮೆಟ್ರೋದ ಮಹಿಳಾ ಬೋಗಿಯ ತುಂಬಾ ಪುರುಷರೇ ನಿಂತು ಸಾಗುತ್ತಿದ್ದಾಗ ಮಹಿಳಾ ಪೊಲೀಸ್ ಅಧಿಕಾರಿ ಕಪಾಳಕ್ಕೆ ಹೊಡೆದು ಕೆಳಗೆ ಇಳಿಸುತ್ತಿರುವುದು ನೋಡಬಹುದು.
ಮೆಟ್ರೋ ನಿಲ್ದಾಣದಲ್ಲಿದ್ದ ಸಿಐಎಸ್‌ಎಫ್ ಸಿಬ್ಬಂದಿ ಜೊತೆಗೆ ಈ 40 ಮಂದಿ ಪುರುಷರು ಗಲಾಟೆ ಮಾಡಿದ್ದಾರೆ, ಮಹಿಳಾ ಬೋಗಿಯಿಂದ ಕೆಳಗೆ ಇಳಿಯುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ, ಬಳಿಕ ಪೊಲೀಸ್ ಅಧಿಕಾರಿಗಳು ಬೋಗಿಯೊಳಗೆ ಇದ್ದ ಪುರುಷರಿಗೆ ಥಳಿಸಿ ಕೆಳಗೆ ಇಳಿಸಿದ್ದಾರೆ. ಈ ವೇಳೆ ಹೊರಗಿದ್ದ ಮಹಿಳಾ ಅಧಿಕಾರಿ ಕೆಲವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.
ಆದ್ರೆ ಈ ಘಟನೆ ನಡೆದ ಬಳಿಕ ಹಲವರು ಇದೊಂದು ತಾರತಮ್ಯ ಎಂದು ವಾದಿಸಿದ್ದಾರೆ. ಬೇರೆ ಎಲ್ಲಾ ಬೋಗಿಗಳು ಉಸಿರುಗಟ್ಟಿಸುವಂತಹ ಸ್ಥಿತಿಯಲ್ಲಿ ಇದ್ದಾಗ ಮಹಿಳಾ ಬೋಗಿಗಳು ಜನರಿಲ್ಲದೆ ಖಾಲಿಯಾಗಿರುತ್ತವೆ. ಹೀಗಿದ್ದಾಗ ಅಲ್ಲಿ ಪುರುಷರು ಪ್ರಯಾಣಿಸುವುದು ತಪ್ಪು ಎಂದು ಹೇಗೆ ಹೇಳುತ್ತಾರೆ ಇದು ಕೂಡ ತಾರತಮ್ಯ ಅಲ್ಲವೇ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಇನ್ನು ಹಲವರು ಪೊಲೀಸ್ ಅಧಿಕಾರಿಗಳ ಈ ವರ್ತನೆಯನ್ನು ಖಂಡಿಸಿದರು. ಪೊಲೀಸರು ಹೀಗೆ ಸಾರ್ವಜನಿಕರ ಮೇಲೆ ಕೈ ಮಾಡುವುದು ತಪ್ಪು. ಅವರನ್ನು ಇಳಿಸಲಿ ಅಥವಾ ದಂಡ ವಿಧಿಸಿಲು ಅವರಿಗೆ ಹೊಡೆಯುವ ಹಕ್ಕು ಇರುವುದಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಹಾಗೆ ಮಹಿಳಾ ಸಿಬ್ಬಂದಿ ಪುರುಷರ ಮೇಲೆ ಹೇಗೆ ಕೈ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಆದ್ರೆ ಈ ಘಟನೆ ನಡೆದಿರುವುದು 2010ರಲ್ಲಿ ಆದ್ರೆ ಕೆಲವರು ಈ ಘಟನೆ ಈಗ ನಡೆದಿದೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದಾರೆ. ಆದ್ರೆ ದೆಹಲಿ ಮೆಟ್ರೋದ ಪರಿಸ್ಥಿತಿ 2010ರಲ್ಲಿ ಇದ್ದಂತೆಯೇ ಈಗಲು ಇದೆ. ಅಲ್ಲಿ ನಿತ್ಯ ಒಂದಲ್ಲಾ ಒಂದು ಗಲಾಟೆಗಳು ನಡೆಯುತ್ತಲೇ ಇರುತ್ತದೆ.
ಆದ್ರೆ ಪೊಲೀಸರ ಕಾರ್ಯಕ್ಕೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಎಂದರೆ ಹೀಗೆಯೇ ಇರಬೇಕು. ಇಲ್ಲದಿದ್ದರೆ ಜನರು ಅವರ ಮೇಲೆ ತಿರುಗಿ ಬೀಳುತ್ತಾರೆ. ಇಲ್ಲಿ ನಿಯಮ ಉಲ್ಲಂಘನೆಯಾಗಿರುವುದಂತು ನಿಜ, ಹೀಗಾಗಿಯೇ ಜನರಿಗೆ ಏಟು ಬಿದ್ದಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಒಂದು ವೇಳೆ ಮಹಿಳಾ ಬೋಗಿಯಲ್ಲಿ ಏನಾದರು ಘಟನೆ ನಡೆದರೆ ಪೊಲೀಸರ ಮೇಲೆ ನಾವು ದೂರುತ್ತೇವೆ ಎಂದು ಬಳಕೆದಾರರು ಬರೆದಿದ್ದಾರೆ.



Click it and Unblock the Notifications
