Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಒಬ್ಬನೇ ಹುಡುಗನ ಜೊತೆ 4 ಹೆಣ್ಮಕ್ಕಳ ಮದುವೆ ವೀಡಿಯೋ ವೈರಲ್: ಇದು ಮದುವೆಯ ಕತೆಯೇನು?
ಮದುವೆ ಎಂಬುವುದು ಪವಿತ್ರ ಬಂಧನ, ನಾವಿಬ್ಬರು ಇನ್ನು ಮುಂದಿನ ಜೀವನವನ್ನು ಜೊತೆಯಾಗಿ ಹೆಜ್ಜೆ ಹಾಕುತ್ತೇವೆ ಎಂದು ಸಪ್ತಪದಿ ತುಳಿಯುತ್ತಾರೆ. ಆದರೆ ಇಲ್ಲೊಬ್ಬ ವರ ನಾಲ್ಕು ಹೆಣ್ಣು ಮಕ್ಕಳ ಜೊತೆ ಸಪ್ತಪದಿ ತುಳಿದಿದ್ದಾನೆ, ಇದೀಗ ಈ ಮದುವೆ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಹಿಂದೂ ಧರ್ಮದ ಆಚರಣೆಯಂತೆ ಕಾಣುವ ಮದುವೆ ಇದಾಗಿದ್ದು ಹುಡುಗ ವರನಂತೆಯೇ ಅಲಂಕೃತನಾಗಿದ್ದಾನೆ, ನಾಲ್ಕು ಹೆಣ್ಮಕ್ಕಳು ನವವಧುಗಳಾಗಿ ಸಿಂಗರಿಸಿ ಒಬ್ಬರ ಹಿಂದೆ ಒಬ್ಬರಂತೆ ಸುತ್ತು ಬರುತ್ತಿದ್ದಾರೆ, ವರನ ಹೆಗಲಿನಲ್ಲಿರುವ ಪಿಂಕ್ ವಸ್ತ್ರವನ್ನು ಎಲ್ಲರೂ ಹಿಡಿದು ಸುತ್ತು ಬರುತ್ತಿದ್ದಾರೆ, ಇದನ್ನು ನೋಡಿದವರು ಹುಡುಗನಿಗೆ ಸೂಪರ್ ಬಂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ವೀಡಿಯೋದಲ್ಲಿ ವರ ತುಂಬಾ ಖುಷಿ ಖುಷಿಯಾಗಿ ಹೆಜ್ಜೆ ಹಾಕುತ್ತಿದ್ದಾನೆ, ವಧುಗಳು ಅಷ್ಟೇ ನಾಜೂಕಾಗಿ ಅವನ ಹಿಂದೆ ಸುತ್ತು ಬರುತ್ತಿದ್ದಾರೆ, ಸುತ್ತು ಬಂದ ನಂತರ ನಾಲ್ವರು ಪತಿಯ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.
ಈ ವೀಡಿಯೋವನ್ನು ನೋಡಿದವರು ಒಂದೊಂದು ಬಗೆಯ ಕಮೆಂಟ್ ಹಾಕುತ್ತಿದ್ದಾರೆ, ಅದರಲ್ಲಿ ಕೆಲ ಕಮೆಂಟ್‌ಗಳು ಗಮನ ಸೆಳೆಯುತ್ತಿವೆ...
ರಿಯಲ್ ಅಲ್ಲ ರೀಲ್ ಮದುವೆ
ಈ ವೀಡಿಯೋ ನೋಡಿದ ಬಹುತೇಕ ನೆಟ್ಟಿಗರು ಇದು ರಿಯಲ್ ಅಲ್ಲ ಯಾವುದೋ ರೀಲ್ಸ್‌ಗಾಗಿ ಮಾಡಿದ ನಟನೆ ಎಂದು ಹೇಳುತ್ತಿದ್ದಾರೆ. ಅವರು ಆ ರೀತಿ ಹೇಳುವುದಕ್ಕೆ ಕಾರಣವೂ ಇದೆ.
ಉಲ್ಟಾವಾಗಿ ಹೆಜ್ಜೆ ಹಾಕುತ್ತಿದ್ದಾರೆ
ಆ ಮದುವೆ ವೀಡಿಯೋದಲ್ಲಿ ವರನೊಂದಿಗೆ ವಧುಗಳು ಉಲ್ಟಾ ಹೆಜ್ಜೆ ಹಾಕುತ್ತಿದ್ದಾರೆ, ಅಲ್ಲದೆ ಆ ಮದುವೆಯಲ್ಲಿ ಎಲ್ಲವೂ ರೀಲ್ಟ್ ಸೆಟ್‌ಅಪ್‌ನಂತೆ ಕಾಣುತ್ತಿದೆ. ಸ್ವಲ್ಪ ಸ್ನೇಹಿತರು ಅಕ್ಷತೆ ಹಾಕುತ್ತಿದ್ದಾರೆ, ಅವರ ಮುಖದಲ್ಲಿ ತಮಾಷೆ ಎದ್ದು ಕಾಣುತ್ತಿದೆ, ಹೀಗಾಗಿ ಇದನ್ನು ರಿಯಲ್ ಅಲ್ಲ, ರೀಲ್ಸ್ ಎಂದು ಹೇಳುತ್ತಿದ್ದಾರೆ.
सारथी मेरे रथ को खाई के तरफ ले चलो...🤐 pic.twitter.com/n9bYlCOtMS
— मुसाफिर 🚶vk (@musafir_vj) December 7, 2023
ಅಕ್ಕ-ತಂಗಿ ಒಬ್ಬರನ್ನೇ ಮದುವೆಯಾದ ಎಷ್ಟೋ ಉದಾಹರಣೆಗಳಿವೆ
ಅಕ್ಕ-ತಂಗಿ ಬಾಂಧವ್ಯ ತುಂಬಾ ಗಟ್ಟಿಯಾಗಿದ್ದಾಗ ಒಬ್ಬನನ್ನೇ ಮದುವೆಯಾಗಿರುವ ಎಷ್ಟೋ ಉದಾಹರಣೆಗಳಿಗೆ, ಉದಾಹರಣೆಗೆ ನಟಿ ಶ್ರುತಿಯವರ ತಂದೆ-ತಾಯಂದಿರು.
ಇನ್ನು ಕೆಲ ಅವಳಿ ಅಕ್ಕ-ತಂಗಿ ಒಬ್ಬರನ್ನೇ ಒಂದೇ ಮಂಟಪದಲ್ಲಿ ಮದುವೆಯಾದ ಉದಾಹರಣೆಗಳಿವೆ. ಇನ್ನು ಕೆಲವರು ಬೇರೆ-ಬೇರೆ ಸಂದರ್ಭದಲ್ಲಿ ಮದುವೆಯಾಗಿ 4-5 ಹೆಂಡತಿಯನ್ನು ಹೊಂದಿದ್ದಾರೆ.
ಆದರೆ ಒಂದೇ ಮಂಟಪದಲ್ಲಿ ನಾಲ್ಕು ಜನ ವಧುವಿನ ಜೊತೆ ಹೆಜ್ಜೆ ಹಾಕಿರುವ ಘಟನೆ ಭಾರತದಲ್ಲಿ ನಡೆದಿದೆಯೋ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ಕಮೆಂಟ್ ಮಾಡಿ....



Click it and Unblock the Notifications
