Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ತಲೆಗೆ ಪೇಟಾ, ಒಳ್ಳೆಯ ಶರ್ಟ್, ಟ್ರೌಸರ್ ಧರಿಸಿ ಪ್ರವಾಹ ನೀರಿನಲ್ಲಿ ಮದುವೆಯಾಗಲು ಹೊರಟ ಮದುಮಗನ ವೀಡಿಯೋ ವೈರಲ್
ಎಲ್ಲರ ಬದುಕಿನಲ್ಲಿ ಮದುವೆಯೆಂಬುವುದು ದೊಡ್ಡ ಕನಸು, ಸಂಭ್ರಮ. ಮದುಗೆ ದಿನಾಂಕ ಗೊತ್ತಾದ ದಿನದಿಂದಲೇ ಸಿದ್ದತೆಗಳು ನಡೆಯಲಾರಂಭಿಸುತ್ತದೆ, ಆದರೆ ಮದುವೆ ದಿನ ನಮ್ಮ ಕನಸಿನಂತೆ ಮದುವೆ ನಡೆಯದಿದ್ದರೆ ಬೇಸರವಾಗವುದು ಸಹಜ, ಆದರೆ ಸವಾಲುಗಳನ್ನು ಸ್ವೀಕರಿಸಿ ಮುಂದುವರೆಯದೇ ಜೀವನ.. ಇಷ್ಟೆಲ್ಲಾ ಪೀಠಿಕೆಗೆ ಕಾರಣ ಈ ಮದುಮಗ.
ಮದುವೆ ದಿನಾಂಕ ಗೊತ್ತಾಗಿದೆ, ಆದರೆ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ, ದೇಶದ ಬಹುತೇಕ ಕಡೆ ಮಳೆ ಸುರಿಯುತ್ತಿರುವುದರಿಂದ ಪ್ರವಾಹ ಉಂಟಾಗಿದೆ, ಈ ಮದುಮಗ ಕೂಡ ಮುವೆಗೆ ಪೇಟಾ ಎಲ್ಲಾ ಹಾಕಿ ರೆಡಿಯಾಗಿದ್ದಾನೆ, ಗಾಡಿ ಹೋಗುವಂತಿಲ್ಲ, ನಡೆದುಕೊಂಡೇ ಹೋಗಬೇಕು, ಮೊಣಕಾಲುವರೆಗೆ ರಸ್ತೆಯಲ್ಲಿ ನೀರಿದೆ, ಆದರೂ ತಲೆಕೆಡಿಸಿಕೊಳ್ಳದೆ ಹುಡುಗ ಮದುವೆಯಾಗಲು ಹೋಗುತ್ತಿರುವ ವೀಡಿಯೋ ಇದಾಗಿದೆ.

ದಿಬ್ಲೂಸಿಟಿಜೋಧ್‌ಪುರ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಶಾದಿ ತೋ ಕರ್ಕೆ ರಹೇಗಾ' ಎಂಬ ಕ್ಯಾಪ್ಷನ್ ನೀಡಿ ಹಾಕಲಾಗಿದೆ. ಈ ವೀಡಿಯೋ ನೋಡಿ ಕೆಲವರು ನಕ್ಕರೆ ಇನ್ನು ಕೆಲವರು ಮದುವೆಗೆ ಆತನಿಗಿರುವ ಕಮಿಟ್‌ಮೆಂಟ್ ಮೆಚ್ಚಿಕೊಳ್ಳಲೇಬೇಕು, ಪರಿಸ್ಥಿತಿ ಎಂಥದ್ದೇ ಇರಲಿ ಅವನು ಮದುವೆಯಾಗುವ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಮದುವೆ ದಿಬ್ಬಣಕ್ಕೆ ಅಡ್ಡಿಯಾದ ಮಳೆ
ಮನೆಯಲ್ಲಿ ಅಥವಾ ನೆಂಟರಿಷ್ಟರ ಮದುವೆ ಇದ್ದಾಗ ಇವತ್ತು ಮಳೆ ಬರದಿರಲಿ ಎಂದು ಪ್ರಾರ್ಥಿಸುತ್ತಾರೆ. ಮದುವೆಯಲ್ಲಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಓಡಾಡುತ್ತೇವೆ, ಆದರೆ ಮಳೆ ಬಂದರೆ ಕಷ್ಟ ಅಂತ ಅಂದುಕಳ್ಳುತ್ತೇವೆ, ಆದರೆ ಇಲ್ಲಿ ಪ್ರವಾಹದ ಪರಿಸ್ಥಿತಿ ಬಂದಿದೆ. ಮೊಣಕಾಲುವರೆಗೆ ನೀರು ಬಂದಿರುವಾಗ ಬೇರೆಯವರಾದರೆ ಮದುವೆ ಮುಂದೂಡುತ್ತಿದ್ದರು ಕಾಣುತ್ತೆ, ಆದರೆ ವರ ಮಾತ್ರ ಮದುವೆ ಮಂಟಪದ ಕಡೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಒಳ ಉಡುಪಿನಲ್ಲಿ ನೀರು ದಾಟುತ್ತಿದ್ದಾರೆ. ಪ್ಯಾಂಟ್ ಧರಿಸಿದರೆ ಒದ್ದೆಯಾಗುತ್ತೆ, ಹೀಗಾಗಿ ಒಳ್ಳೆಯ ಶರ್ಟ್, ಪ್ಯಾಂಟ್ ಧರಿಸಿ, ಚಡ್ಡಿಯಲ್ಲಿ ನೀರು ದಾಟುತ್ತಿದ್ದಾರೆ.
ಮದು ಮಗನಂತೆ ಡ್ರೆಸ್ಸಿಂಗ್ ಮಾಡಿ ಮಾರ್ಕೆಟ್‌ನಲ್ಲಿ ತಿರುಗಾಡಿ ಗಮನ ಸೆಳೆದ ಯುವಕ
ಮೊದಲ ವೈರಲ್ ವೀಡಿಯೋದಲ್ಲಿ ಮಳೆಯಿಂದಾಗಿ ಕಷ್ಟಪಟ್ಟ ಮದುಮಗನ ವೀಡಿಯೋ ಆದರೆ ಮತ್ತೊಂದು ವೈರಲ್ ವೀಡಿಯೋದಲ್ಲಿ ಯುವಕನೊಬ್ಬ ಥೇಟ್ ಮದುಮಗನಂತೆ ಡ್ರೆಸ್ಸಿಂಗ್ ಮಾಡಿ ಮಾರ್ಕೆಟ್‌ನಲ್ಲಿ ತಿರುಗಾಡಿದ್ದಾನೆ, ಆತನನ್ನು ನೋಡಿ ಜನ ನಗುತ್ತಿರುವುದನ್ನು ಆ ವೀಡಿಯೋದಲ್ಲಿ ಕಾಣಬಹುದು.
ಇದೊಂದು ಚಾಲೆಂಜ್ ವೀಡಿಯೋ ಎಂದು ಹೇಳಲಾಗುತ್ತಿದೆ, ಇದು ರೀಲ್ಸ್ ಜಮಾನ, ಫಾಲೋವರ್ ಚಾಲೆಂಜ್ ಮಾಡಿದ್ದಕ್ಕೆ ಈ ರೀತಿಯ ವೀಡಿಯೋ ಮಾಡಿದ್ದಾರೆ. ಆತನ ಫ್ಯಾನ್ಸ್ ಆಗಾಗ ಒಂದೊಂದು ಚಾಲೆಂಜ್ ನೀಡುತ್ತಾರೆ, ಅದನ್ನು ಈತ ಎಕ್ಸಿಕ್ಯೂಟ್ ಮಾಡ್ತಾನೆ. ಹರಿಯಾಣದ ರೋರಿ ಬಜಾರ್‌ಗೆ ಈತನಿಗೆ ಮದು ಮಗನಂತೆ ಡ್ರೆಸ್ಸಿಂಗ್ ಮಾಡಿ ಹೋಗುವ ಚಾಲೆಂಜ್ ನೀಡಲಾಗಿತ್ತು, ಅದರಂತೆ ಈ ವೀಡಿಯೋ ಮಾಡಿದ್ದಾನೆ.
ಈತನ ಅವತಾರ ನೋಡಿ ತುಂಬ ಜನ ನಕ್ಕಿದ್ದಾರೆ. ಆದರೆ ಈ ವೀಡಿಯೋ 2.4 ಕೋಟಿ ವ್ಯೂವ್ಸ್ ಬಂದಿದೆ, ಸಾಕಲ್ವಾ? ಆತನಿಗೆ ಒಳ್ಳೆಯ ಆದಾಯ ಬರುತ್ತದೆ.



Click it and Unblock the Notifications
