Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ರಾಮೀಣ ಯುವಕನ ಮದುವೆಯಾದರೆ ಸರ್ಕಾರದಿಂದ ₹3 ಲಕ್ಷ..! ಎಲ್ಲಿ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹಲವು ದೇಶಗಳಲ್ಲಿ ಸಮಸ್ಯೆಯಾಗಿದೆ. ಅದರಲ್ಲೂ ಭಾರತ, ಚೀನಾ, ಬಾಂಗ್ಲಾದೇಶ ಸರಿ ಹಲವು ಏಷ್ಯಾದ ದೇಶಗಳಲ್ಲಿ ಜನಸಂಖ್ಯೆ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಆದ್ರೆ ಮತ್ತೆ ಕೆಲವು ದೇಶಗಳಲ್ಲಿ ಜನಸಂಖ್ಯೆ ಕೊರತೆಯೂ ಒಂದು ಸಮಸ್ಯೆಯಾಗಿದೆ. ಅದರಲ್ಲೂ ಕೆಲವು ದ್ವೀಪ ರಾಷ್ಟ್ರಗಳಲ್ಲಿ ಜನಸಂಖ್ಯೆ ಕೊರತೆ ದೊಡ್ಡ ಪಿಡುಗು . ಸರ್ಕಾರ ಜನಸಂಖ್ಯೆ ಹೆಚ್ಚಿಸಲು ಎಷ್ಟೇ ಕ್ರಮಕ್ಕೆ ಮುಂದಾದರು ಇಂದಿಗೂ ಒಂದಿಷ್ಟು ಪ್ರಮಾಣದ ಏರಿಕೆ ಕಂಡಿಲ್ಲ.
ಈಗ ಈ ಸರದಿಯಲ್ಲಿ ದ್ವೀಪರಾಷ್ಟ್ರವಾದ ಜಪಾನ್ ಸಹ ಸೇರಿಕೊಂಡಿದೆ. ಜಪಾನ್‌ನಲ್ಲಿ ಜನಸಂಖ್ಯೆಯೇ ಇಲ್ಲದೆ ಇಡೀ ದ್ವೀಪವೀಗ ವಾಹನ, ಕಟ್ಟಗಳಿಂದ ತುಂಬಿಕೊಳ್ಳುವ ಆತಂಕ ಎದುರಾಗಿದೆ. ಆದರೆ ಈ ಜನಸಂಖ್ಯೆ ಸಮಸ್ಯೆ ಬಗೆಹರಿಸಲು ಜಪಾನ್ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಕ್ಷೀಣಿಸುತ್ತಿರುವ ಗ್ರಾಮೀಣ ಜನಸಂಖ್ಯೆಯನ್ನು ವೃದ್ಧಿಸುವ ಸಲುವಾಗಿ ಮಹಿಳೆಯರಿಗೆ ಗ್ರಾಮೀಣ ಯುವಕರ ಮದುವೆಯಾಗಲು ಪ್ರೋತ್ಸಾಹಿಸುತ್ತಿದೆ.

ಮಹಿಳೆಯರು ಗ್ರಾಮೀಣ ಪ್ರದೇಶದ ಪುರುಷನನ್ನು ಮದುವೆಯಾದರೆ 600,000 ಯೆನ್ (ಅಂದಾಜು ರೂ. 3.52 ಲಕ್ಷ) ಹಣವನ್ನು ನೀಡುವ ಯೋಜನೆ ಇದಾಗಿದೆ. ಟೀಕಿಯೋದ 23 ಸಿಟಿ ಕೌನ್ಸಿಲ್‌ಗಳ ಮಹಿಳೆಯರನ್ನು ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಿಗೆ ಸ್ಥಳಾಂತರಿಸಲು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಜಪಾನ್‌ನ ಗ್ರಾಮೀಣ ಭಾಗದಲ್ಲಿ ಜನಸಂಖ್ಯೆ ವಿಪರೀತ ಕಡಿಮೆಯಾಗಿದೆ.
ಗ್ರಾಮೀಣ ಭಾಗದ ಯುವಕರು ನಗರಗಳತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಯುವತಿಯರು ಸಹ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಯುವಕರನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಇದು ಗ್ರಾಮೀಣ ಭಾಗದಲ್ಲಿ ಜನಸಂಖ್ಯೆ ಇಳಿಕೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಜಪಾನಿನ ಸರ್ಕಾರದ ಕಾರ್ಯತಂತ್ರವು ಅರ್ಹ ಮಹಿಳೆಯರಿಗೆ ಪ್ರಯಾಣ ವೆಚ್ಚಗಳು ಮತ್ತು ಹೊಂದಾಣಿಕೆಯ ಈವೆಂಟ್ ವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ಆರ್ಥಿಕ ಉತ್ತೇಜನವು ವಿವಾಹ ದರಗಳನ್ನು ಹೆಚ್ಚಿಸಲು ಮಾತ್ರವಲ್ಲದೆ ಯುವಜನರು ನಗರ ಕೇಂದ್ರಗಳಿಗೆ ವಲಸೆ ಹೋಗುವುದನ್ನು ತಡೆಯುವುದನ್ನು ಒಳಗೊಂಡಿದೆ. ಹಾಗೆ ಗ್ರಾಮೀಣ ಭಾಗದಲ್ಲಿಯೇ ಅವರು ಬದುಕು ಕಟ್ಟಿಕೊಳ್ಳಲು ಕೈಗಾರಿಕೆ, ಉದ್ಯೋಗ ಕಟ್ಟಿಕೊಳ್ಳಲು ನೆರವಾಗುವುದಾಗಿಯೂ ಸರ್ಕಾರ ತಿಳಿಸಿದೆ.
ಜಪಾನ್‌ನ ವಿಧಾನವು ಜನಸಂಖ್ಯಾ ಸವಾಲುಗಳನ್ನು ಎದುರಿಸುತ್ತಿರುವ ಇತರ ದೇಶಗಳಲ್ಲಿ ಇದೇ ರೀತಿಯ ತಂತ್ರಗಳನ್ನು ಸಹ ಮಾಡಿರುವುದನ್ನು ನಾವಿಂದು ನೋಡಬಹುದು. ಮಾರ್ಚ್‌ನಲ್ಲಿ ಚೀನಾದಲ್ಲೂ ಇದೇ ರೀತಿಯ ಯೋಜನೆಯೊಂದನ್ನು ಪರಿಚಯಿಸಿತ್ತು. ಅಲ್ಲಿ ಮಹಿಳೆಯರು ಹೆರಿಗೆಯಾಗಿ ಮಕ್ಕಳನ್ನು ಹೆತ್ತಾಗ ಸರ್ಕಾರವೇ ಹಣಕಾಸು ಸಹಾಯಕ್ಕೆ ಮುಂದಾಗುತ್ತಿತ್ತು.
ಚೀನಾದಲ್ಲಿ ಹಿರಿಯ ವಯಸ್ಸಿನ ಜನಸಂಖ್ಯೆ ಅಧಿಕವಾಗಿದೆ. ಅಲ್ಲಿ ಯುವ ಸಮುದಾಯದ ಸಂಖ್ಯೆ ಕಡಿಮೆಯಾಗಿರುವುದು ಹೊಸ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಮದುವೆಯಾಗಿ ಮಕ್ಕಳ ಹೆರುವ ಮಹಿಳೆಯರಿಗೆ ಆರ್ಥಿಕ ಪ್ರೋತ್ಸಾಹ ನೀಡುವುದಾಗಿ ಯೋಜನೆ ರೂಪಿಸಿತ್ತು.
ಜಪಾನಿನ ಸರ್ಕಾರದ ಈ ಕ್ರಮವು ಬೆಳೆಯುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ, ಅಲ್ಲಿ ಜನನ ದರಗಳು ಮತ್ತು ವಯಸ್ಸಾದ ಜನಸಂಖ್ಯೆಯು ಕಡಿಮೆಯಾಗುತ್ತಿರುವ ದೇಶಗಳು ಮದುವೆ ಮತ್ತು ಕುಟುಂಬ ಜೀವನವನ್ನು ಉತ್ತೇಜಿಸಲು ಹಣಕಾಸಿನ ಪ್ರೋತ್ಸಾಹವನ್ನು ಅಳವಡಿಸಿಕೊಳ್ಳುತ್ತಿವೆ. ಈಗ ಜಪಾನ್ ಈ ಹೊಸ ಯೋಜನೆ ರೂಪಿಸಿ ತಮ್ಮ ಜನಸಂಖ್ಯೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಹಾಗೆ ಜಪಾನ್‌ಗೆ ಬೇರೆ ಕಡೆಗಳಿಂದ ಬಂದು ಮದುವೆಯಾಗಿ ಅಲ್ಲಿಯೆ ನೆಲೆಸುವವರಿಗೂ ಈ ಯೋಜನೆಯ ಲಾಭ ಸಿಗಲಿದೆ ಎಂದಿದೆ.



Click it and Unblock the Notifications