Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
+92 ನಂಬರ್‌ನಿಂದ ಕರೆ ಬಂದಿದ್ಯಾ..? ಟೆಲಿಕಾಂ ಇಲಾಖೆ ಎಚ್ಚರಿಕೆ..!
ನಿಮ್ಮ ಮೊಬೈಲ್‌ಗೆ ನಿತ್ಯ ಏನಿಲ್ಲಾ ಅಂದ್ರು ಒಂದೆರಡು ಕಂಪನಿಗಳು ಕರೆ ಮಾಡುತ್ತವೆ. ಅವು ಲೋನ್ ತೆಗೆದುಕೊಳ್ಳಿ ಅಂತಲೋ ಇಲ್ಲ ಕ್ರೆಡಿಟ್, ಡೆಬಿಟ್ ಕಾರ್ಡ್ ತೆಗೆದುಕೊಳ್ಳಿ ಅಂತಲೋ ಅಥವಾ ನಮ್ಮ ಶಾಪ್‌ನಲ್ಲಿ ಆಫರ್ ನಡೆಯುತ್ತಿದೆ ಅಂತಲೋ ಕರೆಗಳು ಬರುತ್ತವೆ. ನಾವು ಈ ಕಂಪನಿ ನಂಬರ್‌ಗಳ ನೋಡಿದ ತಕ್ಷಣವೇ ಆ ಕರೆಯನ್ನು ಕಟ್ ಮಾಡುತ್ತೇವೆ. ಇಲ್ಲವೆ ರಿಸೀವ್ ಮಾಡಿ 5 ಸೆಕೆಂಡ್ ಬಳಿಕ ಅದು ಕಂಪನಿಯದ್ದು ಎಂದು ಖಾತರಿ ಪಡಿಸಿಕೊಂಡು ಕರೆ ಕಟ್ ಮಾಡುತ್ತೇವೆ.
ಆದ್ರೆ ಇತ್ತೀಚಿಗೆ ನಿಮಗೂ ವಾಟ್ಸಾಪ್ ಮೂಲಕ ಕರೆ ಬರುತ್ತಿರುವುದು ನೋಡಬಹುದು. ಏಕೆಂದರೆ ಈ ಕಂಪನಿಗಳು ಗ್ರಾಹಕರ ತಲುಪಲು ಸುಲಭ ಮಾರ್ಗ ಕಂಡುಕೊಂಡಿದ್ದು, ನೇರವಾಗಿ ವಾಟ್ಸಾಪ್ ಮೂಲಕ ಕರೆ ಮಾಡುತ್ತವೆ. ನೀವು ಫೋನ್‌ನಲ್ಲಿ ಟ್ರೂಕಾಲರ್ ಹಾಕಿಕೊಂಡಿದ್ದರೆ ಅದು ಇಂತಹ ಕರೆಗಳ ಬ್ಲಾಕ್ ಮಾಡಲಿದೆ. ಆದರೆ ವಾಟ್ಸಾಪ್ ಮೂಲಕ ಕರೆ ಮಾಡಿದರೆ ನಿಮಗೆ ತಲುಪುತ್ತದೆ ಎಂಬುದು ಕಂಪನಿಗಳ ಪ್ಲಾನ್ ಆಗಿದೆ.

ಆದರೆ ವಾಟ್ಸಾಪ್‌ನಲ್ಲಿ ನಿಮಗೆ ಯಾವ ದೇಶದ ಮೂಲಕ ಬೇಕಾದರು ಕರೆ ಮಾಡಬಹುದು. ಆದರೆ ಸಾಮಾನ್ಯ ಕರೆಯಲ್ಲಾದರೆ ಇದು ಅಸಾಧ್ಯವಾಗುತ್ತದೆ. ಅಲ್ಲಿ ರೋಮಿಂಗ್, ಐಪಿ ಅಡ್ರೆಸ್ ಎಲ್ಲವು ದಾಖಲಾಗುತ್ತದೆ. ಆದರೆ ವಾಟ್ಸಾಪ್‌ನಲ್ಲಾದರೆ ಇದು ಸುಲಭವಾಗುತ್ತದೆ. ಹೀಗಾಗಿ ವಾಟ್ಸಾಪ್‌ನಲ್ಲಿ ಬರುವ ಅನ್ಯ ನಂಬರ್‌ಗಳ ಕರೆಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.
ಈಗ ಖುದ್ದು ಟೆಲಿಕಾಂ ಇಲಾಖೆಯೇ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಟೆಲಿಕಾಂ ಅಧಿಕಾರಿಗಳಂತೆ ವಿದೇಶಿ ಮೂಲದ ಸಂಖ್ಯೆಗಳಿಂದ ವಾಟ್ಸಾಪ್ ಕರೆಗಳು ಬರುತ್ತಿರುವ ಕುರಿತು ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ವಾಟ್ಸಾಪ್ ಬಳಕೆದಾರರು ತಮ್ಮ ಮೊಬೈಲ್ ನಂಬರ್ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಕರೆಗಳನ್ನು ಪಡೆಯುತ್ತಿದ್ದಾರೆ ಎಂದು ಟೆಲಿಕಾಂ ಇಲಾಖೆ ಗಮನಿಸಿದೆ.
ಈ ಸಂಖ್ಯೆ +92 ನಿಂದ ಆರಂಭವಾಗುವ ಮೊಬೈಲ್ ಸಂಖ್ಯೆಯಿಂದ ಕರೆಗಳು ಬರುತ್ತಿವೆ. ಇದು ಪಾಕಿಸ್ತಾನಕ್ಕೆ ಸೇರಿರುವ ಸಂಖ್ಯೆಯಾಗಿದೆ. ಇವುಗಳು ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಕದಿಯಲು ಮತ್ತು ಹಣಕಾಸಿನ ವಂಚನೆಯನ್ನು ನಡೆಸುವ ಉದ್ದೇಶದಿಂದ ಮಾಡಲಾಗುತ್ತಿರುವ ನಕಲಿ ಕರೆಗಳಾಗಿವೆ ಎಂದು ಟೆಲಿಕಾಂ ಇಲಾಖೆ ಮಾಹಿರಿ ಹಂಚಿಕೊಂಡಿದೆ.
ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳಿಂದ (+92-xxxxxxxxxx) WhatsApp ಕರೆಗಳ ಮಾಡಿ ನಿಮ್ಮ ಮೊಬೈಲ್ ನಂಬರ್‌ನ ಸೇವೆ ಕಡಿತಗೊಳಿಸಲಾಗುತ್ತಿದೆ. ಕಡಿತವಾಗಬಾರದು ಎಂದಾದರೆ ಆಧಾರ್ ಸಂಖ್ಯೆ, ಪಾನ್ ಸಂಖ್ಯೆ ಹಾಗೂ ಓಟಿಪಿ ಹೇಳುವಂತೆ ಕೇಳಲಾಗುತ್ತದೆ. ಒಂದು ವೇಳೆ ಈ ಮಾಹಿತಿ ಹಂಚಿಕೊಂಡರೆ ನಿಮ್ಮ ಖಾತೆಯಲ್ಲಿರುವ ಹಣ, ನಿಮ್ಮ ವೈಯಕ್ತಿಕ ಮಾಹಿತಿ ಕಳುವಾಗುವ ಸಂಭವ ಅಧಿಕವಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಆದರೆ ಈ ರೀತಿಯ ಕರೆಗಳನ್ನು ಟೆಲಿಕಾಂ ಇಲಾಖೆ ಎಂದಿಗೂ ಗ್ರಾಹಕರಿಗೆ ಮಾಡುವುದಿಲ್ಲ ಎಂದು ಖಾತರಿಪಡಿಸಿದೆ. ಅಲ್ಲದೆ ಇಂತಹ ಕರೆಗಳನ್ನು ಸ್ವೀಕರಿಸದಂತೆ ಹಾಗೂ ಯಾವ ಮಾಹಿತಿಯನ್ನೂ ಹಂಚಿಕೊಳ್ಳದಂತೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಒಂದು ವೇಳೆ ನೀವು ಎಲ್ಲಾ ಮಾಹಿತಿ ನೀಡಿ ನಿಮ್ಮ ಹಣ ವಂಚನೆಗೊಳಗಾದರೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದೆ.
ಪೋರ್ಟಲ್‌ನಲ್ಲಿ ಮಾಧ್ಯಮ, ವರ್ಗ ಮತ್ತು ಸಮಯ ಸೇರಿದಂತೆ ವಂಚನೆ ಸಂವಹನಗಳನ್ನು ನಾಗರಿಕರು ವರದಿ ಮಾಡಬಹುದು. ನಿರ್ಬಂಧಿಸಲು ಮತ್ತು ಪತ್ತೆಹಚ್ಚಲು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕದ್ದ ಅಥವಾ ಕಳೆದುಹೋದ ವರದಿ ಮಾಡಲು ಸಹ ಇದನ್ನು ಬಳಸಬಹುದು. ಸೈಬರ್-ಕ್ರೈಮ್ ಅಥವಾ ಹಣಕಾಸಿನ ವಂಚನೆಗೆ ಬಲಿಯಾದ ಸಂದರ್ಭದಲ್ಲಿ ಸೈಬರ್-ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಅಥವಾ www.cybercrime.gov.in ನಲ್ಲಿ ವರದಿ ಮಾಡುವಂತೆ DoT ನಾಗರಿಕರಿಗೆ ಸಲಹೆ ನೀಡಿದೆ.



Click it and Unblock the Notifications
