Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಭೂಮಿ ಮೇಲೆ ಯಾರು ಕಟ್ಟಲಾಗದಷ್ಟು ಗೂಗಲ್‌ಗೆ ದಂಡ..! ಅದೆಷ್ಟು ಹಣ ಗೊತ್ತಾ?
ಆನ್‌ಲೈನ್ ಜಗತ್ತಿನ ದೈತ್ಯ ಗೂಗಲ್ ಸಂಸ್ಥೆಯ ಮೇಲೆ ಹಲವು ಪ್ರಕರಣಗಳಲ್ಲಿ ದಂಡ ವಿಧಿಸಿರುವುದನ್ನು ನಾವು ಕೇಳಿದ್ದೇವೆ. ಹಲವು ಬಾರಿ ಈ ದಂಡ ಕೋಟಿ ರೂಪಾಯಿಗಳಲ್ಲಿ ಇಲ್ಲವೆ ಮಿಲಿಯನ್, ಬಿಲಿಯನ್‌ನಲ್ಲಿ ಇರುವುದು ಕೂಡ ಇಂತಹ ದೈತ್ಯ ಸಂಸ್ಥೆಗೆ ಸಾಮಾನ್ಯ ಸಂಗತಿಯಾಗಿರುತ್ತದೆ. ಗೂಗಲ್‌ನಂತಹ ಬೃಹತ್ ಸಂಸ್ಥೆಗಳು ಕೋಟಿಗಳ ಲೆಕ್ಕದಲ್ಲಿ ಬೀಳುವ ದಂಡಗಳಿಗೆ ಎಂದಿಗೂ ತಲೆ ಕೆಡಿಸಿಕೊಂಡಿಲ್ಲ.
ಆದ್ರೆ ಈಗ ರಷ್ಯಾದ ಕೋರ್ಟ್ ವಿಧಿಸಿರುವ ದಂಡದ ಮೊತ್ತ ಗೂಗಲ್ ಮಾತ್ರವಲ್ಲ ಇಡೀ ವಿಶ್ವವೇ ದಂಗಾಗುವಂತೆ ಮಾಡಿದೆ. ಭೂಮಿ ಮೇಲೆ ನೆಲೆಸಿರುವ ಯಾರೊಬ್ಬರು ಅಥವಾ ಯಾವುದೇ ಕಂಪನಿಯು ಕಟ್ಟಲಾಗದೆ ಇರುವಷ್ಟು ಮೊತ್ತದ ದಂಡ ವಿಧಿಸಿ ದಂಡ ಪಾವತಿಗೆ ಕೊನೆ ದಿನವನ್ನೂ ನಿಗದಿ ಮಾಡಿದೆ. ಇಡಿ ವಿಶ್ವದ ಒಟ್ಟಾತೆ ಜಿಡಿಪಿಯು ಕೂಡ ಈ ದಂಡಕ್ಕೆ ಸಮನಾಗಿಲ್ಲ ಎಂದ್ರೆ ಅದರ ಮೊತ್ತ ಎಷ್ಟಿದೆ ಎಂಬುದನ್ನು ನೀವೆ ಊಹಿಸಿ.

ರಷ್ಯಾದ ಕೋರ್ಟ್ ಗೂಗಲ್‌ಗೆ 20 ಡೆಸಿಲಿಯನ್ ಡಾಲರ್ ಮೊತ್ತದ ದಂಡ ವಿಧಿಸಿದೆ. ಹೀಗಂದರೆ 2ರ ಮುಂದೆ 33 ಸೊನ್ನೆಗಳ ಬರೆಯಬೇಕಾಗುತ್ತದೆ. ಭಾರತದ ರೂಪಾಯಿಗೆ ಹೋಲಿಸುವುದಾದರೆ ಇದರ ಲೆಕ್ಕ ಹಿಡಿಯುವುದು ಕಷ್ಟವಾಗುತ್ತದೆ. ದೈತ್ಯ ಸಂಸ್ಥೆಯ ಮೇಲೆ ರಷ್ಯಾ ಈ ರೀತಿಯ ದಂಡ ವಿಧಿಸಿರುವುದು ಏಕೆ? ಕಟ್ಟದೆ ಹೋದರೆ ಏನಾಗುತ್ತದೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.
ಗೂಗಲ್ ರಷ್ಯಾ ನಡುವೆಯೇ ಕಲಹ
ಗೂಗಲ್ ಹಾಗೂ ರಷ್ಯಾ ನಡುವೆ ಹಲವು ವರ್ಷದಿಂದಲೇ ಕಲಹ ಆರಂಭಗೊಂಡಿದೆ. ರಷ್ಯಾದ ಸರ್ಕಾರಿ ರಾಜ್ಯ ಸಂಯೋಜಿತ ಚಾನಲ್ ಆಗಿದ್ದ ಸರ್ಗ್ರಾಡ್ ಟಿವಿಯನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಿತ್ತು. ಇದೊಂದೆ ಅಲ್ಲ ರಷ್ಯಾಗೆ ಸಂಬಂಧಿಸಿದ ಹಲವು ಚಾನೆಲ್‌ಗಳು, ಕಟೆಂಟ್‌ಗಳ ಮೇಲೆ ನಿರ್ಬಂಧವೂ ವಿಧಿಸಿತ್ತು. ಇದು ರಷ್ಯಾದ ಕಣ್ಣು ಕೆಂಪಾಗಿಸಿತ್ತು.
ಇದಾದ ಬಳಿಕ ರಷ್ಯಾ ಗೂಗಲ್‌ಗೆ ಹಲವು ಬಾರಿ ನೋಟಿಸ್ ಜಾರಿಯಾಗಿತ್ತು. ಆದ್ರೆ ಇದ್ಯಾವುದನ್ನು ಗೂಗಲ್ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಹಾಗೆ ರಷ್ಯಾ-ಉಕ್ರೇನ್ ವಾರ್ ಜೊತೆಗೂ ಈಗ ನಡೆಯುತ್ತಿರುವ ವಿಚಾರಗಳಿಗೆ ಹಲವು ರೀತಿ ಸಂಬಂಧವಿದೆ. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಚಾನಲ್‌ಗಳ ನಿಷೇಧಿಸಲಾಗಿದೆ ಎಂದು ಗೂಗಲ್ ವಾದ ಮಾಡುತ್ತಾ ಬಂದಿದೆ.
ಇದಾದ ಬಳಿಕ ಗೂಗಲ್ ವಿಚಾರವನ್ನು ಮಾಸ್ಕೋದ ಕೋರ್ಟ್‌ಗೆ ತರಲಾಗಿತ್ತು. ಕೋರ್ಟ್ ವಿಚಾರಣೆ ನಡೆಸಿ ಈ ದಂಡ ವಿಧಿಸಿದೆ. ಈ ದಂಡ ಕಟ್ಟಲು ಗೂಗಲ್ ವಿಫಲವಾದರೆ ದಿನವೊಂದಕ್ಕೆ ದಂಡದ ಮೊತ್ತ ದ್ವಿಗುಣವಾಗಲಿದೆ. ಇದನ್ನು ಪಾವತಿಸದ ಹೊರತು ಅಥವಾ ಕ್ಷಮೆಯಾಚಿಸಿ, ನಿಷೇಧಿತ ಚಾನಲ್ ಹಾಗೂ ಕಂಟೆಂಟ್‌ಗಳನ್ನು ಮರು ಪ್ರಸಾರಕ್ಕೆ ಅನುಮತಿ ನೀಡಲು ಕೋರಲಾಗಿದೆ.
ಒಂದು ವೇಳೆ ಇದಕ್ಕೆ ಬದ್ದವಾಗದೇ ಇದ್ದರೆ ರಷ್ಯಾದಿಂದ ಗೂಗಲ್ ಅನ್ನೇ ನಿಷೇಧಿಸುವ ಬೆದರಿಕೆಯನ್ನು ರಷ್ಯಾ ಮುಂದಿಟ್ಟಿದೆ. ಸದ್ಯ ರಷ್ಯಾ ಉಕ್ರೇನ್ ನಡುವಿನ ಯುದ್ಧ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡುವೆ ಗೂಗಲ್ ಮೇಲಿನ ಈ ಬಾರಿ ದಂಡ ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣ ಇನ್ನೆಲ್ಲಿಗೆ ಹೋಗಿ ತಲುಪಲಿದೆ ಎಂಬುದು ಕಾದು ನೋಡಬೇಕಿದೆ.
ರಷ್ಯಾದ ಒಳಸಂಚು ಏನು?
ಮಾಸ್ಕೋ ಕೋರ್ಟ್ ಸಣ್ಣ ಪುಟ್ಟ ಪ್ರಮಾಣದ ದಂಡ ವಿಧಿಸಿದ್ದರೆ ದಂಡ ಕಟ್ಟುವ ಮೂಲಕ ಗೂಗಲ್ ಈ ಸಮಸ್ಯೆ ಬಗೆಹರಿಸುತ್ತಿತ್ತು. ಆದ್ರೆ ಗೂಗಲ್ ಸಂಪೂರ್ಣ ಖಂಡದಿಂದ ದೂರಾಗಬೇಕು ಎಂಬ ಉದ್ದೇಶದಿಂದಲೇ ರಷ್ಯಾ ಈ ಸಂಚು ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ಈ ಪ್ರಮಾಣದ ದಂಡವನ್ನು ಕಟ್ಟಲು ಸಾಧ್ಯವೇ ಇಲ್ಲ. ಹೀಗಿರುವಾಗ ಗೂಗಲ್ ಮಂಡಿಯೂರಬೇಕಾಗುವುದು ಖಚಿತ.



Click it and Unblock the Notifications
