Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಡ್ರೈವರ್ ಇಲ್ಲದೆ 80 ಕಿ.ಮೀ ಚಲಿಸಿದ ಟ್ರೈನ್: ಎದೆ ಝಲ್ ಎನಿಸುವ ವೀಡಿಯೋ ವೈರಲ್
ಡ್ರೈವರ್ ಇಲ್ಲದೆ ಚಲಿಸಿದ ಟ್ರೈನ್ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಆದರೂ ದೇವರ ಪವಾಡ ಅಂತಲೋ ಅಥವಾ ರೈಲ್ವೆ ಇಲಾಖೆಯ ಚುರುಕುತನವೋ ಗೊತ್ತಿಲ್ಲ ದೊಡ್ಡ ಅಪಾಯ ತಪ್ಪಿದೆ. ಇದೊಂದು ಗೂಡ್ಸ್ ಟ್ರೈನ್, ಡ್ರೈವರ್ ಇಲ್ಲದೆ ವೇಗವಾಗಿ ಚಲಿಸುವುದನ್ನು ವೀಡಿಯೋದಲ್ಲಿ ಕಾಣಬಹುದು.

ಈ ಟ್ರೈನ್ ಜಮ್ಮು ಕಾಶ್ಮೀರದಿಂದ ಬಂದ ಈ ಟ್ರೈನ್ ಪಂಜಾಬ್‌ನ ಉಂಚಿ ಬಸ್ಸಿಯ ದಾಸುಯಾದಲ್ಲಿ ನಿಂತಿತ್ತು, ಆದರೆ ಇದ್ದಕ್ಕಿದ್ದಂತೆ ಆ ಟ್ರೈನ್ ಸ್ಟಾರ್ಟ್ ಆಗಿ ಚಲಿಸಲಾರಂಭಿಸಿತು, ಚಲಿಸಿದ್ದು ಒಂದೆರಡು ಕಿಲೋ ಮೀಟರ್ ಅಲ್ಲ ಬರೋಬರಿ 80 ಕಿ.ಮೀ. ಈ ಟ್ರೈನ್ ಗಮಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಿದ್ದು, ರೈಲ್ವೆ ಟ್ರ್ಯಾಕ್‌ನಲ್ಲಿಯೇ ಚಲಿಸಿದ್ದು ಇನ್ನೂ ವಿಶೇಷ.
ಟ್ರೈನ್ ಡ್ರೈವರ್ ಇಲ್ಲದೆ ಚಲಿಸುತ್ತಿರುವುದನ್ನು ನೋಡಿ ರೈಲ್ವೆ ಇಲಾಖೆಯವರು ತಮ್ಮ ತಂತ್ರಜ್ಞಾನ, ತಮ್ಮ ಬುದ್ಧಿವಂತಿಕೆ ಎಲ್ಲಾ ಬಳಸಿ ಈ ಟ್ರೈನ್ ಅನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಏಕೆ ಟ್ರೈನ್ ಡ್ರೈವರ್ ಇಲ್ಲದೆ ಚಲಿಸಿತು ಎಂಬುವುದರ ಬಗ್ಗೆ ತನಿಖೆ ಮಾಡಲು ಆಫೀಸರ್‌ಗಳು ಹಾಗೂ ತಂತ್ರಜ್ಞರು ಆ ಸ್ಥಳಕ್ಕೆ ಬಂದಿದ್ದಾರೆ.
#pathankot
— karan Kapoor (@karankapoor_ani) February 25, 2024
बिना ड्राइवर के चल पड़ी मालगाड़ी; रेलवे ने कड़ी में मशक्कत के बाद रोका.
पठानकोट के निकट कठुआ के पास से बगैर ड्राइवर की एक मालगाड़ी अनियंत्रित होकर दौड़ पड़ीरेलवे अधिकारियों द्वारा काफी मशक्कत के बाद आखिरकार होशियारपुर के निकट दसुआ के पास ट्रेन को रोक पाने में कामयाबी. pic.twitter.com/RoXSOuig5d
ಇದೇ ರೀತಿಯ ಘಟನೆ 2016ರಲ್ಲಿ ನಡೆದಿತ್ತು, ಅದು ಪ್ರಯಾಣಿಕರಿರುವ ಟ್ರೈನ್ ಆಗಿತ್ತು, ಆದರೆ ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದರು. ಆ ಟ್ರೈನ್ ಡ್ರೈವರ್ ಇಲ್ಲದೆ ಸುಮಾರು 15 ಕಿ. ಮೀ ಪ್ರಯಾಣ ಮಾಡಿತ್ತು.
ಒಂದೋ ಆ ಟ್ರೈನ್ ಇಳಿಜಾರಿನಲ್ಲಿ ಇರಬಹುದು, ಅಥವಾ ಇಂಜಿನ್‌ನ ವ್ಯಾಕ್ಯೂಮ್ ಬ್ರೇಕ್ ಸಿಸ್ಟಮ್ ಬ್ರೇಕ್ ಆಗಿರಬಹುದು ಹೀಗೆ ಯಾವುದೋ ಒಂದು ಕಾರಣಕ್ಕೆ ಟ್ರೈನ್ ಚಲಿಸಿರಬಹುದು ಎಂದು ಊಹಿಸಲಾಗಿದೆ, ಆದರೆ ಟ್ರೈನ್ ಚಲಿಸಲು ನಿಖರ ಕಾರಣವೇನು ಎಂಬುವುದು ಇನ್ನು ತಿಳಿಯಬೇಕಷ್ಟೆ. ಆದರೆ ಆ ವೀಡಿಯೋ ನೋಡುವಾಗ ಭಯವಾಗುತ್ತೆ, ಟ್ರ್ಯಾಕ್‌ನಲ್ಲಿಯೇ ಚಲಿಸುವ ಆ ಟ್ರೈನ್ ನೋಡುವಾಗ ಡ್ರೈವರ್ ಇಲ್ಲದೆ ಹೋಗುತ್ತಿದೆ ಎಂದು ಹೇಳಲು ಕಷ್ಟವಾಗುವುದು, ಯಾರೋ ಓಡಿಸುವ ರೀತಿಯಲ್ಲಿ ಆ ಟ್ರೈನ್ ಹೋಗುತ್ತಿರುವುದು ನೀವು ನೋಡಬಹುದು.



Click it and Unblock the Notifications
