Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗುಡ್ ಟಚ್-ಬ್ಯಾಡ್ ಟಚ್ ಹೇಳಿಕೊಟ್ಟ ಶಿಕ್ಷಕಿ ವೀಡಿಯೋ ವೈರಲ್
ಬಾಲ್ಯ ಎಂಬುವುದು ತುಂಬಾನೇ ಸುಂದರ, ಆ ಪ್ರಾಯದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುವುದು ಗೊತ್ತೇ ಆಗುವುದಿಲ್ಲ. ಆದರೆ ಕಾಮುಕರಿಂದ ಅವರನ್ನು ರಕ್ಷಣೆ ಮಾಡಲು ಕೆಟ್ಟದ್ದು ಏನು ಎಂಬುವುದು ಆ ಮಕ್ಕಳಿಗೆ ತಿಳಿ ಹೇಳಬೇಕಾಗಿರುವುದು ಪೋಷಕರ, ಶಿಕ್ಷಕರ ಕರ್ತವ್ಯವಾಗಿದೆ.
ಮಗುವಿಗೆ ಚಾಕೋಲೆಟ್ ಅಥವಾ ಬೇರೆಯೇನೋ ಆಮಿಷ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಎಷ್ಟೋ ಪ್ರಕರಣಗಳನ್ನು ಕೇಳಿದ್ದೇವೆ, ಅಂಥ ಘಟನೆ ನಡೆದಾಗ ಆ ಕಾಮ ಪಿಶಾಚಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರತಿಯೊಬ್ಬರೂ ರೋಷದಿಂದ ಕುದಿಯುತ್ತೇವೆ, ಆ ವ್ಯಕ್ತಿ ದೆಸೆಯಿಂದ ಅರಳಬೇಕಾಗಿರುವ ಹೂವಿನ ಮೊಗ್ಗಿ ಅರಳುವ ಮುನ್ನ ಬಾಡಿ ಹೋಗುವುದು.

ಈ ಅತ್ಯಾಚಾರ ಎಂಬುವುದು ಬರೀ ಹೆಣ್ಮಕ್ಕಳ ಮೇಲೆ ಮಾತ್ರ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಗಂಡು ಮಕ್ಕಳ ಮೇಲೆ ಕೂಡ ಆಗುತ್ತದೆ. ಇಲ್ಲಿ ಮತ್ತಷ್ಟು ಕ್ರೂರವಾದ ವಿಷಯವೆಂದರೆ ಮಕ್ಕಳನ್ನು ಪರಿಚಯಿಸ್ಥರೇ ಅತ್ಯಾಚಾರ ಮಾಡುತ್ತಾರೆ! ಅಪ್ಪ-ಅಮ್ಮನ ಸ್ನೇಹಿತರು,ಶಿಕ್ಷಕರು, ಅಂಕಲ್, ಪಕ್ಕದ ಮನೆಯ ಹುಡುಗ ಹೀಗೆ ಪರಿಚಯಿಸ್ಥರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾರೆ.
ಯಾರೋ ಪರಿಚಯನೇ ಇಲ್ಲದವರಿಂದ ಮಕ್ಕಳ ಮೇಲೆ ಅತ್ಯಾಚಾರವಾಗುವ ಪ್ರಕರಣ ತುಂಬಾನೇ ಕಡಿಮೆ, ಪರಿಚಯಿಸ್ಥರಿಂದಲೇ ಆಗುವುದರಿಂದ ಅದನ್ನು ತಪ್ಪಿಸಲು ನಾವು ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿಸಿಕೊಡಬೇಕು, ಆವಾಗ ಮಕ್ಕಳು ಅಪಾಯದ ಸಂದರ್ಭಗಳಿಂದ ತಪ್ಪಿಸಿಕೊಳ್ಳುತ್ತಾರೆ, ಅಲ್ಲದೆ ಮುಟ್ಟುವಾಗಲೇ ಮಗುವಿನ ಕಡೆಯಿಂದ ಪ್ರತಿರೋಧ ಬಂದಾಗ ಅತ್ಯಾಚಾರಿಗೂ ಭಯ ಹುಟ್ಟುವುದು.
ಶಾಲೆಗಳಲ್ಲಿ ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಕುರಿತು ಹೇಳಿಕೊಡಲಾಗುವುದು, ಒಂದು ಶಾಲೆಯ ಶಿಕ್ಷಕಿಯೊಬ್ಬರು ಪುಟಾಣಿಗಳಿಗೆ ಈ ಕುರಿತು ತಿಳಿಸಿಕೊಡುತ್ತಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋ ನೋಡಿದವರು ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಈ ರೀತಿಯ ಶಿಕ್ಷಣ ನೀಡಬೇಕೆಂದು ಹೇಳುತ್ತಾರೆ.
ನಿಮ್ಮ ಮನೆಯಲ್ಲಿ ಪುಟಾಣಿಗಳಿದ್ದರೆ ಈ ವೀಡಿಯೋನ್ನೊಮ್ಮೆ ಅವರಿಗೆ ತೋರಿಸಿ, ಅವರಲ್ಲಿಯೂ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಅರಿವು ಮೂಡುವುದು.
ಮಕ್ಕಳ ಜೊತೆ ಲೈಂಗಿಕ ವಿಷಯ ಮಾತನ್ನಾಡಬಾರದು ಎಂದು ಕೆಲವರು ಹಿಂಜರಿಯುತ್ತಾರೆ, ಆದರೆ ಅವರಿಗೆ ಈ ರೀತಿಯ ಅಗ್ಯತ ಶಿಕ್ಷಣ ನೀಡುವ ವಿಚಾರದಲ್ಲಿ ಹಿಂಜರಿಕೆ ಬೇಡ್ವೆ ಬೇಡ



Click it and Unblock the Notifications
