Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಸಿನಿಪ್ರಿಯರಿಗೆ ಗುಡ್ ನ್ಯೂಸ್: ಮಲ್ಟಿಫ್ಲೆಕ್ಸ್‌ನಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿ..!
ಸ್ಯಾಂಡಲ್‌ವುಡ್ ಸಿನಿಮಾಗಳು ಈಗ ಭಾರತದ ಯಾವುದೇ ಭಾಷೆಗೆ ಸವಾಲೊಡ್ಡುವ ರೀತಿಯಲ್ಲಿ ತಯಾರಾಗುತ್ತಿವೆ. ಬಜೆಟ್‌ನಿಂದ ಹಿಡಿದು, ಎಲ್ಲಾ ಪ್ರಕಾರವಾಗಿಯೂ ಕನ್ನಡ ಸಿನಿಮಾಗಳು ಈಗ ಸ್ಪರ್ಧೆಗಿಳಿದಿವೆ. ಆದ್ರೆ ಹಲವು ವರ್ಷಗಳಿಂದ ಮಲ್ಟಿಫ್ಲೆಕ್ಸ್‌ಗಳು ಕನ್ನಡ ಸಿನಿಮಾಗಳಿಗೆ ವಂಚನೆ ಎಸಗುತ್ತಿವೆ ಎಂದು ಆರೋಪಗಳು ಕೇಳಿಬರುತ್ತಿದ್ದವು.
ಮಲ್ಟಿಫ್ಲೆಕ್ಸ್‌ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಸ್ಕ್ರೀನ್ ನೀಡದೆ ಇರುವುದು, ಹಾಗೆ ಬಹಳ ದಿನಗಳ ಕಾಲ ತಮ್ಮಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುಂದಾಗದೆ ಇರುವುದು ಹಾಗೆ ಟಿಕೆಟ್ ದರ ಹೆಚ್ಚಳ ಕೂಡ ಸಿನಿಪ್ರಿಯರಲ್ಲಿ ಮುನಿಸಿಗೆ ಕಾರಣವಾಗಿತ್ತು. ಮಲ್ಟಿಫ್ಲೆಕ್ಸ್‌ಗಳು ಟಿಕೆಟ್ ದರವನ್ನು ಏರಿಕೆ ಮಾಡುವುದು ಸಾಮಾನ್ಯ ಎನ್ನುವಂತಾಗಿತ್ತು.

ಅದ್ರಲ್ಲೂ ಸ್ಟಾರ್ ನಟರ ಹೈ ಬಜೆಟ್ ಸಿನಿಮಾಗಳೆಂದರೆ ಮಲ್ಟಿಫ್ಲೆಕ್ಸ್‌ನಲ್ಲಿ ಟಿಕೆಟ್ ದರವು ಮುಗಿಲು ಮುಟ್ಟಿರುತ್ತಿತ್ತು, ಆದ್ರೆ ಈಗ ಸರ್ಕಾರವು ಸಿನಿಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಎಲ್ಲಾ ಮಲ್ಡಿಫ್ಲೆಕ್ಸ್‌ಗಳು ಟಿಕೆಟ್ ದರ ಏರಿಕೆ ಮಾಡದಂತೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ. ಈ ಕ್ರಮದ ಅಂಗವಾಗಿ. ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಈ ಹೊಸ ನಿಯಮವು ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುತ್ತದೆ. ಎಲ್ಲ ಪ್ರದರ್ಶನಗಳಲ್ಲಿ ಮನರಂಜನಾ ತೆರಿಗೆಯನ್ನು ಒಳಗೊಂಡಂತೆ ಒಂದು ಟಿಕೆಟ್‌ನ ಬೆಲೆ 200 ರೂಪಾಯಿ ನಿಗದಿ ಮಾಡಬೇಕಿದೆ. ಇದನ್ನು ಮೀರಿ ಮಲ್ಟಿಫ್ಲೆಕ್ಸ್‌ಗಳು ಹೆಚ್ಚು ದರ ವಿಧಿಸಿದರೆ ಆ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ಹೊಸ ಆದೇಶವನ್ನು ಪ್ರಕಾರ ಕರ್ನಾಟಕ ಸಿನಿಮಾ ನಿಯಮಾವಳಿ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ. ಇನ್ನು ಮುಂದೆ ಯಾವುದೇ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್‌ನಲ್ಲಿ ಯಾವುದೇ ಭಾಷೆಯ ಸಿನಿಮಾ ಬಿಡುಗಡೆಯಾದರು ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂದು ಸೂಚಿಸಲಾಗಿದೆ. ಈ ಮೊದಲು ಮಲ್ಟಿಫ್ಲೆಕ್ಸ್‌ಗಳು ತಮ್ಮಿಷ್ಟದಂತೆ ಟಿಕೆಟ್ ದರ ನಿಗದಿ ಮಾಡುತ್ತಿದ್ದವು.
ಅದರಲ್ಲೂ ಹಬ್ಬಗಳು, ಭಾನುವಾರ, ಸ್ಪೆಷಲ್ ಸ್ಕ್ರೀನಿಂಗ್, ಸ್ಟಾರ್ ನಟರು, ಬಿಗ್ ಬಜೆಟ್ ಸಿನಿಮಾ ಎಂದಾದರೆ ಒಂದು ಟಿಕೆಟ್ ಬೆಲೆ ಸುಮಾರು 2 ಸಾವಿರ ರೂಪಾಯಿ ನಿಗದಿ ಮಾಡಿದ್ದೂ ಇದೆ. ಹಾಗೆ ಹೊಸಬರ ಸಿನಿಮಾಗಳಿಗೂ ಕೂಡ ದುಬಾರಿ ಟಿಕೆಟ್ ದರ ವಿಧಿಸುವುದು ಸಹ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರಿಂದ ಸಿನಿ ಪ್ರಿಯರು ಥಿಯೇಟರ್ ಬಳಿ ಸುಳಿಯದೆ ಒಟಿಟಿ, ಮೊಬೈಲ್ ಮೂಲಕವೇ ಸಿನಿಮಾ ನೋಡುವಂತಾಗಿತ್ತು. ಈ ರೀತಿ ಟಿಕೆಟ್ ದರ ಹೆಚ್ಚಳದಿಂದಲೇ ಸಿನಿಮಾ ಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಆರೋಪ ಕೂಡ ಇತ್ತು.
ಈ ವಿಚಾರವಾಗಿ ಸ್ಯಾಂಡಲ್‌ವುಡ್ ನಿರ್ಮಾಪಕರ ಸಂಘದಿಂದ ಹಿಡಿದು ಹಲವು ಸಂಘಟನೆಗಳು ಸರ್ಕಾರದೊಂದಿಗೆ ಹಲವು ರೀತಿಯ ಚರ್ಚೆ ನಡೆಸಿದ್ದರು. ಏಕರೂಪ ಟಿಕೆಟ್ ದರ ನಿಗದಿ ಮಾಡುವಂತೆ ಕೂಗು ಕೇಳಿಬಂದಿತ್ತು. ಆದ್ರೆ ಕೊನೆಗೂ ವರ್ಷಗಳ ಬಯಕೆಯಂತೆ ಈಗ ಟಿಕೆಟ್ ದರ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಎಷ್ಟು ಚಿತ್ರಮಂದಿರಗಳಿವೆ?
ಇತ್ತೀಚಿನ ದಿನಗಳಲ್ಲಿ ಸಿಂಗಲ್ ಸ್ಕ್ರೀನ್ ಸಿನಿಮಾ ಮಂದಿರಗಳು ನಾಶವಾಗುತ್ತಿವೆ. 2021ರ ಅಂಕಿ ಅಂಶದ ಪ್ರಕಾರ ಕರ್ನಾಟಕದಲ್ಲಿ 630 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿವೆ. ಹಾಗೆ ಮಲ್ಟಿಫ್ಲೆಕ್ಸ್‌ಗಳನ್ನೂ ಸೇರಿಸಿದರೆ ಸುಮಾರು 925 ಸಿಮಾ ಪರದೆಗಳಿವೆ ಎಂದು ತಿಳಿದುಬಂದಿದೆ. ಇನ್ನು ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಚಿತ್ರಮಂದಿರ ಬೆಂಗಳೂರಿನಲ್ಲಿದೆ. ಇಲ್ಲಿನ ಪಿವಿಆರ್ ಐನೋಕ್ಸ್ ದಕ್ಷಿಣ ಭಾರತದ ಅತ್ಯಂತ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆ ಪಡೆದಿದೆ.



Click it and Unblock the Notifications
