Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್: ವೇತನ ಸಹಿತ 12 ಋತುಚಕ್ರ ರಜೆ ಘೋಷಿಸಿದ ಸರ್ಕಾರ!
ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 12 ಋತು ಚಕ್ರ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಋತು ಚಕ್ರ ರಜೆ ನೀತಿ 2025ಕ್ಕೆ ಇಂದು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ವೇತನ ಸಹಿತ ಮಾಸಿಕ ಒಂದು ರಜೆ ನೀಡಲು ಉದ್ದೇಶಿಸಿ ಈ ನೀತಿ ಜಾರಿ ಮಾಡಲಾಗಿದ್ದು, ವಾರ್ಷಿಕವಾಗಿ 12 ಹೆಚ್ಚುವರಿ ರಜೆಯನ್ನು ಮಹಿಳಾ ಸಿಬ್ಬಂದಿ ಪಡೆಯಲಿದ್ದಾರೆ. ಈ ರೀತಿ ರಜೆ ನೀತಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಋತು ಚಕ್ರದ ರಜೆ ನೀಡುವ ಸಂಬಂಧ ಬಹಳಷ್ಟು ಚರ್ಚೆಗಳಿದ್ದವು ಈ ಹಿಂದೆ ಸದನದಲ್ಲೂ ಈ ಕುರಿತಾದ ಚರ್ಚೆಗಳಾಗಿದ್ದವು.

ಹೀಗಾಗಿ ಸರ್ಕಾರ ನಿಟ್ಟಿನಲ್ಲಿ ಋತು ಚಕ್ರದ ರಜೆ ನೀಡುವ ಸಂಬಂಧವಾಗಿ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿಯನ್ನು ಇದಕ್ಕಾಗಿ ನಿಯೋಜಿಸಲಾಗಿತ್ತು, ಈ ಸಮಿತಿ ಕೂಡ ವರದಿ ಸಲ್ಲಿಸಿತ್ತು. ಇದರ ಆಧಾರದ ಮೇಲೆ ಈಗ ಋತು ಚಕ್ರ ರಜೆ ನೀತಿ 2025ರನ್ನು ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವರ್ಷಕ್ಕೆ 12 ದಿನ ರಜೆ ನೀಡುವುದಾಗಿದ್ದು, ಯಾವ ದಿನ ರಜೆ ಪಡೆಬೇಕು ಎಂಬುದನ್ನು ಮಹಿಳೆಯರು ತೀರ್ಮಾನ ಮಾಡಲಿದ್ದಾರೆ. ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, ಹೆಣ್ಣು ಮಕ್ಕಳಿಗೆ ಋತು ಚಕ್ರ ರಜೆ ನೀಡಲು ಕ್ಯಾಬಿನೆಟ್ ನಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ವರ್ಷದಲ್ಲಿ 12 ದಿನ ಸಂಬಳ ಸಹಿತ ರಜೆ ನೀಡಲಾಗುತ್ತದೆ. ತಿಂಗಳಿನ ಯಾವ ದಿನ ಬೇಕಾದರು ಅವರು ಈ ರಜೆಯನ್ನು ಪಡೆಯಬಹುದು. ಕಾನೂನು ಇಲಾಖೆ ಜೊತೆ ಸೇರಿ ಅನೇಕ ಚರ್ಚೆಗಳ ಬಳಿಕ ಈ ರೀತಿಯ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ಋತು ಚಕ್ರ ರಜೆ ನೀತಿ 2025ರ ಪ್ರಕಾರ, ಇದು ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪಡೆಯಬಹುದಾದ ರಜೆಯಾಗಿದ್ದು, ಕಡ್ಡಾಯವಾಗಿ ಎಲ್ಲರಿಗೂ ಅನ್ವಯವಾಗಲಿದೆ. ಮಹಿಳಾ ಉದ್ಯೋಗಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ಗಮನಿಸಿ ಬಯಸಿದ ದಿನ ರಜೆ ಪಡೆಯಬಹುದು ಮತ್ತು ಇದಕ್ಕೆ ಯಾವುದೇ ವೈದ್ಯಕೀಯ ಪತ್ರದ ಅಗತ್ಯವಿರುವುದಿಲ್ಲ.
ಈ ಮೊದಲು 1992 ರಲ್ಲಿ ಬಿಹಾರ ರಾಜ್ಯವು ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಎರಡು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಘೋಷಿಸಿತ್ತು. ಇದಾದ ಬಳಿಕ ಕೇರಳ ಹಾಗೂ ಒಡಿಶಾದಲ್ಲಿಯೂ ಈ ರೀತಿಯ ನಿಯಮಗಳಿವೆ. ಕೇರಳವು ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಮಹಿಳಾ ತರಬೇತಿದಾರರಿಗೆ ಎರಡು ದಿನಗಳ ಮುಟ್ಟಿನ ರಜೆ ನೀಡುವ ನೀತಿಯನ್ನು ರೂಪಿಸಿದೆ. ಬಿಹಾರ ಮತ್ತು ಒಡಿಶಾ 12 ದಿನಗಳ ವಾರ್ಷಿಕ ಮುಟ್ಟಿನ ರಜೆಯನ್ನು ನೀಡುತ್ತವೆ, ಆದರೆ ಇದು ರಾಜ್ಯ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮಾತ್ರವೇ ಸೀಮಿತವಾಗಿವೆ. ಉಳಿದಂತೆ ಖಾಸಗಿ ಸಂಸ್ಥೆಗಳಿಗೆ ಇದು ಅನ್ವಯವಾಗುವುದಿಲ್ಲ. ಆದ್ರೆ ಕರ್ನಾಟಕದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲೂ ಇದು ಅನ್ವಯವಾಗಲಿದೆ.
ಸದ್ಯ ಸರ್ಕಾರದ ಈ ನಿಯಮದಿಂದಾಗಿ ರಾಜ್ಯದ ಮಹಿಳಾ ಉದ್ಯೋಗಿಗಳಲ್ಲಿ ಸಂತಸ ಮನೆ ಮಾಡಿದೆ. ಈ ಹಿಂದೆ ಸರ್ಕಾರದ ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದಾಗಿ ಸಂತಸಗೊಂಡಿದ್ದ ಮಹಿಳೆಯರಿಗೆ ದೀಪಾವಳಿ ಮುನ್ನ ಮತ್ತೊಂದು ಬಂಪರ್ ಯೋಜನೆ ಸಿಕ್ಕಂತಾಗಿದೆ.



Click it and Unblock the Notifications
