Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಚಿನ್ನದಂತೆ ಹೊಳೆಯುವ ಅಪರೂಪದ ನಾಗರಹಾವು..! ವಿಡಿಯೋ ನೋಡಿದ ಮಂದಿಗೆ ಶಾಕ್...!
ನೀವು ಭೂಮಿ ಮೇಲೆ ಎಷ್ಟು ರೀತಿಯ ಹಾವುಗಳನ್ನೂ ನೋಡಿದ್ದೀರಿ? ಕೆಲವು ಬಾರಿ ವಿಚಿತ್ರ ರೀತಿಯ ಹಾವನ್ನೂ ಸಹ ನೀವು ನೋಡಿರುತ್ತೀರಿ. ಭೂಮಿ ಮೇಲೆ ನೂರಾರು ಜಾತಿಯ ಹಾವುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಕೆಲವು ನೋಡಲು ವಿಶೇಷ ಎನಿಸಿದರೆ ಮತ್ತೆ ಕೆಲವು ಅವುಗಳ ಗುಣಗಳಿಂದ ಭಿನ್ನ ಎನಿಸಿವೆ.
ಇದೀಗ ಇಲ್ಲೊಂದು ವಿಡಿಯೋದಲ್ಲಿ ಚಿನ್ನದಂತೆ ಹೊಳೆಯುತ್ತಿರುವ ಹಾವೊಂದು ಕಂಡುಬಂದಿದ್ದು ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಈ ಗೋಲ್ಡನ್ ಕಲರ್ ಹಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬರೋಬ್ಬರಿ 25 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಈ ವಿಡಿಯೋದಲ್ಲಿ ಸುಮಾರು 6ರಿಂದ 7 ಅಡಿ ಉದ್ದದ ನಾಗರಹಾವೊಂದು ರಸ್ತೆ ದಾಟುತ್ತಿರುವುದನ್ನು ನಾವು ನೋಡಬಹುದು. ಆದರೆ ಈ ಹಾವು ಚಿನ್ನದಂತೆ ಹೊಳೆಯುತ್ತಿದೆ. ಏಕೆಂದರೆ ನಾಗರಹಾವುಗಳು ಸಾಮಾನ್ಯವಾಗಿ ಚಿನ್ನದ ಬಣ್ಣದಲ್ಲಿ ಕಂಡುಬಂದರೂ ಅವು ಇಷ್ಟು ಪ್ರಕಾಶವಾಗಿ ಹೊಳೆಯುತ್ತಿರುವುದು ಇದೇ ಮೊದಲು ಎಂದು ನೆಟ್ಟಿಗರು ಅಚ್ಚರಿ ಹೊರಹಾಕಿದ್ದಾರೆ.
ಇನ್ನು ಈ ಚಿನ್ನದಂತೆ ಹೊಳೆಯುವ ಹಾವು ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆಯಂತೆ, ತನ್ನ ಅಪಾಯಕಾರಿ ಮತ್ತು ಆಕ್ರಮಣ ಶೀಲತೆಯಿಂದ ಈ ಹಾವು ತನ್ನ ಮೈಬಣ್ಣ ಹೊಳೆಯುವಂತೆ ಮಾಡುತ್ತದೆ ಎಂದು ಎಕ್ಸ್ (ಟ್ವಿಟರ್ ) ಬಳಕೆದಾರರೊಬ್ಬರು ಈ ಹಾವಿನ ಕುರಿತು ಟಿಪ್ಪಣಿ ಬರೆದಿದ್ದಾರೆ.
ಆದರೆ ಈ ಹಾವು ನಿಜವಾಗಲೂ ಇಷ್ಟು ಹೊಳೆಯುತ್ತಿರುವುದಕ್ಕೆ ಕಾರಣ ಏನಿರಬಹುದು ಎಂಬುದು ತಿಳಿದುಬಂದಿಲ್ಲ. ಕೆಲವರ ಪ್ರಕಾರ ಇದು ಸೂರ್ಯನ ಬೆಳಕಿನ ಕೆಳಗೆ ಇರುವುದರಿಂದ ಅದರ ಮೈಮೇಲೆ ಬೆಳಕು ಬೀಳುತ್ತಿದ್ದು ಇದರಿಂದ ಹೊಳೆಯುತ್ತಿದೆ ಎನ್ನುತ್ತಿದ್ದಾರೆ. ಅಲ್ಲದೆ ಇದು ಸಾಮಾನ್ಯವಾಗಿ ಗಂಡು ನಾಗರಹಾವುಗಳ ಮೈ ಬಣ್ಣವಂತೆ. ಅವು ಹೆಚ್ಚು ಆಕರ್ಷಕವಾಗಿರುತ್ತವೆ ಎಂದು ಸಹ ಹೇಳಲಾಗಿದೆ.
ಇನ್ನೂ ಕೆಲವರು ಈ ವಿಡಿಯೋ ನಿಜವಲ್ಲ ಎಂದು ವಾದಿಸುತ್ತಿದ್ದಾರೆ. ಎಐ ಟೆಕ್ನಾಲಜಿ ಮೂಲಕ ಈ ಹಾವನ್ನು ಹೊಳೆಯುವಂತೆ ಮಾಡಲಾಗಿದೆ. ಭೂಮಿ ಮೇಲೆ ಚಿನ್ನದ ಹಾವಿರಲು ಸಾಧ್ಯವಿಲ್ಲ. ಎಂದಿದ್ದಾರೆ. ಜೊತೆಗೆ ನಾಗರಹಾವುಗಳು ಹಗಲು ಹೊತ್ತಿನಲ್ಲಿ ಮಾತ್ರ ಆಹಾರ ಅರಸುತ್ತವೆ. ರಾತ್ರಿ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತವೆ. ಹೀಗಾಗಿ ಈ ವಿಡಿಯೋ ನಿಜವಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.
ಆದರೆ ಈ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಈ ಹಾವು ಕಂಡ ಜನ ಮಾತ್ರ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಇದಕ್ಕೂ ಮೊದಲು ಕೆಂಪು ನಾಗರ ಪತ್ತೆ
ಇತ್ತೀಚಿಗೆ ವಿಡಿಯೋ ಒಂದರಲ್ಲಿ ಕೆಂಪು ಬಣ್ಣದ ನಾಗರಹಾವು ಕಂಡುಬಂದಿದ್ದು ಎಲ್ಲರ ಗಮನ ಸೆಳೆದಿತ್ತು. ಜೊತೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಈ ಕಡು ಕೆಂಪು ಬಣ್ಣದ ನಾಗರ ಹಾವನ್ನು ಕಂಡ ಜನರು ಅಚ್ಚರಿಗೆ ಒಳಗಾಗಿದ್ದರು.
ವಿಡಿಯೋದಲ್ಲಿ ಒಬ್ಬ ಹಾವನ್ನು ಹಿಡಿಯುತ್ತಿರುವುದನ್ನು ನಾವು ನೋಡಬಹುದು. ಆದರೆ ಈ ವಿಡಿಯೋ ಯಾವಾಗ ಮತ್ತು ಯಾವ ಸ್ಥಳದಲ್ಲಿ ಚಿತ್ರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆತ ಹಾವನ್ನು ಎಳೆದು ಹೊರಗೆ ತೆಗೆದಾಗ ಅದು ಸುಂದರ ಕೆಂಪು ಬಣ್ಣದಲ್ಲಿರುವುದು ಕಂಡುಬರುತ್ತದೆ. ನೋಡಲು ಒಮ್ಮೆ ಅಚ್ಚರಿಯಾದರು ಕೆಂಪು ಬಣ್ಣದ ಹಾವು ಬಲು ಅಪರೂಪವಾಗಿದೆ.
ಆ ನಾಗರ ಹಾವು ಹೆಡೆ ಬಿಚ್ಚಿ ಮುಂದಕ್ಕೆ ಸಾಗಲು ಯತ್ನಿಸುತ್ತಿರುವುದು ಸಹ ಕಂಡುಬರುತ್ತದೆ. ಆದರೆ ಆತ ಆ ಕೆಂಪು ಹಾವನ್ನು ಹಿಡಿದು ರಕ್ಷಿಸಿದ್ದಾನೆ. ವಿಡಿಯೋದ ಮೇಲೆ ಸಹ ಹಾವನ್ನು ಹಿಡಿದು ರಕ್ಷಿಸಲಾಗಿದೆ ಎಂದು ಬರೆಯಲಾಗಿದೆ. ಆದ್ರೆ ಈ ವಿಡಿಯೋ ಹಲವರು ಹುಬ್ಬೇರುವಂತೆ ಮಾಡಿತ್ತು.



Click it and Unblock the Notifications
