Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
Gold Rate: 2026ರಲ್ಲಿ ಚಿನ್ನದ ದರ ಏನಾಗಲಿದೆ? ಬಾಬಾ ವಂಗಾ ಹೇಳಿರುವ ಭವಿಷ್ಯವಿದು!
ಚಿನ್ನದ ಬೆಲೆ ಹೇಗೆ ಏರಿಕೆಯಾಗುತ್ತಿದೆ ಎಂಬುದನ್ನು ನೀವು ತಿಳಿದಿದ್ದೀರಿ. ಪ್ರತಿ ಗ್ರಾಮ್ ಈಗ 11 ಸಾವಿರ ಗಡಿದಾಟಿದೆ. ಹಾಗೆ 10 ಗ್ರಾಮ್ ಬಂಗಾರದ ಬೆಲೆ 1 ಲಕ್ಷ ರೂಪಾಯಿಗೂ ಹೆಚ್ಚಾಗಿದೆ. ಹಾಗೆ ಬೆಳ್ಳಿ ಕೂಡ ಒಂದು ವರ್ಷದಲ್ಲಿ ಲಕ್ಷ ದಾಟಿದೆ. ಹೀಗೆ ಹಳದಿ ಲೋಹದ ಬೆಲೆ ತೀವ್ರ ರೀತಿಯಲ್ಲಿ ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಗನಕ್ಕೇರುತ್ತಿದೆ.
ದೇಶದ ಆರ್ಥಿಕತೆ ಭದ್ರವಾಗಿರಬೇಕಾದರೆ ಚಿನ್ನ ಆಧಾರಸ್ತಂಭ ಆಗಿರಲಿದೆ. ಆದ್ರೆ ಭಾರತವು ಸೇರಿ ಹಲವು ಕಡೆಗಳಲ್ಲಿ ಈಗ ಚಿನ್ನ ದುಬಾರಿಯಾಗುತ್ತಿದೆ. ದೇಶಾದ್ಯಂತ ಹೂಡಿಕೆ ಮತ್ತು ಗ್ರಾಹಕರ ಆಸಕ್ತಿಯನ್ನು ಕೆರಳಿಸಿದೆ. ಚಿನ್ನದ ದರ ಏರಿಕೆಯಾಗುತ್ತಿರುವುದನ್ನು ಕಂಡು ಹೂಡಿಕೆ ಹೆಚ್ಚಾಗುತ್ತಿದೆ. ಹಾಗೆ ಇನ್ನೊಂದು ಕಡೆ ಚಿನ್ನದ ದರ ಇಳಿಕೆಯಾಗಲಿದೆ ಎಂದು ಭಾವಿಸಲಾಗುತ್ತಿದೆ.

ಮುಂಬರುವ ವರ್ಷದಲ್ಲಿ ಚಿನ್ನದ ದರ ಇಳಿಕೆಯಾಗಲಿದೆ ಎಂಬ ಶಂಕೆಯು ಇದೆ. ಹಾಗೆ 2026ರಲ್ಲಿ ಚಿನ್ನದ ದರ ಯಥಾಸ್ಥಿತಿಗೆ ಬಂದು ನಿಲ್ಲಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ದಶಕಗಳಿಂದಲೂ ಚಿನ್ನದ ದರ ಏರಿಕೆಯಾಗಿದ್ದು, ಬಿಟ್ಟರೆ ಇಳಿಕೆಯಾಗಿದ್ದು ಬಹಳ ಕಡಿಮೆ. ಆದ್ರೆ ಬಾಬಾ ವಂಗಾ ಈ ಚಿನ್ನದ ದರ ಕುರಿತಾಗಿ ಹೇಳಿರುವ ಭವಿಷ್ಯವಾಣಿ ಈಗ ಮುನ್ನಲೆಗೆ ಬಂದಿದ್ದು, ಎಲ್ಲರ ಗಮನ ಸೆಳೆದಿದೆ.
ಅತೀಂದ್ರಿಯ ಶಕ್ತಿ ಪಡೆದಿದ್ದ ಬಾಬಾ ವಂಗಾ ಜಗತ್ತಿನಲ್ಲಿ ಸಂಭವಿಸಬಹುದಾದ ಹಲವು ವಿದ್ಯಮಾನಗಳ ಕುರಿತಾಗಿ ಭವಿಷ್ಯ ನುಡಿದಿರುವುದು ನೋಡಬಹುದು. ಅದರಂತೆ 2026ರಲ್ಲಿ ಚಿನ್ನದ ದರ ಏನಾಗಲಿದೆ ಎಂಬುದರ ಕುರಿತಾಗಿಯೂ ಆಕೆ ಭವಿಷ್ಯ ನುಡಿದ್ದಾಳೆ. ಚಿನ್ನದ ದರ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಈ ಕುರಿತ ಚರ್ಚೆ ಗಮನಸೆಳೆದಿದೆ.
ಚಿನ್ನದ ದರ ಕುರಿತು ಬಾಬಾ ವಂಗಾ ಹೇಳಿರುವುದೇನು?
ಬಾಬಾ ವಂಗಾ ಅವರ ಭವಿಷ್ಯವಾಣಿಗಳ ವ್ಯಾಖ್ಯಾನಗಳ ಪ್ರಕಾರ ಜಗತ್ತು ನಗದು ರಹಿತ ವಾಗಲಿದೆ ಅಥವಾ ನಗದು ಕೊರತೆ ಎದುರಿಸಲಿದೆ ಎಂದಿದ್ದಾರೆ. ಬಾಬಾ ವಂಗಾ 2026 ರಲ್ಲಿ ಚಿನ್ನದ ಬೆಲೆಗಳು ಅಭೂತಪೂರ್ವ ಏರಿಕೆ ಕಾಣಲಿದೆ ಎಂದಿದ್ದಾರೆ. ಜಾಗತಿಕ ಆರ್ಥಿಕ ಬದಲಾವಣೆಗಳು ಮತ್ತು ಅನಿಶ್ಚಿತತೆಗಳು ಚಿನ್ನವನ್ನು ಹೂಡಿಕೆದಾರರಿಗೆ ಆದ್ಯತೆಯ ಆಯ್ಕೆಯನ್ನಾಗಿ ಮಾಡುತ್ತದೆ ಎಂದಿದ್ದಾರೆ. ಅಂದರೆ ಅವರ ಪ್ರಕಾರ ಚಿನ್ನದ ದರ ಮತ್ತಷ್ಟು ಹೆಚ್ಚಾಗಲಿದೆ. ಇದು ಹೂಡಿಕೆದಾರರಿಗೆ ಲಾಭ ತರಲಿದೆ ಎಂಬುದಾಗಿದೆ.
ಚಿನ್ನದ ಬೆಲೆಗಳು ಜಾಗತಿಕ ಆರ್ಥಿಕತೆಯ ಸ್ಥಿತಿ, ಹಣದುಬ್ಬರ, ಬಡ್ಡಿದರಗಳು ಮತ್ತು ಭೌಗೋಳಿಕ ಅಂಶಗಳ ಆಧಾರದ ಮೇಲೆ ನಿರ್ಧರಿತವಾಗಲಿದೆ. ಜಾಗತಿಕ ಮಾರುಕಟ್ಟೆ ಆಧಾರದಲ್ಲಿ ಭೌಗೋಳಿಕವಾಗಿಯೂ ದರ ನಿಗಧಿಯಾಗುತ್ತದೆ. ಆದರೆ ಜಗತ್ತಿನ ಆರ್ಥಿಕತೆಯಲ್ಲಿ ಏರಿಳಿತವಾದರೆ, ಯುದ್ಧ, ಅನಿಶ್ಚಿತತೆ, ಪೂರೈಕೆಯಲ್ಲಿನ ವ್ಯತ್ಯಯ, ಷೇರು ಮಾರುಕಟ್ಟೆ ಸೇರಿದಂತೆ ಹಲವು ಅಂಶಗಳು ಬೆಲೆ ನಿಗದಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಭಾರತದಲ್ಲಿ ಈಗಾಗಲೇ ಚಿನ್ನದ ದರ ಅ ಲಕ್ಷ ರೂಪಾಯಿಗೂ ಅಧಿಕವಾಗಿದೆ. ಆದ್ರೆ 2026ರಲ್ಲೂ ಈ ದರ ಇಳಿಕೆಯಾಗುವುದು ಅನುಮಾನ ತಂದಿದೆ. ಹಾಗೆ ಬಾಬಾ ವಂಗಾ ಕೂಡ ದರ ಇಳಿಕೆಯ ಕುರಿತು ಯಾವುದೇ ಸುಳಿವು ನೀಡಿಲ್ಲ ಬದಲಾಗಿ ದರ ಮತ್ತಷ್ಟು ಏರಿಕೆಯಾಗಲಿದೆ ಎಂದಿದ್ದಾರೆ.
ಬಾಬಾ ವಂಗಾ ಈ ಹಿಂದೆ 9/11 ದಾಳಿ ಮತ್ತು ಬ್ರೆಕ್ಸಿಟ್‌ನಂತಹ ಹಲವಾರು ಪ್ರಮುಖ ವಿದ್ಯಮಾನಗಳನ್ನು ಮೊದಲೇ ಊಹಿಸಿದ್ದರು. ಅವರು ಹೇಳಿರುವ ಹಲವು ಭವಿಷ್ಯಗಳು ನಿಜವಾಗಿವೆ ಹಾಗೆ ಮುಂದಿನ ದಿನಗಳಲ್ಲಿ ಸಂಭವಿಸುವ ಹಲವು ವಿದ್ಯಮಾನಗಳ ಕುರಿತಾಗಿ ಅವರು ಭವಿಷ್ಯ ನುಡಿದಿದ್ದಾರೆ. ಇಂದಿಗೂ ಹಲವರು ಅವರ ಭವಿಷ್ಯವಾಣಿಯನ್ನು ನಂಬುತ್ತಾರೆ.



Click it and Unblock the Notifications

